ಲಂಡನ್ : ಆಸ್ಟ್ರೇಲಿಯಾದ ರೇಡಿಯೋ ಜಾಕಿಗಳ ತಮಾಷೆ ಕರೆಯ ವಿವಾದದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಲಂಡನ್‌ನ ಏಳನೇ ಕಿಂಗ್ ಎಡ್ವರ್ಡ್ ಆಸ್ಪತ್ರೆಯ ನರ್ಸ್ ಭಾರತೀಯ ಮೂಲದ ಜೆಸಿಂತಾ ಸಲ್ದಾನ ಅವರ ಸಾವಿಗೆ ಕಾರಣವಾದ ಅಂಶಗಳು ಹಾಗೂ ಸಾವಿಗೀಡಾಗುವುದಕ್ಕೂ ಮುಂಚಿನ ಆಕೆಯ ಪರಿಸ್ಥಿತಿಯ ಕುರಿತಂತೆ ಜೆಸಿಂತಾಳ ಕುಟುಂಬ, ಆಕೆ ಕಾರ್ಯನಿರ್ವಹಿಸುತ್ತಿದ್ದ ಆಸ್ಪತ್ರೆಯ ಆಡಳಿತ ಹಾಗೂ ನಕಲಿ ಕರೆ ಮಾಡಿದ ಆಸ್ಟ್ರೇಲಿಯಾದ ಎಫ್. ಎಂ.ರೇಡಿಯೋ ವಾಹಿನಿಯ ಮಾತೃ ಸಂಸ್ಥೆಗೆ ಹಲವು ಪ್ರಶ್ನೆಗಳನ್ನು ಕೇಳಿ ಪತ್ರವೊಂದನ್ನು ಬರೆದಿದೆ.ನರ್ಸ್ ಜೆಸಿಂತಾ ಸಲ್ದಾನ ಅವರ ಕೋರಿಕೆಯ ಮೇರೆಗೆ ಬ್ರಿಟನ್‌ನ ಲೇಬರ್ ಮುಖಂಡ ಕೀತ್ ವಾಝ್ ಅವರು ಜೆಸಿಂತಾ ಅವರ ಸಾವಿಗೆ ಕಾರಣವಾದ ಪರಿಸ್ಥಿತಿಗೆ ಸಂಬಂಧಿಸಿದಂತೆ ಸುಮಾರು 60 ಪ್ರಶ್ನೆಗಳನ್ನು ಈ ಎರಡೂ ಆಡಳಿತ ಮಂಡಳಿಗೆ ಕಳುಹಿಸಿಕೊಟ್ಟಿದ್ದಾರೆ. ಯುವರಾಣಿ ಕೇಟ್ ಮಿಡ್ಲ್ಟನ್ ಅವರು ಏಳನೇ ಕಿಂಗ್ ಎಡ್ವರ್ಡ್ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಹೆಚ್ಚುವರಿ ಸುರಕ್ಷಾ ಕ್ರಮಗಳನ್ನು ಆಸ್ಪತ್ರೆಯ ಆಡಳಿತ ಕೈಗೊಂಡಿಲ್ಲ ಎಂಬ ದೂರಿನ ಕುರಿತಂತೆಯೂ ಜೆಸಿಂತಾ ಕುಟುಂಬ ಆಸ್ಪತ್ರೆಯ ಆಡಳಿತವನ್ನು ಪ್ರಶ್ನಿಸಿದೆ.ಜೆಸಿಂತಾಳ ಮೇಲೆ ಅಧಿಕ ಒತ್ತಡವಿತ್ತೇ?, ಘಟನೆಗೂ ಮುನ್ನ ಆಕೆ ಹಾಗೂ ಸಹೋದ್ಯೋಗಿಯ ನಡುವೆ ಘರ್ಷಣೆ ಸಂಭವಿಸಿತ್ತೇ?, 46ರ ಹೆರೆಯದ ಮಹಿಳೆಯನ್ನು ದೂರವಾಣಿ ಕರೆಗಳನ್ನು ಸ್ವೀಕರಿಸಲು ಅಸ್ಪತ್ರೆಯಲ್ಲಿ ಅವಕಾಶ ನೀಡಲಾಗುತ್ತಿದ್ದುದು ಸಹಜವೇ? ಸೇರಿದಂತೆ ಹಲವಾರು ಪ್ರಶ್ನೆಗಳನ್ನು ಈ ಪತ್ರ ಹೊಂದಿದೆ. ಪತ್ರದಲ್ಲಿ ಕೇಳಲಾದ 60 ಪ್ರಶ್ನೆಗಳಲ್ಲಿ 40 ಪ್ರಶ್ನೆಗಳು ಆಸ್ಪತ್ರೆಯ ಆಡಳಿತಕ್ಕೆ ಸಂಬಂಧಿಸಿದವುಗಳಾಗಿದ್ದರೆ ಉಳಿದ 20 ಪ್ರಶ್ನೆಗಳು ಆಸ್ಪ್ರೆàಲಿಯಾದ ರೇಡಿಯೋ ವಾಹಿನಿಯ ಮಾತೃ ಸಂಸ್ಥೆ ಸದರ್ನ್ ಕ್ರಾಸ್ ಆಸ್ಟ್ರಿಯೋದ ಆಡಳಿತಕ್ಕೆ ಸಂಬಂಧಪಟ್ಟವುಗಳಾಗಿವೆ.