Thursday, May 23, 2013
Last Updated: 1:57:52 PM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಬೆಂಗಳೂರಿಗೆ 3ನೇ ಸ್ಥಾನ: ಕೇಂದ್ರ ಸರ್ಕಾರದಿಂದಲೇ ಮಾಹಿತಿ
    • ಅತ್ಯಾಚಾರದಲ್ಲಿ ದೆಹಲಿ ನಂ.1
      • Udayavani | Dec 24, 2012

        ನವದೆಹಲಿ: 23 ವರ್ಷದ ಯುವತಿ ಮೇಲೆ ಚಲಿಸುತ್ತಿದ್ದ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದ್ದರ ವಿರುದ್ಧ ರಾಷ್ಟ್ರ ರಾಜಧಾನಿಯಲ್ಲಿ ಯುವಸಮೂಹ ಬೀದಿಗಿಳಿದು ಹೋರಾಡುತ್ತಿರುವ ಸಂದರ್ಭದಲ್ಲೇ ಮಾನಭಂಗದಲ್ಲಿ ದೆಹಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರುವ ಸಂಗತಿ ಬೆಳಕಿಗೆ ಬಂದಿದೆ. ಮತ್ತೂಂದು ಆತಂಕಕಾರಿ ಸಂಗತಿ ಏನೆಂದರೆ, ಬೆಂಗಳೂರು ಮೂರನೇ ಸ್ಥಾನದಲ್ಲಿದೆ!

        2011ರಲ್ಲಿ ದೆಹಲಿಯಲ್ಲಿ 453 ಮಾನಭಂಗ ಪ್ರಕರಣಗಳು ನಡೆದಿದ್ದರೆ, ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 221 ಹಾಗೂ ಬೆಂಗಳೂರಿನಲ್ಲಿ 97 ಪ್ರಕರಣಗಳು ದಾಖಲಾಗಿವೆ. ಚೆನ್ನೈನಲ್ಲಿ 76, ಹೈದರಾಬಾದ್‌ನಲ್ಲಿ 59, ಕೋಲ್ಕತಾದಲ್ಲಿ 46 ಅತ್ಯಾಚಾರಗಳು ನಡೆದಿವೆ ಎಂದು ಕೇಂದ್ರ ಗೃಹ ಸಚಿವಾಲಯದ ದೇಶದ ಆರು ಮಹಾನಗರಿಗಳ ಅಂಕಿ- ಅಂಶಗಳು ಹೇಳುತ್ತವೆ.

        ದೆಹಲಿಯಲ್ಲಿ 2010 ಹಾಗೂ 2009ರಲ್ಲಿ ಕ್ರಮವಾಗಿ 414 ಹಾಗೂ 404 ಪ್ರಕರಣಗಳು ವರದಿಯಾಗಿವೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ 2011ರಲ್ಲೇ ದೆಹಲಿ ಅತಿ ಹೆಚ್ಚು ಮಾನಭಂಗ ಪ್ರಕರಣಗಳನ್ನು ಕಂಡಿದೆ.

        ದೇಶದ ಆರು ಮಹಾನಗರಿಗಳಲ್ಲಿ ಸಂಭವಿಸಿದ ಲೈಂಗಿಕ ಪ್ರಕರಣಗಳ ಸಂಖ್ಯೆಯಲ್ಲೂ ದೆಹಲಿ ನಂ.1 ಸ್ಥಾನದಲ್ಲಿದ್ದು ಕಳೆದ ವರ್ಷ ಅಂತಹ 556 ಘಟನೆಗಳು ನಡೆದಿವೆ. 2010 ಹಾಗೂ 2009ರಲ್ಲಿ ಕ್ರಮವಾಗಿ 550 ಹಾಗೂ 491 ಪ್ರಕರಣಗಳು ಬೆಳಕಿಗೆ ಬಂದಿವೆ.

        ವರದಕ್ಷಿಣೆ ಸಾವು, ಕೊಲೆ, ಅಪಹರಣ ಸೇರಿದಂತೆ 47,212 ಪ್ರಕರಣಗಳು ಕಳೆದ ವರ್ಷ ದೆಹಲಿಯಲ್ಲಿ ದಾಖಲಾಗಿದ್ದರೆ ಬೆಂಗಳೂರಿನಲ್ಲಿ 30283 ಪ್ರಕರಣಗಳು ಕಳೆದ ವರ್ಷ ದಾಖಲಾಗಿವೆ.

        ಮಾನಭಂಗ ಎಲ್ಲಿ ಎಷ್ಟು?

        ನಗರ 2011 - 2010 - 2009

        1. ದೆಹಲಿ: 453 - 414 - 404

        2. ಮುಂಬೈ: 221 - 194 - 182

        3. ಬೆಂಗಳೂರು: 97 - 65 - 65

        4. ಚೆನ್ನೈ: 76 - 47 - 47

        5. ಹೈದರಾಬಾದ್‌: 59 - 47 - 39

        6. ಕೋಲ್ಕತಾ: 46 - 32 - 42

        ದಕ್ಷಿಣ ಭಾರತದಲ್ಲಿ ಬೆಂಗಳೂರು ನಂ.1

        ದಕ್ಷಿಣ ಭಾರತದ ಮೂರು ಮಹಾನಗರಿಗಳಾದ ಚೆನ್ನೈ, ಬೆಂಗಳೂರು ಹಾಗೂ ಹೈದರಾಬಾದ್‌ ಪೈಕಿ ಅತ್ಯಾಚಾರ ಪ್ರಕರಣಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ 227 ಮಾನಭಂಗ ಪ್ರಕರಣಗಳು ಬೆಂಗಳೂರಿನಲ್ಲಿ ನಡೆದಿದ್ದರೆ, ಚೆನ್ನೈನಲ್ಲಿ 170, ಹೈದರಾಬಾದ್‌ನಲ್ಲಿ 145 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಬೆಂಗಳೂರಿನಲ್ಲಿ 250 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿವೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus