Monday, December 22, 2014
Last Updated: 5:53:04 PM IST
 • ನಾನೆಲ್ಲಿರುವೆ:
 • ಮುಖಪುಟ ಪಯಣ
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
  • ಶಿವಗಿರಿಯ ಶಿವಮೂರ್ತಿ


   • ಬಿಜಾಪುರ ಜಿಲ್ಲಾ ಪ್ರವಾಸಗೈವ ಯಾತ್ರಾರ್ಥಿಗಳಿಗೆ ಭಾರತದ ಎರಡನೇ ಅತಿ ದೊಡ್ಡ ಶಿವಮೂರ್ತಿಯನ್ನು ಕಣ್ತುಂಬ ಕಾಣುವುದೇ ಒಂದು ಭಾಗ್ಯ.

    ಬಿ.ಕೆ. ಪಾಟೀಲ ಚಾರಿಟೇಬಲ್‌ ಟ್ರಸ್ಟ್‌ನವರು ನಗರದ ಹೊರ ವಲಯದಲ್ಲಿರುವ (ಉಕ್ಕಲಿ ರಸ್ತೆ) ಬಸಂತ ವನದಲ್ಲಿ ಶಿವನ ಮೂರ್ತಿಯನ್ನು ನಿರ್ಮಿಸಿದ್ದಾರೆ. ಇದು ನಗರದ ಬಸ್‌ ನಿಲ್ದಾಣದಿಂದ ಪೂರ್ವಕ್ಕೆ 4 ಕಿ.ಮೀ. ದೂರದಲ್ಲಿದೆ. ರೈಲು ನಿಲ್ದಾಣದಿಂದ ಒಂದೂವರೆ ಕಿ.ಮೀ. ಅಂತರದಲ್ಲಿದೆ.

    ಭಾರತದಲ್ಲಿಯೇ ಎರಡನೇ ಅತಿ ದೊಡ್ಡ ಶಿವಮೂರ್ತಿ (95 ಅಡಿ) ಇದಾಗಿದೆ. ಪ್ರತಿ ಶಿವರಾತ್ರಿ ದಿವಸ ಪೂಜೆ, ಸಾಂಸ್ಕೃತಿಕ-ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ಜರಗುತ್ತವೆ. ಜಿಲ್ಲೆಯ ಜನರಿಗೆ ಇದು ಅಚ್ಚು ಮೆಚ್ಚಿನ  ಪ್ರವಾಸಿ ತಾಣವಾಗಿ ರೂಪುಗೊಂಡಿದೆ. ಇಲ್ಲಿ ಸುಂದರವಾದ ಉದ್ಯಾನವನವಿದೆ. "ತುಳಸಿ' ಎಂಬ ವೃದ್ಧಾಶ್ರಮವು ಇಲ್ಲಿದೆ.

    ಮಲ್ಲಿಕಾರ್ಜುನ ಆಶ್ರಮ

    ನಡೆದಾಡುವ ದೇವರೆಂದು ಭಕ್ತರಿಂದ ಕರೆಯಿಸಿಕೊಳ್ಳುವ "ಪೂಜ್ಯಶ್ರೀ ಸಿದ್ಧೇಶ್ವರ ಸ್ವಾಮೀಜಿ' ಅವರ ತಾಣವಿದು. ಮಲ್ಲಿಕಾರ್ಜುನ ಸ್ವಾಮೀಜಿಯವರು ಲಿಂಗೈಕ್ಯರಾದ ಬಳಿಕ ಪೂಜ್ಯಶ್ರೀ ಸಿದ್ಧೇಶ್ವರ ಸ್ವಾಮಿಗಳು ಇಲ್ಲಿ ಆಧ್ಯಾತ್ಮಿಕ ಪ್ರವಚನ ನಡೆಸುತ್ತಿದ್ದಾರೆ.
     

    ಇಲ್ಲಿ ಪ್ರಣವ ಮಂಟಪ, ಗ್ರಂಥಾಲಯ, ಧ್ಯಾನ ಮಂದಿರ, ವಿಶಾಲವಾದ ತೋಟ ಆಕರ್ಷಕವಾಗಿದೆ. ಈ ಆಶ್ರಮವು ಬಸ್‌ ನಿಲ್ದಾಣದಿಂದ 4 ಕಿ.ಮೀ. ದೂರದಲ್ಲಿದೆ. ಉತ್ತರದ ಆದರ್ಶ ನಗರ ಅಥವಾ ಬಿ.ಎಲ್‌.ಡಿ.ಈ. ರಸ್ತೆ ಮುಖಾಂತರ ಆಶ್ರಮ ತಲುಪಬಹುದು. ನಗರ ಸಾರಿಗೆ ಬಸ್ಸು ಮುಖಾಂತರವೂ ತಲುಪಬಹುದು.

    ಸಿದ್ಧೇಶ್ವರ ದೇವಾಲಯ

    ನಗರದ ಹೃದಯ ಭಾಗದಲ್ಲಿರುವ ಭವ್ಯ ದೇವಾಲಯ, ಶ್ರೀ ಸಿದ್ದರಾಮೇಶ್ವರ ದೇವಾಲಯ ಅಥವಾ ಸಿದ್ದೇಶ್ವರ ದೇವಾಲಯವೆಂದು ಸ್ಥಳೀಯರು ಕರೆಯುವರು. ಪ್ರತಿವರ್ಷ ಮಕರ ಸಂಕ್ರಾಂತಿ ದಿನದಿಂದ ಒಂದು ವಾರದ ತನಕ ವಿಜೃಂಭಣೆಯಿಂದ ಜಾತ್ರೆ ಜರಗುವುದು.


   Share your views-post your Comment below
   blog comments powered by Disqus
   ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
   • Copyright @ 2009 Udayavani.All rights reserved.
   • Designed & Hosted By 4cplus