Friday, May 24, 2013
Last Updated: 6:16:32 PM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಪ್ರಮುಖ ಭಾಗಗಳಲ್ಲಿ ದೋಷ
    • ಬಾಲಗ್ರಹ ಪೀಡೆಗೆ ತುತ್ತಾದ ಐಎನ್‌ಎಸ್‌ ಚಕ್ರ
    • ''''ಐಎನ್‌ಎಸ್‌ ಚಕ್ರ'''' ಜಲಾಂತರ್ಗಾಮಿ ನೌಕೆಯ ಕೆಲ ಪ್ರಮುಖ ಭಾಗಗಳಲ್ಲಿ ದೋಷ ಇರುವುದು ದೃಢಪಟ್ಟಿದೆ.

      • Udayavani | Dec 23, 2012

        ಹೊಸದಿಲ್ಲಿ : ರಶ್ಯಾದ ಸಹಯೋಗದೊಂದಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಪರಮಾಣು ಜಲಾಂತರ್ಗಾಮಿ ನೌಕೆ 'ಐಎನ್‌ಎಸ್‌ ಚಕ್ರ' ಬಾಲಗ್ರಹ ಪೀಡೆಗೆ ತುತ್ತಾಗಿದ್ದು, ನೌಕೆಯ ಕೆಲ ಪ್ರಮುಖ ಭಾಗಗಳಲ್ಲಿ ತಾಂತ್ರಿಕ ದೋಷಗಳು ಕಂಡುಬಂದಿವೆ. ಇದರಿಂದಾಗಿ ನೌಕೆಯ ಕಾರ್ಯಾಚರಣೆಗೆ ಭಾರೀ ಅಡಚಣೆಯುಂಟಾಗಿದೆ.

        8 ಸಾವಿರ ಟನ್‌ಗಳಷ್ಟು ತೂಕವಿರುವ ಈ 'ಐಎನ್‌ಎಸ್‌ ಚಕ್ರ' ಜಲಾಂತರ್ಗಾಮಿ ನೌಕೆಯ ಕೆಲ ಪ್ರಮುಖ ಭಾಗಗಳಲ್ಲಿ ದೋಷ ಇರುವುದನ್ನು ದೃಢಪಡಿಸಿರುವ ನೌಕಾ ಪಡೆಯ ಮೂಲಗಳು, ಹೊಸ ಬಿಡಿ ಭಾಗಗಳನ್ನು ಕಳುಹಿಸಿಕೊಡುವಂತೆ ರಶ್ಯಾವನ್ನು ಕೇಳಿಕೊಳ್ಳಲಾಗಿದೆ ಎಂದು ತಿಳಿಸಿವೆ.

        ಜಲಾಂತರ್ಗಾಮಿಯ ಯಾವ ಭಾಗಗಳು ಸಮಸ್ಯೆಯನ್ನು ಎದುರಿಸುತ್ತಿವೆ ಎಂದು ನಿರ್ದಿಷ್ಟವಾಗಿ ಹೇಳಲು ನಿರಾಕರಿಸಿರುವ ಮೂಲಗಳು, ನೌಕೆಯ ಕಾರ್ಯಾಚರಣೆಗೆ ಈ ಭಾಗಗಳು ಅತ್ಯಂತ ಮುಖ್ಯವಾಗಿವೆ ಎಂದಷ್ಟೇ ಹೇಳಿವೆ.

        ಕಳೆದ ಎಪ್ರಿಲ್‌ನಲ್ಲಿ 'ಅಕುಲ್‌-2'ನೇ ಹಂತದ 'ನೆರ್ಪಾ' ಪರಮಾಣು ಸಬ್‌ಮೆರಿನ್‌ನ್ನು ನೌಕಾಪಡೆಯ ವಿಶಾಖಪಟ್ಟಣದಲ್ಲಿನ ಪೂರ್ವ ನೌಕಾ ಕಮಾಂಡ್‌ಗೆ ಪ್ರಾಯೋಗಿಕವಾಗಿ ಸೇರ್ಪಡೆಗೊಳಿಸಲಾಗಿತ್ತು. ಬಳಿಕ ಈ ಜಲಾಂತರ್ಗಾಮಿ ನೌಕೆಗೆ 'ಚಕ್ರ' ಎಂದು ಪುನರ್‌ ನಾಮಕರಣ ಮಾಡಲಾಗಿತ್ತು.

        2008ರಲ್ಲಿ ರಶ್ಯಾದ ಜಲಾಂತರ್ಗಾಮಿ ನೌಕೆಯು ಜಪಾನ್‌ನ ಸಾಗರದಲ್ಲಿ ಪ್ರಾಯೋಗಿಕ ನೆಲೆಯಲ್ಲಿ ಕಾರ್ಯನಿರತವಾಗಿದ್ದ ವೇಳೆ ಅವಘಡಕ್ಕೀಡಾಗಿತ್ತು. ಈ ದುರಂತದಲ್ಲಿ 20 ಮಂದಿ ನಾವಿಕರು ಬಲಿಯಾಗಿದ್ದರಲ್ಲದೆ ಹಲವರು ಗಾಯಗೊಂಡಿದ್ದರು.

        1993ರಲ್ಲಿ ಈ ಜಲಾಂತರ್ಗಾಮಿಯ ನಿರ್ಮಾಣ ಪ್ರಕ್ರಿಯೆ ಆರಂಭಗೊಂಡಿತ್ತಾದರೂ ರಶ್ಯಾದ ನೌಕಾಪಡೆಯಲ್ಲಿನ ಹಣಕಾಸು ಕೊರತೆಯಿಂದಾಗಿ ಇದು ಮತ್ತಷ್ಟು ವಿಳಂಬಗೊಂಡಿತ್ತು. 2004ರಲ್ಲಿ ಭಾರತದ ನೌಕಾಪಡೆಯೊಂದಿಗೆ 10 ವರ್ಷಗಳ ಲೀಸ್‌ ಒಪ್ಪಂದ ಮಾಡಿಕೊಂಡ ಬಳಿಕ ರಶ್ಯಾ ಜಲಾಂತರ್ಗಾಮಿಯ ನಿರ್ಮಾಣ ಕಾರ್ಯವನ್ನು ಪುನರಾರಂಭಿಸಿತ್ತು.

        ಭಾರತದ ಸಾಗರ ಸರಹದ್ದಿನ ಗಸ್ತಿಗಾಗಿ ನೌಕಾಪಡೆ, ಐಎನ್‌ಎಸ್‌ ಚಕ್ರ ಹಾಗೂ ಇನ್ನಷ್ಟೇ ಪಡೆಗೆ ಸೇರ್ಪಡೆಗೊಳ್ಳಬೇಕಿರುವ ಸ್ವದೇಶಿ ನಿರ್ಮಿತ ಐಎನ್‌ಎಸ್‌ ಅರಿಹಂತ್‌ನ್ನು ಬಳಸಲು ನಿರ್ಧರಿಸಿತ್ತಲ್ಲದೆ ಈ ಎರಡು ಜಲಾಂತರ್ಗಾಮಿ ನೌಕೆಗಳ ಜತೆಯಲ್ಲಿ ಮತ್ತೆರಡು ನೌಕೆಗಳನ್ನು ಸೇರ್ಪಡೆಗೊಳಿಸುವ ಯೋಜನೆಯನ್ನು ಹೊಂದಿದೆ.

        ಐಎನ್‌ಎಸ್‌ ಚಕ್ರ ಜಲಾಂತರ್ಗಾಮಿ ನೌಕೆಯು ಗಂಟೆಗೆ 30 ನಾಟಿಕಲ್‌ ಮೈಲು ವೇಗದಲ್ಲಿ 600 ಮೀಟರ್‌ಗಳಷ್ಟು ಸಮುದ್ರದಾಳದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಸಮುದ್ರದಾಳದಲ್ಲಿ 73 ಮಂದಿ ನಾವಿಕರೊಂದಿಗೆ ನೂರು ದಿನಗಳಷ್ಟು ಸುದೀರ್ಘ‌ ಕಾಲ ಕಾರ್ಯಾಚರಣೆ ನಡೆಸಲು ಸಶಕ್ತವಾಗಿದೆಯಾದರೂ ಲೀಸ್‌ನ ನಿಯಮಾವಳಿ ಪ್ರಕಾರ ಈ ನೌಕೆ, ಪರಮಾಣು ಸಿಡಿತಲೆಗಳನ್ನು ಹೊತ್ತೂಯ್ಯುವಂತಿಲ್ಲ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus