ಮಾ. ವೆಂ. ಸ. ಪ್ರಸಾದ್ | Jan 20, 2013
ಪ್ರಜಾಪ್ರಭುತ್ವದ ಅತಿ ಮುಖ್ಯ ಧನಾತ್ಮಕ ಅಂಶಗಳಲ್ಲಿ, ಈ ದೇಶದ ಕನಿಷ್ಟ ಪ್ರಜೆಯೂ ಪ್ರಧಾನ ಮಂತ್ರಿಯ ಸ್ಥಾನ ಏರಬಹುದಾದ ವ್ಯವಸ್ಥೆ ಎಂದು ವರ್ಣಿಸುವುದನ್ನು ಕೇಳಿದ್ದೇವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಚುನಾವಣೆ ದುಬಾರಿಯಾಗಿದೆ. ಚುನಾವಣೆಗೆ ನಿಲ್ಲುವುದು ಕೂಡ ಜನಪ್ರತಿನಿಧಿಯ ಬಂಡವಾಳವನ್ನು ಬಯಸುತ್ತದೆ. ಹಾಗಾಗಿ ಸಾಮಾನ್ಯ ಮನುಷ್ಯ ಹಾಗೂ ಆಡಳಿತ ಪರಸ್ಪರ ವಿರುದ್ಧ ಪದಗಳಾಗಿವೆ. ಸಮಾಜದ ಕೆನೆಪದರದ ಜನ ಅಧಿಕಾರಕ್ಕೆ ತೆರಳುವುದರಿಂದಲೇ ಬಡ ಜನರ ಚಿಂತನೆಗಿಂತ ಸರ್ಕಾರದ ಜವಾಬ್ದಾರಿಗಳನ್ನು ತಗ್ಗಿಸಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗುತ್ತಿದೆಯೇ ಎಂಬ ಅನುಮಾನ ಬರುತ್ತದೆ. 2013ರ ಜನವರಿ ಒಂದರಿಂದ ಜಾರಿಗೆ ಬರಲಿರುವ ಆಧಾರ್ ಆಧಾರಿತ ನೇರ ಸಹಾಯಧನ ವರ್ಗಾವಣೆ (ಎಇಸಿಟಿ) ಎಂಬ ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ಕನಸಿನ ಕೂಸು ಆ ನಿಟ್ಟಿನಲ್ಲಿಯೇ ಸಾಗಿದೆ.
ಈ ಯೋಜನೆಯನ್ನು ತೀರಾ ಸರಳವಾಗಿ ವಿವರಿಸುವುದಾದರೆ, ದೇಶದ ಪ್ರತಿಯೊಬ್ಬ ಪ್ರಜೆಗೂ ನೀಡಬೇಕಾದ ಕೇಂದ್ರ ಹಾಗೂ ರಾಜ್ಯ ಗಳ ಸಹಾಯಧನಗಳನ್ನು ನೇರವಾಗಿ ಆತನ ಬ್ಯಾಂಕ್ ಖಾತೆಗೆ ವರ್ಗಾಯಿಸುವುದು. ಇದು ಪಡಿತರದಿಂದ ಆರಂಭಿಸಿ ವಿಧವಾ ವೇತನದವರೆಗೆ! ದೇಶದಲ್ಲಿ ಪ್ರತಿ ಯೋಜನೆಯಲ್ಲಿ ಅಪಾತ್ರರು ಕೂಡ ನೋಂದಣಿಗೊಂಡಿದ್ದು, ಈ ಸಂಖ್ಯೆಯನ್ನು ಕಡಿತಗೊಳಿಸುವುದು, ಸಬ್ಸಿಡಿ ವರ್ಗಾವಣೆಯಲ್ಲಿ ಅತಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದ್ದು ಅದಕ್ಕೆ ಕಡಿವಾಣ ಹಾಕುವುದು ಈ ನಿರ್ಧಾರಕ್ಕೆ ಕಾರಣ ಎಂದು ಸರ್ಕಾರ ಪ್ರತಿಪಾದಿಸುತ್ತಿದೆ.
ಏಕಾಏಕಿ ಈ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರುತ್ತಿಲ್ಲ. ಜನವರಿಯಲ್ಲಿ ದೇಶದ 15 ರಾಜ್ಯಗಳ 51 ಜಿÇÉೆಗಳಲ್ಲಿ ಪ್ರಾಯೋಗಿಕವಾಗಿ ಇದು ಜಾರಿಗೆ ಬಂದಿದೆ. ಅಷ್ಟಕ್ಕೂ ಇದು 2011-12ರಲ್ಲಿಯೇ ದೇಶದ ಕೆಲವು ಆಯ್ದ ಭಾಗಗಳಲ್ಲಿ ಪರೀಕ್ಷೆಗೆ ಒಳಪಟ್ಟಿದೆ. ರಾಜಸ್ತಾನದ ಅಲ್ವಾರ್‌ನ ಒಂದು ಭಾಗದಲ್ಲಿ 2011ರ ಡಿಸೆಂಬರ್‌ನಲ್ಲಿಯೇ ಸೀಮೆಎಣ್ಣೆ ಸಹಾಯಧನವನ್ನು ನೇರವಾಗಿ ಬಿಪಿಎಲ್ ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲು ಆರಂಭಿಸಲಾಯಿತು.
ಯೋಜನೆ ಜಾರಿಗೆ ಬಂದ ಮುಂದಿನ ತಿಂಗಳುಗಳಲ್ಲಿ ಅನುಕ್ರಮವಾಗಿ ಶೇ. 79 ಹಾಗೂ 82ರ ಪ್ರಮಾಣದಲ್ಲಿ ಮಾರಾಟ ಕುಸಿಯಿತು. ಸರ್ಕಾರ ಈ ಪ್ರಮಾಣದಲ್ಲಿದ್ದ ನಕಲಿ ಬಿಪಿಎಲ್ ಕಾರ್ಡ್ ದಾರರನ್ನು ಗುರ್ತಿಸಲಾಗಿದೆ ಎಂದು ಬೀಗುವ ಪರಿಸ್ಥಿತಿ ಇಲ್ಲ. ಮಾರುಕಟ್ಟೆ ದರ 44.50 ರೂ. ಕೊಟ್ಟು ಬಡವ ಸೀಮೆಎಣ್ಣೆ ಖರೀದಿಸಲು ಅವನಲ್ಲಿ ಹಣ ಸಾಮರ್ಥ್ಯ ಬರಬೇಕಲ್ಲವೇ? ಸಬ್ಸಿಡಿ ದರದÇÉಾಗಿದ್ದರೆ 13ರಿಂದ 14 ರೂ.ಗೆ ಇದು ಸಿಗುತ್ತಿತ್ತು. ಹೋಗಲಿ, ತತ್‌ಕ್ಷಣಕ್ಕಾದರೂ ಸಹಾಯಧನ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆಯೇ ಎಂದು ನೋಡಿದರೆ 10 ತಿಂಗಳು ಕಳೆದರೂ ಹಣ ಜಮಾ ಆಗದ ದೂರು ಕೇಳಿಬರುತ್ತಲೇ ಇವೆ.
ಜಾರ್ಖಂಡ್‌ನ 4 ಜಿÇÉೆಗಳ 12 ಭಾಗಗಳಲ್ಲಿ ಎಂಜಿಎನ್‌ಆರ್‌ಇಜಿಎ ಅರ್ಥಾತ್ ಉದ್ಯೋಗ ಖಾತ್ರಿ ಯೋಜನೆಯ ಕೂಲಿಯನ್ನು ನೇರ ಬ್ಯಾಂಕ್ ಖಾತೆಗೆ ವರ್ಗಾಯಿಸುವ ಯೋಜನೆ ಕೂಡ 2011ರ ಡಿಸೆಂಬರ್‌ನಲ್ಲಿ ಪ್ರಾರಂಭವಾಯಿತು. 2012-13ರ ಆರ್ಥಿಕ ವರ್ಷದಿಂದ ಎÇÉೆಡೆ ಈ ಮಾದರಿ ಜಾರಿಯಾಗಿದೆ. ಇಂದು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರ ನಿಂತಿದೆಯೇ ಎಂದು ಕೇಳಿದರೆ ಸಕಾರಾತ್ಮಕ ಉತ್ತರ ಕಷ್ಟ.
ನಿಜ, ಬ್ಯಾಂಕ್ ಖಾತೆ ಜೊತೆ ಆಧಾರ್‌ನ ವಿಶಿಷ್ಟ ಸಂಖ್ಯೆಯ ದಾಖಲೆಯಿಂದ ಪರಿಸ್ಥಿತಿ ಬದಲಾಗಬಹುದು. ಮೂರು ವರ್ಷಗಳ ಕೆಳಗೆ ಅರಂಭವಾದ ಆಧಾರ್ ಯೋಜನೆ ಇನ್ನೂ 250 ಮಿಲಿಯನ್ ಜನರನ್ನು ಮಾತ್ರ ನೋಂದಾಯಿಸಿದೆ. ಇವರಲ್ಲೂ ಬಹುಸಂಖ್ಯಾತರಿಗೆ ಕಾರ್ಡ್ ತರಿಸಿಲ್ಲ. ಇದರಲ್ಲಿ ಆಗಿರುವ ಅಪರಾತಪರ ಕುರಿತು ಈಗ ಮಾತನಾಡುವುದೇ ಬೇಡ. ಶೇ. 100ರಷ್ಟು ಆಧಾರ್ ಕಾರ್ಡ್ ಇಲ್ಲದಿದ್ದರೆ ನೇರ ಸಹಾಯಧನ ವಿತರಣೆ ಸಫಲವಾಗಲಿಕ್ಕಿಲ್ಲ.
ಬೇರೆ ದೇಶಗಳಲ್ಲಿ...
ಭಾರತದ ಹೆಜ್ಜೆಗಳಿಗೆ ಮುನ್ನ ವಿದೇಶಗಳ ಕತೆಯತ್ತ ಗಮನಹರಿಸಬಹುದು. ಜಮೈಕಾ, ಫಿಲಿಫೈನ್ಸ್, ಟರ್ಕಿ, ಚಿಲಿ, ಮೆಕ್ಸಿಕೋ, ಇಂಡೋನೇಯಾ, ದಕ್ಷಿಣ ಆಫ್ರಿಕಾ, ಮೊರಾಕ್ಕೋ ಹಾಗೂ ಅಮೆರಿಕಾಗಳಲ್ಲಿ ಕಂಡೀಷನಲ್ ಕ್ಯಾಷ್ ಟ್ರಾನ್ಸ್‌ಫರ್ ಸಿಸಿಟಿ ಇದೆ. ವಿಪರೀತ ಜನಸಂಖ್ಯೆಯ ತಾಪತ್ರಯ ಇಲ್ಲದ, ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ಇರುವ, ಭ್ರಷ್ಟಾಚಾರ ನಗಣ್ಯ ಪ್ರಮಾಣದಲ್ಲಿರುವ ಈ ದೇಶಗಳಲ್ಲಿ ಹಣ ವರ್ಗಾವಣೆಗೆ ಶಾಲಾ ಹಾಜರಾತಿಯಂತೆ ಮಾಹಿತಿಯನ್ನು ಆಧಾರವಾಗಿರಿಸಿಕೊಳ್ಳಲಾಗಿದೆ ಮತ್ತು ಇದು ದೊಡ್ಡ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ! ಕೇವಲ ಬ್ರೆಜಿಲ್‌ನಲ್ಲಿ ಮಾತ್ರ ಬೋಲ್ಸಾ ಫಾಲಿಯಾ ಪ್ರೋಗ್ರಾಂ ಶೇ. 100ರ ಯಶಸ್ಸು ಪಡೆದಿದೆ.
ಕೇಂದ್ರ ಸರ್ಕಾರ ಪ್ರತಿ ವರ್ಷ ಕೊಡಲಾಗುತ್ತಿರುವ ಪೆಟ್ರೋಲಿಯಂ ಪದಾರ್ಥಗಳ ಸಬ್ಸಿಡಿಯಿಂದ ತಾನೇ ಗಾಬರಿಬಿದ್ದಂತಿದೆ. 1,38,541 ಕೋಟಿ ರೂ.ಗಳ ಸಬ್ಸಿಡಿಯನ್ನು 2011-12ರಲ್ಲಿ ನೀಡಿದ್ದರೆ ಅದು ಈ ವರ್ಷ 1,89,605 ಕೋಟಿಗೆ ಏರಲಿದೆ.
ಎಲ್‌ಪಿಜಿ ಸಿಲೆಂಡರ್‌ಗೆ 503 ರೂ., ಸೀಮೆಎಣ್ಣೆಗೆ 32 ರೂ., ಡೀಸೆಲ್‌ಗೆ 13.64 ರೂ.ಗಳಷ್ಟು ಸಹಾಯ ಭರಿಸುವುದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಈ ಪದಾರ್ಥಗಳ ಮೇಲಿನ ಸಬ್ಸಿಡಿ ಮೊತ್ತ ಸಮಾಜದ ಉನ್ನತ ಆರ್ಥಿಕ ವರ್ಗಕ್ಕೂ ಲಭಿಸುತ್ತಿರುವ ಹಿನ್ನೆಲೆಯಲ್ಲಿ ಬದಲಾವಣೆ ಅಗತ್ಯ. ಆದರೆ, ಅದಕ್ಕಾಗಿ ಬಡವರ್ಗವನ್ನು ಬಲಿ ತೆಗೆದುಕೊಳ್ಳುವುದು ಎಷ್ಟು ಸರಿ?
ದೇಶದ ಬಿಪಿಎಲ್ ಕಾರ್ಡ್‌ದಾರರಿಗೆ ಸರಿಸುಮಾರು 8,600 ರೂ.ನಿಂದ 9,900 ರೂ. ಸಬ್ಸಿಡಿಯನ್ನು ಮಾತ್ರ ಆಹಾರ ಪದಾರ್ಥಗಳಿಗಾಗಿ ಕೇಂದ್ರ ಒದಗಿಸುತ್ತದೆ. ಅಷ್ಟಕ್ಕೂ ಕಳೆದ 12 ವರ್ಷಗಳಿಂದ ಪಿಡಿಎಸ್ ಧಾನ್ಯಗಳ ಬೆಲೆಯನ್ನು ಹೆಚ್ಚಿಸಿಲ್ಲ. ವರ್ಷಾಂತ್ಯಕ್ಕೆ ದೇಶದೆÇÉೆಡೆ ನೇರ ಹಣ ವರ್ಗಾವಣೆ ಜಾರಿಗೊಳಿಸಲು ಕೇಂದ್ರ ನಿರ್ಧರಿಸಿದೆ. ಅಷ್ಟೇ ಏಕೆ, ಆಧಾರ್ ಸಂಖ್ಯೆ ಇಲ್ಲದಿದ್ದರೂ ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಏಪ್ರಿಲ್ ವೇಳೆಗೆ ಎಲ್‌ಪಿಜಿ ಸಹಾಯಧನದ ಬ್ಯಾಂಕ್ ಖಾತೆಗೆ ವರ್ಗಾಯಿಸಲು, ದೇಶಾದ್ಯಂತ ಸೀಮೆಎಣ್ಣೆ ಸಬ್ಸಿಡಿಯನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಲು ಯೋಜಿಸಲಾಗುತ್ತಿದೆ.
ನೇರ ವರ್ಗಾವಣೆ ಪದ್ಧತಿ...
ತನ್ನ ವ್ಯವಸ್ಥೆಯಲ್ಲಿ ಅಡಗಿರುವ ಭ್ರಷ್ಟಾಚಾರ, ಗೊಂದಲಗಳನ್ನು ಬಗೆಹರಿಸಲು ಸರ್ಕಾರಗಳು ಜನರ ಮೇಲೆಯೇ ಹೊರೆ ಹೇರಿ ಕೈತೊಳೆದುಕೊಳ್ಳಲು ನಿರ್ಧರಿಸಿರುವುದರ ಪರಿಣಾಮ ನೇರ ನಗದು ವರ್ಗಾವಣೆ ಪದ್ಧತಿ ಜಾರಿಗೊಳ್ಳುತ್ತಿದೆ. ಬಡಜನರ ಕೊಳ್ಳುವ ಶಕ್ತಿ ಕಡಿಮೆ ಎಂದು ಸಹಾಯಧನದ ಪಡಿತರ ಕೊಡುವಾಗ, "ಈಗ ನೀನು ಪೂರ್ಣ ಹಣ ಕೊಟ್ಟು ಪಡಿತರ ತೆಗೆದುಕೋ, ಆಮೇಲೆ ನಾನು ಹೆಚ್ಚುವರಿಯಾಗಿ ಕೊಟ್ಟ ಹಣವನ್ನು ನಾನು ಮರಳಿಸುತ್ತೇನೆ' ಎನ್ನುವುದು ಸೋಗಲಾಡಿತನವಾದೀತು.
ರಾಜಸ್ತಾನ ಆಲ್ವಾರ್‌ನಲ್ಲಿ 2011ರ ಡಿಸೆಂಬರ್‌ನಲ್ಲಿ ಪಡಿತರ ಸಬ್ಸಿಡಿಯನ್ನು ಖಾತೆಗೆ ಜಮಾ ಮಾಡುವ ಮಾದರಿ ಬಂದ ಆ ತಿಂಗಳಿನಲ್ಲಿಯೇ ಸೀಮೆಎಣ್ಣೆ ಮಾರಾಟ ಶೇ. 79ರಷ್ಟು ಕುಸಿಯಿತು! 2012ರ ಜನವರಿಯಲ್ಲಂತೂ ಇದು ಶೇ. 82ರಷ್ಟು ಪಾತಾಳಕ್ಕಿಳಿಯಿತು. ಮಂಜೂರಾದ 84 ಕಿ. ಲೀ. ಸೀಮೆಎಣ್ಣೆಯಲ್ಲಿ 36 ಕಿ. ಲೀ. ಮಾತ್ರ ಮಾರಾಟವಾಯಿತು. ದುರಂತವೆಂದರೆ, ಎಂಟು ಒಂಭತ್ತು ತಿಂಗಳು ಕಳೆದರೂ ಸಬ್ಸಿಡಿ ಹಣ ಬಾರದ್ದರಿಂದ ಖರೀದಿ ಪ್ರಮಾಣ ಕುಸಿದಿದ್ದನ್ನು ಸರ್ಕಾರ ಗಮನಿಸಲೇ ಇಲ್ಲ. ಅದು ನಕಲಿ ಪಡಿತರ ಚೀಟಿಗಳ ಹಾವಳಿಯನ್ನು ಈ ಮೂಲಕ ತಾನು ಪರಿಣಾಮಕಾರಿಯಾಗಿ ನಿವಾರಿಸಿದ್ದೇನೆ ಎಂದು ಘೋಷಿಸಿತು!
ದೆಹಲಿಯ ರಾಜ್ಯ ಸರ್ಕಾರ ಸರಲ್ ಮನಿ ಯೋಜನೆಯಡಿ ನೋಂದಾಯಿತ ಕುಟುಂಬಕ್ಕೆ ಮಾಸಿಕ 600 ರೂ. ವರ್ಗಾಯಿಸುವ ಮಾದರಿಗೆ ಚಾಲನೆ ನೀಡಿದೆ. ಇಲ್ಲಿನ ರುಕ್ಸಾನಾ ಕುಟುಂಬದ ಉದಾಹರಣೆ ಸರ್ಕಾರದ ಹರಾಕಿರಿಯನ್ನು ಪ್ರದರ್ಶಿಸುತ್ತದೆ. ಕುಟುಂಬದ ಯಜಮಾನ ರುಕ್ಸಾನಾ ಹಾಗೂ ಆಕೆಯ ಮೂವರು ಮಕ್ಕಳನ್ನು ಮನೆಯಿಂದ ಹೊರಹಾಕಿ¨ªಾನೆ. ಈಗ ಆಕೆಗೆ ಪಡಿತರವೂ ಇಲ್ಲ, 600 ರೂ. ಹಣವೂ ಇಲ್ಲ. ನಮ್ಮ ಬಹುಪಾಲು ಕುಟುಂಬದಲ್ಲಿ ಅಷ್ಟಷ್ಟು ಹಣ ಮಿಕ್ಕಿಸಿ ಪಡಿತರ ಖರೀದಿಸುವವರು ಮಹಿಳೆಯರು. ಈಗ ದುಬಾರಿ ಹಣ ಕೊಟ್ಟು ಪಡಿತರ ತೆಗೆದುಕೊಳ್ಳುವುದರ ಜೊತೆಗೆ ಸಬ್ಸಿಡಿ ಹಣ ಮನೆಯ ಜೂಜುಕೋರ ಪತಿಯ ಕೈ ಸೇರುತ್ತದಾದರೆ ಸರ್ಕಾರದ ನೀತಿ ಪ್ರಶ್ನಾರ್ಹ. ನಾಳೆ ದೊಡ್ಡ ಪ್ರಮಾಣದ ಸಬ್ಸಿಡಿಯ ಮೊತ್ತ ಸರ್ಕಾರಕ್ಕೆ ಉಳಿತಾಯವಾದುದನ್ನು ಸರ್ಕಾರ ಸಾಧನೆಯೆಂದು ಹೇಳಿಕೊಂಡರೆ ಅದು ವಿಪರ್ಯಾಸವೇ ಸರಿ.
ಪಡಿತರ ವ್ಯವಸ್ಥೆಯನ್ನು ಬದಲಿಸಬೇಕಾದ ಅಗತ್ಯವಿರಲಿಲ್ಲ. ಈಗಾಗಲೇ ಬಯೋಮೆಟ್ರಿಕ್ಸ್ ದಾಖಲೆಗಳನ್ನು ತೆಗೆದುಕೊಳ್ಳಲಾಗಿದೆ. ಇದರ ಆಧಾರದಲ್ಲಿ ಪಡಿತರ ವಿತರಣೆಯನ್ನು ಜಾರಿ ಮಾಡಿದ್ದರೆ ಇಲಾಖೆಗಳ ಮಟ್ಟದÇÉಾಗಲಿ, ನ್ಯಾಯಬೆಲೆ ಅಂಗಡಿಗಳÇÉಾಗಲಿ ವಂಚನೆ ಪ್ರಮಾಣ ದೊಡ್ಡ ಮಟ್ಟದಲ್ಲಿ ಕುಸಿಯುತ್ತಿತ್ತು. ದೆಹಲಿಯಲ್ಲಿ ಬಯೋಮೆಟ್ರಿಕ್ಸ್ ಆಧಾರದಲ್ಲಿ ಕಿರಾಣಿ ಅಂಗಡಿಯಲ್ಲಿಯೂ ನಾಗರಿಕ ಪಡಿತರ ವಹಿವಾಟು ನಡೆಸುವ ವ್ಯವಸ್ಥೆಯನ್ನು ಜಾರಿಗೆ ತಂದಿರುವುದು ಈ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿ ಪರಿಗಣಿಸಬಹುದು.
ಅಷ್ಟಕ್ಕೂ ಬಡಕುಟುಂಬಗಳು ವಲಸೆ ಹೋಗುವುದು ಸಾಮಾನ್ಯ. ಎಲ್ಲಿಯವರೆಗೆ ಬ್ಯಾಂಕ್ ಖಾತೆಗಳಿಗೂ ಮೊಬೈಲ್ ಕಂಪನಿ ಬದಲಾವಣೆಗೆ ಬಂದಿರುವ ಎಂಎನ್‌ಪಿ ಮಾದರಿ ಜಾರಿಗೆ ಬರದಿದ್ದರೆ ಸಮಸ್ಯೆ ಹೆಚ್ಚುತ್ತದೆ. ಗಡಿಬಿಡಿಯಲ್ಲಿ ಯೋಜನೆಯನ್ನು ತರುವ ಮುನ್ನ ಆಧಾರ್ ಕಾರ್ಡ್ ಹಂಚಿಕೆ ಹಾಗೂ ಎಲ್ಲರಿಗೂ ಬ್ಯಾಂಕ್ ಖಾತೆ ಯೋಜನೆಯನ್ನು ಶೇ. 100ರಷ್ಟು ಜಾರಿಗೆ ತರಲು ಸರ್ಕಾರ ಮುಂದಾಗಬೇಕಿತ್ತು.
ಸುಮ್ಮನೆ ದೇಶದ ವಾಸ್ತವದ ಅಂಕಿಅಂಶಗಳನ್ನು ಗಮನಿಸಿ. ಅರುಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್‌ಗಳ 432 ಭಾಗಗಳಲ್ಲಿ ಬ್ಯಾಂಕ್‌ಗಳೇ ಇಲ್ಲ. ಕ್ಲಿಯರಿಂಗ್ ಹೌಸ್, ಕರೆನ್ಸಿ ಚೆಸ್ಟ್ ಕೇಳಬೇಡಿ. ಕೊನೆಗೆ ಮೈಕ್ರೋ ಎಟಿಎಂ ನೆಟ್‌ವರ್ಕ್ ಕೂಡ ಇಲ್ಲ. ಇದಕ್ಕೆ ಪರಿಹಾರ ಎಂಬಂತೆ ಸರ್ಕಾರ ಹಾಗೂ ಬ್ಯಾಂಕ್ ಸೇರಿ ಬ್ಯುಸಿನೆಸ್ ಕರೆಸ್ಪಾ$ಂಡೆಂಟ್‌ಗಳನ್ನು ನೇಮಿಸುತ್ತದೆ. ಈ ಮೈಕ್ರೋ ಎಟಿಎಂ ಎಂಬ ಬ್ಯಾಂಕ್‌ಗಳ ಬ್ಯುಸಿನೆಸ್ ಕರೆಸ್ಪಾಂಡೆಂಟ್ ಕೈಯಲ್ಲಿ ಹಿಡಿದು ಸಾಗಬಲ್ಲ ಬಯೋಮೆಟ್ರಿಕ್ಸ್ ಉಪಕರಣ ಒಯ್ಯುತ್ತಾನೆ. ಆತ ನಾಗರಿಕರ ಖಾತೆಯ ಹಣ ತರಿಸುತ್ತಾನೆ. ಇದೆÇÉಾ ಸರಿ, ಹಣ ತರಿಸುವಾಗ ಆತ ಲಂಚ ಕೇಳುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ?