Sunday, December 21, 2014
Last Updated: 7:16:40 PM IST
 • ನಾನೆಲ್ಲಿರುವೆ:
 • ಮುಖಪುಟ ಪಯಣ
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
  • ಕುಮಟಗಿಯ ವರ್ಣಚಿತ್ರಗಳು !


   • ಐತಿಹಾಸಿಕ ಬಿಜಾಪುರ ಜಿಲ್ಲೆಯನ್ನು ಸಂದರ್ಶಿಸುವ ಪ್ರವಾಸಿಗರಿಗೆ ನಗರಕ್ಕೆ ಸನಿಹದಲ್ಲೇ ಇರುವ ಕುಮಟಗಿಯ ವರ್ಣ ಚಿತ್ರಗಳು ಕುತೂಹಲಕಾರಿಯಾಗಿವೆ. 

    ಕುಮಟಗಿ ಬಿಜಾಪುರ ನಗರದಿಂದ 10 ಕಿ.ಮೀ. ದೂರದಲ್ಲಿದೆ. ಇದು ಪುಟ್ಟ ಗ್ರಾಮ. ಇಲ್ಲಿ ಆದಿಲ್‌ಶಾಹಿಯು ಒಂದು ಸ್ಮಾರಕ ನಿರ್ಮಿಸಿದ್ದಾನೆ. ಇದನ್ನು ಜಲಮಹಲ್‌ ಎಂದು ಕರೆಯುವರು. ನೀರಿನ ಪುಷ್ಕರಣಿಗಳಿವೆ. ಸ್ಮಾರಕದ ಗೋಡೆ ಮೇಲೆ ಪೋಲೋ ಆಡುತ್ತಿರುವ ಚಿತ್ರಕಲೆ, ಕುಸ್ತಿ ಆಟದ ಚಿತ್ರ, ಸಂಗೀತಸಭೆಯ ಚಿತ್ರ, ಮಲ್ಲ ಯುದ್ಧದ ಚಿತ್ರಗಳು ಕಂಡುಬರುತ್ತವೆ. ಇಲ್ಲೊಂದು ಸುಂದರವಾದ ಉದ್ಯಾನವಿದೆ.

    ಬೇಗಂ ಸಾಥಿ

    ಇದು ಕೂಡಾ ನಗರದಿಂದ 6 ಕಿ.ಮೀ. ದೂರವಿರುವ ಐನಾಪುರ ಗ್ರಾಮದಲ್ಲಿದೆ. ಇದು ಅರ್ಧಕ್ಕೆ ನಿಂತ ಕಟ್ಟಡ. ಇಲ್ಲೊಂದು ಮಸೀದಿಯಿದೆ. ಸ್ಮಾರಕದ ನೆಲಮಾಳಿಗೆಯಲ್ಲಿ ಗೋರಿಯಿರುವುದನ್ನು ಕಾಣಬಹುದು. ತುಂಬಾ ಆಕರ್ಷಕವಾದ ಕಟ್ಟಡವಿದು.

    ನವರಸಪುರ

    ಇದೊಂದು ಪ್ರಸಿದ್ಧವಾದ ತಾಣ. ನಗರದ ಪಶ್ಚಿಮಕ್ಕೆ 5 ಕಿ.ಮೀ. ದೂರದಲ್ಲಿರುವ ತೊರವಿ ಗ್ರಾಮದ ಬಳಿಯಿರುವುದು. ಇಲ್ಲಿರುವ ಕಟ್ಟಡಗಳು ಬರಡು. ಮೊದಲನೆಯದು ಸಂಗೀತ ಮಹಲ್‌ ಹಾಗೂ ನಾರಿ ಮಹಲ್‌. ಸಂಗೀತ ಮಹಲ್‌ ಎತ್ತರವಾದ, ಅಗಲವಾದ ಕಮಾನು ಹೊಂದಿದೆ. ಎದುರಿಗೆ ನೀರಿನ ಪುಷ್ಕರಣಿ ಇದೆ. ಸುತ್ತೆಲ್ಲಾ ಕೋಟೆ ಗೋಡೆಯಿದೆ. ಇಲ್ಲಿ ಪ್ರತಿವರ್ಷ ನವರಸಪುರ ಉತ್ಸವವನ್ನು ಆಚರಿಸಲಾಗುತ್ತಿತ್ತು, ಕಳೆದೆರಡು ವರ್ಷದಿಂದ ಅದು ನಿಂತುಹೋಗಿದೆ.

    ಖ್ವಾಜಾ ಅಮೀನ್‌ ದರ್ಗಾ

    ಸೂಫಿ ಸಂತರಾದ "ಖ್ವಾಜಾ ಅಮೀನ್‌' ಅವರ ದರ್ಗಾ ಹಿಂದು-ಮುಸ್ಲಿಂ ಭಕ್ತಾದಿಗಳ ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿ ಆದಿಲ್‌ಶಾಹಿ ಕಾಲದ ನಗಾರಿ, ಹಳೆ ಬೀಗದ ಕೈಗಳು, ಕಲ್ಲಿನ ಕಿಸ್ತಾ, ಭಕ್ತಿಯಿಂದ ಕಿರು ಬೆರಳಲ್ಲಿ ಎತ್ತಬಹುದಾದ ಕಲ್ಲಿನ ಗುಂಡುಗಳು ಇಲ್ಲಿವೆ.


   Share your views-post your Comment below
   blog comments powered by Disqus
   ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
   • Copyright @ 2009 Udayavani.All rights reserved.
   • Designed & Hosted By 4cplus