Saturday, May 25, 2013
Last Updated: 8:34:44 PM IST
  • ನಾನೆಲ್ಲಿರುವೆ:
  • ಮುಖಪುಟ Supplements ಜೋಶ್
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಆರದೇ ಉಳಿಯುವ ದೂರದ ದೀಪ
    • ಅÇÉೆಲ್ಲೋ ತೇಲೋ ಒಂಟಿ ತೆಪ್ಪ, ತಾನು ನೀರಿಗೆ ಎಸೆದಿರುವ ಬಲೆಗೆ ಬೀಳೊ ಮೀನುಗಳ ಚಿಂತೆಯಲ್ಲಿ ಕೂತಿರುವ ಬೆಸ್ತ, ಇನ್ನೊಂದು

      • Udayavani | Jan 21, 2013

        ಅÇÉೆಲ್ಲೋ ತೇಲೋ ಒಂಟಿ ತೆಪ್ಪ, ತಾನು ನೀರಿಗೆ ಎಸೆದಿರುವ ಬಲೆಗೆ ಬೀಳೊ ಮೀನುಗಳ ಚಿಂತೆಯಲ್ಲಿ ಕೂತಿರುವ ಬೆಸ್ತ, ಇನ್ನೊಂದು ದಡದಲ್ಲಿ ಕುಲುಮೆ ಕೆಲಸದವನು ಕೆಂಪಗೆ ಕಾದ ಕಬ್ಬಿಣಕ್ಕೆ ಸುತ್ತಿಗೆಯಿಂದ ಹೊಡೆಯುತ್ತಿರುವ ಢಣ್‌ ಢಣ್‌ ಸದ್ದು, ಅದರಿಂದ ಹೊರಬಂದು ಗಾಳಿಯಲ್ಲಿ ಹಾರುತ್ತಿದ್ದ ಹೊಳೆವ ಕೆಂಪು ಕೆಂಡದ ಚುಕ್ಕಿಗಳು..

        ನಮ್ಮೂರ ಹೊಳೆ ಲಕ್ಷ¾ಣತೀರ್ಥ ಹಾಳಾಗಿದೆಯಂತೆ! ನನ್ನ ಬಾಲ್ಯವನ್ನೆಲ್ಲಾ ಆ ಹೊಳೆಯನ್ನು ನೋಡುತ್ತಲೇ ಕಳೆದಿದ್ದೇನೆ. ನನ್ನ ಕಣ್ಣಿಗೆ ಎಂದೂ ಹಾಳಾಗಿ ಕಾಣಿಸಿಲ್ಲ. ಆದರೆ ಇತ್ತೀಚೆಗೆ ಎಲ್ಲವೂ ಎಲ್ಲವೂ ಹಾಳಾಗಿಹೋಗಿದೆ, ಏನೂ ಉಳಿದಿಲ್ಲ ಅನ್ನುವುದನ್ನು ಕೇಳಿ ಮತ್ತೆ ಊರಾಚೆ ಸೇತುವೆಗೆ ಹೋಗಿ ಲಕ್ಷ್ಮಣ ತೀರ್ಥವನ್ನು ಗಮನಿಸಿದೆ.

        ಲಾರಿ ಬಸ್ಸುಗಳು ಹೋದರೆ ಅಲ್ಲಾಡುವ ಈ ಸೇತುವೆಯ ಮೇಲೆ ನಿಂತು ನೀರನ್ನು ನೋಡಲು ಸಣ್ಣ ವಯಸ್ಸಿನಿಂದಲೂ ಅದೇನೋ ಆನಂದ. ಆ ಸಂಜೆ ಲಕ್ಷ¾ಣತೀರ್ಥ ವಯೋವೃದ್ಧನ ಕೆನ್ನೆಯಂತೆ ಬಿಳುಚಿಕೊಂಡಿತ್ತು. ಈ ಹೊಳೆ ನನ್ನ ಕಣ್ಣಿಗೆ ಒಮ್ಮೊಮ್ಮೆ ಒಂದೊಂದು ರೀತಿ ಕಾಣುತ್ತದೆ. ಒಮ್ಮೆ ಯುವಕನಂತೆ, ಒಮ್ಮೆ ಬಳುಕುವ ಸುಂದರಿಯಂತೆ, ಬೇಸಿಗೆಯಲ್ಲಿ ನೀರ ಮೇಲೆಲ್ಲ ಗಿಡಗಳು ಬೆಳೆದು ಒಂದು ಸುಂದರ ಕ್ರಿಕೆಟ್‌ ಕ್ರೀಡಾಂಗಣದಂತೆ, ಒಮ್ಮೆ ಸಣ್ಣ ಮಗುವಂತೆ.. ಇಂದು ಮುದುಕನಂತೆ..!

        ಹಲ್ಲು ಹೋಗಿ ಬೆನ್ನು ಬಾಗಿ ಹರಿಯುತ್ತಿತ್ತು. ಇಷ್ಟೊಂದು ವರ್ಷದಿಂದ ಹರಿಯುತ್ತಿದೆ ಅಂದಮೇಲೆ ಎಷ್ಟೊಂದು ವಯಸ್ಸಾಗಿರಬೇಡ ಪಾಪ. ಸರಿಯಾಗಿ ಕಿವಿ ಕೇಳುತ್ತೋ ಇಲ್ಲವೊ. ಅದಕ್ಕೆ ಕೂಗಿ ಕರೆದೆ. ಓ ಮುದುಕ.. ಅದ್ಯಾಕೊ ನನ್ನ ಕಣ್ಣಿಗ್‌ ಮಾತ್ರ ಹಾಳಾಗಿ ಕಾಣಲ್ಲ, ಗಬ್ಟಾಗಿದೆ ಅನಿಸಲ್ಲ? ಊರ ಹೊಲಸನ್ನೆಲ್ಲ ನಿಂಗೇ ಹರಿದು ಬಿಡ್ತಾರೆ. ದೋಣಿಗಳಲಿ ಬಂದು ಮರಳು ಕದೀತಾರೆ. ಸ್ಮಶಾನದಲ್ಲಿ ಅರೆಬೆಂದವನ್ನೆಲ್ಲ ತಂದು ನಿಂಗೇ ಎಸೀತಾರೆ. ಆತ್ಮಹತ್ಯೆ ಮಾಡಿಕೊಳ್ಳೋಕೆ ಎಷ್ಟೋ ಮಂದಿಗೆ ನೀನೇ ಬೇಕು. ಗಣೇಶನ ವಿಗ್ರಹಗಳು, ಹಬ್ಬಗಳಲ್ಲಿ ಎಲ್ಲರ ಮನೆಗಳಲ್ಲು ಬಾಡುವ ಹೂವು ಹಣ್ಣುಗಳೆಲ್ಲ ನಿನಗೇ ಸಮರ್ಪಿತ. ಇಷ್ಟಿದ್ದರೂ ನನ್ನ ಕಣ್ಣಿಗೆ ನೀನು ಗಬ್ಟಾಗಿ ಕಾಣೋದಿಲ್ವÇÉೋ. ಅಥವಾ ನನ್ನ ಕಣ್ಣನ್ನ ಸೆಳೆಯೋದೇ ಬೇರೆ ವಿಷಯಗಳ?

        ಈ ಸೇತುವೆ ಮೇಲೆ ನಿಂತು ನೋಡಿದರೆ ಕಾಣುವ, ಅದೆÇÉೋ ಮಿನುಗಿ ಮರೆಯಾಗೊ ಮಿಂಚುಹುಳಗಳ ಹಿಂಡು, ಅÇÉೆಲ್ಲೋ ತೇಲೋ ಒಂಟಿ ತೆಪ್ಪ, ತಾನು ನೀರಿಗೆ ಎಸೆದಿರುವ ಬಲೆಗೆ ಬೀಳೊ ಮೀನುಗಳ ಚಿಂತೆಯಲ್ಲಿ ಕೂತಿರುವ ಬೆಸ್ತ, ದಡದಲ್ಲಿ ಬೆಳೆದಿರೋ ಕುರುಚಲು ಪೊದೆ, ಮರಗಳಿಗೆ ಜೋತು ಬಿದ್ದಿರೋ ಗೀಜುಗದ ಗೂಡುಗಳಿಗೆ ಸಂಜೆಯಾಗುತ್ತಲೇ ಮರಳುತ್ತಿರುವ ಹಕ್ಕಿಗಳ ಕಲರವ. ಇನ್ನೊಂದು ದಡದಲ್ಲಿ ಕುಲುಮೆ ಕೆಲಸದವನು ಕೆಂಪಗೆ ಕಾದ ಕಬ್ಬಿಣಕ್ಕೆ ಸುತ್ತಿಗೆಯಿಂದ ಹೊಡೆಯುತ್ತಿರುವ ಢಣ್‌ ಢಣ್‌ ಸದ್ದು, ಅದರಿಂದ ಹೊರಬಂದು ಗಾಳಿಯಲ್ಲಿ ಹಾರುತ್ತಿದ್ದ ಹೊಳೆವ ಕೆಂಪು ಕೆಂಡದ ಚುಕ್ಕಿಗಳು..

        ಮೇಲೇರಿದ ಕಿಡಿಗಳು ಒಮ್ಮೆಲೇ ಮಾಯ. ಆಕಾಶವೂ ಕೆಂಪಾಗಿ ಕಿಡಿಗಳೂ ಅದರ ಬಣ್ಣದಲ್ಲಿ ಬೆರೆತುಹೋಗಿದ್ದವು. ಸೂರ್ಯ ಸಾಯುತ್ತಿದ್ದ. ಹಕ್ಕಿಗಳ ಗೂಡು ಸೇರೋ ತವಕ ನೋಡಿ ನನ್ನ ಗೂಡು ನೆನಪಾಯ್ತು. ನಾನು ಇತರರಂತೆ ಲಕ್ಷ¾ಣತೀರ್ಥನಿಗೆ ಬಂದ ಯಿಲೆಯ ನೋಡಿ ಕಣ್ಣು ಮುಚ್ಚಿಕೊಳ್ಳದೆ ಅರಳಿದ ಕೆಂದಾವರೆಗಳ ನೋಡಿದೆ. ಮರಳಿದೆ.

        ಅನುಷ್‌ ಎ.ಶೆಟ್ಟಿ
        ಪತ್ರಿಕೋದ್ಯಮ ವಿದ್ಯಾರ್ಥಿ,
        ಮಹಾರಾಜ ಕಾಲೇಜು,
        ಮೈಸೂರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      • Copyright @ 2009 Udayavani.All rights reserved.
      • Designed & Hosted By 4cplus