Sunday, November 23, 2014
Last Updated: 3:29:55 AM IST
  • ನಾನೆಲ್ಲಿರುವೆ:
  • ಮುಖಪುಟ ಪಯಣ
  • ವಿಡಿಯೋ ಗ್ಯಾಲರಿ
  • ಉದಯವಾಣಿ
  • ವೆ ಬ್
  • ಹುಡುಕಿ
    • ಸ್ವಾಮಿ ನಿತ್ಯಾನಂದಾಶ್ರಮ


      • ಹೊಸದುರ್ಗ ಕೋಟೆಯ ಪಕ್ಕದಲ್ಲಿರುವ ಒಂದು ಪ್ರವಾಸಿ ಮತ್ತು ಆಧ್ಯಾತ್ಮಿಕ ತಾಣವಾಗಿದೆ ನಿತ್ಯಾನಂದಾಶ್ರಮ.  ಇದು ಹಿಂದೆ ಕಾಡಿನಿಂದ ಆವೃತವಾದ ಪ್ರದೇಶವಾಗಿತ್ತು.

        ಇಲ್ಲಿ ಆಕರ್ಷಕ ಭಂಗಿಯ ನಿತ್ಯಾನಂದ ಸ್ವಾಮಿಯ ಬೃಹತ್‌ ಪಂಚಲೋಹದ ವಿಗ್ರಹವಿರುವ ಒಂದು ಸುಂದರ ದೇವಸ್ಥಾನವಿದೆ. ಇದನ್ನು 1963ರಲ್ಲಿ ನಿರ್ಮಿಸಲಾಗಿದ್ದು, ಗುಜರಾತಿನ ಸೋಮನಾಥ ದೇವಾಲಯದ ರೂಪದಲ್ಲಿದೆ. ಇದರ ಕೆಳಗಡೆ ಒಂದೇ ಕಲ್ಲಿನಿಂದ ಸ್ವಾಮಿ ನಿತ್ಯಾನಂದರು ಕೆತ್ತಿರುವುದು ಎಂದು ಹೇಳಲಾಗುವ ಸುಮಾರು 45  ಪುಟ್ಟ  ಗುಹೆಗಳಿವೆ.

        ನಿತ್ಯಾನಂದಾಶ್ರಮದ ಒಂದು ಕುತೂಹಲದ ವಿಶೇಷತೆಯಾಗಿದೆ ಈ ಗುಹೆಗಳು. ಹೊರಗಿನಿಂದ ನೋಡುವಾಗ ಒಂದು ಪುಟ್ಟ ಕಿಂಡಿಯಂತೆ ಕಂಡುಬರುವ ಈ ಗುಹೆ, ಒಳಗೆ ಹೋದಾಗ ತನ್ನ  ಗುಟ್ಟನ್ನು ಬಿಡಿಸಿ ತೋರಿಸುತ್ತದೆ. ಸಾಗಿದಷ್ಟೂ ಮುಗಿಯುತ್ತಿಲ್ಲ  ಗುಹೆಗಳ ದರ್ಶನ. ಎಲ್ಲಿ ಕಣ್ಣು  ಹಾಯಿಸಿದರೂ ಗುಹೆಗಳೇ. ಪ್ರತಿಯೊಂದರಲ್ಲೂ ಒಬ್ಬೊಬ್ಬ ವ್ಯಕ್ತಿಗೆ  ಆರಾಮವಾಗಿ ಕುಳಿತುಕೊಳ್ಳಲು ಸಾಧ್ಯವಿರುವಷ್ಟು ಸ್ಥಳಾವಕಾಶವಿದೆ. ಒಳಗೆ ಹವಾನಿಯಂತ್ರಣ ವ್ಯವಸ್ಥೆ ಇದೆಯೇ ಎಂಬಂಥ ತಂಪು ಹವೆ. ಇದನ್ನು ಭಗವಾನ್‌ ನಿತ್ಯಾನಂದ ಸ್ವಾಮಿಗಳು ತನ್ನ ಶಿಷ್ಯರ ಧ್ಯಾನಕ್ಕಾಗಿ ತಾನೇ ಕೊರೆದು ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅದೊಂದು ಅದ್ಭುತ ಸಂಗತಿ. ನೋಡಿಯೇ ತಿಳೀಬೇಕು  ಅದರ ಸೊಬಗು.

        ಆನಂದಾಶ್ರಮ

        ಸಮೀಪದಲ್ಲೇ ಆನಂದಾಶ್ರಮ  ಇದೆ. ಇದೂ ಪ್ರವಾಸಿ ಕೇಂದ್ರವಾಗಿದೆ. ಯೋಗ, ಧ್ಯಾನಕ್ಕೆ ಸೂಕ್ತವಾದ ಆಶ್ರಮವಿದು. 1939ರಲ್ಲಿ ಇದನ್ನು ಸ್ವಾಮಿ ರಾಮದಾಸ್‌ ಅವರು ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇವರು ಆಧುನಿಕ ಕಾಲದ ಹಿರಿಯ ವೈಷ್ಣವ ಸಂತರು.


        ತೆಂಗಿನಮರಗಳಿಂದ ಸುತ್ತುವರಿದಿರುವ ಸುಂದರ ಪ್ರದೇಶದಲ್ಲಿರುವ ಈ ಆಶ್ರಮದ ಪೂರ್ವ ಭಾಗದಲ್ಲಿ ಪ್ರಶಾಂತ ವಾತಾವರಣದ ಗುಡ್ಡಗಳಿವೆ. ಇಲ್ಲಿ  ಧ್ಯಾನಕ್ಕೆ ಸೂಕ್ತವಾದ ಪ್ರದೇಶ.  ಮಾನಸಿಕ ಜಂಜಾಟಗಳಿಂದ  ಬಳಲುತ್ತಿರುವವರು  ಇಲ್ಲಿ ಬಂದು ವಿಶ್ರಾಂತಿ ಪಡೆದು ಹೋಗುವುದು ಸಾಮಾನ್ಯವಾಗಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
      • Copyright @ 2009 Udayavani.All rights reserved.
      • Designed & Hosted By 4cplus