Sunday, May 19, 2013
Last Updated: 3:19:57 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಗುರು ಎಂದರೆ ಅನುಭವ ಅನುಗ್ರಹ
    • ಗುರು ಅಲಿ ಅಕºರ್‌ ಖಾನ್‌ ಅವರಿಗೆ ತಾನ್‌ಪುರ ಸಾಥಿ ನೀಡುತ್ತಿರುವ ರಾಜೀವ್‌.

      • ಪಂ| ರಾಜೀವ ತಾರಾನಾಥ | Jan 20, 2013

        ಸಂಗೀತ, ನೃತ್ಯ, ಚಿತ್ರಕಲೆಗಳಂಥ ಕಲಾ ಪ್ರಕಾರಗಳು ಮತ್ತು ಸಾಹಿತ್ಯ ಎಲ್ಲಿ ಜೀವಂತವಿರುತ್ತದೆಯೋ  ಅಲ್ಲಿಯ ಸಮಾಜವೂ ಜೀವಂತವಾಗಿ ಉಸಿರಾಡುತ್ತ ಇರುತ್ತೆ. ಅಂಥಲ್ಲಿ ಒಳ್ಳೆಯ ಸಂಸ್ಕತಿ ಬೆಳೆಯುತ್ತೆ.  ಜೀವಂತವಿಲ್ಲದ ಸಮಾಜಕ್ಕೆ ಕಲೆ, ಸಾಹಿತ್ಯ ಎಲ್ಲ ಬೇಕಾಗುವುದಿಲ್ಲ, ನೇರವಾಗಿ ಬೇಡ ಎನ್ನದೇ, ಅದು ಬೇರೆ ಭಾಷೆಯಲ್ಲಿ ಮಾತಾಡುತ್ತೆ. "ಅದ್ಕೆಲ್ಲ ನಮಗೆಲ್ಲಿದೆ ಟೈಮು', 'ತುಂಬ ಕೆಲಸ' ಅಂತ ಹೇಳ್ತೀವಿ, ಆಗ ಬರಿಯ ದುಡ್ಡಿನ ಸದ್ದು, ದುಡ್ಡಿನ ಭಾಷೆ ಮಾತ್ರ ಇರುತ್ತೆ.

        ...ಹೀಗೆನ್ನುವ ಪಂಡಿತ್‌ ರಾಜೀವ ತಾರಾನಾಥರು ಸಂಗೀತ-ಸಾಹಿತ್ಯ ಎರಡನ್ನೂ ಸಮನ್ವಯ ಭಾವದಲ್ಲಿ ಸ್ವೀಕರಿಸಿದವರು. ಅವರ ಬೆರಳುಗಳು ಸರೋದ್‌ ನುಡಿಸುತ್ತಿರುತ್ತವೆ.

        ಹೃದಯ ಮಾನವೀಯತೆಯನ್ನು ಮಿಡಿಯುತ್ತಿರುತ್ತದೆ. ನೆನಪಿನ ತಂತಿಯನ್ನು ಮೀಟಿದರೆ ಎಂದೋ ಓದಿದ ಸಂಸ್ಕೃತದ ರಘುವಂಶ, ರಾಮಾಯಣ, ಮಹಾಭಾರತ, ಅಮರಕೋಶ, ಭಗವದ್ಗೀತೆ, ರಸೆಲ್‌, ಶೇಕ್ಸ್‌ಪಿಯರ್‌, ಎಲಿಯೆಟ್‌ ಎಲ್ಲವೂ ಅವರ ಮಾತಿನಲ್ಲಿ ಅಷ್ಟೇ ಸ್ಪಷ್ಟವಾಗಿ ಹೊಮ್ಮುತ್ತದೆ. ಪಂಡಿತ್‌ ರಾಜೀವರಿಗೆ ತಮ್ಮ ಗುರು ಉಸ್ತಾದ್‌ ಅಲಿ ಅಕºರ್‌ ಖಾನ್‌ರೆಂದರೆ ದೇವಸಮಾನ. ಕೆಲಸಮಯದ ಹಿಂದೆ 80 ವಸಂತಗಳನ್ನು ಪೂರೈಸಿದ ಪಂಡಿತ್‌ ರಾಜೀವರಿಗೆ ಮೈಸೂರಿನಲ್ಲಿ ಅವರ ಅಭಿಮಾನಿಗಳು ಸೇರಿ ಒಂದು ಸರಳ ಅಭಿನಂದನ ಸಮಾರಂಭ ಇಟ್ಟುಕೊಂಡಿದ್ದರು. ಈ ಸಂದರ್ಭದಲ್ಲಿ ಅವರು ಹನಿಗಣ್ಣಾಗಿ ನೆನೆದಿದ್ದು ತಮ್ಮ ಗುರುಗಳನ್ನು. 'ಗುರು' ಎಂಬ ಅನುಭವ ಕಥನ ಆ ಸಂಜೆಯನ್ನು  ಇಬ್ಬನಿಯಂತೆ ಇಡಿಯಾಗಿ ಆವರಿಸಿತ್ತು.  

        ನಾನು ಮೈಸೂರಿನಲ್ಲಿ ಓದುತ್ತಿದ್ದಾಗ‌ "ಇನ್‌ವರ್ಡ್‌ನೆಸ್‌' ಅನ್ನೋ ಒಂದು ಪದವನ್ನು ನಮ್ಮ ಪ್ರೊಫೆಸರ್‌ ಸಿ.ಡಿ.ಎನ್‌. ಬಹಳ ಹೇಳ್ತಿದ್ದರು. ಭಾಷೆಯ ಜೊತೆ ನನಗೆ ಹಾಸಿಗೆಯಲ್ಲಿ ಮಲಗಿದಷ್ಟು ಸರಳವಾಗಿ ಒಲಿಸಿಕೊಳ್ಳುವ ಸಲಿಗೆ ಇರಲಿಲ್ಲ, ನಾನು ಕೊಂಕಣಿ-ತಮಿಳಿಗ. ನನಗೆ ಕನ್ನಡದ ಇನ್‌ವರ್ಡ್‌ನೆಸ್‌ ಬರಲಿಲ್ಲ, ಚಂದ್ರಶೇಖರ ಕಂಬಾರರು ಹೇಗೆ ಕನ್ನಡ ಭಾಷೆಯಲ್ಲಿ ಆ ಶಕ್ತಿಯನ್ನು ಕಂಡುಕೊಂಡರೋ ಹಾಗೆ ಅದು ನನಗೆ ಯಾವ ಭಾಷೆಯಲ್ಲಿಯೂ ಒದಗಲಿಲ್ಲ, ಕೊಂಕಣಿಗರು ನನ್ನ ಪ್ರೀತಿಸಲಿಲ್ಲ, ತಮಿಳಿಗರು ಪ್ರೀತಿಸುವುದಿಲ್ಲ, ಆದರೆ, ಕನ್ನಡದವರು ನನಗೆ ಪ್ರೀತಿಕೊಟ್ಟರು. ಕಂಬಾರರು, ನನ್ನ ಜೊತೆಗಿದ್ದ ಇನ್ನಿತರ ಗೆಳೆಯರೆಲ್ಲರೂ ಕನ್ನಡದಲ್ಲಿ ಸಲೀಸಾಗಿ, ಸರಳವಾಗಿ ಬರೆದಂತೆ ನಾನು ಬರೆಯಲು ಹೊರಟರೆ ಅದು ಸಂಸ್ಕೃತಭರಿತವಾಗಿರುತ್ತಿತ್ತು, ಓದಿದರೆ ಬಾಯಿತೊಳೀಬೇಕು ಅನ್ನೋ ಹಂಗೆ ! ಯಾರೋ ನಾನು ಬರೆದಿದ್ದನ್ನೆಲ್ಲ ಪ್ರಕಟಿಸುವುದಾಗಿ ಹೇಳಿದಾಗ, "ರಬ್ಬಿಶ್‌' ಅಂತನ್ನಿಸಿತು. "ಬೇಡ' ಅಂದೆ.

        ಜಗತ್ತಿನ ಜೊತೆ, ಜೀವನದ ಜೊತೆ ನೀವು ಯೋಚನೆ ಮಾಡಿ, ವಿಮರ್ಶೆ ಮಾಡಿ ಒಂದು ಸಂಬಂಧವನ್ನು ಕಲ್ಪಿಸಿಕೊಳ್ತೀರಿ. ಸಂಬಂಧ ಏರ್ಪಡಲಿ ಅಂತ ಕಾಯ್ತಾ ಕೂತಿದ್ರೆ, ಸಂಬಂಧವಾಗಿದ್ದೇ ನಿಮಗೆ ಗೊತ್ತಾಗದೇ ಹೋಗಬಹುದು. ಒಂದು ಭಾಷೆಯಲ್ಲಿ ಹುಟ್ಟಿ , ಬೆಳೆದು, ಅದರಲ್ಲಿಯೇ ನೆಂದು ಹೋಗಿ, ಬರೆಯುವ ಸುಯೋಗ ನನಗೆ ಒದಗಿಬರಲಿಲ್ಲ. ಬಾಲ್ಯದಲ್ಲಿ ನನ್ನ ಸುತ್ತ ಬೇರೆ ಬೇರೆ ಭಾಷೆ ಕೇಳುತ್ತ ಬೆಳೆದಿದ್ದೆ. ಕೊಂಕಣಿ ಭಾಷೆಯ ನನ್ನ ಅಪ್ಪಮತ್ತು ತಮಿಳು ಭಾಷೆಯ ನನ್ನ ಅಮ್ಮ ಇಂಗ್ಲಿಷ್‌ನಲ್ಲಿಯೇ ಮಾತನಾಡುತ್ತಿದ್ದರು. ಅವರ ಜಗಳ, ಪ್ರೀತಿ ಎಲ್ಲವೂ ಇಂಗ್ಲಿಷ್‌ನಲ್ಲಿಯೇ. ಆದರೆ ತುಂಬ ಉತ್ತಮವಾದ ಇಂಗ್ಲಿಷ್‌, ನಿಜಕ್ಕೂ ಅವರು ಷೇಕ್ಸ್‌ಪಿಯರ್‌ನ ಮಕ್ಕಳು! ಚಿಕ್ಕಂದಿನಲ್ಲಿ ನನ್ನ ಸುತ್ತಮುತ್ತ ಇದ್ದವರು ಬಹಳ ದೊಡ್ಡ ಜನರು. ನನ್ನ ಮೇಲೆ 1000 ಕ್ಯಾಂಡಲ್‌ ಪ್ರಖರ ಬೆಳಕು ಬೀಳುತ್ತಲೇ ಇರುವಂತೆ... ನಾನು ತಬ್ಬಿಬ್ಟಾಗುತ್ತಿದ್ದೆ. ಹಾಗೆ ತಬ್ಬಿ ಬ್ಟಾದಾಗ ನಾನು ತಬ್ಬಿಕೊಂಡಿದ್ದು ಈ ಸಂಗೀತವನ್ನು. ಹಾಗೆ ಸಂಗೀತಕ್ಕೂ ನನಗೂ ಒಂದು ಖಾಸಗಿಯಾದ ಸಂಬಂಧ ಹುಟ್ಟಿಕೊಂಡಿತು. ನನಗೆ ಆಗ ಖಾನ್‌ ಸಾಹೇಬರು ಸಿಕ್ಕಿದ್ರು. ಸಂಗೀತದಿಂದಾಗಿ "ಗುರು' ಅಂದರೆ ಏನು ಅಂತ ಗೊತ್ತಾಯಿತು. ನಿಜವಾಗಿ ನಾನು ಉದ್ಧಟನಾಗಿದ್ದೆ, ನನ್ನ ಗುರು ಆ ಉದ್ಧಟತನ ಸವೆದುಹೋಗುವಂತೆ ಮಾಡಿದರು.

        ನಾನು ಸ್ವಲ್ಪ$ದಾರಿತಪ್ಪಿದ್ದೆ. ಸಾಹಿತ್ಯಕ್ಕೆ ಬಂದಿದ್ದೆ. ಲೆಕ್ಚರರ್‌ ಆಗಿದ್ದೆ. ಜೀವನದಲ್ಲಿ ತುಂಬಾನೇ ಓದಿದ್ದೆ. ಅಂದ್ರೆ ನಾನು ಓದಿದ್ದೆ ಅಂತ ಅಂದೊRಂಡಿದ್ದೆ. ನವ್ಯಸಾಹಿತ್ಯ ಉದ್ಧಟ ಸಾಹಿತ್ಯ ಎನ್ನಬಹುದು. (ನಾಳೆ ಯಾರಾದರೂ ನನ್ನನ್ನು ಆಕ್ಷೇಪಿಸಬಹುದು!) ನಾವೆಲ್ಲ ಆಗ ಟಿ. ಎಸ್‌. ಎಲಿಯೆಟ್‌ ಬಗ್ಗೆ ಹುಚ್ಚಾಗಿದ್ವಿ. ಅವನು ಪಾಶ್ಚಾತ್ಯ ಸಾಹಿತ್ಯದಲ್ಲಿ ಹೊಸ ಅಲೆಯನ್ನು ಎಬ್ಬಿಸಲು ಕಾರಣನಾದ ಬರಹಗಾರ. ಅವನ ಯೋಚನಾಕ್ರಮ ಭಿನ್ನವಾದುದು. ಆತ ಪರಂಪರೆಯಲ್ಲಿ ತನ್ನ "ಜಾಗ' ಕಂಡುಕೊಳ್ಳಲು ಪ್ರಯತ್ನಿಸಿದ. ಆ ಪ್ರಯತ್ನದಲ್ಲಿ ಮಿಲ್ಟನ್‌ನಂಥ ಪೂರ್ವಜರು ತಮ್ಮ ಜಾಗೆಯಿಂದ ಏಳದ ಹೊರತು ನಾನೆಲ್ಲಿ ಕೂಡಲಿ ಅನ್ನೋ ಇಂಗಿತ ವ್ಯಕ್ತಪಡಿಸಿದ.

        ಹಾಗೆ, ಮೊನ್ನೆ ಒಬ್ಬರು ನನಗೆ ಬಹಳ ಬೇಕಾದವರೇ, ನನ್ನ ಗುರುವಿನ ಕುರಿತು ಅಂಥದ್ದೇ ಒಂದು ಮಾತನ್ನು ನಾನು ಅವರಿಗೆ ಹೇಳಿದ್ದೆ ಅಂತ ಹೇಳಿದ್ರು. ಗುರು ಆ ಜಾಗದಿಂದ ಕದಲದ ಹೊರತು ನಾನು ದೊಡ್ಡ ಸಂಗೀತಗಾರ ಆಗಲಾರೆ ಅಂತ ನಾನು ಅವರಲ್ಲಿ ಹೇಳಿದೆ ಅಂತ ಅವರು ಬರೆದರು. ಅದು ಕಾರಣವಿಲ್ಲದ ಕೆಟ್ಟತನ, ಆಮೇಲೆ ಅನ್ನಿಸಿತು, ಕೆಟ್ಟವಾಸನೆ ಬಂದರೆ ಅದನ್ನು ತೆಗೆಯುವುದು ಮುನ್ಸಿಪಾಲಿಟಿಯವರ ಕೆಲಸ, ನನ್ನ ಕೆಲಸ ಏನಿದ್ದರೂ ಗುರು ಕೊಟ್ಟ ಸರೋದ್‌ ನುಡಿಸೋದಷ್ಟೆ ಅಂದೊRಂಡು ಸುಮ್ಮನಾದೆ.

        ಕಾಳಿದಾಸ ಒಂದು ಕಡೆ ಹೇಳ್ತಾನೆ, ಮಣೌ ವಜ್ರ ಸಮುತ್ತೀರ್ಣೇ ಸೂತ್ರಸ್ಯೆàವಾಸ್ತಿ ಮೇ ಗತಿಃ ಅಂತ. ಅಂದ್ರೆ ವಜ್ರದ ಮಣಿಗಳ ಹಾರದಲ್ಲಿ ನಾನೊಂದು ದಾರವಾಗಿದ್ದೀನಿ ಅಂತ, ಎಂತಹ ದೈನ್ಯ... ಎಂತಹ ಭಕ್ತಿ... ಹೀಗೆ ತನ್ನ ಹಿಂದಿನ ಪರಂಪರೆಯ ಎಲ್ಲರಿಗೂ ನಮನ ಮಾಡಿ ಮುಂದೆ ಹೋಗುವುದು ನಮ್ಮ ಹಿಂದಿನ ಸಾಹಿತ್ಯದಲ್ಲಿ ಇತ್ತು. ಕಾಳಿದಾಸ ಇನ್ನೂ ಮುಂದುವರೆದು ಉದ್ದಕ್ಕಿರುವವರಿಗೆ ಸಿಗುವ ಹಣ್ಣಿಗಾಗಿ ವಾಮನನಾದ ತಾನು ಆಸೆ ಪಡುತ್ತಿರುವೆ ಎಂದು ಸ್ವನಿಂದೆ ಮಾಡಿಕೊಳ್ಳುತ್ತಾನೆ. ಈ ಸಂಸ್ಕೃತಿಯಲ್ಲಿ ಒಂದೆಡೆ ಇಂಥ ನಿಲುವು ಇದೆ, ಇನ್ನೊಂದೆಡೆ ಎಲಿಯಟ್‌ನಂಥ ನವ್ಯರ ನಿಲುವು ಇದೆ.

        ಈ ಸಂಗೀತದಿಂದಾಗಿ ಗುರು ಅಂದರೆ ಏನು ಎಂಬ ಅನುಭವ ನನಗೆ ದಕ್ಕಿತು. ಗುರು ಎಂದರೆ ಟಾಪ್‌ಲೆಸ್‌ ಸ್ವಾಮಿಯ ಹಾಗಲ್ಲ. ಗುರು ಎಂದರೆ ಹೊಟ್ಟೆಯಾಳದಿಂದ ಬರುವ ಅನುಭವ. ಹಾಗೆ ಜನರ ಮುಂದೆ ನುಡಿಸುವ ಮೊದಲು ""ಏನಪಾ ಗುರು, ಇದು ನೀನೇ ಕೊಟ್ಟಿದ್ದು, ಒಳ್ಳೇದೋ ಕೆಟ್ಟಧ್ದೋ ನಿನಗೇ ಬಿಟ್ಟಿದ್ದು' ಎಂದರೆ ಒಂದು ಭರವಸೆ ದಕ್ಕುತ್ತೆ. ಇದು ಸಾಹಿತ್ಯದಲ್ಲಿ ಈಗ ಇಲ್ಲ. ಹಿಂದೆ ಇತ್ತು. ಗುರು ಎಂಬ ಆ ಆರಾಮ ಭಾವನೆ, ಆ ಅನುಭವ ಪದಗಳಿಗೆ ನಿಲುಕದ್ದು. ರಾಗವೊಂದನ್ನು ನುಡಿಸುವಾಗ ""ಇದು ಅವರಿಂದ ತೆಗೆದುಕೊಂಡಿದ್ದು, ಚೆನ್ನಾಗಿದ್ರೂ ಅವರದ್ದೇ ಕೆಟ್ಟರೂ ಅವರದೇ' ಎಂದುಕೊಂಡರೆ ರಾಗ ಸಲೀಸಾಗಿ ಅರಳಿ ನಿಲ್ಲುತ್ತೆ. ನನ್ನ ಗುರು ಮೇರು ಪರ್ವತ, ಅವರೇ ನನ್ನ ಹಿಂದೆ ಇದ್ದ ಮೇಲೆ ನನಗಿನ್ನು ಏನು ಬೇಕು...
        ಎಂದರೋ ಮಹಾನುಭಾವುಲು, ಅಂದ‌ರಿಕಿ ವಂದನಾಲು ಹಾಗೆ ನನ್ನ ಗುರುಗಳು ಬಹಳ ದೊಡ್ಡ ಮಹಾನುಭಾವರು! ಇದರ ಮೇಲೆ ಗುರು ಅಂದರೆ ಏನು ಅಂತ ವ್ಯಾಖ್ಯೆ ಮಾಡುವುದು! ಗುರು ಅಂದರೆ ಅದೊಂದು ಅನುಭವ, ಅದೊಂದು ಅನುಗ್ರಹ... ಅದು ನನಗೆ ಸಂಗೀತದಿಂದ ದಕ್ಕಿತು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picವಿಷು ಇಡೀ ದೇಶದ ಹಬ್ಬ. ಭಾರತೀಯ ಸಂಸ್ಕೃತಿ ಕೃಷಿಯೊಂದಿಗೆ ತಳುಕು ಹಾಕಿಕೊಂಡಿರುವುದರ ಸಂಕೇತವಾಗಿ ಈ ಹಬ್ಬ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದೆ...
      image
      image
      • Copyright @ 2009 Udayavani.All rights reserved.
      • Designed & Hosted By 4cplus