Monday, December 22, 2014
Last Updated: 1:40:58 PM IST
 • ನಾನೆಲ್ಲಿರುವೆ:
 • ಮುಖಪುಟ ಪಯಣ
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
  • ಕಾಸರಗೋಡು ಕನ್ನಡ ಹೋರಾಟ


   • ಕಾಸರಗೋಡು ಕನ್ನಡ ಹೋರಾಟ

    ಪ್ರವಾಸಿಗರಾಗಿ ಕಾಸರಗೋಡು ಸಂದರ್ಶನಕ್ಕೆ ತೊಡಗುವ ಯಾರಿಗಾದರೂ ಕನ್ನಡ ನಾಡಿನಲ್ಲಿ ಕನ್ನಡಿಗರು, ಕನ್ನಡ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಕಾಡದೇ ಇರದು !

    ಪ್ರವಾಸಿಗರಾಗಿ ಕಾಸರಗೋಡು ಸಂದರ್ಶನಕ್ಕೆ ತೊಡಗುವ ಯಾರಿಗಾದರೂ ಕನ್ನಡ ನಾಡಿನಲ್ಲಿ ಕನ್ನಡಿಗರು, ಕನ್ನಡ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಕಾಡದೇ ಇರದು ! ಈ ಹಿನ್ನೆಲೆಯಲ್ಲಿ ನಾವು ಸ್ವಲ್ಪ ಚರಿತ್ರೆಯ ಪುಟಗಳನ್ನು ತಿರುವಿ ನೋಡುವುದು ಒಳ್ಳೆಯದು.

    ಭಾಷಾವಾರು  ರಾಜ್ಯ ರಚನೆ ಉದ್ದೇಶದಿಂದ ಅಂದಿನ ಕೇಂದ್ರ ಸರಕಾರವು ಫಜುÉ ಆಲಿ, ಪಂಡಿತ್‌ ಕುಂಜುÅ ಮತ್ತು ಸರ್ದಾರ್‌ ಪಣಿಕ್ಕರ್‌ ಅವರನ್ನೊಳಗೊಂಡ  ಸಮಿತಿಯನ್ನು ರಚಿಸಿತ್ತು.  ಈ ಸಮಿತಿ ಕಾಸರಗೋಡಿಗೂ ಭೇಟಿ ನೀಡಿ  ಜನಾಭಿಪ್ರಾಯ ಸಂಗ್ರಹಿಸಿತ್ತು. ಕೇರಳದವರೇ ಆಗಿದ್ದ ಸರ್ದಾರ್‌ ಪಣಿಕ್ಕರ್‌ ಅವರು ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂಬ ಜನರ ವಾದವನ್ನು ಒಪ್ಪಿಕೊಂಡಿದ್ದರು ಮತ್ತು  ಅದನ್ನು ತನ್ನ ವರದಿಯಲ್ಲಿ ಉಲ್ಲೇಖೀಸುವುದಾಗಿಯೂ ತಿಳಿಸಿದ್ದರು.

    ಆದರೆ ಕೊನೆಗೆ ಕನ್ನಡಿಗರಿಗೆ ದ್ರೋಹ ಬಗೆದ  ಅವರು ಕಾಸರಗೋಡನ್ನು ಕೇರಳಕ್ಕೆ ಸೇರಿಸಲು ಶಿಫಾರಸು ಮಾಡಿ ಸಮಿತಿಯ ವರದಿಯನ್ನು 1955 ಸೆಪ್ಟಂಬರ್‌ 30ರಂದು ಕೇಂದ್ರ ಸರಕಾರಕ್ಕೆ ಸಲ್ಲಿಸಿದರು. ಇದು ಕಾಸರಗೋಡಿನ ಜನತೆಯನ್ನು ಆಕ್ರೋಶಿತರನ್ನಾಗಿಸಿತು. ಜನರು ಪ್ರತಿಭಟಿಸಿದರು. ತಮ್ಮನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂದು ಬಲವಾಗಿ ಆಗ್ರಹಿಸಿದರು.

    ಮಂಗಳೂರು, ಕಾಸರಗೋಡಿನ  ವಿವಿಧೆಡೆ ಹಲವು ಪ್ರತಿಭಟನಾ ಸಭೆ, ಮೆರವಣಿಗೆ  ನಡೆಸಿದರು. "ಸಂಯುಕ್ತ ಕರ್ನಾಟಕ ಪ್ರಾಂತೀಕರಣ ಸಮಿತಿ' ನೇತೃತ್ವದಲ್ಲಿ ಕಾಸರಗೋಡಿನ ಕನ್ನಡಿಗರು ತೀವ್ರ ಹೋರಾಟ ನಡೆಸಿದರು. ರಾಜಕೀಯ ಧುರೀಣರು ತಮ್ಮ ಪಕ್ಷಗಳಿಗೆ ರಾಜೀನಾಮೆ ಸಲ್ಲಿಸಿದರು. "ಕನ್ನಡವೇ ಪಕ್ಷ, ಕನ್ನಡವೇ ಪಂಥ' ಎಂದರು.

    ಹಿಂಸಾತ್ಮಕ  ಹೋರಾಟಕ್ಕೂ ಇಳಿದರು. ಮಹಿಳೆಯರು, ಮಕ್ಕಳು ಜೈಲಿಗೆ ಸೇರಿದರು. ಪ್ರತಿಭಟನೆಯಲ್ಲಿ ನಿರತರಾಗಿದ್ದ ಶಾಂತಾರಾಮ ಮತ್ತು ಸುಧಾಕರ ಅಗ್ಗಿತ್ತಾಯ ಎಂಬಿಬ್ಬರು ಮಕ್ಕಳು ಪೊಲೀಸರ ಗುಂಡಿಗೆ ಬಲಿಯಾದರು. ಆದರೆ ಯಾವುದರಿಂದಲೂ ಕಾಸರಗೋಡು ಕೇರಳಕ್ಕೆ  ಸೇರುವುದನ್ನು ತಡೆಯಲಾಗಲಿಲ್ಲ. 1956 ನವೆಂಬರ್‌ ಒಂದರಂದು ಕಾಸರಗೋಡು ಎಂಬ ಕನ್ನಡಪ್ರದೇಶ ಬಲವಂತವಾಗಿ, ಅನ್ಯಾಯವಾಗಿ ಕೇರಳಕ್ಕೆ  ಸೇರಿ ಹೋಯಿತು.

    ಪ್ರತಿಭಟನೆ, ಹೋರಾಟ ಮುಂದುವರಿಯುತ್ತಲೇ ಇತ್ತು. ಇದರ ಬಿಸಿ ಕೇಂದ್ರ ಸರಕಾರಕ್ಕೂ ತಗಲಿತು. ಕೇಂದ್ರ ಸರಕಾರವು ನ್ಯಾಯಮೂರ್ತಿ ಮೆಹರ್‌ಚಂದ್‌ ಮಹಾಜನ್‌ ಅವರ ನೇತೃತ್ವದ ಏಕಸದಸ್ಯ ಸಮಿತಿಯನ್ನು ರಚಿಸಿ ಕಾಸರಗೋಡು ಸೇರಿದಂತೆ, ಭಾಷಾವಾರು ರಾಜ್ಯ ರಚನೆ ಸಂದರ್ಭ ಅನ್ಯಾಯವಾಗಿದೆ ಎಂದು ಹೇಳಲಾಗುತ್ತಿರುವ ಪ್ರದೇಶಗಳ ಜನರ ಅಭಿಪ್ರಾಯ ಸಂಗ್ರಹಿಸಿ ವರದಿ ಸಲ್ಲಿಸಲು ಸೂಚಿಸಿತು. ಆ ವರದಿಯೂ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂದು ಹೇಳಿತು.

    ಅಂದಿನ ಕೇರಳದ ಮುಖ್ಯಮಂತ್ರಿಯಾಗಿದ್ದ ಇಂ.ಎಂ.ಎಸ್‌. ನಂಬೂದಿರಿಪಾಡ್‌ ಅವರೂ ಕಾಸರಗೋಡಿನ ಕನ್ನಡಿಗರಿಗೆ ಅನ್ಯಾಯವಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಏನಾದರೂ ಪ್ರಯೋಜನವಾಗಲಿಲ್ಲ. ಸಮಸ್ಯೆ ಯಥಾಸ್ಥಿತಿಯಲ್ಲೇ  ಉಳಿಯಿತು. ಕನ್ನಡಿಗರು ಒಟ್ಟಾದರು. ಒಂದು  ಪ್ರಬಲ ಶಕ್ತಿಯಾದರು. ಚುನಾವಣೆಗೂ ಸ್ಪìಸಿದರು. ಈಗ ಕರ್ನಾಟಕ ಸಮಿತಿ ಎಂದು ಹೇಳಲಾಗುತ್ತಿರುವ,  ಅಂದಿನ ಸಂಯುಕ್ತ ಕರ್ನಾಟಕ ಪ್ರಾಂತೀಕರಣ ಸಮಿತಿ  ಹೆಸರಲ್ಲಿ ಕೇರಳದ  ಮೊದಲ ವಿಧಾನಸಭಾ ಚುನಾವಣೆಗೆ ಸ್ಪìಸಿದ್ದ  ಕನ್ನಡ ನಾಯಕ ಉಮೇಶ್‌ ರಾಯರು ಭರ್ಜರಿ ಗೆಲುವು ಸಾಸಿದರು.

    ಮುಂದಿನ ದಿನಗಳಲ್ಲಿ ಇಲ್ಲಿ ಗೆಲ್ಲಲು ಕನ್ನಡಿಗ‌ರನ್ನು ಓಲೈಸುವುದು ಅನಿವಾರ್ಯ ಎಂಬಂತಾಗಿತ್ತು ಪರಿಸ್ಥಿತಿ. ಕಮ್ಯೂನಿಸ್ಟ್‌ ನೇತಾರ ಎ.ಕೆ. ಗೋಪಾಲನ್‌ ಅವರು ಕೂಡ ಕನ್ನಡಿಗರೇ, ನಿಮಗೆ ಅನ್ಯಾಯ ವಾಗಿದೆ.ಸರಿಪಡಿಸಲು ಶ್ರಮಿಸ್ತೇನೆ ಎಂದು ಹೇಳುತ್ತಾ ಕನ್ನಡಿಗರ ಮತಗಳನ್ನು ಸೆಳೆದು ಗೆದ್ದರು. ಮುಂದೆ ಕನ್ನಡ ಹೋರಾಟಗಾರರಲ್ಲಿ ಮುಂಚೂಣಿಯಲ್ಲಿದ್ದ ಕಳ್ಳಿಗೆ ಮಹಾಬಲ ಭಂಡಾರಿ ಅವರು ಮೂರು ಬಾರಿ ಗೆಲುವು ಸಾಸಿದರು- ಕೇವಲ ಕನ್ನಡದ ಬ್ರಾಂಡ್‌ನೊಂದಿಗೆ. ಇವರೆಲ್ಲರೂ ಗೆದದ್ದು ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದಲೇ.

    ಕಾಸರಗೋಡು ವಿಧಾನಸಭಾ ಕ್ಷೇತ್ರದಿಂದ ನ್ಯಾಯವಾದಿ ಯು.ಪಿ. ಕುಣಿಕುಳ್ಳಾಯ ಅವರು ಸಂಯುಕ್ತ ಕರ್ನಾಟಕ ಪ್ರಾಂತೀಕರಣ ಸಮಿತಿ ನೇತೃತ್ವದಲ್ಲಿ ಸ್ಪìಸಿ ಒಂದು ಬಾರಿ  ಗೆಲುವು ಕಂಡಿದ್ದರು.

    ಏನೇ ಆದರೂ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ ವಿಷಯದಲ್ಲಿ ಕಿಂಚಿತ್ತೂ ಯಶಸ್ಸು ಸಾಸಲಾಗಲಿಲ್ಲ. ಇದಕ್ಕೆ ಕರ್ನಾಟಕ ಸರಕಾರವೂ ಸೂಕ್ತವಾಗಿ ಸ್ಪಂದಿಸದಿರುವುದು ಒಂದು ಕಾರಣ. ಆದರೆ ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸಲು, ಕನ್ನಡದ ಮಾನ ರಕ್ಷಿಸಲು ಈ ಸಂಘಟನೆಯ ಪಾತ್ರ ಮಹತ್ತರವಾದುದು. ಈಗಲೂ ಇಲ್ಲಿ ಕನ್ನಡ ಪ್ರಬಲವಾಗಿಯೇ ಇದೆ.


   Share your views-post your Comment below
   blog comments powered by Disqus
   ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
   • Copyright @ 2009 Udayavani.All rights reserved.
   • Designed & Hosted By 4cplus