Sunday, May 26, 2013
Last Updated: 12:14:02 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ವನಿತಾ 4*100 ಮೀ ರಿಲೇ
    • 27 ವರ್ಷದ ದಾಖಲೆ ಮುರಿದ ಅಮೆರಿಕ
    • ಮಹಿಳೆಯರು ಲಂಡನ್‌ ಒಲಿಂಪಿಕ್ಸ್‌ನ 4*100ಮೀ. ರಿಲೇಯಲ್ಲಿ 27 ವರ್ಷಗಳ ಹಿಂದಿನ ವಿಶ್ವದಾಖಲೆ ಮುರಿದು ಚಿನ್ನದ ಪದಕವನ್ನು ಮ

      • Udayavani | Aug 11, 2012

        ಲಂಡನ್‌ : ಅಮೆರಿಕದ ಮಹಿಳೆಯರು ಲಂಡನ್‌ ಒಲಿಂಪಿಕ್ಸ್‌ನ 4*100ಮೀ. ರಿಲೇಯಲ್ಲಿ 27 ವರ್ಷಗಳ ಹಿಂದಿನ ವಿಶ್ವದಾಖಲೆ ಮುರಿದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

        ಶುಕ್ರವಾರ ತಡರಾತ್ರಿ ನಡೆದ ರೇಸ್‌ನಲ್ಲಿ ಅಮೆರಿಕದ ವನಿತಾ ತಂಡ 40.82 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಆತ್ಲೆಟಿಕ್ಸ್‌ ಟ್ರ್ಯಾಕ್‌ ಆಂಡ್‌ ಫೀಲ್ಡ್‌ನಲ್ಲಿ ಆಧಿಪತ್ಯ ಸ್ಥಾಪಿಸಿರುವ ಜಮೈಕಾವನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಯಿತು. ಜಮೈಕಾ 41.41 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿತು.

        ಟಿಯಾನಾ ಮ್ಯಾಡಿಸನ್‌, ಅಲಿಸನ್‌ ಫೆಲಿಕ್ಸ್‌, ಬಿಯಾಂಕಾ ನೈಟ್‌ ಮತ್ತು ಕಾರ್ಮೆಲಿಟಾ ಅವರನ್ನೊಳಗೊಂಡ ಅಮೆರಿಕದ ತಂಡ 1985ರಲ್ಲಿ ಈಸ್ಟ್‌ ಜರ್ಮನಿ ತಂಡ ನಿರ್ಮಿಸಿದ್ದ ದಾಖಲೆಯನ್ನು ಅಳಿಸಿಹಾಕಿತು.



        200ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದ ಅಲಿಸನ್‌ ಫೆಲಿಕ್ಸ್‌ಗೆ ಇದು ಎರಡನೇ ಚಿನ್ನದ ಪದಕವಾಗಿದೆ. 100ಮೀ.ನಲ್ಲಿ ಚಿನ್ನದ ಪದಕ ಗೆದ್ದು 200ಮೀ.ನಲ್ಲಿ ಬೆಳ್ಳಿ ಪದಕ ಪಡೆದಿದ್ದ ಫ್ರೆಸರ್‌ ಫ್ರೈಸ್‌, ಸಿಮ್ಸನ್‌, ಕ್ಯಾಂಪ್‌ಬೆಲ್‌ ಬ್ರೌನ್‌ ಮತ್ತು ಸ್ಟೆವರ್ಟ್‌ ಅವರನ್ನೊಳಗೊಂಡ ಜಮೈಕಾ ತಂಡ ಬೆಳ್ಳಿ ಪದಕಕ್ಕೆ ತೃಪ್ತವಾಯಿತು. ಉತ್ತಮ ಪ್ರತಿಸ್ಪರ್ಧೆ ನೀಡಿದರೂ ಬೇಟನ್‌ ಹಸ್ತಾಂತರದಲ್ಲಿ ಮಾಡಿದ ಸಣ್ಣ ಗೊಂದಲದಿಂದ ಎರಡನೇ ಸ್ಥಾನಕ್ಕೆ ಕುಸಿಯಿತು. ಪೊವ್‌ ಸ್ಟಿಯ್ಯು, ರೈಮ್ಯನ್‌ ಮತ್ತು ಬ್ರೈಸಿಗಿನಾ ಅವರನ್ನೊಳಗೊಂಡ ಉಕ್ರೇನ್‌ ತಂಡ ಮೂರನೇ ಸ್ಥಾನ ಪಡೆಯಿತು.

        'ವಿಜೇತ ತಂಡದ ಒಂದು ಭಾಗವಾಗಿರುವುದೇ ಹೆಮ್ಮೆಯ ಸಂಗತಿ. ಇಂದು ರಾತ್ರಿ ನಾವು ವಿಶ್ವದಾಖಲೆ ನಿರ್ಮಿಸಲಿದ್ದೇವೆಂದು ಯಾರು ತಾನೆ ಭಾವಿಸಿದ್ದರು? ನಿಜಕ್ಕೂ ಇದು ಅದ್ಭುತ ಅನುಭವ...' ಎಂಬುದು ಫೆಲಿಕ್ಸ್‌ ಪ್ರತಿಕ್ರಿಯೆ.

        1996ರ ಅಟ್ಲಾಂಟಾ ಒಲಿಂಪಿಕ್ಸ್‌ ಬಳಿಕ ಅಮೆರಿಕಕ್ಕೆ 4*100 ಮೀ. ರಿಲೇಯಲ್ಲಿ ಲಭಿಸಿದ ಮೊದಲ ಚಿನ್ನ ಇದಾಗಿದೆ. ಅದು 2000ದ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕೊನೆಯ ಸಲ ಕಂಚಿನ ಪದಕ ಜಯಿಸಿತ್ತು.

        ಫೈನಲ್‌ ಸ್ಥಾನ
        ಅಮೆರಿಕ 40.82 ಸೆ.
        ಜಮೈಕಾ 41.41 ಸೆ.
        ಉಕ್ರೇನ್‌ 42.04 ಸೆ.
        ನೈಜಿರಿಯಾ 42.64 ಸೆ.
        ಜರ್ಮನಿ 42.67 ಸೆ.
        ಹಾಲೆಂಡ್‌ 42.70 ಸೆ.
        ಬ್ರೆಜಿಲ್‌ 42.91 ಸೆ.
        ಟ್ರಿನಿಡಾಡ್‌ ಅನರ್ಹ

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus