Monday, May 20, 2013
Last Updated: 11:05:55 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • 1,500 ಮೀ.: ಟರ್ಕಿಗೆ ಚಿನ್ನ, ಬೆಳ್ಳಿ
    • ವನಿತೆಯರ 1,500 ಮೀ. ಸ್ಪರ್ಧೆಯಲ್ಲಿ ಟರ್ಕಿ ಚಿನ್ನ ಮತ್ತು ಬೆಳ್ಳಿಯ ಪದಕ ಗೆದ್ದು ಅಚ್ಚರಿಗೊಳಿಸಿದೆ.

      • Udayavani | Aug 11, 2012

        ಲಂಡನ್‌ : ವನಿತೆಯರ 1,500 ಮೀ. ಸ್ಪರ್ಧೆಯಲ್ಲಿ ಟರ್ಕಿ ಚಿನ್ನ ಮತ್ತು ಬೆಳ್ಳಿಯ ಪದಕ ಗೆದ್ದು ಅಚ್ಚರಿಗೊಳಿಸಿದೆ. ಶುಕ್ರವಾರ ನಡೆದ ಈ ಸ್ಪರ್ಧೆಯಲ್ಲಿ 4:10.23 ಸೆ.ನಲ್ಲಿ ಗುರಿ ತಲುಪಿದ ಆಸ್ಲಿ ಕಾಕಿರ್‌ ಅಲ್ಪೆಕಿನ್‌ ಅವರು ಚಿನ್ನ ಗೆದ್ದ ಸಾಧನೆ ಮಾಡಿದರು.

        ಯುರೋಪಿಯನ್‌ ಚಾಂಪಿಯನ್‌ ಆಗಿರುವ ಅಲ್ಪೆಕಿನ್‌ 2004ರಿಂದ 2006ರ ವರೆಗೆ ನಿಷೇಧಿತ ದ್ರವ್ಯ ಸೇವಿಸಿದ ಕಾರಣಕ್ಕೆ ನಿಷೇಧಕ್ಕೆ ಒಳಗಾಗಿದ್ದರು. ತನ್ನ ತಂಡದ ಸದಸ್ಯೆ ಗೇಮ್ಸ್‌ ಬುಲುಟ್‌ ಜತೆ ತೀವ್ರ ಪೈಪೋಟಿ ನೀಡಿದ ಅಲ್ಪೆಕಿನ್‌ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾದರು. ಇದು ಟ್ರ್ಯಾಕ್‌ ಆಂಡ್‌ ಫೀಲ್ಡ್‌ನಲ್ಲಿ ಟರ್ಕಿಯ ಮೊದಲ ಚಿನ್ನವಾಗಿದೆ.

        ಹಲ್ಸಿಂಕಿಯಲ್ಲಿ ನಡೆದ ಯುರೋಪಿಯನ್‌ ಕೂಟದ ಬೆಳ್ಳಿ ಜಯಿಸಿದ್ದ (ಅಲ್ಪೆಕಿನ್‌ ಚಿನ್ನ ಜಯಿಸಿದ್ದರು) ಬುಲುಟ್‌ ಇಲ್ಲಿ ತನ್ನ ನಿರ್ವಹಣೆಯನ್ನು ಉತ್ತಮಪಡಿಸಿ ಬೆಳ್ಳಿಯ ಪದಕ ಪಡೆದರು. ಬಹರೆನ್‌ನ ಇಥಿಯೊಪಿಯ ಮೂಲದ ಮರಿಯುಮ್‌ ಜಮಾಲ್‌ ಕಂಚಿನ ಪದಕ ಗೆದ್ದರು.

        ಟರ್ಕಿಯ ಈ ಮೊದಲಿನ ಎರಡು ಟ್ರ್ಯಾಕ್‌ ಆಂಡ್‌ ಫೀಲ್ಡ್‌ನ ಕಂಚಿನ ಪದಕಗಳನ್ನು 2004ರಲ್ಲಿ ಪುರುಷರ ಹ್ಯಾಮರ್‌ನಲ್ಲಿ ಇಸ್ರಫ್ ಅಪಕ್‌ ಮತ್ತು 1948ರ ಪುರುಷರ ಟ್ರಿಪಲ್‌ ಜಂಪ್‌ನಲ್ಲಿ ರುಹಿ ಶರೀಪ್‌ ಅವರು ಪಡೆದಿದ್ದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಕೀನ್ಯಾದ ಅಲೆಕ್ಸ್‌ ಒಲೈಟಿಪ್‌ ಮತ್ತು ಗ್ಲೆಡ್ಸ್‌ ಚೆರೊನೊ ಪ್ರತಿಷ್ಠಿತ ವಿಶ್ವ 10ಕೆ ಮ್ಯಾರಥಾನ್‌ ಓಟದ ಪುರುಷ ಮತ್ತು ವನಿತೆಯರ ವಿಭಾಗಗಳಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ....
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus