Friday, December 19, 2014
Last Updated: 1:20:59 AM IST
 • ನಾನೆಲ್ಲಿರುವೆ:
 • ಮುಖಪುಟ ಪಯಣ
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
  • ಬಿಜಾಪುರದ ಪಾರ್ಶ್ವನಾಥ ಮಂದಿರ


   • ದರ್ಗಾದ ಸಹಸ್ರಫಣಿ ಪಾರ್ಶ್ವನಾಥ ಮಂದಿರವು ಬಿಜಾಪುರದಿಂದ 2 ಕಿ.ಮೀ. ಅಂತರದಲ್ಲಿದೆ. ಈ ಮಂದಿರವು ಜೈನರ ಪ್ರವಾಸಿ ತಾಣವಾಗಿದೆ. 1907ರಲ್ಲಿ "ಸುಖಾರಾಮ ಕಸ್ತೂರ ಚಂದಶಹಾ' ಎಂಬುವರು ಪಾರ್ಶ್ವನಾಥನನ್ನು ಸ್ಥಾಪಿಸಿದರು.

    ಒಂದು ಸಾವಿರದ ಎಂಟು ಹೆಡೆಯುಳ್ಳ ಸರ್ಪವು ಪಾರ್ಶ್ವನಾಥನನ್ನು ಆವರಿಸಿಕೊಂಡಿದೆ. ಇದಕ್ಕೆ ಹಾಲೆರೆದಾಗ ಎಲ್ಲ ಹೆಡೆಗಳ ಬಾಯಿಯಲ್ಲಿ ಹಾಲು ಹರಿದುಬರುವುದು ವಿಶೇಷ. ಇದು ಭಾರತ ದೇಶದಲ್ಲೆ ವಿಶಿಷ್ಠವೆನಿಸುವ ಮೂರ್ತಿ. ಸುಂದರವಾದ ದೇವಾಲಯದೊಂದಿಗೆ ಗ್ರಂಥಾಲಯ, ಯಾತ್ರಿಗಳ ನಿವಾಸ ಇದೆ.

    770 ಅಮರ ಗಣ ಲಿಂಗಗಳ ದೇಗುಲ

    "ಲಿಂಗದ ಗುಡಿ' ಎಂದೇ ಪ್ರಸಿದ್ಧವಾದ ಈ ದೇವಾಲಯವನ್ನು ಶ್ರೀ ಬಂಧನಾಳ ಶಿವಯೋಗಿಗಳ ಮಾರ್ಗದರ್ಶನದಲ್ಲಿ ಸ್ಥಾಪಿಸಲಾಗಿದೆ. ಗುಡಿಯ ಮೇಲೆ ಬೃಹತ್ತಾಕಾರದ ಶಿವಲಿಂಗವಿದೆ. ಒಳಗಡೆ ಸಾಲಾಗಿ 770 ಅಮರ ಗಣ ಲಿಂಗಗಳ ಸ್ಥಾಪನೆಯಿದೆ. ಶಿವರಾತ್ರಿಯಂದು ಇಲ್ಲಿ ವಿಶೇಷ ಪೂಜೆ, ಅಭಿಷೇಕ ನೆರವೇರುವುದು.

    ಅರಕೇರಿ ಅಮೋಘ ಸಿದ್ಧ

    ಬಿಜಾಪುರದಿಂದ 12 ಕಿ.ಮೀ. ದೂರದಲ್ಲಿರುವ "ಮುಮ್ಮಟಗುಡ್ಡ'ವೆಂದು ಕರೆಯಲ್ಪಡುವ ಈ ತಾಣವು ಆಧ್ಯಾತ್ಮಿಕವಾಗಿ ತುಂಬಾ ಜನಪ್ರಿಯ ಗೊಂಡಿದೆ. ಎತ್ತರದ ದಿನ್ನೆಯ ಮೇಲಿರುವ ಸಿದ್ಧನ ದೇವಾಲಯ ತುಂಬಾ ಪುರಾತನ ಕಾಲದ್ದು.

    ಅಮೋಘ ಸಿದ್ದನು ಕಂಬಳಿ ಬೀಸಿ ಮಳೆಗರೆದು ಪವಾಡ ಮಾಡಿದನೆಂದು ಭಕ್ತಾದಿಗಳು ಹೇಳುತ್ತಾರೆ, "ಮುಮ್ಮಟಗಿರಿ'ಯೆಂಬ ಹೆಸರಿ ನಿಂದಲೂ ಈ ತಾಣವನ್ನು ಕರೆಯುವರು. ಪ್ರತಿ ಅಮಾವಾಸ್ಯೆಯಂದು ವಿಶೇಷ ಪೂಜೆ ನೆರವೇರುವುದು.

    ಕಾಖಂಡಕಿ

    ಈ ಗ್ರಾಮವು ಹಿಂದೆ ಅಗ್ರಹಾರವಾಗಿತ್ತು. ಇದು ಬಿಜಾಪುರದಿಂದ 30 ಕಿ.ಮೀ. ದೂರದಲ್ಲಿದೆ. ದಾಸ ಶ್ರೇಷ್ಠರಾದ "ಮಹಿಪತಿ ದಾಸರು' ಇಲ್ಲೆ ನೆಲೆಸಿದ್ದರು. ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಕೀರ್ತನೆಗಳನ್ನು ರಚಿಸಿದ್ದಾರೆ. ಮಹಿಪತಿದಾಸರ ಬೃಂದಾವನ ಇಲ್ಲಿದೆ.

    ಕಾರ ಹುಣ್ಣಿಮೆಯಾದ ಏಳು ದಿನಗಳ ನಂತರ ಎತ್ತುಗಳನ್ನು ಓಡಿಸುವ, "ಕರಿಹರಿ'ಯುವ ಸಂಪ್ರದಾಯ, ಆಚರಣೆ ಈ ಗ್ರಾಮದಲ್ಲಿ ವಿಶೇಷವಾಗಿ ಆಚರಿಸಲ್ಪಡುವುದು.

    ತೊರವಿ

    ಬಿಜಾಪುರದಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ತೊರವಿ ಗ್ರಾಮವು ತುಂಬಾ ಪ್ರಸಿದ್ಧಿಯನ್ನು ಹೊಂದಿದೆ. 16ನೆಯ ಶತಮಾನ ದಲ್ಲಿ "ನರಹರಿ' ಕವಿ, ಉರ್ಫ್‌ ಕುಮಾರ ವಾಲ್ಮೀಕಿ ರಚಿಸಿದ "ತೊರವೆ ರಾಮಾಯಣ' ರಚನೆಯಾಗಿದ್ದು ಇಲ್ಲಿಯೇ.

    ಇದು ವೈದಿಕ ರಾಮಾಯಣ ಗ್ರಂಥ 6 ಕಾಂಡಗಳ 112 ಸಂಧಿಗಳ 5102 ಪದ್ಯಗಳನ್ನು ಒಳಗೊಂಡಿದೆ. ವಾಲ್ಮೀಕಿ ರಾಮಾಯಣ ಕೃತಿಯ ಮೂಲಾ ಧಾರವಾಗಿ ರಚಿತಗೊಂಡ ಈ ಕೃತಿ ಭಾಮಿನಿ ಷಟ³ದಿ ರೂಪದಲ್ಲಿದೆ. ಇಲ್ಲಿ ದೇವಾಲಯವಿದೆ.


   Share your views-post your Comment below
   blog comments powered by Disqus
   ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
   • Copyright @ 2009 Udayavani.All rights reserved.
   • Designed & Hosted By 4cplus