Sunday, November 23, 2014
Last Updated: 10:36:16 AM IST
  • ನಾನೆಲ್ಲಿರುವೆ:
  • ಮುಖಪುಟ ಪಯಣ
  • ವಿಡಿಯೋ ಗ್ಯಾಲರಿ
  • ಉದಯವಾಣಿ
  • ವೆ ಬ್
  • ಹುಡುಕಿ
    • ಕಾಶ್ಮೀರ ಕಣಿವೆ ಸದೃಶ ಪೊಸಡಿಗುಂಪೆ


      • ಕಾಸರಗೋಡಿನ ಚೇವಾರು ಸಮೀಪದ ಪೊಸಡಿ ಗುಂಪೆ ಬೆಟ್ಟ ಕಾಶ್ಮೀರ ಕಣಿವೆಯನ್ನು ನೆನಪಿಸುವ ರುದ್ರ ನಯನಮನೋಹರ ತಾಣವಾಗಿದೆ.


        ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಮಂಗಳೂರಿನಿಂದ ಕಾಸರಗೋಡಿಗೆ ಹೋಗುವಾಗ ಕುಂಬಳೆಯಿಂದ ಸ್ವಲ್ಪ ಮೊದಲು ಬಂದ್ಯೋಡು ಎಂಬ ಸ್ಥಳ ಸಿಗುತ್ತದೆ. ಇಲ್ಲಿಂದ ಪೂರ್ವಕ್ಕೆ ಒಂದು ರಸ್ತೆಯಿದೆ. ಇದು ಧರ್ಮತ್ತಡ್ಕ ಎಂಬಲ್ಲಿಗೆ ತಲುಪುತ್ತದೆ, ಅದಕ್ಕಿಂತಲೂ ಮುಂದೆ  ದಾಟಿ ಕರ್ನಾಟಕದ ವಿಟ್ಲ, ಪುತ್ತೂರು ಮುಂತಾದ ನಗರಗಳನ್ನು ಸಂಪರ್ಕಿಸಲೂ ಸಾಧ್ಯ.

        ಬಂದ್ಯೋಡಿನಿಂದ ಸುಮಾರು 15 ಕಿ.ಮೀ. ದೂರ ಸಾಗಿದಾಗ ಚೇವಾರು ಎಂಬ ಸ್ಥಳ ಸಿಗುತ್ತದೆ. ಇಲ್ಲಿಂದ ಮೊದಲ್ಗೊಂಡು ಧರ್ಮತ್ತಡ್ಕವರೆಗೆ ಸುಂದರವಾದ, ಆಕರ್ಷಕವಾದ ಮೂರು ಗುಂಬಜ್‌ಗಳಿರುವಂತೆ ಕಾಣುವ ದೊಡ್ಡ ಬೆಟ್ಟ ಕಂಡು ಬರುತ್ತದೆ. ಇದುವೇ ಪೊಸಡಿಗುಂಪೆ. ಕವಿ ಕಯ್ನಾರ ಕಿಂಞಣ್ಣ ರೈ ಅವರು ಇದೇ ಬೆಟ್ಟವನ್ನು  ಕುರಿತು ಒಂದು ಸುಂದರವಾದ ಕವನ ರಚಿಸಿ,  "ಪೊಸಡಿಗುಂಪೆ ಬೆಟ್ಟ ನೋಡು, ಹೊಸತು ಕಣೆY ಹಬ್ಬ ಮಾಡು. ಸ್ಫೂರ್ತಿಧಾರೆ ಎರೆದಿದೆ, ಶಕ್ತಿ ಮೀರಿ ನಿಂತಿದೆ..' ಎಂದು ಹೇಳಿದ್ದಾರೆ.

        ಸಮುದ್ರಮಟ್ಟದಿಂದ ಸುಮಾರು 500 ಮೀಟರ್‌ ಎತ್ತರದಲ್ಲಿರುವ ಈ ಬೆಟ್ಟ ಎಲ್ಲರ ಗಮನ  ಸೆಳೆಯುತ್ತಿದೆ. ಯಾಕೆಂದರೆ ಕಾಸರಗೋಡಿನ ಹೆಚ್ಚಿನ  ಭಾಗಗಳಿಗೆ ಈ ಬೆಟ್ಟ ಕಂಡು ಬರುತ್ತದೆ. ಮೂರು ಶಿಖರಗಳನ್ನು ಹೊತ್ತುಕೊಂಡು ವಿಸ್ತಾರವಾಗಿ ಹರಡಿ ಬಿದ್ದಿರುವ ಪೊಸಡಿಗುಂಪೆಯ ಮೇಲೆ ಆರಾಮವಾಗಿ ಹತ್ತಬಹುದಾಗಿದೆ. ಇದನ್ನು ಅಭಿವೃದ್ಪಡಿಸಿ ಪ್ರವಾಸಿಗರನ್ನು ಸೆಳೆಯುವ ಯೋಚನೆಯೂ ಸರಕಾರದ ಮುಂದಿತ್ತು.

        ಕಾಶ್ಮೀರದಲ್ಲಿ ಹೋರಾಡುವ ಸೈನಿಕರ ಕಥೆಯೊಂದನ್ನು ಆಧರಿಸಿ  ನಿರ್ಮಿಸಲಾಗಿದ್ದ "ವಾರ್‌ ಎಂಡ್‌ ಲವ್‌' ಚಿತ್ರದ ಹೆಚ್ಚಿನ ಭಾಗ ಇಲ್ಲಿಯೇ ಚಿತ್ರೀಕರಣಗೊಂಡಿತ್ತು. ಯಾಕೆಂದರೆ ಇದು  ಕಾಶ್ಮೀರ ಕಣಿವೆಯಂತೆ ಕಾಣುತ್ತದೆ. ಈ ಬೆಟ್ಟದ ಮೇಲೇರಿದಾಗ ನಾವು ಸುತ್ತಲಿನ ಸುಂದರ ದೃಶ್ಯಗಳನ್ನು ಕಾಣಬಹುದು. ಪಶ್ಚಿಮಕ್ಕೆ ಅರಬ್ಬೀ ಸಮುದ್ರ, ಪೂರ್ವಕ್ಕೆ ಪಶ್ಚಿಮಘಟ್ಟಗಳ ಸಾಲು, ಉತ್ತರಕ್ಕೆ ಮಂಗಳೂರು, ಪಣಂಬೂರು ನಗರ, ದಕ್ಷಿಣಕ್ಕೆ  ಕಾಸರಗೋಡಿನ  ಒಂದು ಪಕ್ಷಿನೋಟಕ್ಕೆ ಈ ಬೆಟ್ಟ ಏರುವುದು ಸುಲಭಮಾರ್ಗ.

        ಈ ಬೆಟ್ಟ ಏರಲು ಏರಲೂ ಕಷ್ಟ ಇಲ್ಲ. ಗಿಡಮರ ಪೊದೆಗಳ ಉಪದ್ರವಿಲ್ಲ. ಬರಡು   ಭೂಮಿಯಂತಿದೆ. ಆರಾಮವಾಗಿ ಹತ್ತಬಹುದು. ಅದರಲ್ಲೂ ಸಂಜೆಯ ಹೊತ್ತಿಗೆ ಇಲ್ಲಿರುವುದೆಂದರೆ ಅದರ ಅನುಭವವನ್ನು ವರ್ಣಿಸಲಾಗದು. ಹಳ್ಳಿಯ ವಾತಾವರಣ. ಜನಜಂಗುಳಿಯ ಸಮಸ್ಯೆಯೂ ಇಲ್ಲಿಲ್ಲ. ಅದರ ಬುಡದಲ್ಲೇ ವಾಹನ ಸಂಚಾರಕ್ಕೆ ಮಾಡಿರುವ ರಸ್ತೆಯಿದೆ. ಆ ರಸ್ತೆಯಲ್ಲಿ ಸಾಗುವುದೇ ಒಂದು ವಿಶೇಷ ಅನುಭವ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
      • Copyright @ 2009 Udayavani.All rights reserved.
      • Designed & Hosted By 4cplus