ನ್ಯೂಯಾರ್ಕ್: ತನ್ನ ಊರಿನ ಮಹಿಳೆಯನ್ನು ಅಕ್ರಮ ವಲಸಿಗಳನ್ನಾಗಿ ಇರಿಸಿಕೊಂಡ ಭಾರತೀಯ ಸಂಜಾತ ಮಹಿಳೆ ಅಮೆರಿಕದಲ್ಲಿ ತನಗೆ ಮತ್ತು ತನ್ನ ಮಕ್ಕಳಿಗೆ ಖಾಯಂ ವಾಸ್ತವ್ಯದ ಕಾನೂನು ಮಾನ್ಯತೆ ಬಯಸುತ್ತಿದ್ದಾರೆ.ಆ್ಯನಿ ಜಾರ್ಜ್ (40 ವರ್ಷ) ಖಾಸಗಿ ವಿತ್ತ ಲಾಭಕ್ಕಾಗಿ ಅಕ್ರಮ ವಲಸಿಗಳನ್ನು ಬೆಂಬಲಿಸಿದಳೆಂದು ಆರೋಪಿಸಲಾಗಿದೆ.ಆ್ಯನಿ ಭಾರತದಿಂದ ಮಧ್ಯ ವಯಸ್ಸಿನ ವಿಧವೆಯನ್ನು ತನ್ನ ನ್ಯೂಯಾರ್ಕ್ ನಿವಾಸದಲ್ಲಿ ಆಕೆಯನ್ನು ಸೇವಕಿಯನ್ನಾಗಿ ಐದು ವರ್ಷ ಇರಿಸಿಕೊಂಡು, ಸಂಬಳ ಸರಿಯಾಗಿ ನೀಡಿಲ್ಲವೆಂದು ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.ಈ ಮಧ್ಯ ವಯಸ್ಸಿನ ಮಹಿಳೆಯ ಹೆಸರನ್ನು ನ್ಯಾಯಾಲಯದಲ್ಲಿ ಕೇವಲ ವಿಎಂ ಎಂದಷ್ಟೇ ದಾಖಲಿಸಲಾಗಿದೆ. ಆ್ಯನಿ ಅವರ ಪತಿ (ಈಗ ದಿವಂಗತ) ಮಹಿಳೆಗೆ ತನ್ನ ಮನೆಯಲ್ಲಿ ಕೆಲಸ ಮಾಡುವಂತೆ ಕೋರಿದ್ದರು. ವಿಎಂಗೆ ಒಂದು ಕೋಣೆ, ತಿಂಡಿ, ಊಟ ಮತ್ತು ಸಂಬಳ ನೀಡಲಾಗುತ್ತಿತ್ತು. ಆಕೆಯ ಸಂಬಳವನ್ನು ಭಾರತದಲ್ಲಿರುವ ಆಕೆಯ ಮಕ್ಕಳಿಗೆ ಕಳಿಸಲಾಗುತ್ತಿತ್ತು.ಆ್ಯನಿ ಮತ್ತವರ ಪತಿ ಮತ್ತು ಆರು ಮಕ್ಕಳಿಗೆ ಸೇವಕಿಯಾಗಿ ಕೆಲಸ ಮಾಡಲು ವಿಎಂಗೆ ಮಾಹೆಯಾನ 1,000 ಡಾಲರ್ ವೇತನದ ಭರವಸೆ ನೀಡಲಾಗಿತ್ತು. ಆದರೆ ವಿಎಂಗೆ ಆಕೆಯ ಐದು ವರ್ಷಗಳ ಸೇವೆಗಾಗಿ 26,000 ಡಾಲರ್‌ಗಳನ್ನಷ್ಟೇ ನೀಡಲಾಗಿತ್ತು. ಆಕೆ ಮನೆಯಲ್ಲಿ ಮುಂಜಾನೆ 5.30ರಿಂದ ರಾತ್ರಿ 11ರವರೆಗೆ ಕೆಲಸ ಮಾಡಬೇಕಾಗುತ್ತಿತ್ತು.ವಿಎಂ ಬ್ಯಾಂಕ್ ಖಾತೆ, ರಹದಾರಿ ಅಥವಾ ಗುರುತುಪತ್ರಗಳನ್ನು ಹೊಂದಿಲ್ಲ ಆಕೆ ಅಲ್ಪಸ್ವಲ್ಪ ಇಂಗ್ಲಿಷ್ ಮಾತನಾಡುತ್ತಾಳೆ.ಆರೋಪ ಕುರಿತ ವಿಚಾರಣೆ ಆ. 27ರಿಂದ ಆರಂಭಗೊಳ್ಳಲಿದೆ. ಆರೋಪ ದೃಢಗೊಂಡರೆ ಆ್ಯನಿಗೆ 10 ವರ್ಷಗಳವರೆಗೆ ಕಾರಾಗೃಹ ಶಿಕ್ಷೆಯಾಗಬಹುದು.