ಮುಂಬೈ: ಪಾಕ್ ಕ್ರಿಕೆಟಿಗರು ಅಪರೂಪಕ್ಕೆ ದ್ವಿಪಕ್ಷೀಯ ಸರಣಿ ಆಡಲು ಭಾರತಕೆ ಕಾಲಿರಿಸಿದ್ದಾರೆ. ಆದರೆ ಕಾಲಿಟ್ಟ ಗಳಿಗೆಯಲ್ಲಿಯೇ ಅವರು ಕೆಟ್ಟ ಸುದ್ದಿ ಕೇಳಬೇಕಾಗಿ ಬಂದಿದೆ. ಫೆ.3ರಂದು ನಡೆಯುವ ಐಪಿಎಲ್ ಹರಾಜಿಗೆ ಪಾಕ್ ಆಟಗಾರರನ್ನು ತೆಗೆದುಕೊಂಡಿಲ್ಲ ಎಂದು ಬಿಸಿಸಿಐ ನಂಬಲರ್ಹ ಮೂಲಗಳು ತಿಳಿಸಿವೆ.ಕಳೆದ ಎರಡು ದಿನಗಳ ಕಾಲ ಜೋದ್‌ಪುರದಲ್ಲಿ ನಡೆದಿರುವ ಕಾರ್ಯಾಗಾರದಲ್ಲಿ, ಪಾಕಿಸ್ತಾನದ ಯಾವುದೇ ಕ್ರಿಕೆಟಿಗರು ಹರಾಜಿನಲ್ಲಿರುವುದಿಲ್ಲ ಎಂದು ಫ್ರಾಂಚೈಸಿಗಳಿಗೆ ತಿಳಿಸಲಾಗಿದೆ. ವಾಸ್ತವವೆಂದರೆ ಹರಾಜಿನಲ್ಲಿ ಆಟಗಾರರ ಪಟ್ಟಿಯೊಂದನ್ನು ಫ್ರಾಂಚೈಸಿಗಳಿಗೆ ನೀಡಲಾಗಿದೆ. ಇದರಲ್ಲಿ ಹಿಂದಿನ ಹರಾಜಿನಲ್ಲಿ ತಿರಸ್ಕೃತರಾದ ಆಟಗಾರರು, ಅಕ್ಟೋಬರ್‌ನಲ್ಲಿ ಫ್ರಾಂಚೈಸಿಗಳು ಬಿಡುಗಡೆಗೊಳಿಸಿದ ಆಟಗಾರರಿದ್ದಾರೆ. ಈ ಪಟ್ಟಿಯಲ್ಲಿ ಪಾಕಿಸ್ತಾನಿ ಆಟಗಾರರಿಲ್ಲ ಎಂದು ತಿಳಿಸಲಾಗಿದೆ. ಕಾರ್ಯಾಗಾರದಲ್ಲಿ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ, ಸುಂದರ್ ರಾಮನ್ ಇದ್ದರು.