Saturday, May 25, 2013
Last Updated: 8:34:44 PM IST
  • ನಾನೆಲ್ಲಿರುವೆ:
  • ಮುಖಪುಟ ಹೊರನಾಡು ಕನ್ನಡಿಗ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ದೇವಾಡಿಗ ವೈದ್ಯಕೀಯ ಸಲಹಾ ಕೇಂದ್ರದ ಆಶ್ರಯದಲ್ಲಿ
    • ದೇವಾಡಿಗ ಸಂಘ ಉಚಿತ ಆರೋಗ್ಯ ತಪಾಸಣೆ ಶಿಬಿರ
    • ದೇವಾಡಿಗ ಸಂಘ ಮುಂಬಯಿ ಇದರ ಅಧ್ಯಕ್ಷರಾದ ಹಿರಿಯಡ್ಕ ಮೋಹನ್‌ದಾಸ್‌ ಅವರು ಶಿಬಿರವನ್ನು ಉದ್ಘಾಟಿಸಿದರು.

      • Udayavani | Dec 23, 2012

        ಮುಂಬಯಿ: ದೇವಾಡಿಗ ಸಂಘ ಮುಂಬಯಿ ಇದರ ದೇವಾಡಿಗ ವೈದ್ಯಕೀಯ ಸಲಹಾ ಕೇಂದ್ರ ಮತ್ತು ಪ್ರಾದೇಶಿಕ ಸಮನ್ವಯ ಸಮಿತಿ ಭಾಂಡೂಪ್‌ ವಲಯ ಜಂಟಿ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣೆಯು ಡಿ. 16 ರಂದು ಭಾಂಡೂಪ್‌ ಪಶ್ಚಿಮದ ಬೈಂಗನ್‌ಪಾಡಾದಲ್ಲಿ ನಡೆಯಿತು.

        ಸಂಘದ ಅಧ್ಯಕ್ಷರಾದ ಹಿರಿಯಡ್ಕ ಮೋಹನ್‌ದಾಸ್‌ ಅವರು ಶಿಬಿರವನ್ನು ಉದ್ಘಾಟಿಸಿದರು. ಪರಿಸರದ ಸುಮಾರು 150 ಕ್ಕೂ ಹೆಚ್ಚು ತುಳು-ಕನ್ನಡಿಗರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಈ ಶಿಬಿರದಲ್ಲಿ ಖ್ಯಾತ ವೈದ್ಯರು ಶಿಬಿರಾರ್ಥಿಗಳ ರಕ್ತಪರೀಕ್ಷೆ, ದಂತ ಪರೀಕ್ಷೆ ಮತ್ತು ಹೋಮಿಯೋಪತಿ ಪರೀಕ್ಷೆಗೈದು ಸೂಕ್ತ ಸಲಹೆ ನೀಡಿದರು.

        ಸಾಮಾಜಿಕ ಕಾರ್ಯವಿಭಾಗದ ಕಾರ್ಯಾಧ್ಯಕ್ಷ ಸುರೇಶ್‌ ಎಸ್‌. ರಾವ್‌, ವೈದ್ಯಕೀಯ ಸಲಹಾ ಕೇಂದ್ರದ ಸಮನ್ವಯಕಿ ಡಾ| ರೇಖಾ ಸಿ. ದೇವಾಡಿಗ, ಪ್ರಾದೇಶಿಕ ಸಮಿತಿಯ ಸದಸ್ಯರಾದ ಪ್ರವೀಣ್‌ ದೇವಾಡಿಗ, ಮ್ಯಾಗªಲೀನ್‌ ಪಿ. ದೇವಾಡಿಗ ಅವರ ಸಹಕಾರದೊಂದಿಗೆ ಶಿಬಿರವು ನಡೆಯಿತು. ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಯ ಎಲ್‌. ದೇವಾಡಿಗ ಅವರು ಅತಿಥಿ ಗಣ್ಯರನ್ನು ಸ್ವಾಗತಿಸಿ, ಪುಷ್ಪಗುಚ್ಚವನ್ನಿತ್ತು ಗೌರವಿಸಿದರು.

        ಸಂಘದ ಮಾಜಿ ಅಧ್ಯಕ್ಷ ಗೋಪಾಲ ಎಂ. ಮೊಲಿ, ಉಪಾಧ್ಯಕ್ಷ ವಾಸು ಎಸ್‌. ದೇವಾಡಿಗ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಪ್ರಫುಲ್ಲಾ ವಿ. ದೇವಾಡಿಗ, ಮಹಿಳಾ ವಿಭಾಗದ ಕಾರ್ಯದರ್ಶಿ ಜಯಂತಿ ಎಂ. ದೇವಾಡಿಗ, ಆಡಳಿತ ಸಮಿತಿಯ ಸದಸ್ಯರುಗಳಾದ ವಿಶ್ವನಾಥ ಬಿ. ದೇವಾಡಿಗ, ಸುರೇಶ್‌ ದೇವಾಡಿಗ, ಚೆಂಬೂರು ಸಮಿತಿಯ ಕಾರ್ಯದರ್ಶಿ ಸುಧಾಕರ ಎಲ್ಲೂರ್‌, ಚೆಂಬೂರು ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ಆರ್‌. ಮೊಲಿ, ಮಾಜಿ ಜತೆ ಕಾರ್ಯದರ್ಶಿ ರಘು ಮೊಲಿ, ಮಾಧವ ಆರ್‌. ದೇವಾಡಿಗ, ಭಾಂಡೂಪ್‌ ಸಮಿತಿಯ ಪ್ರಕಾಶ್‌ ದೇವಾಡಿಗ, ಲೋಲಾಕ್ಷೀ ದೇವಾಡಿಗ, ಪ್ರಮೀಳಾ ದೇವಾಡಿಗ, ಶರತ್‌ ಕುಮಾರ್‌, ಮೋಹನ್‌ ದೇವಾಡಿಗ, ಲಾವಣ್ಯಾ ದೇವಾಡಿಗ, ವೆಂಕಟೇಶ್‌ ದೇವಾಡಿಗ ಅವರು ಶಿಬಿರದ ಯಶಸ್ಸಿಗೆ ಸಹಕರಿಸಿದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus