Wednesday, May 22, 2013
Last Updated: 11:45:04 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಆರೋಗ್ಯವಾಣಿ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಆಹಾರದ ಜೊತೆ ಸ್ವಯಂ ಉಪಶಮನ
    • ಆಹಾರದ ಜೊತೆ ಸ್ವಯಂ ಉಪಶಮನ.

      • ಶ್ರೀಮತಿ ಅರುಣಾ ಮಲ್ಯ, ಡಯಟೀಷಿಯನ್‌ | Dec 23, 2012

        ನಿಮ್ಮ ಕಾಯಿಲೆಗಳ ವಿರುದ್ಧ ಹೋರಾಡಿ, ನಿಮಗೆ ಸಂರಕ್ಷಣೆಯನ್ನು ಒದಗಿಸಬಲ್ಲ ಮೊದಲ ಮಿತ್ರ - ನಿಮ್ಮ  ಊಟದ ತಟ್ಟೆಯಾಗಿರಬಹುದು. ದೇಹದ ಉಪಚಾರ ಹಾಗೂ ಉಪಶಮನದ  ಉದ್ದೇಶದಿಂದ ರೂಪಿತವಾದ ಅಡುಗೆ, ಊಟಗಳು, ಹೃದಯದ ಕಾಯಿಲೆ, ಕ್ಯಾನ್ಸರ್‌ ಹಾಗೂ ಡಯಾಬೆಟಿಸ್‌ ವಿರುದ್ಧ ನಿಮಗೆ ಸೂಕ್ತ ರಕ್ಷಣೆಯನ್ನು ನೀಡಬಹುದು.

        ಆಹಾರವೇ ಔಷಧ  ಎನಿಸಬಹುದು. ಕಾಯಿಲೆ ಬರದಂತೆ ತಡೆಯಲು, ಬಂದಾಗ ಚಿಕಿತ್ಸೆ ನೀಡಲು ಹಾಗೂ ಬಂದಿರುವ ಕಾಯಿಲೆಯನ್ನು ಹೋಗಲಾಡಿಸಿ, ರೋಗದ ಪರಿಣಾಮವನ್ನು ಇಲ್ಲವಾಗಿಸುವಲ್ಲಿ ಆಹಾರವೆಂಬುದು  ದಿವ್ಯಔಷಧವಾಗಬಹುದು. ಒಂದು ಆರೋಗ್ಯಕರ ಆಹಾರಕ್ಕೆ, ಬೊಜ್ಜು , ಡಯಾಬೆಟೆಸ್‌, ಸಂಧಿವಾತ, ಮೆಟಬಾಲಿಕ್‌ ಸಿಂಡ್ರೋಮ್‌, ಹೃದಯದ ಕಾಯಿಲೆಗಳು ಹಾಗೂ ಖನ್ನತೆಯಂತಹ ಕಾಯಿಲೆಗಳ ವಿರುದ್ಧ ಹೋರಾಡುವ ಶಕ್ತಿ ಇದೆ. ಆಹಾರಕ್ರಮವೂ ಸೇರಿದಂತೆ, ನಿಯಂತ್ರಣ ಸಾಧ್ಯವಿರುವ ಕೆಟ್ಟ  ಜೀವನಶೈಲಿಯ ಅಂಶಗಳ ಕಾರಣಗಳಿಂದಲೆ ಸುಮಾರು 80% ಕ್ಯಾನ್ಸರ್‌ಗಳು ಬಾಧಿಸುತ್ತವೆ- ಆರೋಗ್ಯಕರ ಆಹಾರ ವಿಧಾನದಿಂದಲೆ ನಿಮ್ಮ ಕ್ಯಾನ್ಸರಿನ ಅಪಾಯವನ್ನೂ ಸಹ ತಗ್ಗಿಸಬಹುದಾಗಿದೆ.
        ಯಾವ ಆಹಾರವನ್ನು, ಯಾವ ಕ್ರಮದಲ್ಲಿ ತಯಾರಿಸಬೇಕು ಎಂದು ತಿಳಿದುಕೊಂಡಿದ್ದರೆ ಸಾಕು, ಇಷ್ಟರಿಂದಲೇ ಕಾಯಿಲೆಗಳಿಂದ ನಿಮ್ಮನ್ನು  ನೀವು ಸುಲಭವಾಗಿ ರಕ್ಷಿಸಿಕೊಳ್ಳಬಹುದು. ನೀವು ಸೇವಿಸುವ ಆಹಾರದಲ್ಲಿ, ಕಾಳುಗಳು, ಮಸಾಲೆಗಳು, ಮೊಟ್ಟೆ , ಮೀನು, ತರಕಾರಿ ಹಾಗೂ ಹಣ್ಣುಗಳನ್ನು  ಸೇರಿಸಿ, ಅದನ್ನು ಪೌಷ್ಟಿಕ ಆಹಾರವನ್ನಾಗಿಸಿ, ಆಹಾರದ ಮೂಲಕ ರೋಗಗಳ ವಿರುದ್ಧ ಹೋರಾಡಲು ಇಂದೇ ಒಂದು ಹೆಜ್ಜೆ  ಮುಂದೆ ಸಾಗಿ.ರೋಗಗಳ ವಿರುದ್ಧ ಹೋರಾಡಲು ಹಾಗೂ ನಿಮ್ಮ ದೇಹಕ್ಕೆ ಸಮಗ್ರ ಶಕ್ತಿಯನ್ನು  ಒದಗಿಸಲು, ಆಂಟಿಆಕ್ಸಿಡಾಂಟ್ಸ್‌, ಉರಿಯೂತ ನಿರೋಧಕ ಅಂಶಗಳು  ನಾರು ಹಾಗೂ ಒಮೇಗಾ -3 ಅಂಶ  ಗಳಿರುವ ಸೂಪರ್‌ಫ‌ುಡ್‌ ಅಥವಾ ಅದ್ಭುತ ಆಹಾರವನ್ನು  ವಾರದಲ್ಲಿ ಕೇವಲ ಒಂದು ಬಾರಿ ಸೇವಿಸಿ. ಈ ಆಹಾರಗಳು ನಿಮಗೆ ರೋಗಗಳ ವಿರುದ್ಧ ರಕ್ಷಾ ಕವಚವಾಗಬಲ್ಲವು.

        ಕ್ಯಾನ್ಸರ್‌ ವಿರುದ್ಧ ಹೋರಾಡಲು
        ಅದ್ಭುತ  ಆಹಾರ

        1. ಬಲ್ಗರ್‌ ವೀಟ್‌ ಅಥವಾ ಡೇಲಿಯಾ

        ಬಲ್ಗರ್‌ ವೀಟ್‌ ಎಂಬ ಈ ಶಕ್ತಿಯುತ,  ಅದ್ಭುತ  ಆಹಾರವು ಕ್ಯಾನ್ಸರ್‌ ವಿರುದ್ದ ಹೋರಾಡಲು ಮೆಗ್ನೇಷಿಯಂ, ಝಿಂಕ್‌ ಹಾಗೂ ನಾರುಗಳಿಂದ ಸಮೃದ್ಧವಾಗಿದೆ. ಋತುಬಂಧ ಪೂರ್ವದಲ್ಲಿರುವ ಮಹಿಳೆಯರು ಪ್ರತೀದಿನ 30 ಗ್ರಾಂಗಿಂತಲು ಹೆಚ್ಚಿನ ನಾರುಯುಕ್ತ ಆಹಾರವನ್ನು ಸೇವಿಸುವ ಮೂಲಕ, ಸ್ತನದ ಕ್ಯಾನ್ಸರ್‌ ಆಗಬಹುದಾದ ತಮ್ಮ ಅಪಾಯವನ್ನು  ಅರ್ಧದಷ್ಟು  ಕಡಿಮೆ ಮಾಡಿಕೊಳ್ಳಬಹುದು ಎನ್ನುವುದು ಸಂಶೋಧಕರ ಅಭಿಪ್ರಾಯ.

        1 ಕಪ್‌ ಬೇಯಿಸಿದ ಬಲ್ಗರ್‌ ಗೋಧಿಯು 8 ಗ್ರಾಂನಷ್ಟು ನಾರನ್ನು  ಒದಗಿಸುತ್ತದೆ - ಇದು ನಿಮಗೆ ದಿನವೊಂದಕ್ಕೆ ಬೇಕಾಗುವ ಮೂರನೇ ಒಂದು ಭಾಗದಷ್ಟಾಯಿತು.

        ಒರಟಾದ ಬಲ್ಗರ್‌ ಗೋಧಿಯನ್ನು  ಆರಿಸಿಕೊಳ್ಳಿ, ನಯವಾಗಿ ಹದಗೊಂಡ ಗೋಧಿಗಿಂತಲೂ ಇದು ರಕ್ತದ ಸಕ್ಕರೆಯ ಅಂಶವನ್ನು  ನಿಧಾನವಾಗಿ ಏರಿಸುತ್ತದೆ. ಅಕ್ಕಿ ಅಥವಾ ಆಲೂಗಡ್ಡೆಗೆ ಬದಲಿಯಾಗಿ ಈ ಧಾನ್ಯವನ್ನು  ಉಪಯೋಗಿಸಿ, ಇದರ ಜೊತೆ ಇದನ್ನು  ಮಂದಗೊಳಿಸಲು  ಧಾನ್ಯಗಳನ್ನು  ಸೇರಿಸಬಹುದು ಅಥವಾ ಈ ಬಲ್ಗರ್‌ ಗೋಧಿಯನ್ನು  ಉಪಾಹಾರವಾಗಿಯೂ ಬಡಿಸಬಹುದು. ನಿಮ್ಮ ಈ ವ್ಯಂಜನದ ಗರಿಷ್ಠ  ಪ್ರಯೋಜನವನ್ನು ಪಡೆಯಲು, ಅದನ್ನು ಒಣ ಕಾವಲಿಯಲ್ಲಿ (ಎಣ್ಣೆ ಉಪಯೋಗಿಸದೆ) ಬೇಯಿಸಲು ಪ್ರಯತ್ನಿಸಿ.

        1.ನಿಂಬೆ

        ಸಿಟ್ರಿಸ್‌ ಜಾತಿಯ ಈ ಹಣ್ಣಿನ ರಸ ಹಾಗೂ ಸಿಪ್ಪೆಯಲ್ಲಿ ಹೆಸ್ಟಿಂಡಿನ್ಸ್‌ ಎಂಬ ನೈಸರ್ಗಿಕ  ಫ್ಲೆವೊನಾಯಿಡ್‌ ಇದೆ. ಹೆಸ್ಟಿಂಡಿನ್ಸ್‌ ಸ್ತನದ ಕ್ಯಾನ್ಸರ್‌, ಶ್ವಾಸಕೋಶದ ಕ್ಯಾನ್ಸರ್‌, ಕರುಳಿನ ಕ್ಯಾನ್ಸರ್‌ ಹಾಗೂ ಪಿತ್ತಜನಕಾಂಗದ ಕ್ಯಾನ್ಸರ್‌ಗಳ ವಿರುದ್ಧ ಹೋರಾಡಲು ಸಹಾಯಕವಾಗಿದೆ.

        ಈ ಆಹಾರದಿಂದ ಕ್ಯಾನ್ಸರ್‌ ವಿರುದ್ಧ ಹೋರಾಡುವ ಪ್ರಯೋಜನಗಳನ್ನು  ಹೆಚ್ಚಿಸಿಕೊಳ್ಳಲು, ದಿನಕ್ಕೆ ಅರ್ಧ ಕಪ್‌ ನಿಂಬೆ ಜ್ಯೂಸ್‌ ಕುಡಿಯುವ ಪರಿಪಾಠವಿರಲಿ. ನಿಮ್ಮ ಹಲ್ಲುಗಳ ಸುರಕ್ಷತೆಗಾಗಿ, ನಿಂಬೆಯ ರಸದ ಸಾರವನ್ನು  ದುರ್ಬಲಗೊಳಿಸಿ ಕುಡಿಯಿರಿ. 2 ಲೋಟ ತಣೆ¡àರಿನಲ್ಲಿ , 3 ನಿಂಬೆ ಹಣೆ¡ನ ರಸವನ್ನು  ಸೇರಿಸಿ ಕದಡಿರಿ. ನಿಂಬೆಯ ಸಿಪ್ಪೆಯಲ್ಲಿರುವ  ಆಂಟಿಆಕ್ಸಿಡಾಂಟ್‌ನ  ಪ್ರಯೋಜನವನ್ನು  ಪಡೆದುಕೊಳ್ಳಲು, ಅದನ್ನೂ  ಹಿಂಡಿ ಸೇರಿಸಬಹುದು. ಧಾನ್ಯಗಳ ಸಲಾಡ್‌ಗಳಲ್ಲಿ , ಪಾನೀಯಗಳಲ್ಲಿ ಆಹಾರದ ಸ್ವಾದ ಹಾಗೂ ಪರಿಮಳವನ್ನು  ಹೆಚ್ಚಿಸಲು ಹಾಗೂ ತರಕಾರಿಗಳಲ್ಲಿ ಉಪ್ಪಿನ ಬದಲಿಗೆ ನಿಂಬೆಯ ಸಿಪ್ಪೆಯ ಚೂರುಗಳನ್ನು  ಸಿಂಪಡಿಸಬಹುದು.

        2. ಕಡು ಬಣ್ಣದ ದ್ರಾಕ್ಷಿ

        ಈ ಕಪ್ಪು ದ್ರಾಕ್ಷಿಗಳು,  ತಮ್ಮ ಕಟುರುಚಿ ಹಾಗೂ ಕಸ್ತೂರಿಯಂತಹ ಪರಿಮಳಕ್ಕೆ ಹೆಸರುವಾಸಿ, ಬೀಜವುಳ್ಳ, ದಪ್ಪ ಸಿಪ್ಪೆಯ ಈ ವೈನ್‌ ದ್ರಾಕ್ಷಿಗಳಲ್ಲಿ ಪಾಲಿಫೆಸಾಲ್‌ನ ಸಾಂದ್ರತೆ ಹೆಚ್ಚು . ಇದರಲ್ಲಿರುವ ರೆಸ್‌ವರೆಟ್ರಾಲ್‌ (rಛಿsvಛಿrಚಠಿrಟl) ಅಂಶವು ದುಗ್ಧ  ಗ್ರಂಥಿಗಳು, ಪಿತ್ತಜನಕಾಂಗ , ಹೊಟ್ಟೆ ಹಾಗೂ ಸ್ತನದ ಕ್ಯಾನ್ಸರಿನ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯವೆಸಗುತ್ತದೆ. ಅಂಟಿ ಅಕ್ಸಿಡಾಂಟ್‌ನ ಈ ಶಕ್ತಿಶಾಲಿ ಅಂಶವು ದ್ರಾಕ್ಷಿಯ ಬೀಜ ಹಾಗೂ ಸಿಪ್ಪೆಯಲ್ಲಿಯೇ ಸಮೃದ್ಧವಾಗಿರುವ ಕಾರಣ, ಇಡೀ ದ್ರಾಕ್ಷಿಯನ್ನು  ತಿನ್ನುವುದು ಆವಶ್ಯಕ.

        ವಾರಕ್ಕೆ ಎರಡು ಕಪ್‌ನಷ್ಟು  ದ್ರಾಕ್ಷಿ ಸೇವನೆಯಿಂದ ಗರಿಷ್ಠ ಪ್ರಯೋಜನವನ್ನು ಪಡೆಯಬಹುದು. ದ್ರಾಕ್ಷಿಯಲ್ಲಿ ಕೆಂಪು ಹಾಗೂ ನೇರಳೆ ಬಣ್ಣದವುಗಳನ್ನೇ ಆರಿಸಿಕೊಳ್ಳಿ -ಹಸಿರು ಬಣ್ಣದವುಗಳಿಗಿಂತ ಈ ಕಡು ಬಣ್ಣದವುಗಳನ್ನೇ ಆರಿಸಿಕೊಳ್ಳಿ -ಹಸಿರು ಬಣ್ಣದವುಗಳಿಗಿಂತ ಈ ಕಡು ಬಣ್ಣದ ದ್ರಾಕ್ಷಿಗಳಲ್ಲಿ  ರೆಸ್ವರೆಟ್ರಾಲ್‌ ಅಂಶ ಅಧಿಕವಿರುತ್ತದೆ.

        ಮೋಜಿಗಾಗಿ ಈ ಅದ್ಭುತ ಹಣ್ಣುಗಳನ್ನು  ಫ್ರಿಝ್ ಮಾಡಿ, ನಿಮ್ಮ ಪಾನೀಯಗಳಲ್ಲಿ , ಐಸ್‌ ಕ್ಯೂಬ್‌ ಜೊತೆ ಸೇರಿಸಿ ಸೇವಿಸಬಹುದು. ಅಂಟಿ ಆಕ್ಸಿಡಾಂಟ್‌ ಬೋನಸ್‌ ಪಡೆಯಲು, ದ್ರಾಕ್ಷಿಯ  ರಸದ ಜೊತೆ ಈ  ಅದ್ಭುತ ಹಣ್ಣನ್ನು ಸೇರಿಸಿ ಸೇವಿಸಬಹುದು. ದ್ರಾಕ್ಷಿಯ ರಸವನ್ನು  ಸೇವಿಸಲು ಪ್ರಯತ್ನಿಸಿ.
        ಒಂದು ಮಿತಿಯಲ್ಲಿ , ವಾರದಲ್ಲಿ  ಒಂದೆರಡು ಸಲ ಸೇವಿಸುವ ಕೆಂಪು ವೈನ್‌, ಮೂತ್ರಪಿಂಡ, ಶ್ವಾಸಕೋಶ ಹಾಗೂ ಅಂಡಾಶಯಗಳ ಕ್ಯಾನ್ಸರಿನ ಅಪಾಯವನ್ನು  ತಗ್ಗಿಸುತ್ತದೆ ಎಂಬುದು ಸಾಬೀತಾಗಿದೆ. ನಿಮ್ಮ ಆಹಾರ ಕ್ರಮದಲ್ಲಿ  ಯಾವುದೇ ರೀತಿಯ ಆಲ್ಕೋಹಾಲನ್ನು  ಸೇರಿಸುವುದಕ್ಕೆ ಮುನ್ನ ನಿಮ್ಮ ವೈದ್ಯರ ಸಲಹೆಯನ್ನು  ಪಡೆದುಕೊಳ್ಳಿ .

        ಅದ್ಭುತ  ಪ್ರತಿರಕ್ಷ‌ಣಾ ವರ್ಧಕಗಳು

        ಶೀತ ಹಾಗೂ ಜ್ವರದಂತಹ ಸಂದರ್ಭಗಳಿಂದ ನಿಮ್ಮ ದೇಹವನ್ನು  ಸಂರಕ್ಷಿಸಿಕೊಳ್ಳಿ , ಈ ಆಹಾರಗಳ ಮೂಲಕ ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸಿ.

        1. ಟಾಹಿನಿ

        ಬೆಣ್ಣೆಯಂತಹ ಈ ಪದಾರ್ಥವನ್ನು  ಸಾಸಿವೆ  ಬೀಜದಿಂದ ತಯಾರಿಸುತ್ತಾರೆ, ಇದರಲ್ಲಿ  ಮೆಗ್ನೇಸಿಯಂ ಹಾಗೂ ಝಿಂಕ್‌ ಎಂಬ ಎರಡು ಬಗೆಯ ಪ್ರತಿರಕ್ಷಣಾ ವರ್ಧಕ ಅಂಶಗಳಿವೆ. ದೇಹದ ಚಟುವಟಿಕೆಗೆ ಅಗತ್ಯವಿರುವಷ್ಟು ಪ್ರತಿರಕ್ಷಣೆಯನ್ನು  ಮೆಗ್ನೇಸಿಯಂ ಒದಗಿಸಿದರೆ, ಝಿಂಕ್‌ ಸೋಂಕಿನ ವಿರುದ್ಧ  ರಕ್ಷಣೆಯನ್ನು ಒದಗಿಸುತ್ತದೆ.

        ಜೇನು ಹಾಗೂ ಸೇಬಿನ ಜೊತೆಗೆ, ಓಪನ್‌ ಸ್ಯಾಂಡ್‌ ವಿಚ್‌ ರೀತಿಯಲ್ಲಿ ಟಾಹಿನಿಯನ್ನು  ಸೇವಿಸಬಹುದು. ತರಕಾರಿಗಳನ್ನು  ಇದರಲ್ಲಿ  ಅದ್ದಿಯೂ ಸೇವಿಸಬಹುದು. 1 ಕಪ್‌ ಯೋಗರ್ಟ್‌, 1 ಎಸಳು ಜಜ್ಜಿದ ಬೆಳ್ಳುಳ್ಳಿ , 1 ದೊಡ್ಡ  ಚಮಚ ಟಾಹಿನಿ ಹಾಗೂ 1ನಿಂಬೆಹಣ್ಣಿನ ರಸವನ್ನು  ಒಟ್ಟಿಗೆ ಸೇರಿಸಿ, ಪೋಷಣಾಭರಿತ ಹಾಗೂ ಸ್ವಾದಿಷ್ಟ ವ್ಯಂಜನವನ್ನು  ತಯಾರಿಸಿ ಸೇವಿಸಬಹುದು. ಪ್ರತಿದಿನ 2 ದೊಡ್ಡ ಚಮಚ ಟಾಹಿನಿಯನ್ನು ಸೇವಿಸಿದರೆ ಉತ್ತಮ. ಕೇವಲ 180 ಕ್ಯಾಲೊರಿಯಷ್ಟನ್ನು  ವೆಚ್ಚ  ಮಾಡಿ, ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸಬಹುದು.

        2. ಕರಿಮೆಣಸು ಹಾಗೂ
        ಒರಿಗ್ಯಾನೋ


        ಕರಿಮೆಣಸಲ್ಲಿ ಪೈಪ್‌ರೈನ್‌ ಎಂಬ ಆಂಶವು ಅಧಿಕವಿರುತ್ತದೆ, ಇದು ಒಂದು ಉರಿಯೂತ ನಿರೋಧಕ ಅಂಶವಾಗಿದೆ.ಇದು ಸಂದಿಗಳ ಬಾವನ್ನು ತಗ್ಗಿಸುತ್ತದೆ. ಇತರ ಮಸಾಲೆಗಳ ಉತ್ತಮ ಅಂಶಗಳನ್ನು  ಹೀರಿಕೊಳ್ಳಲು ಪೈಪ್‌ ರೈನ್‌ ಸಹಾಯಮಾಡುತ್ತದೆ.

        ಒರಿಗ್ಯಾನೋವನ್ನು ತಾಜಾ ಎಲೆಯ ರೂಪದಲ್ಲಿ ಅಡುಗೆಯಲ್ಲಿ  ಉಪಯೋಗಿಸುತ್ತಾರೆ. ಈ ಎಲೆಯು ಒಂದು ರೀತಿಯ ಸುವಾಸನಾ ಎಣ್ಣೆಯನ್ನು  ಒಸರುತ್ತದೆ. ಇದು ಸೂಕ್ಷ್ಮಾಣು ಹಾಗೂ ವೈರಸ್‌ ನಿರೋಧಕ. ಇದು ಚರ್ಮದಲ್ಲಿರುವ ಸ್ಟಾಫಿಲೋಕಾಕ್ಕಸ್‌ ಬ್ಯಾಕ್ಟೀರಿಯಾ ಹಾಗೂ ಆಹಾರದಲ್ಲಿರುವ ಈ -ಕೋಲಿ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ. ಈಸ್ಟ್‌ ಸೋಂಕಿನ ವಿರುದ್ಧವೂ ಸಹ ಒರಿಗ್ಯಾನೋ ಹೋರಾಡುತ್ತದೆ. ನಿಮ್ಮ ದೇಹದ ಪ್ರತಿರಕ್ಷಣೆಯನ್ನು  ಬಲಗೊಳಿಸಲು, ವಾರಕ್ಕೆ 2 ಟೀ ಚಮಚದಷ್ಟು ಕರಿಮೆಣಸು  ಹಾಗೂ ಒರಿಗ್ಯಾನೋವನ್ನು ಸೇವಿಸಿ.

         3.ಕುಂಬಳಕಾಯಿ

        ಬೀಟಾಕೆರೋಟಿನ್‌ ಒಂದು ಶಕ್ತಿಶಾಲಿ ಆಂಟಿಅಕ್ಸಿಡಾಂಟ್‌. ಇದು ಕುಂಬಳಕಾಯಿಯಲ್ಲಿದೆ. ದಟ್ಟ  ಕಿತ್ತಳೆ, ಹಳದಿ ಹಾಗೂ ಕೆಂಪು ಬಣ್ಣದ ಹಣ್ಣು ತರಕಾರಿಗಳಲ್ಲಿ ಈ ಬೀಟಾಕೆರೋಟಿನ್‌ ಅಂಶವು ಸಮೃದ್ಧವಾಗಿರುತ್ತದೆ. ನಮ್ಮ  ದೇಹವು ಈ ಕೆರೋಟಿನ್‌ ಅಂಶವನ್ನು  ವಿಟಾಮಿನ್‌ -ಎ ಆಗಿ ಪರಿವರ್ತಿಸುತ್ತದೆ. ಶಕ್ತಿಶಾಲಿ ಹಾಗೂ ಆರೋಗ್ಯಶಾಲಿ ಪ್ರತಿರಕ್ಷಣಾ ವ್ಯವಸ್ಥೆಗೆ, ವಿಟಾಮಿನ್‌ -ಎ  ಅತ್ಯವಶ್ಯ. ಮಾತ್ರವಲ್ಲದೆ, ಸಮರ್ಥ ಪ್ರತಿರಕ್ಷಣಾ ವರ್ಧಕ ಎನಿಸಿರುವ ಝಿಂಕ್‌ ಕುಂಬಳಕಾಯಿಯಲ್ಲಿ ಹೇರಳವಾಗಿದೆ.

        ದೇಹಕ್ಕೆ  ಪ್ರತಿನಿತ್ಯ ಅಗತ್ಯವಿರುವ ವಿಟಾಮಿನ್‌ -ಎ ಯನ್ನು  ಒದಗಿಸಲು, ನಿತ್ಯವೂ 1 ಕಪ್‌ ಕುಂಬಳಕಾಯಿಯನ್ನು  ಸೇವಿಸಿ. ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸಲು ಹಾಗೂ ಆರೋಗ್ಯವನ್ನು ಉತ್ತಮಗೊಳಿಸಲು, ಈ ಅದ್ಭುತ  ಆಹಾರಗಳನ್ನು ನಿಮ್ಮ ಅಡುಗೆಯಲ್ಲಿ ಸೇರಿಸುವುದನ್ನು ಮರೆಯಬೇಡಿ.

         


         

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಮೆದುಳಿನ ರಕ್ತನಾಳವು ಒಡೆಯುವುದು ಮತ್ತು ಸುತ್ತಮುತ್ತಲಿನ ಅಂಗಾಂಶಗಳಿಗೆ ರಕ್ತಸ್ರಾವವಾಗುವುದರಿಂದ ಇದು ಸಂಭವಿಸುತ್ತದೆ...
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus