ಕೇಳು ಜನಮೇಜಯ ಕೇಳು ಧರಿತ್ರೀಪಾಲ...'ಸುಶ್ರಾವ್ಯವಾದ ಗಮಕ ವಾಚನ ಮನೆಯ ಒಳಗಿನಿಂದ ಕೇಳಿಬರು ತ್ತಿದೆ. ಹೌದು ಅದು ಸುಪ್ರಸಿದ್ಧ ಗಮಕಿಗಳಾದ ಶ್ಯಾಮರಾಯರ ಮನೆ. ಅವರಷ್ಟೇ ಗಮಕದಲ್ಲಿ ಪರಿಣತಿ ಆಕೆಯ ಮಡದಿ ಅನಸೂಯರಿಗೂ. ಇಬ್ಬರಿಗೂ ಸರಿಸುಮಾರು 70ರ ಪ್ರಾಯ. ಒಬ್ಬನೇ ಗಂಡು ಮಗ ಉಮೇಶ. ಅವನ ಹೆಂಡತಿ ಸುಮತಿ. ಅವರಿಗೊಬ್ಬ ಮಗ ಶಶಾಂಕ. ಸುಸಜ್ಜಿತವಾದ ಮನೆ. ಮಗನ ಜೊತೆಯಲ್ಲೇ ವಾಸ. ಶ್ಯಾಮರಾಯರು ಸರ್ಕಾರಿ ಶಾಲೆಯಲ್ಲಿ ಮೇಷ್ಟ್ರಾಗಿದ್ದವರು. ನಿವೃತ್ತಿಯ ನಂತರ ಪಿಂಚಣಿ ಹಣ ಬರುತ್ತಿದ್ದರಿಂದ ಮಗನ ಹಂಗು ಅಷ್ಟೇನೂ ಇರಲಿಲ್ಲ. ಸಂಜೆ 6 ಆದರೆ ಸಾಕು. ದಂಪತಿ ಒಟ್ಟಾಗಿ ಕುಳಿತು ಸಾûಾತ್ ಪಾರ್ವತಿ ಪರಮೇಶ್ವರರಂತೆ ಕುಮಾರವ್ಯಾಸ ಭಾರತವನ್ನು ರಾಗವಾಗಿ ಹಾಡಲು ಶುರುವಿಡುತ್ತಿದ್ದರು. ಇಡೀ ಬೀದಿಗೆ ಕೇಳುವಂತೆ ದಂಪತಿಗಳು ಹಾಡುತ್ತಿದ್ದರೆ ರಸ್ತೆಯಲ್ಲಿರುವ ಮರಗಳಿಂದ ಹಿಡಿದು ಸಕಲರೂ ಮೈ ಮರೆತು ಕೇಳುವಂಥಹ ಸುಶ್ರಾವ್ಯ ವಾಚನ. ಇಡೀ ಬೀದಿಗೇ ರೋಮಾಂಚನ. ಆದರೆ ಅವರ ಮನೆಯಂಗಳವೇ ಭಣ ಭಣ! ಪ್ರಪಂಚವೆಲ್ಲಾ ಕೊಂಡಾಡಿದರೂ ಶ್ಯಾಮರಾಯರು ಮತ್ತು ಅನಸೂಯ ದಂಪತಿಗಳಿಗೆ ಇದ್ದ ಕೊರಗೆಂದರೆ ಮನೆಯಲ್ಲಿ ಮಗನ ಕಡೆಯಿಂದ ತಾತ್ಸಾರ. ಮಗ ಸೊಸೆ ಮತ್ತು ಮೊಮ್ಮಗನಿಂದ ಒಂದೈದು ನಿಮಿಷಗಳನ್ನೂ ಬೇಡಿ ಪಡೆಯುವ ಪರಿಸ್ಥಿತಿ. ಒಬ್ಬನೇ ಮಗನ ಈ ತಿರಸ್ಕಾರದ ನಡವಳಿಕೆಯನ್ನು ಹೇಗೆ ಅರ್ಥೈಸಿಕೊಳ್ಳಬೇಕೆಂದು ತಿಳಿಯದೇ ಆ ಕೊರತೆಯನ್ನು ಗಮಕ ವಾಚನ ಮಾಡುವ ಮೂಲಕ ಸರಸ್ವತಿಯ ಸಾಂಗತ್ಯದಲ್ಲಿ ನೀಗಿಸಿಕೊಳ್ಳುತ್ತಿದ್ದರು. ಶ್ಯಾಮರಾಯರಿಗೆ ಚಿಕ್ಕಂದಿನಿಂದಲೂ ಒಂದೇ ಒಂದು ಆಸೆ. ಒಮ್ಮೆಯಾ ದರೂ ರೇಡಿಯೋನಲ್ಲಿÉ ಹಾಡಬೇಕು ಎಂದು. ಈಗಿರುವ ಹತ್ತಾರು ಚಾನಲ್ಲು ಗಳ ನಡುವೆಯೂ ಶ್ಯಾಮರಾಯರು ಬಯಸಿ ಬಯಸಿ ಕೇಳುತ್ತಿದ್ದುದು ರೇಡಿಯೋವನ್ನು. ಸುತ್ತಮುತ್ತಲಿನವರು ಶ್ಯಾಮರಾಯರ ಗಾಯನವನ್ನು ಕೇಳಿ ಯಾರು ಯಾರೋ ರೇಡಿಯೋನಲ್ಲಿ ಹಾಡ್ತಾರಂತೆ ನೀವ್ಯಾಕೆ ಒಮ್ಮೆ ಹಾಡಬಾರದು ಎಂದು ಹೇಳಿದಾಗಲೆಲ್ಲಾ ಏನೋ ಪುಳಕ! ಬಾಲ್ಯದಲ್ಲಿ ಬಡತನವನ್ನೇ ಕಂಡಿದ್ದ ಶ್ಯಾಮರಾಯರಿಗೆ ರೇಡಿಯೋ ಬಗ್ಗೆ ಮೊದಲಿನಿಂದಲೂ ಕುತೂಹಲ. ಆಗೆಲ್ಲ ಊರಿಗೆ ರೇಡಿಯೋ ಬಂದ ಹೊಸತು. ಜಮೀನಾªರರ ಮನೆಯಲ್ಲಿ ಮಾತ್ರ ರೇಡಿಯೋ ಇದ್ದ ಕಾಲದಲ್ಲಿ ಪುಟ್ಟ ಶ್ಯಾಮ ಆಸೆಯಿಂದ ಓಡಿ ಹೋಗಿ ರೇಡಿಯೋ ಬಳಿ ಕೂರುತ್ತಿದ್ದ ನೆನಪು ಇಷ್ಟು ವರ್ಷಗಳಾದರೂ ಅವರ ನೆನಪಿನಿಂದ ಮಾಸಿರಲಿಲ್ಲ. ""ಅಪ್ಪಾನಾನೂ ಹಾಗೆ ರೇಡಿಯೋನಲ್ಲಿ ಒಮ್ಮೆ ಹಾಡಬೇಕು'""ಬಿಡಪ್ಪನಮ್ಮಂಥೋರಿಗೆಲ್ಲ ಅವೆಲ್ಲ ಸಾಧ್ಯವಿಲ್ಲ' ಎಂದು ಅವರ ತಂದೆ ನಿರುತ್ತೇಜಿಸಿಬಿಡುತ್ತಿದ್ದರು. ಪುಟ್ಟ ಶ್ಯಾಮನಿಗೋ ಕುತೂಹಲ. ಹಾಡು ಎಲ್ಲಿಂದ ಬರುತ್ತಿದೆ ಎಂದು ರೇಡಿಯೋ ಹಿಂದುಮುಂದೆಲ್ಲಾ ಸುಳಿದಾಡುತ್ತಲೇ ಬಾಲ್ಯವನ್ನು ಸವೆಸಿದ್ದ. ನಂತರದ ದಿನಗಳಲ್ಲಿ ಕಾಲೇಜಿನಲ್ಲಿ ಸಾಂಸ್ಕೃತಿಕ ತಂಡಕ್ಕೆ ನಾಯಕನಾಗಿದ್ದ ಶ್ಯಾಮನಿಗೆ ಒಮ್ಮೆ ಹಾಡುವ ಸ್ಪರ್ಧೆಯೊಂದರಲ್ಲಿ ಹಾಡುವ ಅವಕಾಶ ಬಂದಿತು. ಗೆದ್ದವರಿಗೆ ರೇಡಿಯೋನಲ್ಲಿ ಹಾಡೋ ಅವಕಾಶ. ಶ್ಯಾಮನ ಆನಂದಕ್ಕೆ ಎಣೆಯೇ ಇಲ್ಲ! ಅಂತಿಮ ಸುತ್ತಿಗೆ ಬಂದ ಶ್ಯಾಮನಿಗೆ ಎದುರಾಳಿ ವೈದೇಹಿ. ವೈದೇಹಿ ಇವನಿಗಿಂತ ಒಂದು ವರ್ಷ ಚಿಕ್ಕವಳು. ಅಪರೂಪ ಸುಂದರಿ. ಮಾಡ್ರನ್ ಹುಡುಗಿ. ಶ್ಯಾಮ ಕೊಂಚ ಮಡಿವಂತ. ವೈದೇಹಿ ಹಾಡಿದ ಹಿಂದಿ ಘಜ‚ಲ್‌ನ ಮುಂದೆ ಶ್ಯಾಮನ ದೇವರನಾಮ ತೀರ್ಪುಗಾರರಿಗೆ ಸಪ್ಪೆಯೆನಿಸಿತೋ ಏನೋ! ಅಥವಾ ಶ್ಯಾಮನ ಕಂಠಸಿರಿಯನ್ನು ವೈದೇಹಿಯ ರೂಪಸಿರಿ ಮೀರಿ ನಿಂತಿತೋ ಎಲ್ಲವೂ ಹರಿಚಿತ್ತ ವೈದೇಹಿ ವಿಜಯಮಾಲೆಯಾದರೆ ಶ್ಯಾಮ ಅವಮಾನದಿಂದ ಮನೆಯತ್ತ ದಾಪುಗಾಲು ಹಾಕುತ್ತಾ ಬಂದ ದೃಶ್ಯ ಜಗಲಿಯ ಮೇಲೆ ಕುಳಿತಿದ್ದ ಶ್ಯಾಮರಾಯರ ಸ್ಮತಿಪಟಲದಲ್ಲಿ ಮೂಡಿಬಂದು ಕಣ್ಣಂಚನ್ನು ತೋಯಿಸಿದ್ದು ಸುಳ್ಳೇನಲ್ಲ.""ಅನಸೂಯಾ ಹಾರ್ಮೋನಿಯಮ್ ತೊಗೊಂಡ್ ಬಾ ಯಾಕೋ ಹಾಡಬೇಕು ಅನಿಸ್ತಿದೆ'""ಕೇಳು ಜನಮೇಜಯ...'ಸುಶ್ರಾವ್ಯವಾಗಿ ಶ್ಯಾಮರಾಯರು ಹಾಡುತ್ತಿದ್ದರೆ ಅನಸೂಯಮ್ಮ ಆನಂದಿಸುತ್ತಾ ಹಾರ್ಮೋನಿಯಮ್‌ನಲ್ಲಿ ಶ್ರುತಿ ಹಿಡಿಯುತ್ತಿದ್ದರು.""ಆಹಾ! ಎಂಥ ಅದ್ಭುತವಾದ ಗಾಯನ... ಮೇಷ್ಟ್ರೇ ಚೆನ್ನಾಗಿದೀರಾ'ಪರಿಚಿತ ಧ್ವನಿ ಗಾಯನದಲ್ಲಿ ಮುಳುಗಿದ್ದ ಶ್ಯಾಮರಾಯರನ್ನು ಎಬ್ಬಿಸುತ್ತದೆ,""ಯಾರೂ...?'""ನಾನೂ ಮೇಷ್ಟ್ರೇ... ರಾಮಚಂದ್ರ ನಿಮ್ಮ ಹಳೆಯ ವಿದ್ಯಾರ್ಥಿ ಗೊತ್ತಾಗ್ಲಿಲ್ವೇ... ಅಮ್ಮ ಚೆನಾಗಿದ್ದೀರ?'""ಓಹೋ ರಾಮಚಂದ್ರ ಬಾಪ್ಪಾ$ಒಳಗೆ ಏನೂಂದ್ರೆ ಗೊತ್ತಾಯ್ತಾ ಈಗ್ಲಾದ್ರು ?'""ಓಹೋ ಗೊತ್ತಾಯ್ತು... ಕೂತ್ಕೊàಪ್ಪಾ$ಎಲ್ಲಿದೀಯಾ ಏನ್ ಮಾಡ್ತಿದೀಯಾ'""ನಾನು ಈಗ ಆಕಾಶವಾಣಿಯಲ್ಲಿ ಪ್ರೋಗ್ರಾಮ್ ಡೈರೆಕ್ಟರ್ ಆಗಿ ಕೆಲಸ ಮಾಡ್ತಿದ್ದೀನಿ ಮೇಷ್ಟ್ರೇ'ತಕ್ಷಣ ಶ್ಯಾಮರಾಯರ ಮುಖ ಅರಳುತ್ತದೆ ""ಏನು! ಅಕಾಶವಾಣೀನೇ'""ಹೂಂ... ಹೀಗೆ ಕೆಲಸದ ಮೇಲೆ ಬಂದಿದ್ದೆ... ಹಾಗೆ ನಿಮ್ಮ ನೆನಪಾಯ್ತು... ಏನೂಂದ್ರೆ... ನಾವು ಈ ಶನಿವಾರಕ್ಕೆ ಒಂದು ವಿಭಿನ್ನವಾದ ಕಾರ್ಯಕ್ರಮ ಮಾಡಬೇಕು ಅಂದುಕೊಂಡಿದ್ವಿ. ನಿಮ್ಮದೇ ಒಂದು ಪ್ರಸಂಗ ರೆಕಾರ್ಡ್ ಮಾಡಿಬಿಡೋಣ! ಏನಂತೀರಿ '""ಏನೇ ಕೇಳಿದ್ಯೆàನೇ...'ಶ್ಯಾಮರಾಯರಿಗೆ ಮಹದಾನಂದ.""ತುಂಬಾ ಸಂತೋಷಾನಪ್ಪಾ$ಹಾಗೇ ಆಗ್ಲಿ...'ದಂಪತಿಗಳು ಭರದಿಂದ ತಯಾರಿ ನಡೆಸಿದರು. ರಾತ್ರಿಯೆಲ್ಲಾ ಶ್ಯಾಮರಾಯರಿಗೆ ನಿದ್ದೆಯಿಲ್ಲ. ಎಂಥಧ್ದೋ ಚಡಪಡಿಕೆ. ಮರುದಿನವೇ ಸ್ಟುಡಿಯೋನಲ್ಲಿ ರೆಕಾರ್ಡಿಂಗ್. 30 ನಿಮಿಷಗಳ ಕಾಲಾವಧಿ. ದ್ರೌಪದೀ ವಸ್ತ್ರಾಪಹರಣದ ಪ್ರಸಂಗ. ಶೋಕದ ತೀವ್ರತೆಯ ಕ್ಷಣಗಳಲ್ಲಿ ಇಡೀ ಅಕಾಶವಾಣಿಯ ಅಂಗಳವೇ ರೋದಿಸುವಂಥಹ ಆದ್ರì ಭಾವದ ಗಾಯನ. ದಂಪತಿಗಳು ತëಪ್ತಿಯಿಂದ ಕಾರ್ಯಕ್ರಮವನ್ನು ಮುಗಿಸಿ ಹೊರಟರು. ""ಇದೇ ಶನಿವಾರ ಬೆಳಗ್ಗೆ ಹತ್ತು ಘಂಟೆಗೆ ಪ್ರಸಾರ ಆಗುತ್ತೆ ಮೇಷ್ಟ್ರೇ ಮರೀಬೇಡಿ ಕೇಳಿ... ಹಾಗೇನೆ ತೊಗೊಳ್ಳಿ ಈ ಚೆಕ್'1500 ರೂಗಳ ಚೆಕ್ ಕೈಗಿಡುತ್ತಾನೆ ರಾಮಚಂದ್ರ...""ಇದೆಲ್ಲ ಯಾಕಪ್ಪ...'""ಹಾಗಲ್ಲಾ ಮೇಷ್ಟ್ರೇ ಇದು ಸರಕಾರದವರು ಕೊಡುವ ಗೌರವ ಸಂಭಾವನೆ... ತೊಗೊಳ್ಳಿ'""ಸರೀನಪ್ಪಏನೇ ಇದನ್ನ ಈ ಸರ್ತಿ ತಿರುಪತಿಗೆ ಹೋದಾಗ ಹುಂಡಿಗೆ ಹಾಕಿಬಿಡೋಣ... ಏನಂತೀ...'ಬಂದೊಡನೆ ಮಗನ ಜೊತೆ ಸಂಭ್ರಮ ಹಂಚಿಕೊಂಡರು. ಎಂದಿನಂತೆ ಮಗನಿಂದ ನೀರಸ ಪ್ರತಿಕ್ರಿಯೆ. ""ಅಯ್ಯೋ ಬಿಡಿ ಉಸಿರಾಡಕ್ಕೇ ಮನಸಿಲ್ಲದೋರ ಮುಂದೆ ಎಷ್ಟು ಗಾಳಿ ಬೀಸಿ ಏನು ಪ್ರಯೋಜನ'ಅನಸೂಯಮ್ಮ ಪೆಚ್ಚಾದ ಶ್ಯಾಮರಾಯರನ್ನು ಸಂತೈಸಿದರು. ದಂಪತಿ ಕಾತುರದಿಂದ ಶನಿವಾರಕ್ಕೆ ಕಾದರು. ಅಕ್ಕಪಕ್ಕದವರಿಗೆಲ್ಲ ಹೇಳಿದ್ದೇನು. ಬಂಧುಬಾಂಧವರಿಗೆಲ್ಲ ಫೋನ್ ಮಾಡಿದ್ದೇನು. ಶನಿವಾರ ಬಂದೇ ಬಂದಿತು. ಅಕ್ಕಪಕ್ಕದವರೆಲ್ಲಾ ಶ್ಯಾಮರಾಯರ ಮನೆಯಲ್ಲಿ ಸೇರಿದರು. ""ಶಶಾಂಕಾ ಸ್ವಲ್ಪ$ರೇಡಿಯೋ ಹಾಕ್ಕೊಡೋ...'""ಹೋಗು ತಾತಾ ನಿಂದೊಳ್ಳೆ... ಸರಿ ಇರು'""ಈಗ ಸಮಯ ಹತ್ತು ಘಂಟೆ...'ರೇಡಿಯೋ ಉಲಿಯುತ್ತದೆ..ತತ್‌ಕ್ಷಣ ಕರೆಂಟು ಹೋಯಿತು.""ಛೆ!' ಶ್ಯಾಮರಾಯರಿಗೆ ದೊಡªಮಟ್ಟದಲ್ಲಿ ನಿರಾಸೆ. ಸರಿಯಾಗಿ ಹತ್ತುವರೆಗೆ ಕರೆಂಟು ಬಂದಿತು.ಆದರೇನು ಪ್ರಯೋಜನ..! ನೆಂಟರೊಬ್ಬರ ಬಳಿ ವಿಚಾರಿಸಲು""ಇಲ್ಲ ಮಾವ - ಈ ವಾರ ನಿಮ್ಮ ಕಾರ್ಯಕ್ರಮ ಬರಲಿಲ್ಲ... ಎಲ್ಲ ಕಾರ್ಯಕ್ರಮಗಳನ್ನೂ ಬಂದ್ ಮಾಡಿದ್ರಂತೆ... ಅದೇನೋ ಶೋಕಾಚರಣೆಯಂತೆ. ಮುಂದಿನ ವಾರ ಬರಬೋದೇನೋ ನೋಡಿ'ತೀವ್ರ ನಿರಾಸೆ ಮತ್ತು ಚಡಪಡಿಕೆಯಲ್ಲಿ ಮತ್ತೂಂದು ವಾರ ಕಳೆಯಿತು. ಈ ಬಾರಿ ಬೀದಿಯ ಜನರನ್ನೆಲ್ಲ ಕರೆದು ಕೂಡಿಸಿಕೊಂಡ ಶ್ಯಾಮರಾಯರು ರೇಡಿಯೊ ಹಾಕಿದರು.""ಈಗ ಸಮಯ ಹತ್ತು ಘಂಟೆ'""ನೋಡ್ರೋ ನಾ ರೇಡಿಯೋನಲ್ಲಿ ಬರ್ತೀನಿ' ಶ್ಯಾಮರಾಯರಿಗೆ ಸಂಭ್ರಮ...""ಮುಂದಿನ ಕಾರ್ಯಕ್ರಮ... ಕರ್ನಾಟಕದಲ್ಲಿ ಸಾವಯವ ಕೃಷಿಯ ಬೆಳವಣಿಗೆ ಮತ್ತು ವಿಶ್ಲೇಷಣೆ, ನಡೆಸಿಕೊಡುವವರು ಡಾ ಕೃಷ್ಣಪ್ಪ'ನಿರಾಸೆ ಮತ್ತು ಅವಮಾನದಿಂದ ಕುದ್ದು ಹೋದ ಶ್ಯಾಮರಾಯರು ರಾಮಚಂದ್ರನಿಗೆ ಫೋನ್ ಮಾಡಿದರು.""ಇಲ್ಲ ಮೇಷ್ಟ್ರೇ ಏನೋ ತಾಂತ್ರಿಕ ಸಮಸ್ಯೆ ಮುಂದಿನ ವಾರ ಬರಬೋದು ಕ್ಷಮಿಸಿ'ಬೀದಿಯವರೆಲ್ಲಾ ಗುಸು ಗುಸು ಮಾತನಾಡಿಕೊಂಡು ಎದ್ದು ಹೋದರು. ""ಏನು ತಾತಾ ಬರತ್ತೆ ಬರತ್ತೆ ಅಂದೆ ಎಲ್ಲಿ' ಶಶಾಂಕ ಗೇಲಿ ಮಾಡಿದ.ಮತ್ತೂಂದು ವಾರ... ಮಗದೊಂದು ವಾರ... ಪ್ರಸಾರ ಮುಂದಕ್ಕೆ ಹೋಗುತ್ತಲೇ ಇತ್ತು. ಶ್ಯಾಮರಾಯರು ಕುಗ್ಗುತ್ತಾ ಹೋದರು. ಹಾಡುವು ದನ್ನು ಕಡಿಮೆ ಮಾಡುತ್ತಾ ಮಾಡುತ್ತಾ ಕ್ರಮೇಣ ನಿಲ್ಲಿಸಿಬಿಟ್ಟರು. ಬೀದಿಯ ಜನಕ್ಕೆ ಶ್ಯಾಮರಾಯರು ತಮಾಷೆಯ ವಸ್ತುವಾಗಿಬಿಟ¤ರು. ಗಮಕದ ಶ್ಯಾಮರಾಯರು ಹೋಗಿ ರೇಡಿಯೋ ಶ್ಯಾಮರಾಯರೆಂದು ಜನ ಅಪಹಾಸ್ಯ ಮಾಡಲು ಶುರು ಮಾಡಿದರು. ಶನಿವಾರ ಬಂತೆಂ ದರೆ ಶ್ಯಾಮರಾಯರು ಬೆದರುತ್ತಿದ್ದರು. ವಿಚಿತ್ರವಾಗಿ ವರ್ತಿಸುತ್ತಿದ್ದರು. ಕ್ಯಾಲೆಂಡರಿನ ಮೇಲಿನ ಶನಿವಾರಗಳ ಮೇಲೆಲ್ಲಾ ಪೆನ್ಸಿಲ್‌ನಿಂದ ಗೀಚುತ್ತಿದ್ದರು. ಶ್ಯಾಮರಾಯರು ಮಾನಸಿಕವಾಗಿ ಅಂತರ್ಮುಖ ರಾದಷ್ಟೂ ಅನಸೂಯಮ್ಮನವರ ಚಿಂತೆ ಜಾಸ್ತಿಯಾಗುತ್ತ ಹೋಯಿತು. ಹೀಗಿರಲು ಆ ಶನಿವಾರ ಬಂದಿತು. ರಾಮಚಂದ್ರ ಸರಿಯಾಗಿ ಒಂಭತ್ತೂ ಮುಕ್ಕಾಲಿಗೆ ಓಡೋಡಿ ಬಂದು.""ಅಮ್ಮಾ ಕಾರ್ಯಕ್ರಮ ಇವತ್ತು ಅಂದರೆ ಈಗ ಹತ್ತು ಘಂಟೆಗೆ ಪ್ರಸಾರವಾಗ್ತಿದೆ. ನಿಮಗೆ ಹೇಳ್ಳೋಣಾ ಅಂತ ಬಂದೆ...'""ಹೌದಾಪ್ಪಾ... ಬಾ ಒಳಗೆ'ಎಂದಿನಂತೆ ಮಗ ಮತ್ತು ಸೊಸೆ ಒಳಗಿದ್ದರೂ ಕೋಣೆಯಿಂದ ಹೊರಗೆ ಬರಲಿಲ್ಲ. ಮೊಮ್ಮಗ ಶಶಾಂಕ ಆಟಕ್ಕೆ ಹೋಗದೇ ಮನೆಯಲ್ಲಿಯೇ ಇದ್ದ.ಶ್ಯಾಮರಾಯರು ನಿಧಾನವಾಗಿ ರೂಮಿನಿಂದ ಹೊರಗೆ ಬಂದರು...""ಮೇಷ್ಟ್ರೇ...'ಶ್ಯಾಮರಾಯರು ಏನೊಂದೂ ಮಾತನಾಡದೇ ರಾಮಚಂದ್ರನನ್ನೊಮ್ಮೆ ತೀಕ್ಷ್ಣವಾಗಿ ನೋಡಿದರು.ಶಶಾಂಕ ರೇಡಿಯೋ ಹಾಕಿದ...""ಈಗ ಸಮಯ ಹತ್ತು ಘಂಟೆ...'ಶ್ಯಾಮರಾಯರು ನಿಧಾನವಾಗಿ ಹೊರಗೆ ನಡೆದರು""ಮುಂದಿನ ಕಾರ್ಯಕ್ರಮ ಶ್ಯಾಮರಾಯರು ಮತ್ತು ಅನಸೂಯ ದಂಪತಿಗಳಿಂದ ಗಮಕ ವಾಚನ'ಅನಸೂಯ ಮತ್ತು ರಾಮಚಂದ್ರ ಮತ್ತು ಮೊಮ್ಮಗ ಶಶಾಂಕ ಸಂತೋಷದಿಂದ ಶ್ಯಾಮರಾಯರನ್ನು ಕರೆಯಲು ಹೊರಗೆ ಓಡಿದರು.""ಕೇಳು ಜನಮೇಜಯ...' ರೇಡಿಯೋನಲ್ಲಿ ಸುಶ್ರಾವ್ಯವಾಗಿ ಕೇಳಿಬರುತ್ತಿದೆ...""ತಾತಾ... ತಾತಾ...' ಶಶಾಂಕ ಹೊರಗೆ ಓಡಿದ.ಅನಸೂಯ ಮತ್ತು ರಾಮಚಂದ್ರ ದಿಗ್ಭ್ರಾಂತರಾಗಿ ಜಗಲಿಯ ಮೇಲೆ ನಿಂತರು.ಬೀದಿಯಲ್ಲಿ ""ಕೇಳು ಜನಮೇಜಯ' ""ಕೇಳು ಜನಮೇಜಯ' ಎಂದು ಶ್ಯಾಮರಾಯರು ಒಂದೊಂದು ಮನೆಯ ಮುಂದೆಯೂ ಬಟ್ಟೆ ಹರಿದುಕೊಂಡು ಕೂಗುತ್ತಾ ಓಡುತ್ತಿರುವ ದೃಶ್ಯಕ್ಕೆ ಇಡೀ ಬೀದಿ ಮೂಕ ಸಾಕ್ಷಿಯಾಯಿತು!