ಕಾಸರಗೋಡು ಜಿಲ್ಲೆಯ ಪ್ರಮುಖ ಮುಸ್ಲಿಂ ಆರಾಧನಾಲಯವಾಗಿರುವ ಮಾಲಿಕ್ ದಿನಾರ್ ಮಸೀದಿಯು ದೀರ್ಘ ಇತಿಹಾಸ ಹೊಂದಿದ್ದು ಆಕರ್ಷಣೀಯವಾಗಿದೆ.
ಕಾಸರಗೋಡು ಜಿಲ್ಲೆಯ ಒಂದು ಪ್ರಮುಖ ಮುಸ್ಲಿಂ ಆರಾಧನಾಲಯವಾಗಿರುವ ಮಾಲಿಕ್ ದಿನಾರ್ ಮಸೀದಿಯ ದೀರ್ಘ ಇತಿಹಾಸವಿದೆ. ಇದು ಕಾಸರಗೋಡು ನಗರದಿಂದ ಅನತಿ ದೂರದಲ್ಲಿರುವ ತಳಂಗರೆ ಎಂಬಲ್ಲಿದೆ.
ಪ್ರವಾಸಿಗರನ್ನೂ, ಭಕ್ತರನ್ನೂ ಸೆಳೆಯುವ ಇದು ತುಂಬಾ ಆಕರ್ಷಕವಾಗಿರುವುದರ ಜತೆಗೆ ಭಕ್ತಿ ಉಕ್ಕೇರಿಸುತ್ತದೆ. ಈ ಮಸೀದಿಯನ್ನು ಮಾಲಿಕ್ ಇಬ್° ದಿನಾರ್ ಅವರು ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಲಿಕ್ ಇಬ್° ದಿನಾರ್ ಅವರ ಸಮಾ ಇಲ್ಲಿದೆ.

ಇಸ್ಲಾಂ ಮತ ಪ್ರಚಾರದ ಉದ್ದೇಶದೊಂದಿಗೆ ಇಲ್ಲಿಗೆ ಬಂದಿದ್ದ ಮಾಲಿಕ್ ಇಬ್° ದಿನಾರ್‌ಗೆ ಆಗ ಇಲ್ಲಿ ಆಡಳಿತದಲ್ಲಿದ್ದ ಬಲ್ಲಾಳರು ಮಸೀದಿ ನಿರ್ಮಿಸಲು ಸ್ಥಳ ಮತ್ತು ಇತರ ಸಹಾಯಗಳನ್ನು ನೀಡಿದ್ದಾರೆ ಎಂದು ಚರಿತ್ರೆಯ ಕಥೆಗಳು ಹೇಳುತ್ತಿವೆ. ಬಳಿಕ ಇಲ್ಲಿನ ಬಲ್ಲಾಳರನ್ನು 15ನೇ ಶತಮಾನದಲ್ಲಿ ಇಕ್ಕೇರಿ ರಾಜರು ಸೋಲಿಸಿದ್ದಾರೆ ಎನ್ನಲಾಗುತ್ತಿದೆ.
ಚಾರಿತ್ರಿಕ ಕಥೆ ಸಾರುವ ಕ್ರಿ.ಶ. 1030ರ ಕಾಲದ ತಳಂಗರೆ ಶಾಸನವೂ ಇದೇ ಮಸೀದಿಯ ವ್ಯಾಪ್ತಿಯಲ್ಲಿದೆ. ಆದರೆ ಅದು ಪ್ರವಾಸಿಗರಿಗೆ ಕಾಣಲು ಸಿಗುವುದಿಲ್ಲ. ಜಯಸಿಂಹ ರಾಜನು ತನ್ನ ರಾಣಿಗೆ ಮೊಗ್ರಾಲ್‌ನ ಬರಡು ಸ್ಥಳವೊಂದನ್ನು ಉಂಬಳಿಯಾಗಿ ನೀಡಿದ್ದು ಮತ್ತು ಅದನ್ನು ಆಕೆ ಅಭಿವೃದ್ ಮಾಡಿ ಸಮೃದ್ಧ ಊರಾಗಿ ಪರಿವರ್ತಿಸಿದ್ದು ಮುಂತಾದವುಗಳ ಬಗ್ಗೆ ಈ ಶಾಸನದಲ್ಲಿ ಉಲ್ಲೇಖವಿದೆ ಎಂದು ಹೇಳಲಾಗುತ್ತಿದೆ.

ಸಮೀಪದಲ್ಲೇ ಮಾಲಿಕ್ ದಿನಾರ್ ಆಸ್ಪತ್ರೆಯೂ ಇದೆ. ಮತ್ತೂಂದು ಪ್ರಮುಖ ಮಸೀದಿ ತೆರುವತ್ ಮಸೀದಿ. ಇದೂ ಕಾಸರಗೋಡು ನಗರಕ್ಕೆ ಸಮೀಪದಲ್ಲಿದೆ.
ನೆಲ್ಲಿಕುಂಜೆ ಮಸೀದಿ

ಕಾಸರಗೋಡು ನಗರಕ್ಕೆ ಹತ್ತಿರವಿರುವ ನೆಲ್ಲಿಕುಂಜೆ ಮಸೀದಿಯಲ್ಲಿ ಜರಗುವ ವಾರ್ಷಿಕ ಉರೂಸ್ ತುಂಬಾ ಜನಪ್ರಿಯವಾದುದು. ಎಲ್ಲಾ ಕೋಮಿನ ಆಸ್ತಿಕರು ಇಲ್ಲಿಗೆ ಹರಕೆ ಹೇಳುವುದುಂಟು, ಭೇಟಿ ನೀಡುವುದುಂಟು.