ಇಂಡಿ ಸಮೀಪದ ನಿಂಬಾಳ ಗ್ರಾಮ ಗುರುದೇವ ಆರ್.ಡಿ. ರಾನಡೆ ಅವರ ಆಶ್ರಮದಿಂದಾಗಿ ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿದೆ.
ಇಂಡಿಯಿಂದ 6 ಕಿ.ಮೀ. ದೂರದಲ್ಲಿರುವ ನಿಂಬಾಳ ಗ್ರಾಮ ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಗುರುದೇವ ಆರ್.ಡಿ. ರಾನಡೆ ಅವರ ಆಶ್ರಮವಿರುವುದು ಇಲ್ಲಿಯೇ.
ಗುರುದೇವ ರಾಮಚಂದ್ರ ದತ್ತಾತ್ರೇಯ ರಾನಡೆ ಅವರು ನಿರ್ವಾಣ ಹೊಂದಿದ್ದು ಈ ಗ್ರಾಮದಲ್ಲಿ . ದೇಶ-ವಿದೇಶದಲ್ಲಿರುವ ಅವರ ಶಿಷ್ಯರು ಬಂದು ಆಶ್ರಮದಲ್ಲಿ ಆಧ್ಯಾತ್ಮಿಕ, ಸಾಹಿತ್ಯಿಕ ಗ್ರಂಥ ಪಾರಾಯಣ ಮಾಡುವರು.

ಕಲ್ಯಾಣಿ ಚಾಲುಕ್ಯರು ನಿರ್ಮಿಸಿದ ಕೋಟಿ ಶಂಕರಲಿಂಗ ದೇವಾಲಯ ಇಲ್ಲಿದೆ. ದೇವಾಲಯದ ಅಂಗಳದ ತುಂಬಾ ಅನೇಕ ಶಿವಲಿಂಗಗಳು ಕಂಗೊಳಿಸುತ್ತವೆ. ಶ್ರಾವಣ ಮಾಸದಲ್ಲಿ ಜಾತ್ರೆ ನಡೆಯುತ್ತದೆ.
ತುಂಬಾ ಕಲಾತ್ಮಕವಾದ ಈ ದೇವಾಲಯ ಸಂರಕ್ಷಿತ ಸ್ಮಾರಕವಾಗಿದೆ. ನಿಂಬಾಳದ ದೈತ್ಯ ಪ್ರತಿಭೆ, ಕನ್ನಡ ಚಲನಚಿತ್ರ ನಿರ್ದೇಶಕ ಸುನೀಲ ಕುಮಾರ ದೇಸಾಯಿ ಇದೇ ಗ್ರಾಮದವರು.

ಇಂಡಿ ತಾಲೂಕಿನ ಇತರೆ ಗ್ರಾಮಗಳಾದ ಆಗರಖೇಡ, ತದ್ದೇವಾಡಿ, ಬಂಥನಾಳ, ತಡವಲಗಾ, ಉಮರಜ, ಲಚ್ಯಾಣ, ಹಿರೇರೂಗಿ ಇಲ್ಲೆಲ್ಲಾ ಕೆಲವು ಐತಿಹಾಸಿಕ ಸ್ಮಾರಕ, ಮಠ, ಮಂದಿರಗಳು ನೋಡಲು ಸಿಗುತ್ತವೆ..

ಬಿಜಾಪುರದಲ್ಲಿ ಮಂಜು
ಮಡಿಕೇರೀಲಿ ಮಂಜು ವಿಶೇಷವೇನಲ್ಲ
ಬಿಜಾಪುರದಲ್ಲಿ ಮಂಜು ಭಾರೀ ವಿಶೇಷ
ಅದಿಲ್‌ಶಾಹಿ ಇಮಾರತ್‌ಗಳಿಗೆಲ್ಲ ಬಿಳೀ ಘೋಷಾ !
ಗಾಂಧೀಚೌಕ ಮಂಜುಮಂಜು, ತಾತನ
ಧೋತ್ರಾನೂ ಮಂಜು, ಚಾಳೀಸೂ ಮಂಜು.
ಬಸವೇಶ್ವರ ಚೌಕದ ಬಸವಣ್ಣ
ಕಾಣಲೇವಲ್ಲ !
ಎತ್ತ ಹೊತಗೊಂಡುಹೋತೋ ಕುದರಿ
ಯಾಂ ಬಲ್ಲ ?
ಅತಾತ ನಡದಾØಂಗ ಗೋಲ್‌ಗುಂಬಜ್ಜು
ಕಾಣಿಸಬೇಕಿತ್ತಲ್ಲ , "ಎಲ್ಲೋತೋ ಮುತ್ಯಾ ?!'
"ಸನೇವು ಓಗಿ ನೋಡಲೇ ತಮ್ಮಾ ,
ಮಂಜು ಮುಸುಕೇತಿ
ದೂರದಿಂದ ಏನು ಕಂಡಾತು ಸತ್ಯ ?'
* * *
ಊರು ಬಿಟ್ಟು ಹಾಗೇ
ಹೊರಗೆ ನಡೆದಹಾಗೆ
ಮೊದಲೇ ಬೋಳು ಬಯಲು
ಈಗ ಪೂರಾ ಮುಗಿಲು
ಎಲ್ಲದಾನಪಾ ಸೂರ್ಯ ?
ತಲಾಷ್ ಮಾಡೂದೇ ಇವತ್ತಿನ
ಮುಂಜಾನೆ ಕಾರ್ಯ.
"ಮುಂಜಾನಲ್ಲೋ ತಮ್ಮಾ , ಗಂಟಿ ಎಂಟಾತು'.
"ಹೌದೇನ್ರಿ ? ಎಂಟಾತೇನ್ರಿ ? ಮತ್ತಧಿ ಗೌಡ ಇನ್ನೂ
ಹಾಸಿಗಿ ಬಿಟ್ಟು ಏಳವಲ್ಲ ನೋಡ್ರಿ !'
"ಏನು ಮಾಡಾದು, ಮಂಜಿನ ಮಾತೆ¾ !
ಲೈಟುಕಂಬದ ಮ್ಯಾಗ ಶಟಗೊಂಡು ಕುಂತ
ಗಿಣಿಸುದ್ದ ಅಳ್ಳಾಡ್ವಲುª !
ಗಿಣಿ ಬಾಯಾಗ ಹೊಗಿ
ಮುಕಳಾÂಗ ಹೊಗಿ
ರಸ್ತೀಮ್ಯಾಗ ಹೊಗಿ
ಬೆಳೆದುನಿಂತ ಹೊಲದಮ್ಯಾಗ ಹೊಗಿ
ಹಿಂಗಾದ್ರ ಬೆಳಿ ಕೈಗ ಹತ್ತವಲುª ತೆಗಿ
ಆ ಮಂಜಿನ ಮುಖ್Vಕಿಸ್ಟು ಕ್ಯಾಕರ್ಸಿ ಉಗಿ !'
* * *
ಮಡಿಕೇರೀಲಿ ಮಂಜು ವಿಶೇಷವೇನಲ್ಲ
ಬಿಜಾಪುರದಾಗ ಮಂಜು ಭಾರೀ ವಿಶೇಷ
ಸುರೇಪಾನ, ತೊಗರಿ, ದ್ರಾಕ್ಷಿ ,... ನಿಃಶೇಷ !
ಎಚ್. ಆನಂದರಾಮ ಶಾಸ್ತ್ರಿ , ಬೆಂಗಳೂರು
