Friday, December 19, 2014
Last Updated: 1:20:59 AM IST
 • ನಾನೆಲ್ಲಿರುವೆ:
 • ಮುಖಪುಟ ಪಯಣ
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
  • ಬಿಜ್ಜನಳ್ಳಿಯೇ ಬಿಜಾಪುರವಾಯಿತೇ ?


   • ಇತಿಹಾಸದ ಪುಟ ತೆರೆದಾಗ ಬಿಜಾಪುರದ ಪುರಾತನ ಹೆಸರು "ಬಿಜ್ಜನಳ್ಳಿ'ಯೆಂದೂ ಬಳಿಕ "ವಿಜಯಾಪುರ' ಎಂದಾಯಿತೆಂಬ ಉಲ್ಲೇಖಗಳು ನಮಗೆ ಕಾಣಸಿಗುತ್ತವೆ.

    ಕ್ರಿ.ಶ. ಆರರಿಂದ ಒಂಭತ್ತನೆಯ ಶತಮಾನದ ತನಕ ಇದು ಬಾದಾಮಿಯ ಚಾಲುಕ್ಯರ ಆಡಳಿತದಲ್ಲಿತ್ತೆಂದು ಶಾಸನಗಳಿಂದ ತಿಳಿದುಬರುವುದು.

    ಕ್ರಿ.ಶ. 1199ರಲ್ಲಿ ವಿಜಯಪುರ ತದ್ದೇìವಾಡಿಯ ಭಾಗವಾಗಿತ್ತೆಂದು ಗುರುತಿಸಲಾಗಿದೆ. ಬಾದಾಮಿಯ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಮಳಖೇಡದ ಕಲಚೂರ್ಯರು, ದೇವಗಿರಿಯ ಯಾದವರು, ಆದಿಲ್‌ಶಾಹಿಯ ಸುಲ್ತಾನರು, ಮರಾಠಾ ಪೇಶ್ವೆಗಳು, ಕೊನೆಗೆ ಬ್ರಿಟಿಷ್‌ರಿಂದ ಆಳಿಸಿಕೊಂಡ ಇಂದಿನ ಬಿಜಾಪುರ ಇತಿಹಾಸದ ಪುಟದಲ್ಲಿ ತನ್ನದೇ ಆದ ಗತ್ತು-ಗಮ್ಮತ್ತಿನ-ಕಿಮ್ಮತ್ತಿನ ಗತವೈಭವದ ಪ್ರಗತಿದಾಯಕ ಜಾತಕವನ್ನು ಹೊಂದಿದೆ.

    ಬಿಜಾಪುರದ ಗರ್ಭದಲ್ಲಿ ಅಂದಿನ ಕುಗ್ರಾಮಗಳಾದ ಕಾತರಕೇರಿ, ಕುಜನಕುಟ್ಟಿ , ಕುರುಬನಹಟ್ಟಿ , ಗಜಕನಹಳ್ಳಿ, ಬಜಕನಹಳ್ಳಿ, ಕ್ಯಾದಗಿ, ಚಂದನಕೇರಿ ಎಂಬ ಹೆಸರಿನ ಏಳು ಗ್ರಾಮಗಳು ಸೇರಿ "ಬಿಜಾಪುರ'ವಾಯಿತೆಂದು ಹೇಳುತ್ತಾರೆ.

    ಮಹ್ಮದಪುರ, ವಿಜಯಾಪುರ, ವಿದ್ಯಾಪುರವೆಂದು ಕರೆಯುತ್ತಿದ್ದ ಕಾಲವೊಂದಿತ್ತು. ಅದು ಕಾಲಕ್ರಮೇಣ ಜನತೆಯ ಬಾಯಿಚಟದಿಂದ ಬಿಜಾಪುರ, ವಿಜಾಪೂರವೆಂದು ಕರೆಯಿಸಿಕೊಳ್ಳತೊಡಗಿದೆ.

    ಬಿಜಾಪುರ ತಲುಪುವುದೆ ಹೇಗೆ ?

    ಹುಬ್ಬಳ್ಳಿ-ಸೊಲ್ಲಾಪುರ ಬ್ರಾಡ್‌ಗೆàಜ್‌ ರೈಲು ಮಾರ್ಗವಾಗಿ ಬಂದು ಬಿಜಾಪುರ ತಲುಪಬಹುದು. ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಇದು 500 ಕಿ.ಮೀ. ದೂರದಲ್ಲಿದೆ. ರಸ್ತೆ ಸಾರಿಗೆ ಮೂಲಕವೂ ಈ ಜಿಲ್ಲೆಯನ್ನು ಪ್ರವೇಶಿಸಬಹುದು.

    ಇದರ ಸುತ್ತ-ಮುತ್ತಲಿರುವ ಗುಲಬರ್ಗಾ, ರಾಯಚೂರು, ಬಳ್ಳಾರಿ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳ ಮುಖಾಂತರ ಇಲ್ಲಿಗೆ ತಲುಪಬಹುದು. ರಾಷ್ಟ್ರೀಯ ಹೆದ್ದಾರಿ-13 ಮತ್ತು ಕೃಷ್ಣಾ , ಭೀಮಾ, ಡೋಣಿ ನದಿ ಇಲ್ಲಿ ಹರಿದಿವೆ.


   Share your views-post your Comment below
   blog comments powered by Disqus
   ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
   • Copyright @ 2009 Udayavani.All rights reserved.
   • Designed & Hosted By 4cplus