Saturday, May 25, 2013
Last Updated: 1:06:49 AM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಗಣ್ಯರ ಓಡಾಟಕ್ಕೆ ಬಂತು ಕ್ಷಿಪಣಿ ನಿರೋಧಕ ಕಾಪ್ಟರ್‌
      • Udayavani | Dec 23, 2012

        ನವದೆಹಲಿ : ರಾಷ್ಟ್ರಪತಿ, ಪ್ರಧಾನಿಯಂತಹ ವಿವಿಐಪಿಗಳ ಪ್ರವಾಸಕ್ಕೆ ಅಮೆರಿಕ ಅಧ್ಯಕ್ಷರು ಬಳಸುವ 'ಏರ್‌ಫೋರ್ಸ್‌-1' ಮಾದರಿ ವಿಮಾನ ಆಗಮನವಾದ ಬಳಿಕ ಇದೀಗ ಅತಿಗಣ್ಯರ ಸುರಕ್ಷಿತ ಹಾರಾಟಕ್ಕೆಂದು ಎಡಬ್ಲ್ಯು-101 ಹೆಲಿಕಾಪ್ಟರ್‌ಗಳು ಭಾರತಕ್ಕೆ ಆಗಮಿಸುತ್ತಿವೆ. ಈ ಹೆಲಿಕಾಪ್ಟರ್‌ಗಳು ಕ್ಷಿಪಣಿ ದಾಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಗಣ್ಯರ ಹಾರಾಟವನ್ನು ಮತ್ತಷ್ಟು ಸುರಕ್ಷಿತಗೊಳಿಸಲಿವೆ.

        ಗಣ್ಯರ ಸುರಕ್ಷತೆಗೆಂದು ರಕ್ಷಣಾ ಇಲಾಖೆ ಕೆಲ ವರ್ಷಗಳ ಹಿಂದೆ ಬ್ರಿಟನ್‌ನ 'ಆಗಸ್ಟಾ ವೆಸ್ಟ್‌ಲ್ಯಾಂಡ್‌' ಕಂಪನಿಯೊಂದಿಗೆ ಎಡಬ್ಲ್ಯು-101 ಸರಣಿಯ 12 ಕಾಪ್ಟರ್‌ಗಳ ಪೂರೈಕೆಗೆ ಒಪ್ಪಂದ ಮಾಡಿಕೊಂಡಿತ್ತು. ಸುಮಾರು 3546 ಕೋಟಿ ರೂ. ಒಪ್ಪಂದದ ಅನ್ವಯ ಮೊದಲ ಹೆಲಿಕಾಪ್ಟರ್‌ ಕೆಲ ದಿನಗಳ ಹಿಂದಷ್ಟೇ ದೆಹಲಿಗೆ ಬಂದಿಳಿದಿದೆ.

        ಈ ಹೆಲಿಕಾಪ್ಟರ್‌ಗಳು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಬಳಸುವ 'ಮೆರೈನ್‌ ಒನ್‌'ನಷ್ಟು ಅತ್ಯಾಧುನಿಕ ಹೊಂದಿಲ್ಲದೇ ಹೋದರೂ, ಕ್ಷಿಪಣಿ ದಾಳಿ ನಡೆಸುವ ಸಂದರ್ಭದಲ್ಲಿ ಮುನ್ನೆಚ್ಚರಿಕೆ ನೀಡುವ, ಇನಾ#†ರೆಡ್‌ ಹಾಗೂ ಕ್ಷಿಪಣಿ ದಾಳಿ ತಡೆಯುವ ಸಾಮರ್ಥ್ಯವನ್ನು ಹೊಂದಿವೆ. ಅಲ್ಲದೆ ಈ ಹೆಲಿಕಾಪ್ಟರ್‌ನ ಹಿಂದಿನ ರೆಕ್ಕೆಗಳು ಎತ್ತರದಲ್ಲಿ ಇರುವುದರಿಂದ ತುರ್ತು ಸಂದರ್ಭದಲ್ಲಿ ಯಾವುದೇ ವಾಹನವನ್ನು ಹೆಲಿಕಾಪ್ಟರ್‌ನ ಬಾಗಿಲಿನವರೆಗೆ ತರಬಹುದಾಗಿದೆ. ಅಲ್ಲದೆ ಈ ಕಾಪ್ಟರ್‌ಗಳು ಮೂರು ಎಂಜಿನ್‌ಗಳನ್ನು ಹೊಂದಿದ್ದು, ರಾತ್ರಿ ವೇಳೆ ಕೂಡಾ ಯಾವುದೇ ತೊಂದರೆ ಇಲ್ಲದೆ ಹಾರಾಟ ನಡೆಸುವ ಕ್ಷಮತೆ ಹೊಂದಿವೆ.

        ಪ್ರಸಕ್ತ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಅತಿಗಣ್ಯರು ಮತ್ತು ಗಣ್ಯರ ಹಾರಾಟಕ್ಕಾಗಿ ರಷ್ಯಾ ನಿರ್ಮಿತ ಎಂಐ-8ಎಸ್‌ ಮತ್ತು ಎಂಐ17ಎಸ್‌ ಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus