Tuesday, June 18, 2013
Last Updated: 1:17:11 PM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಜಯಾ ಭಾಗಿ
    • ನರೇಂದ್ರ ಮೋದಿ ಅವರ ಪ್ರಮಾಣವಚನ ಸಮಾರಂಭದಲ್ಲಿ ತ.ನಾಡು ಮುಖ್ಯಮಂತ್ರಿ ಜಯಾಲಲಿತಾ ಭಾಗವಹಿಸಲಿದ್ದಾರೆ.

      • Udayavani | Dec 23, 2012

        ಚೆನ್ನೈ: ಡಿಸೆಂಬರ್‌ 26 ರಂದು ಗುಜರಾತ್‌ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ನರೇಂದ್ರ ಮೋದಿ ಅವರ ಸಮಾರಂಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಾಲಲಿತಾ ಭಾಗವಹಿಸಲಿದ್ದಾರೆ.

        ಸತತ ಮೂರನೇ ಬಾರಿಗೆ ಮುಖ್ಯಮಂತ್ರಿ ಗದ್ದುಗೆ ಏರಲಿರುವ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಜಯಾಲಲಿತಾ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ರವಿವಾರ ತಿಳಿಸಿವೆ.

        ನರೇಂದ್ರ ಮೋದಿ ಅವರು ಜಯಾಲಲಿತಾ ಅವರೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಿದ್ದು 2011ರ ಎಪ್ರಿಲ್‌ರಲ್ಲಿ ನಡೆದ ಜಯಾಲಲಿತಾ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು.

        ಅಂತೆಯೇ ಕಳೆದ ವರ್ಷ ಮೋದಿ ಅವರು ನಡೆಸಿದ ಸದ್ಭಾವನಾ ಮಿಷನ್‌ಗೆ ಜಯಾ ತನ್ನ ಪಕ್ಷದ ಸಂಸದರಾದ ಡಾ.ವಿ.ಮೈತ್ರೇಯನ್‌ ಹಾಗೂ ಎಂ.ತಂಬಿದೊರೈ ಅವರನ್ನು ಪ್ರತಿನಿಧಿಗಳಾಗಿ ಕಳುಹಿಸಿದ್ದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus