Udayavani | Dec 24, 2012
ಸಚಿನ್ ಮತ್ತು ಅಂಜಲಿ ಮೊದಲ ಭಾರಿ ಭೇಟಿಯಾಗಿದ್ದು 1990ರಲ್ಲಿ. ಅದಾದ ಬಳಿಕ 5 ವರ್ಷ ಇಬ್ಬರೂ ಸ್ನೇಹಿತರಾಗಿ, ಪ್ರೇಮಿಗಳಾಗಿಯೇ ಕಾಲ ಕಳೆದಿದ್ದರು.
ಈ ನಡುವೆ ಒಮ್ಮೆ ಸಚಿನ್ ಜೊತೆಗೆ ಚಲನಚಿತ್ರ ನೋಡಬೇಕೆಂದು ಅಂಜಲಿಯ ಗೆಳತಿಯರು ಗಂಟು ಬಿದ್ದರಂತೆ. ಸರಿ ಅಂಜಲಿ ಕಾಡಿಬೇಡಿ ಸಚಿನ್‌ರನ್ನು ಆಗಷ್ಟೇ ಬಿಡುಗಡೆಯಾಗಿದ್ದ 'ರೋಜಾ' ಚಿತ್ರಕ್ಕೆ ಹೋಗಲು ಒಪ್ಪಿಸಿದರು. ಆದರೆ ಸೀದಾಸೀದಾ ಹೀಗೆ ಹೋದರೆ ಚಿತ್ರಮಂದಿರದಲ್ಲಿ ಎಲ್ಲರೂ ಮುತ್ತಿಕೊಳ್ಳುವುದು ಖಚಿತವಾಗಿತ್ತು. ಹೀಗಾಗಿ ಸಚಿನ್‌ಗೆ ಕೃತಕ ಗಡ್ಡ ಅಂಟಿಸಿ, ಕನ್ನಡಕ ಹಾಕಿಸಿ ಚಿತ್ರಮಂದಿರಕ್ಕೆ ಕರೆದೊಯ್ಯಲಾಗಿತ್ತು. ಆದರೆ ಮಧ್ಯಂತರದ ವೇಳೆಗೆ ಅದು ಹೇಗೋ ಕನ್ನಡಕ ಕಳಚಿ ಬಿದ್ದು, ಸಚಿನ್ ಬಣ್ಣ ಬಯಲಾಗಿತ್ತು. ಅಷ್ಟಾಗಿದ್ದೇ ತಡ, ಥಿಯೇಟರ್‌ನಲ್ಲಿ ಇದ್ದವರೆಲ್ಲ ಮುತ್ತಿಕೊಂಡಿದ್ದರು. ಅಷ್ಟೇ, ಇಡೀ ಸಚಿನ್ ಗ್ಯಾಂಗ್ ಎದ್ದೆವೋ, ಬಿದ್ದೆವೋ ಎಂದು ಥಿಯೇಟರ್‌ನಿಂದ ಪರಾರಿಯಾಗಿತ್ತು.
ನಂ. 10 ಜೆರ್ಸಿ ಇನ್ನು ಯಾರ ಪಾಲಿಗೆ?
ಸಚಿನ್ ಕ್ರಿಕೆಟ್‌ಗೆ ಕಾಲಿಟ್ಟ ಬಳಿಕ ತಾವು ತೊಡುತ್ತಿದ್ದ ಟೀ ಶರ್ಟ್‌ನ ಮೇಲೆ ನಂ. 10 ನಂಬರ್ ಅನ್ನೇ ಬಳಸುತ್ತಿದ್ದರು. ಇದೀಗ ಏಕದಿನ ಪಂದ್ಯಗಳಿಂದ ಸಚಿನ್ ನಿವೃತ್ತಿಯಾಗುತ್ತಲೇ, ಈ ನಂಬರ್ ಅನ್ನು ಪಡೆಯಲು ಹೋರಾಟ ಆರಂಭವಾಗಿದೆ.
ಸಚಿನ್ ಭಾರತೀಯ ಕ್ರಿಕೆಟ್‌ಗೆ ಸಲ್ಲಿಸಿದ ಸೇವೆ ಅಪಾರ. ಹೀಗಾಗಿ ಯಾರಿಗೂ ಆ ನಂಬರ್ ಕೊಡಬಾರದು. ಅದನ್ನು ಕಾಯಂ ಆಗಿ ಸಚಿನ್‌ಗೆ ನೀಡಬೇಕು ಎಂದು ಸಚಿನ್ ಅಭಿಮಾನಿಗಳು ಆಗಲೇ ಬೇಡಿಕೆ ಮುಂದಿಟ್ಟಿದ್ದಾರೆ. ಫುಟ್ಬಾಲ್‌ನಲ್ಲಿ ನಂ.10 ಜೆರ್ಸಿಯನ್ನು ಪೀಲೆ, ಜಿಕೋ, ರಿವಾಲ್ಡೋ, ಕಾಕಾ, ಮರಾಡೋನಾ, ಮೆಸ್ಸಿ ಹೀಗೆ ಖ್ಯಾತನಾಮರು ಬಳಸಿಕೊಂಡು ಬಂದಿದ್ದಾರೆ. ಹೀಗಾಗಿ ನಂ.10 ಸಂಖ್ಯೆಯನ್ನು ಕೇವಲ ಸಚಿನ್‌ಗೆ ಮೀಸಲಿಡುವ ಮೂಲಕ ಅವರಿಗೆ ವಿಶೇಷ ಗೌರವ ಸಲ್ಲಿಸಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.
ಸಚಿನ್ ಏಕದಿನ ಶತಕಗಳ ಮೈಲಿಗಲ್ಲು
1ನೇ ಶತಕ ಆಸ್ಟ್ರೇಲಿಯಾ ವಿರುದ್ಧ 110 (ಸೆ.9, 1994)
10ನೇ ಶತಕ ದಕ್ಷಿಣ ಆಫ್ರಿಕಾ ವಿರುದ್ಧ 114 (ಡಿ.14, 1996)
20ನೇ ಶತಕ ಜಿಂಬಾಬ್ವೆ ವಿರುದ್ಧ 118 (ನ.8, 1998)
30ನೇ ಶತಕ ದಕ್ಷಿಣ ಆಫ್ರಿಕಾ ವಿರುದ್ಧ 101 (ಅ.5, 2001)
40ನೇ ಶತಕ ವೆಸ್ಟ್ ಇಂಡೀಸ್ ವಿರುದ್ಧ 141 (ಸೆ.14 2006)
49ನೇ ಶತಕ ಬಾಂಗ್ಲಾದೇಶ ವಿರುದ್ಧ 114 (ಮಾ.16, 2012)
ವಿವಿಧ ದೇಶಗಳ ವಿರುದ್ಧ ಸಚಿನ್ ಶತಕಗಳು
ದೇಶ ಶತಕ
ಆಸ್ಟ್ರೇಲಿಯ 9
ಶ್ರೀಲಂಕಾ 8
ದಕ್ಷಿಣ ಆಫ್ರಿಕಾ 5
ಇಂಗ್ಲಂಡ್ 2
ನ್ಯೂಜಿಲಂಡ್ 5
ಜಿಂಬಾಬ್ವೆ 5
ವೆಸ್ಟ್ ಇಂಡೀಸ್ 4
ಪಾಕಿಸ್ಥಾನ 5
ಬಾಂಗ್ಲಾದೇಶ 1
ಕೀನ್ಯಾ 4
ನಮೀಬಿಯಾ 1
ಸಚಿನ್ ಅಂಕಿಅಂಶಗಳು
ಪದಾರ್ಪಣೆ-ಡಿ.18, 1989, ಪಾಕಿಸ್ತಾನ ವಿರುದ್ಧ
ಅಂತಿಮ ಪಂದ್ಯ-ಮಾ.18, 2012, ಪಾಕಿಸ್ತಾನ ವಿರುದ್ಧ
ಒಟ್ಟು ಏಕದಿನ-463
ಬ್ಯಾಟಿಂಗ್ ದಾಖಲೆ
ಒಟ್ಟು ಇನಿಂಗ್ಸ್-452
ಒಟ್ಟು ರನ್-18,426
ಶತಕ-49
ಅರ್ಧಶತಕ-96
ಗರಿಷ್ಠ-200
ಅಜೇಯ-41
ಬೌಂಡರಿ-2016
ಸಿಕ್ಸರ್-195
ಸರಾಸರಿ-44.83
ಸ್ಟ್ರೈಕ್‌ರೇಟ್-86.23
ಬೌಲಿಂಗ್ ದಾಖಲೆ
ಇನಿಂಗ್ಸ್-270
ಎಸೆತಗಳು-8054
ನೀಡಿದ ರನ್-6850
ವಿಕೆಟ್-154
ಸರಾಸರಿ-44.48
5 ವಿಕೆಟ್-2 ಬಾರಿ
ಶ್ರೇಷ್ಠ-5ಕ್ಕೆ 32