Udayavani | Dec 23, 2012
ಪುಣೆ: ಪಿಂಪ್ರಿ-ಚಿಂಚ್ರಾಡ್ ಬಂಟರ ಸಂಘದ ವಾರ್ಷಿಕ ಕ್ರೀಡೋತ್ಸವವು ಡಿ. 25 ರಂದು ಮುಂಜಾನೆ 8 ಗಂಟೆಯಿಂದ ಚಿಂಚಾÌಡ್‌ಗಾಂವ್‌ನ ಕೇಶವ್‌ನಗರದ ಮೋರ್ಯ ಗೋಸಾವಿ ಕ್ರೀಡಾಂಗಣದಲ್ಲಿ ವೈವಿಧ್ಯಮಯ ಕ್ರೀಡೆಗಳೊಂದಿಗೆ ಜರಗಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಪಿಂಪ್ರಿ-ಚಿಂಚ್ರಾಡ್ ಬಂಟರ ಸಂಘದ ಅಧ್ಯಕ್ಷ ಎರ್ಮಾಳ್ ಸೀತಾರಾಮ ಶೆಟ್ಟಿ ಅವರು ವಹಿಸಲಿದ್ದಾರೆ.
ಮುಂಜಾನೆ 8.30 ಕ್ಕೆ ಕ್ರೀಡೋತ್ಸವದ ಉದ್ಘಾಟನೆ ನಡೆಯಲಿದ್ದು, ಉದ್ಘಾಟಕರಾಗಿ ಫೆಡರೇಶನ್ ಆಫ್ ಇಂಟರ್‌ನ್ಯಾಷನಲ್ ಕಬಡ್ಡಿ ಇದರ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್, ಅಂತರಾಷ್ಟ್ರೀಯ ಕಬಡ್ಡಿ ಆಟಗಾರ, ಛತ್ರಪತಿ ಶಿವಾಜಿ ಪ್ರಶಸ್ತಿ ವಿಜೇತ ಮುಂಬಯಿಯ ಜಯ ಶೆಟ್ಟಿ ಅವರು ಆಗಮಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಕಬಡ್ಡಿ ಆಟಗಾರ್ತಿ, ಛತ್ರಪತಿ ಶಿವಾಜಿ ಪ್ರಶಸ್ತಿ ಪುರಸ್ಕೃತೆ ಛಾಯಾ ಜಯ ಶೆಟ್ಟಿ ಅವರು ಪಾಲ್ಗೊಳ್ಳಲಿದ್ದಾರೆ. ಅತಿಥಿ-ಗಣ್ಯರು, ಸಂಘದ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯ ಬಾಂಧವರ ಉಪಸ್ಥಿತಿಯಲ್ಲಿ ಚಿಂಚಾÌಡ್‌ಗಾಂವ್‌ನ ಶ್ರೀಮಹಾಗಣಪತಿ ಮಂದಿರದಲ್ಲಿ ಬೆಳಗ್ಗೆ 8 ಗಂಟೆಗೆ ವಿಶೇಷ ಪೂಜೆ ನಡೆದು ಮೆರವಣಿಯ ಮೂಲಕ ಕ್ರೀಡಾಜ್ಯೋತಿಯನ್ನು ಕ್ರೀಡಾಂಗಣಕ್ಕೆ ತರಲಾಗುವುದು. ಪೂರ್ವಾಹ್ನ 9 ಗಂಟೆಯಿಂದ ಕ್ರೀಡಾಸ್ಪರ್ಧೆಗಳು ಪ್ರಾರಂಭಗೊಳ್ಳಲಿದೆ. 4 ವರ್ಷದ ಮಕ್ಕಳಿಂದ ಹಿಡಿದು 60 ವರ್ಷದವರೆಗಿನ ವಯೋವೃದ್ಧರವರೆಗೆ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವೈವಿಧ್ಯಮಯ ಕ್ರೀಡೆಗಳನ್ನು ಆಯೋಜಿಸಲಾಗಿದೆ.
ಲಾಂಗ್‌ಜಂಪ್, ಶಾಟ್‌ಪುಟ್, ಡಿಸ್ಕಸ್ ತ್ರೋ, ಚೆಂಡು ಎಸೆತ, ವೇಗದ ನಡಿಗೆ, ಸಂಗೀತ ಕುರ್ಚಿ, ಸ್ಪರ್ಧೆಗಳಲ್ಲದೆ, ವಾಲಿಬಾಲ್, ಕಬಡ್ಡಿ, ತ್ರೋಬಾಲ್ ಪಂದ್ಯಾವಳಿಗಳು ನಡೆಯಲಿವೆ. ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳಿಗೆ ಮತ್ತು ಕ್ರೀಡಾಭಿಮಾನಿಗಳಿಗೆ ಸಂಘದ ವಿವಿಧ ಪದಾಧಿಕಾರಿಗಳ ಹಾಗೂ ದಾನಿಗಳ ಪ್ರಾಯೋಜಕತ್ವದಲ್ಲಿ ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟ ಹಾಗೂ ಸಂಜೆ ಉಪಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿದೆ.
ಪಿಂಪ್ರಿ-ಚಿಂಚಾÌಡ್ ಬಂಟರ ಸಂಘವು ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ವೈದ್ಯಕೀಯ, ಧಾರ್ಮಿಕ ಕ್ಷೇತ್ರಗಳಲ್ಲಿ ಗಮನೀಯ ಸಾಧನೆ ಮಾಡುತ್ತಿದೆ. ಪರಿಸರದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ವೈದ್ಯಕೀಯ ನೆರವು ಇತ್ಯಾದಿಗಳಲ್ಲದೆ, ಪಿಂಪ್ರಿ-ಚಿಂಚಾÌಡ್ ಪರಿಸರದ ಸಮಾಜ ಬಾಂಧವರ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಉದ್ಧೇಶದಿಂದ ಕ್ರೀಡೋತ್ಸವಗಳನ್ನು ಆಯೋಜಿಸಿ ಯುವ ಜನಾಂಗದಲ್ಲಿ ಕ್ರೀಡಾಮನೋಭಾವನೆಯನ್ನು ಬೆಳೆಸುತ್ತಿದೆ.
ಯುವ ಶಕ್ತಿಯನ್ನು ಹೊಂದಿರುವ ಎರ್ಮಾಳ್ ಸೀತಾರಾಮ ಶೆಟ್ಟಿ ಅವರ ನೇತೃತ್ವದ ಪಿಂಪ್ರಿ-ಚಿಂಚಾÌಡ್ ಬಂಟರ ಸಂಘವು ಯುವಪೀಳಿಗೆಗೆ ಗ್ರಾಮೀಣ ಕ್ರೀಡೆಗಳನ್ನು ಪರಿಚಯಿಸುವಲ್ಲಿ ಪ್ರತಿ ವರ್ಷ ಕಾರ್ಯಪ್ರವೃತ್ತವಾಗುತ್ತಿರುವುದು ಅಭಿಮಾನದ ಸಂಗತಿ. ಕ್ರೀಡಾಸಮಿತಿಯ ಕಾರ್ಯಾಧ್ಯಕ್ಷ ಡಾ| ವಿನಯ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಸುಧಾಕರ ಶೆಟ್ಟಿ ಪೆಲತ್ತೂರು ಹಾಗೂ ಸಂಘದ ಇತರ ಪದಾಧಿಕಾರಿಗಳ, ಸದಸ್ಯ ಬಾಂಧವರ ನೇತೃತ್ವದಲ್ಲಿ ಕ್ರೀಡೋತ್ಸವವು ಜರಗಲಿದ್ದು, ಸಮಾಜ ಬಾಂಧವರು ಸಹಕರಿಸುವಂತೆ ಸಂಘದ ಪ್ರಕಟನೆ ತಿಳಿಸಿದೆ.