Saturday, December 20, 2014
Last Updated: 3:40:52 PM IST
 • ನಾನೆಲ್ಲಿರುವೆ:
 • ಮುಖಪುಟ ಪಯಣ
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
  • ಬಸವಣ್ಣನ ದೇವಾಲಯ


   • ಬಿಜಾಪುರ ಜಿಲ್ಲೆಯಲ್ಲಿ ಕೃಷ್ಣಾ ನದಿ ತೀರದಲ್ಲಿರುವ ಬಬಲಾದಿ  ಎಂಬ ಗ್ರಾಮವು ಧಾರ್ಮಿಕ ಕ್ಷೇತ್ರವಾಗಿದ್ದು  ಪ್ರವಾಸಿಗರ ಪಾಲಿಗೆ ದರ್ಶನೀಯವಾಗಿದೆ.

    ಕೃಷ್ಣಾ ನದಿ ತೀರದಲ್ಲಿರುವ ಈ ಗ್ರಾಮ ಧಾರ್ಮಿಕ ಕ್ಷೇತ್ರವಾಗಿದೆ. ಕ್ರಿ.ಶ. 1772ರಲ್ಲಿ ಈ ಗ್ರಾಮದಲ್ಲಿ ಮಠ ಸ್ಥಾಪನೆಯಾಗಿದೆ. ಶ್ರೀ ಷಣ್ಮುಖ ಸಿದ್ಧರು ಈ ಮಠಕ್ಕೆ ಪ್ರಥಮ ಪೀಠಾಧಿಪತಿಗಳು, ಅವರ ನಂತರ ಬಂದ ಸದಾಶಿವ ಗುರುಗಳು ಪವಾಡ ಪುರುಷರಾಗಿದ್ದರು. ಇಲ್ಲಿ ಪ್ರತಿವರ್ಷ ನಡೆಯುವ ಜಾತ್ರೆಯಲ್ಲಿ "ಸಾರಾಯಿ' ಪ್ರಸಾದ ರೂಪದಲ್ಲಿ ಹಂಚಲಾಗುವುದು. ಇಲ್ಲಿ ಬರುವ ಪ್ರತಿ ಭಕ್ತರು "ಸಾರಾಯಿ' ಕುಡಿ ಯುವರು. ಇದು ಈ ಮಠದ ನೈವೇದ್ಯವಾಗಿದೆ. ಇಲ್ಲಿ ದನಗಳ ಜಾತ್ರೆಯು ನಡೆಯುತ್ತದೆ.

    ಹನ್ನೆರಡನೆಯ ಶತಮಾನದಲ್ಲಿ ಕ್ರಾಂತಿ ಪುರುಷ, ಮಹಾ ಮಾನವತಾವಾದಿ, ವಿಶ್ವಗುರುವಾಗಿ, ಸಾಮಾಜಿಕ ಸುಧಾರಣೆ ಮಾಡಿದ ಶ್ರೀ ಬಸವೇಶ್ವರರು ಜನಿಸಿದ  ಪುಣ್ಯಭೂಮಿಯಿದು. ಅಣ್ಣ ಬಸವಣ್ಣನೆಂದು ಖ್ಯಾತಿಗೈದ ಈ ಶಿವಶರಣ ಜನಿಸಿದ  ಮನೆಯನ್ನು ಇಂದು ಅಭಿವೃದ್ಧಿಪಡಿಸಿ ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಲಾಗಿದೆ.

    ಊರಿನ ಮುಂದಿರುವ ವಿಶಾಲವಾದ ಜಾಗೆಯಲ್ಲಿ ಬಸವಣ್ಣನ ದೇವಾಲಯವನ್ನು ಸ್ಥಾಪಿಸಲಾಗಿದೆ. ಈ ಊರಿನಲ್ಲಿ ಇಂದಿಗೂ ದನ ಕತ್ತರಿಸಿ ಮಾಂಸ ಮಾರಾಟ ಮಾಡುವುದನ್ನು ನಿಲ್ಲಿಸಲಾಗಿದೆ. ಅಹಿಂಸೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಪ್ರಪಂಚದ ಏಕೈಕ ನಗರವೆಂಬ ಖ್ಯಾತಿಯನ್ನು ಇದು ಹೊಂದಿದೆ. ಬಸವನ ಬಾಗೇವಾಡಿ ತಾಲೂಕು ಕೇಂದ್ರವಾಗಿದೆ.

    ಇಂಗಳೇಶ್ವರ

    ಈ ಗ್ರಾಮವು ಬಸವನ ಬಾಗೇವಾಡಿಯಿಂದ 10 ಕಿ.ಮೀ. ದೂರದಲ್ಲಿದೆ. ಪ್ರಾಚೀನ ಮಧ್ಯ ಶಿಲಾಯುಗದ ಅವಶೇಷಗಳು ಈ ಗ್ರಾಮದಲ್ಲಿ ದೊರೆತಿವೆ. ಕ್ರಿ.ಪೂ. 2000 ವರ್ಷದ ತಾಮ್ರ ಶಿಲಾಯುಗದ ಮಡಕೆ ಚೂರುಗಳು ಉತVನನದಲ್ಲಿ ದೊರೆತಿವೆ.

    ಊರ ಮುಂದಿರುವ ಗುಡ್ಡದಲ್ಲಿ ಅಕ್ಕ ನಾಗಮ್ಮ ಮತ್ತು ರೇವಣ ಸಿದ್ದೇಶ್ವರ ಅವರ ಗುಹಾಂತರ ದೇವಾಲಯಗಳಿವೆ. ಕ್ರಿ.ಶ. 1176ರ ಕಾಲದ ಶಾಸನ ದೊರಕಿವೆ. ಆಧುನಿಕವಾದ ವಚನ ಶಿಲಾಮಂಟಪ ವೊಂದು ನಿರ್ಮಾಣಗೊಂಡಿದೆ.

    ಇದು ಸಿದ್ಧಲಿಂಗೇಶ್ವರ ವಿರಕ್ತ ಮಠದಲ್ಲಿರುವುದು, ಬಸವಾದಿ ಪ್ರಮಥರ ವಚನಗಳನ್ನು ಕಲ್ಲಿನಲ್ಲಿ ಕೆತ್ತಲಾಗಿದೆ. ಸಾವಿರಾರು ವಚನಗಳು ಇಲ್ಲಿ ಕೆತ್ತಲ್ಪಟ್ಟಿವೆ. ಇಂಗಳೇಶ್ವರ ಕೂಡಾ ಐತಿಹಾಸಿಕ ಹಿನ್ನೆಲೆಯುಳ್ಳ ಗ್ರಾಮವಾಗಿದೆ.


   Share your views-post your Comment below
   blog comments powered by Disqus
   ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
   • Copyright @ 2009 Udayavani.All rights reserved.
   • Designed & Hosted By 4cplus