Thursday, June 20, 2013
Last Updated: 8:21:52 AM IST
  • ನಾನೆಲ್ಲಿರುವೆ:
  • ಮುಖಪುಟ Supplements ಜೋಶ್
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಆ ರಾತ್ರಿಯ ಕತೆಗೊಬ್ಬ ಹೀರೋ ಇದ್ದ
    • ಅಲ್ಲಿಂದೆದ್ದು ಓಡಿದ ಅವನಿಗೆ ಚಳಿಜ್ವರ ಬಂತು! .....ಹೀಗಾದ ಮೇಲೆ ಕಂಪ್ಯೂಟರ್‌ ರೂಮ್‌ ಅಷ್ಟೇ ಅಲ್ಲ ಶಾಲೆಯಲ್ಲೂ ಮಲಗುವುದ

      • Udayavani | Jan 21, 2013

        ಅಲ್ಲಿಂದೆದ್ದು ಓಡಿದ ಅವನಿಗೆ ಚಳಿಜ್ವರ ಬಂತು! .....ಹೀಗಾದ ಮೇಲೆ ಕಂಪ್ಯೂಟರ್‌ ರೂಮ್‌ ಅಷ್ಟೇ ಅಲ್ಲ ಶಾಲೆಯಲ್ಲೂ ಮಲಗುವುದನ್ನು ಬಿಟ್ಟುಬಿಟ್ಟರು!

        ಅದು ನಾನು ಹತ್ತನೇ ತರಗತಿ ಓದುತ್ತಿದ್ದ ಸಮಯ. ಗಣಿತ ಮತ್ತು ಸಮಾಜಶಾಸ್ತ್ರ ವಿಷಯಕ್ಕೆ ಶಿಕ್ಷಕರಿರಲಿಲ್ಲ. ಇಡೀ ನಮ್ಮ ತರಗತಿಯಲ್ಲಿ ಒಟ್ಟು ಮೂರು ಗುಂಪುಗಳಿದ್ದವು. ನಮ್ಮ ತಂಡ 200ರೂ ಕೊಟ್ಟು ರೂಮ್‌ ಬಾಡಿಗೆಗೆ ಪಡೆದು ಅಭ್ಯಾಸ ಮಾಡುತ್ತಿ¨ªೆವು. ಮತ್ತೂಂದು ತಂಡ ಮಾಳಿಗೆಯ ಮೇಲೆ ಬಲ್ಬ್ ಹಾಕಿಕೊಂಡು ಊರೆÇÉಾ ನೋಡುವಂತೆ ಓದುತ್ತಿದ್ದರು ಮತ್ತು ಮೂರನೆ ತಂಡ ನಮ್ಮ ಶಾಲಾ ಮುಖ್ಯೋಪಾಧ್ಯಾಯರ ಅನುಮತಿ ಪಡೆದು ಶಾಲೆಯ ಒಂದು ಕೋಣೆಯಲ್ಲಿ ಅಭ್ಯಾಸ ಮಾಡುತ್ತಿದ್ದರು.

        ನಾವು ಕೊನೆಯ ಬೆಂಚಿನ ವಿದ್ಯಾರ್ಥಿಗಳಾಗಿದ್ದರಿಂದ ಓದುವ ಮತ್ತು ಬರೆಯುವ ವಿಧಾನ ಗೊತ್ತಿರಲಿಲ್ಲ. ಅದಕ್ಕೆ ರಾತ್ರಿಯಿಡೀ ನಮ್ಮ ವಿರುದ್ಧ ತಂಡದವರು ಏನು ಮಾಡುತ್ತಾರೆಂಬುದನ್ನು ನೋಡಲು ಮಧ್ಯರಾತ್ರಿ ಎಂಬುದನ್ನು ಲೆಕ್ಕಿಸದೇ ಕಳ್ಳರಂತೆ ಮುಸುಕು ಧರಿಸಿ. ಚಳಿಗಾಲದ ಸಮಯವಾದ್ದರಿಂದ ಮೇಲೊಂದು ಬೆಡ್‌ಶೀಟ್‌ ಹೊದ್ದು ಅವರಿರುವಲ್ಲಿಗೆ ಹೋಗುತ್ತಿದ್ದೆವು. ನಾವು ಪ್ರಾಥಮಿಕ ಶಾಲಾ ಹಂತ ಮುಗಿಸಿ 8ನೇ ತರಗತಿಗೆ ಬರುವಷ್ಟರಲ್ಲಿ ಸರ್ಕಾರ ಮಾಹಿತಿ ಸಿಂಧೂ ಯೋಜನೆಯಡಿ ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ಶಿಕ್ಷಣದ ವ್ಯವಸ್ಥೆ ಕಲ್ಪಿಸಿತ್ತು. ನಾವು ಹತ್ತನೇ ತರಗತಿಗೆ ಬಂದರೂ ಕಂಪ್ಯೂಟರ್‌ ನಮ್ಮ ಕೈಗೆ ಸಿಕ್ಕಿದ್ದು ತೀರಾ ವಿರಳ. ಅದಕ್ಕೆ ಕಾರಣ ನಮ್ಮ ಶಿಕ್ಷಕರು ಮತ್ತು ನಮ್ಮ ಬುದ್ಧಿವಂತ ಸ್ನೇಹಿತರು.

        ಅದೊಮ್ಮೆ ಹೀಗಾಯಿತು ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ ತಂಡದ ಸ್ನೇಹಿತನೊಬ್ಬ ಶನಿವಾರದಂದು ಶಾಲೆಯ ಎÇÉಾ ರೂಮ್‌ಗಳ ಕೀ ಹಾಕಿ ಕಂಪ್ಯೂಟರ್‌ ರೂಮ್‌ ಕೀಯನ್ನು ತನ್ನ ಬಳಿಯೇ ಉಳಿಸಿಕೊಂಡ. ತಕ್ಷಣವೇ ಸಿಟಿಗೆ ಹೋಗಿ ಅದರ ಡ್ನೂಪ್ಲಿಕೇಟ್‌ ಮಾಡಿಸಿ ಸೋಮವಾರ ಎಲ್ಲರಿಗಿಂತ ಮುಂಚೆ ಹೋಗಿ ಅದರ ಸ್ಥಾನ ಸೇರಿಸಿಬಿಟ್ಟ!

        ಕಂಪ್ಯೂಟರ್‌ ಕೀ ಸಿಕ್ಕ ಮೇಲೆ ಕೇಳಬೇಕೇ ಮಂಗನ ಕೈಗೆ ಮಾಣಿಕ್ಯ ಸಿಕ್ಕಿದಂತಾಯ್ತು. ತಡರಾತ್ರಿ 12ಗಂಟೆಯ ನಂತರ ಶಾಲೆಯಲ್ಲಿ ಓದುತ್ತಿದ್ದ ತಂಡದವರೆಲ್ಲರೂ ಕಂಪ್ಯೂಟರ್‌ ರೂಮ್‌ ಸೇರಿ ಗೇಮ್ಸ್‌, ಫಿಲ್ಮ್, ಹಾಡು, ಫೋಟೋ ಅಂತ ಬೆಳಗಿನ ಜಾವದವರೆಗೂ ಸಮಯ ಕಳೆಯುತ್ತಿದ್ದರು! ಈ ವಿಷಯ ಗಸ್ತು ತಿರುಗುತ್ತಿದ್ದ ನಮಗೆ ತಿಳಿದು ಹೋಯಿತು.

        ಮುಖ್ಯೋಪಾಧ್ಯಾಯರಿಗೆ ತಿಳಿಸಿದರೆ ಪೊಲೀಸ್‌ ಕೇಸ್‌ ಏನಾದರೂ ಆದರೆ ಎಂಬ ಭಯ ಕಾಡಿತು. ಏನು ಮಾಡುವುದೆಂದು ಸ್ನೇಹಿತರೆಲ್ಲ ಚರ್ಚಿಸಿ ಕೊನೆಗೊಂದು ನಿರ್ಧಾರಕ್ಕೆ ಬಂದೆವು. ತಡ ರಾತ್ರಿ 12 ಗಂಟೆಗೆ ಸರಿಯಾಗಿ ಮುಸುಕು ಧರಿಸಿ ತಂಗಾಳಿಯಲ್ಲಿ ನಾನು ತೇಲಿ ಬಂದೆ ಹಾಡನ್ನು ಹಾಕಿ ವಿಚಿತ್ರ ದನಿಯಲ್ಲಿ ಸ್ನೇಹಿತರನ್ನು ಹೆದರಿಸಿದೆವು. ಅವರು ಭಯಗೊಂಡು ಸ್ವಲ್ಪ ದಿನಗಳ ಕಾಲ ಕಂಪ್ಯೂಟರ್‌ ರೂಮ್‌ ಕಡೆ ಹೋಗಲಿಲ್ಲ. ಆದರೆ ಮತ್ತೆ ಅದೇ ಕೆಲಸ ಪುನಾರಾವರ್ತನೆಯಾಯಿತು.

        ನಾವು ಪುನಃ ಅದೇ ರೀತಿ ಹೆದರಿಸಲು ಮತ್ತೆ ಶಾಲೆ ಕಡೆ ಹೋದೆವು. ಆಫೀಸ್‌ ಮುಂಭಾಗದ ಕಟ್ಟೆಯ ಮೇಲೆ ಒಬ್ಬ ಸ್ನೇಹಿತ ಮಲಗಿದ್ದ. ಉಳಿದವರು ಕಂಪ್ಯೂಟರ್‌ ರೂಮ್‌ನಲ್ಲಿದ್ದರು. ಇದೆ ಸುಸಂಧಿ ಎಂದು ಅವನ ಮೇಲೆ ಬೆಡ್‌ಶೀಟ್‌ ಹೊದಿಸಿ ಮೆಲ್ಲಗೆ ಆಟದ ಮೈದಾನಕ್ಕೆ ತಂದು ಮಲಗಿಸಿದೆವು. ಅವನು ನಿದ್ದೆಯಿಂದ ಎದ್ದಾಗ ಮುಸುಕು ಧರಿಸಿ ವಿಚಿತ್ರ ದನಿಯಲ್ಲಿ ಚೀರಿ ನರ್ತಿಸಿದೆವು. ಅವನು ಹೆದರಿ ಚೀರುತ್ತಾ ಮನೆಗೆ ಓಡಿ ಹೋದ. ಮೂರು ದಿನ ಸುದ್ದಿ ಇಲ್ಲ. ಆಮೇಲೆ ನೋಡಿದರೆ ಚಳಿಜ್ವರ.

        ಇದನ್ನು ಕೇಳಿ ನಮಗೂ ಗಾಬರಿಯಾಯಿತು. ಅವನ ಸ್ನೇಹಿತರು ಇನ್ನಷ್ಟು ಭಯಗೊಂಡರು. ಆಮೇಲೆ ಕಂಪ್ಯೂಟರ್‌ ರೂಮ್‌ ಅಷ್ಟೇ ಅಲ್ಲ ಶಾಲೆಯಲ್ಲಿ ಮಲಗುವುದನ್ನೇ ಬಿಟ್ಟುಬಿಟ್ಟರು. ಆ ಘಟನೆ ನಡೆದು ಸುಮಾರು ವರ್ಷಗಳಾಗಿವೆ. ಆದರೆ ಆ ರಾತ್ರಿ ಅವನು ಹೆದರಿ ಓಡಿದ್ದನ್ನು ಮರೆಯಲು ಇವತ್ತಿಗೂ ಆಗಿಲ್ಲ.

        ರವೀಂದ್ರ ವಿಕೆ, ಹೇರೂರು

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      • picಸೈಲೆಂಟ್‌ ಮೋಡ್‌: ಇನ್‌ಬಾಕ್ಸ್‌ ಫ‌ುಲ್‌
        ಸುಮ್ಮನಾದ ಗಳಿಗೆಯಲ್ಲಿ ಮನದಲ್ಲಿ ಹುಟ್ಟೋ ಮಾತುಗಳಿದೆಯಲ್ಲ......ಅದು ಅದೆಂತ ತಣ್ಣಗಿನ ಮುಂಜಾವಲ್ಲಿ ಹುಟ್ಟಿದರೂ ಮದ್ಯಾಹ್ನದ ಸೂರ್ಯನಷ್ಟೇ ತೀಕ್ಷ¡ವಾಗಿರುತ್ತದೆ.....ಅದೆಷ್ಟೇ ತಲೆತಪ್ಪಿ$ಸಬೇಕೆಂದರೂ ಬಿಸಿ ತಟ್ಟೇ ತಟ್ಟುತ್ತೆ....ತೀರ ನೋಡಲೇಬೇಕೆಂದು ಹಟಹಿಡಿಯುವಷ್ಟು ಹುಚ್ಚು ಹಿಡಿದರೆ ಕಣ್ಣಮುಂದೆÇÉಾ ಕಪ್ಪ
      • Copyright @ 2009 Udayavani.All rights reserved.
      • Designed & Hosted By 4cplus