ಕಾಸರಗೋಡು ಪ್ರವಾಸಿಗರು ಇಲ್ಲಿನ ತೆಂಗು ಸಂಶೋಧನಾ ಕೇಂದ್ರವಾಗಿರುವ ಸಿಪಿಸಿಆರ್‌ಐ ಗೆ ಭೇಟಿ ನೀಡುವುದು ಶೈಕ್ಷಣಿಕವಾಗಿ ಅಗತ್ಯ.
ಕಾಸರಗೋಡು ಜಿಲ್ಲೆಯ ಹೆಮ್ಮೆಯ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ. ಸೆಂಟ್ರಲ್ ಪ್ಲಾಂಟೇಶನ್ ಕ್ರೋಪ್ಸ್ ರೀಸರ್ಚ್ ಇನ್ಸಿಟ್ಯೂಟ್ ಎಂಬುದು ಪೂರ್ತಿ ಹೆಸರು.

ಕಾಸರಗೋಡಿನಿಂದ 4 ಕಿ.ಮೀ. ದೂರದ ಚೌಕಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿದೆ ಇದು. ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಇದನ್ನು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರೀಸರ್ಚ್ 1970ರಲ್ಲಿ ಸ್ಥಾಪಿಸಿದೆ. ಕೃಷಿ ಸಂಬಂ ವಿವಿಧ ಮಜಲುಗಳ ಸಮಸ್ಯೆ ಕುರಿತು ಇಲ್ಲಿ ಸಂಶೋಧನೆ ನಡೆಸಲಾಗುತ್ತಿದೆ.
ಸಿಪಿಸಿಆರ್‌ಐಯ ಪ್ರಾದೇಶಿಕ ಘಟಕಗಳು ಕಾಯಂಕೊಳಂ, ಕಲ್ಲಿಕೋಟೆ ಮತ್ತು ಕರ್ನಾಟಕದ ಪುತ್ತೂರು ಸಮೀಪದ ವಿಟ್ಲದಲ್ಲಿದೆ. ತೆಂಗಿನ ಬಗ್ಗೆ ವಿಶೇಷ ಸಂಶೋಧನೆ ನಿರತವಾಗಿರುವ ಕಾಸರಗೋಡಿನಲ್ಲಿ ನೂರಾರು ಎಕ್ರೆ ವಿಸ್ತೀರ್ಣದಲ್ಲಿ ತೆಂಗಿನ ಕೋಟೆ ಇದೆ. ತೆಂಗಿನ ವಿವಿಧ ಉಪಯೋಗಗಳ ಪ್ರಾತ್ಯಕ್ಷಿಕೆಯೂ ಇಲ್ಲಿ ನಡೆಯುತ್ತಿದೆ.

ವಿವಿಧ ರೀತಿಯ ಕೃಷಿಗಳ ಬಗ್ಗೆ ಇಲ್ಲಿಂದ ತರಬೇತಿ, ಮಾಹಿತಿ ನೀಡಲಾಗುತ್ತಿದೆ. ಖಗಿಈ, ಮಂಗಳಾ ಎಂಬೆರಡು ತಳಿ ಇಲ್ಲಿನ ವಿಶೇಷ ಕೊಡುಗೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಈಕೇಂದ್ರದಲ್ಲಿ ಬೃಹತ್ ಗ್ರಂಥಭಂಡಾರ ಇದೆ. ಶೈಕ್ಷಣಿಕ ಪ್ರವಾಸ ಬರುವ ಎಲ್ಲರಿಗೂ ಇದೊಂದು ಅಚ್ಚುಮೆಚ್ಚಿನ ತಾಣ, ಅಧ್ಯಯನ ಕೇಂದ್ರ.

ಕಣ್ವತೀರ್ಥ
ಮಂಜೇಶ್ವರ ಸಮೀಪದ ಆಕರ್ಷಕ ಕಡಲಕಿನಾರೆಯಾಗಿರುವ ಇದು ಪ್ರವಾಸಿ ಕೇಂದ್ರಗಳ ಸಾಲಿಗೆ ಸೇರಿದೆ. ಕೇರಳ-ಕರ್ನಾಟಕದ ಗಡಿಭಾಗವಾಗಿರುವ ತಲಪ್ಪಾಡಿಯಿಂದ ಅನತಿ ದೂರದಲ್ಲಿದೆ.

ವಲಿಯಪರಂಬ
ಜಿಲ್ಲೆಯ ಏಕೈಕ ಹಿನ್ನೀರು ಪ್ರದೇಶ. ರಜಾ ದಿನಗಳನ್ನು ಕಳೆಯಲು ಸೂಕ್ತ ಸ್ಥಳ. ಒಂದು ಆಕರ್ಷಣೀಯ ಪ್ರದೇಶ. ಒಂದು ದ್ವೀಪದಂತಿರುವ ಇಲ್ಲಿನ ಪ್ರಮುಖ ಕಸುಬು ಮೀನುಗಾರಿಕೆ. ತನ್ನ ಬೌಗೋಳಿಕ ವಿಶೇಷತೆಯಿಂದಲೇ ಇದು ಜನರನ್ನು ತನ್ನತ್ತ ಸೆಳೆಯುತ್ತಿದೆ. ಕಾಸರಗೋಡು ಜಿಲ್ಲೆಯ ದಕ್ಷಿಣ ತುದಿಯಲ್ಲಿದೆ.
