Wednesday, June 19, 2013
Last Updated: 10:25:39 PM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಪೋಲ್‌ವಾಲ್ಟ್: ಲವಿಲ್ಲೆನಿಗೆ ಬಂಗಾರ
    • ಫ್ರಾನ್ಸ್‌ನ ರೆನಾಡ್‌ ಲವಿಲ್ಲೆನಿ ಒಲಿಂಪಿಕ್‌ ಪೋಲ್‌ವಾಲ್ಟ್ ಚಿನ್ನದ ಪದಕವನ್ನು ಕೊರಳಿಗೆ ಅಲಂಕರಿಸಿಕೊಂಡಿದ್ದಾರೆ.

      • Udayavani | Aug 11, 2012

        ಲಂಡನ್‌ : ಫ್ರಾನ್ಸ್‌ನ ರೆನಾಡ್‌ ಲವಿಲ್ಲೆನಿ ಒಲಿಂಪಿಕ್‌ ಪೋಲ್‌ವಾಲ್ಟ್ ಚಿನ್ನದ ಪದಕವನ್ನು ಕೊರಳಿಗೆ ಅಲಂಕರಿಸಿಕೊಂಡಿದ್ದಾರೆ. ಪುರುಷರ ಫೈನಲ್‌ನಲ್ಲಿ ಅವರು ಆಸ್ಟ್ರೇಲಿಯದ ಹಾಲಿ ಚಾಂಪಿಯನ್‌ ಸ್ಟೀವ್‌ ಹೂಕರ್‌ ಅವರಿಂದ ತೀವ್ರ ಸ್ಪರ್ಧೆ ಎದುರಿಸುವರೆಂಬ ನಿರೀಕ್ಷೆ ಇತ್ತು. ಆದರೆ ಹೂಕರ್‌ ಒಂದೂ ಎತ್ತರವನ್ನು ಸಮರ್ಪಕವಾಗಿ ಜಿಗಿಯದೆ ಪದಕ ವಂಚಿತರಾದರು.



        ಲವಿಲ್ಲೆನಿ ಕೇವಲ ಬಂಗಾರದ ಪದಕ ಜಯಿಸಿದ್ದಷ್ಟೇ ಅಲ್ಲ, 5.97 ಮೀ. ಎತ್ತರ ತಲುಪಿ ನೂತನ ಒಲಿಂಪಿಕ್ಸ್‌ ದಾಖಲೆಯನ್ನೂ ಬರೆದರು. ಜರ್ಮನಿಯ ಬೊರ್ನ್ ಒಟ್ಟೊ ರಫೆಲ್‌ ಹೋಲೆxಪ್‌ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದರು. ಇಬ್ಬರೂ 5.91 ಮೀ. ಜಿಗಿತ ದಾಖಲಿಸಿದರು.

        25ರ ಹರೆಯದ ಲವಿಲ್ಲೆನಿ ಕಳೆದ 3 ವರ್ಷಗಳಿಂದಲೂ ಸ್ಥಿರ ನಿರ್ವಹಣೆ ತೋರುತ್ತ ಬಂದಿದ್ದರು. 2012ರ ಯುರೋಪಿಯನ್‌ ಚಾಂಪಿಯನ್‌ಶಿಪ್‌ನಲ್ಲಿ 5.97 ಮೀ. ಜಿಗಿತ ದಾಖಲಿಸಿದ್ದರು. ವಿಶ್ವ ಇನ್‌ಡೋರ್‌ ಚಾಂಪಿಯನ್‌ಶಿಪ್‌ನಲ್ಲಿ 2009 ಹಾಗೂ 2011ರಲ್ಲಿ ವಿಜೇತರಾದ ಹೆಗ್ಗಳಿಕೆ ಲವಿಲ್ಲೆನಿ ಅವರದಾಗಿದೆ.



        ಇದು ಫ್ರಾನ್ಸ್‌ಗೆ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಒಲಿದ ಮೊದಲ ಚಿನ್ನದ ಪದಕವೆಂಬುದು ವಿಶೇಷ. 1984ರಲ್ಲಿ ಪಿಯರೆ ಕ್ವಿನಾನ್‌ ಮತ್ತು 1996ರಲ್ಲಿ ಜೀನ್‌ ಗಾಲ್ಫಿಯೋನ್‌ ಫ್ರಾನ್ಸ್‌ಗೆ ಪೋಲ್‌ವಾಲ್ಟ್ ಚಿನ್ನವನ್ನು ತಂದಿತ್ತಿದ್ದರು.

        ಬೀಜಿಂಗ್‌ ಒಲಿಂಪಿಕ್‌ ಚಾಂಪಿಯನ್‌ ಆಗಿದ್ದ ಹೂಕರ್‌ 2009ರ ವಿಶ್ವ ಚಾಂಪಿಯನ್‌ ಕೂಡ ಆಗಿದ್ದರು. 2006, 2010ರ ಕಾಮನ್ವೆಲ್ತ್‌ ಗೇಮ್ಸ್‌ ಚಿನ್ನದ ಪದಕವನ್ನೂ ತಮ್ಮದಾಗಿಸಿಕೊಂಡಿದ್ದರು. ಆದರೆ ಇತ್ತೀಚಿನ ಮಂಡಿ ಸಮಸ್ಯೆ ಅವರ ಸಾಧನೆಯ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂಬುದಕ್ಕೆ ಲಂಡನ್‌ ಒಲಿಂಪಿಕ್ಸ್‌ ಸಾಕ್ಷಿಯಾಯಿತು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಇಂಗ್ಲಂಡ್‌ ತಂಡವು ದಕ್ಷಿಣ ಆಫ್ರಿಕಾವನ್ನು ಏಳು ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಕೂಟದ ಫೈನಲ್‌ ಹಂತಕ್ಕೇರಿತು...
      image image
      • Copyright @ 2009 Udayavani.All rights reserved.
      • Designed & Hosted By 4cplus