Sunday, May 26, 2013
Last Updated: 8:00:22 AM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ದರೋಡೆಗೆ ಯತ್ನ: ನಾಲ್ವರ ಬಂಧನ, ಇಬ್ಬರು ಪರಾರಿ
    • ಪೊಲೀಸರ ಸಮಯಪ್ರಜ್ಞೆ: ತಪ್ಪಿದ ದರೋಡೆ
      • Udayavani | Dec 23, 2012

        ಹುಬ್ಬಳ್ಳಿ: ಇರಾನಿ ಜನಾಂಗದ ಆರು ಜನರ ತಂಡ ದರೋಡೆ ಮಾಡಲು ಹೊಂಚು ಹಾಕಿ ನಿಂತಿದ್ದಾಗ ಕೇಶ್ವಾಪುರ ಠಾಣೆ ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ನಡೆಯಬೇಕಾಗಿದ್ದ ದರೋಡೆ ತಪ್ಪಿದಂತಾಗಿದೆ.

        ಶನಿವಾರ ಬೆಳಗಿನ 4 ಗಂಟೆ ಸುಮಾರಿಗೆ ಇಲ್ಲಿನ ಗದಗ ರಸ್ತೆ ರೇಲ್‌ನಗರ ಕ್ವಾರ್ಟರ್ಸ್‌ ಬಳಿ ದರೋಡೆಗೆ ಹೊಂಚು ಹಾಕಿ ನಿಂತಿದ್ದ ಪುನೆಯ ಶಿವಾಜಿನಗರ ಜೋಪಡಿಪಟ್ಟಿಯ ತಾಲಿಬ್‌ ಹುಸೇನ ಇರಾನಿ, ಮಹಮ್ಮದ ಹುಸೇನ ಇರಾನಿ, ಬೆಂಗಳೂರಿನ ಅಲಿಶಿರಾಜ್‌ ಇರಾನಿ, ಸಾದಿಕ್‌ಅಲಿ ಇರಾನಿ ಬಂಧಿತರಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ.

        ಎಸಿಪಿ ಎ.ಆರ್‌. ಬಡಿಗೇರ ನೇತೃತ್ವದಲ್ಲಿ ಠಾಣೆ ಇನ್ಸ್‌ಪೆಕ್ಟರ್‌ ಪ್ರಭುಗೌಡ ಪಾಟೀಲ ಹಾಗೂ ಸಿಬ್ಬಂದಿ ದಾಳಿ ಮಾಡಿ, ಬಂಧಿತರಿಂದ 3 ಬೈಕ್‌, 2 ರಾಡ್‌, 1 ಕಟ್ಟಿಗೆ ತುಂಡ, ಖಾರದ ಪುಡಿ ವಶಪಡಿಸಿಕೊಂಡಿದ್ದಾರೆ.

        ಕೇಶ್ವಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪರಾರಿಯಾಗಿರುವ ಇನ್ನಿಬ್ಬರಿಗಾಗಿ ತೀವ್ರ ಶೋಧ ನಡೆಸಿದ್ದಾರೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      • Copyright @ 2009 Udayavani.All rights reserved.
      • Designed & Hosted By 4cplus