Udayavani | Dec 23, 2012
ಮುಂಬಯಿ: ತೀಯಾ ಸಮಾಜ ಮುಂಬಯಿ ಪೂರ್ವ ವಲಯದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಡಿ. 23 ರಂದು ಬೆಳಗ್ಗೆ 8.30 ರಿಂದ ಘಾಟ್‌ಕೋಪರ್ ಪೂರ್ವದ ಪಂತ್‌ನಗರದ ಡೊಮಿನಿಕ್ ಹೈಸ್ಕೂಲ್ ಸಮೀಪದ ಪಲ್ಲವಿ ಕಟ್ಟಡದ 4-ಜಿ, ತಳಮಹಡಿಯಲ್ಲಿ ನಡೆಯಿತು. ಖ್ಯಾತ ಹೃದ್ರೋಗ ತಜ್ಞ, ಸಮಾಜದ ವಿಶ್ವಸ್ಥ ಸದಸ್ಯ ಡಾ| ದಯಾನಂದ ಕುಂಬ್ಳೆ ಹಾಗೂ ತಂಡದವರು, ಹೋಮಿಯೋಪತಿಯ ಪ್ರಸಿದ್ಧ ವೈದ್ಯೆ ಹೇಮಲತಾ ಸುನಿಲ್ ಅವರ ತಂಡವು ಆರೋಗ್ಯ ತಪಾಸಣೆಗೈದು ಸಲಹೆ-ಸೂಚನೆಗಳನ್ನು ನೀಡಿದರು.
ಡಾ| ಮುಕೇಶ್ ಉದಾನಿ ಅವರ ನೇತೃತ್ವದಲ್ಲಿ ರಕ್ತದಾನ ಶಿಬಿರವು ಪೂರ್ವಾಹ್ನ 9 ಗಂಟೆಯಿಂದ ಆಯೋಜಿಸಲಾಗಿತ್ತು. ಶಿಬಿರದಲ್ಲಿ ನೂರಾರು ಮಂದಿ ತುಳು-ಕನ್ನಡಿಗರು ಉಪಸ್ಥಿತರಿದ್ದು ಶಿಬಿರದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮದಲ್ಲಿ ತೀಯಾ ಸಮಾಜದ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ನಾರಾಯಣ ಸಾಲ್ಯಾನ್, ವಿಶ್ವನಾಥ ಯು. ಕೆ., ತಿಮ್ಮಪ್ಪ ಬಂಗೇರ, ಅಪ್ಪುಂಜ್ಞೆ ಬಂಗೇರಾ, ಉಪಾಧ್ಯಕ್ಷ ಬಾಬು ಟಿ., ಗೌರವ ಕಾರ್ಯದರ್ಶಿ ಬಾಬು ಐಲ್, ಡಾ| ದೀಪಾಲಿ, ಬಾಬು ಬೆಳ್ಚಡ, ಮಹಿಳಾ ವಿಭಾಗದ ಉಜ್ವಲಾ ಚಂದ್ರಶೇಖರ ಅವರು ಉಪಸ್ಥಿತರಿದ್ದರು.