Sunday, May 26, 2013
Last Updated: 11:56:36 AM IST
  • ನಾನೆಲ್ಲಿರುವೆ:
  • ಮುಖಪುಟ Supplements ಜೋಶ್
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ದಾರಿದೀಪ
      • Udayavani | Jan 21, 2013

        ನಾನು ಎಸ್‌ಎಸ್‌ಎಲ್‌ಸಿ ಓದಿದ್ದೇನೆ. ಪತ್ರಿಕೋದ್ಯಮದಲ್ಲಿ ತುಂಬಾ ಆಸಕ್ತಿ ಇದೆ. ಯಾವ ಕೋರ್ಸು ಓದಬೇಕು? ಎಲ್ಲಿ ಕೆಲಸ ಸಿಗಬಹುದು?
        ಜೀನೇಶ್‌ ಎ. ಕುಲಕರ್ಣಿ, ಮುದ್ದೇಬಿಹಾಳ
        ನೀವು ಪಿಯುಸಿ ವಿದ್ಯಾಭ್ಯಾಸದ ನಂತರ ಪದವಿ ತರಗತಿಯಲ್ಲಿ ಪತ್ರಿಕೋದ್ಯಮವನ್ನು ಒಂದು ವಿಷಯವಾಗಿ ಅಭ್ಯಸಿಸಬಹುದು. ನಂತರ ನೀವು ಸ್ನಾತಕೋತ್ತರ ಪದವಿಯನ್ನು ಪಡೆಯಬಹುದು. ಪತ್ರಿಕೆಗಳನ್ನು ಓದಿ. ಲೇಖನಗಳನ್ನು ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಮುಂದೆ ಅನುಕೂಲವಾಗುವುದು. ಪತ್ರಿಕೋದ್ಯಮವನ್ನು ಅಭ್ಯಾಸ ಮಾಡಿದರೆ ಪತ್ರಿಕೆಗಳಲ್ಲಿ, ಟಿವಿ ಚಾನೆಲ್‌ಗ‌ಳಲ್ಲಿ, ಸಾರ್ವಜನಿಕ ಸಂಪರ್ಕ ಸಂಸ್ಥೆಗಳಲ್ಲಿ, ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ಉದ್ಯೋಗಕ್ಕೆ ಸೇರಬಹುದು. ತುಂಬಾ ಓದಿ. ಹೆಚ್ಚಿನ ವಿಷಯ ತಿಳಿದುಕೊಳ್ಳಿ.

        ನಾನು Nಚnಟಖcಜಿಛಿncಛಿ ಚnಛ Nಚnಟಠಿಛಿcಜnಟlಟಜy ವಿಷಯದಲ್ಲಿ Mಖc ಕಲಿಯಬೇಕೆಂದಿದ್ದೇನೆ. ಎಲ್ಲಿ ಕಲಿಯಬಹುದು? ಎಲ್ಲಿ ಕೆಲಸ ಸಿಗುತ್ತದೆ?
        ಮುತ್ತುರಾಯ ಎಸ್‌.ಕನಗುತ್ತಿ, ಹಂಚಲಿ
        ಪದವಿ ಹಂತದಲ್ಲಿ ನ್ಯಾನೋ ಸೈನ್ಸ್‌ ಆ್ಯಂಡ್‌ ನ್ಯಾನೋ ಟೆಕ್ನಾಲಜಿ ವಿಷಯ ಹೆಚ್ಚಾಗಿ ಲಭ್ಯವಿಲ್ಲ. ಸ್ನಾತಕೋತ್ತರ ಪದವಿ ಹಂತದಲ್ಲಿ ಕಲಿಯಬಹುದು. ಅದೇ ಕ್ಷೇತ್ರದಲ್ಲಿ ಉಪನ್ಯಾಸಕರಾಗಬಹುದು. ಪಿಎಚ್‌ಡಿ ಪದವಿ ಪಡೆಯಬಹುದು. ನ್ಯಾನೋಸೈನ್ಸ್‌ ಅಧ್ಯಯನ ಮಾಡಲು ಉತ್ತಮ ಸಂಸ್ಥೆಗಳೆಂದರೆ ಐಐಖಇಅ, ಬೆಂಗಳೂರು, ಐಐಟಿಗಳು, ಎನ್‌ಐಟಿ ರೂರ್ಕಿ, ಜವಾಹರ್‌ಲಾಲ್‌ ನೆಹರೂ ಇನ್ಸಿಟಿಟ್ಟೂಟ್‌ ಆಫ್ ಅಡ್ವಾನ್ಸ್‌$x ಸೈಂಟಿಫಿಕ್‌ ರಿಸರ್ಚ್‌, ಬೆಂಗಳೂರು. ನೀವು ಈ ಕ್ಷೇತ್ರದಲ್ಲಿ ಪರಿಣತಿ ಪಡೆದರೆ ಅರ್ಹತೆಗೆ ತಕ್ಕ ಕೆಲಸ ಸಿಕ್ಕೇ ಸಿಗುತ್ತದೆ.

        ದೂರಶಿಕ್ಷಣದ ಮೂಲಕ ಬಿಎ ಓದುತ್ತಿದ್ದೇನೆ. ಆದ್ದರಿಂದ ಈಗ ಡಿಪ್ಲೊಮಾ ಕಲಿಯಬೇಕು ಅನ್ನಿಸುತ್ತಿದೆ. ಸರಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಡಿಪ್ಲೊಮಾ ಕಲಿಯಲು ಅವಕಾಶದೆಯೇ?
        ಕುಮಾರ ಮರೇಮಠ, ಅಥಣಿ
        ನಿಮ್ಮ ಅಧ್ಯಯನಶೀಲತೆಗೆ ಅಭಿನಂದನೆ. ನೀವು ಬಿಎ ಓದು ಮುಂದುವರಿಸುತ್ತಾ ಡಿಪ್ಲೊಮಾ ಶಿಕ್ಷಣವನ್ನು ಸಹಾ ಮುಂದುವರಿಸಬಹುದು. ಕೆಲವು ಡಿಪ್ಲೊಮಾಗಳಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸ ಹೊಂದಿದ್ದರೆ ಸಾಕು. ಇನ್ನು ಕೆಲವು ಡಿಪ್ಲೊಮಾ ತರಗತಿ ಸೇರಲು ಪಿಯುಸಿ ವಿದ್ಯಾಭ್ಯಾಸ ಕಡ್ಡಾಯ. ನೀವು ಯಾವ ವಿಷಯದಲ್ಲಿ ಡಿಪ್ಲೊಮಾ ಸೇರಲು ಬಯಸುವಿರಿ ಎಂದು ನಿರ್ಧರಿಸಿ ನಂತರ ಮುಂದುವರಿಯಿರಿ. ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಸಮೀಪದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜನ್ನು ಸಂದರ್ಶಿಸಿ, ಅಲ್ಲಿನ ಅಧ್ಯಾಪಕರೊಂದಿಗೆ ಚರ್ಚಿಸಿ.

        ನಾನು ನಿರುದ್ಯೋಗಿಯಾಗಿದ್ದು, ಸ್ಟೀಲ್‌ನಿಂದ ತಯಾರಿಸುವ ವಸ್ತುಗಳ ಬಗ್ಗೆ ಆಸಕ್ತಿ ಇದೆ. ಸ್ಟೀಲ್‌ ವಸ್ತುಗಳನ್ನು ತಯಾರಿಸಲು ತರಬೇತಿ ಪಡೆಯಬೇಕೆಂದ್ದಿದ್ದೇನೆ. ಎಲ್ಲಿ?
        ವಿನಯ್‌, ಬೆಂಗಳೂರು
        ಕನಸು ಕಾಣುವ ನಿಮ್ಮ ಸ್ವಭಾವ ಇಷ್ಟವಾಯಿತು. ಹೀಗೆ ಹೊಸತು ಯೋಚಿಸುತ್ತಾ ಇರಬೇಕು. ಸ್ಟೀಲ್‌ ವಸ್ತುಗಳನ್ನು ತಯಾರಿಸುವ ತರಬೇತಿ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾತಿಯಿಲ್ಲ. ಆದರೆ ನೀವು ಧೃತಿಗೆಡಬೇಕಿಲ್ಲ. ಯಾವುದಾದರೂ ಸ್ಟೀಲ್‌ ವಸ್ತುಗಳ ತಯಾರಿಕಾ ಘಟಕದಲ್ಲಿ ಕೆಲಸಕ್ಕೆ ಸೇರಿ ಸ್ವಲ್ಪ$ಅನುಭವವನ್ನು ಗಳಿಸಬಹುದು. ಅನಂತರ ನಿಮ್ಮದೇ ಸ್ಟೀಲ್‌ ವಸ್ತು ತಯಾರಿಕಾ ಘಟಕವನ್ನು ತೆರೆಯಲು ಅನುಕೂಲವಾಗುವುದು. ಇನ್ನೊಂದು ಮಾರ್ಗವೆಂದರೆ ಮೆಕ್ಯಾನಿಕಲ್‌ ವಿಷಯದಲ್ಲಿ ಡಿಪ್ಲೊಮಾ ಅಧ್ಯಯನ ಮಾಡುವುದು. ಆಗ ಈ ಷಯದಲ್ಲಿ ಹೆಚ್ಚಿನ ಸ್ಪಷ್ಟತೆ ದೊರಕಬಹುದು.

        *ಡಾ. ಡಿ.ಎನ್‌. ಗೋಪಾಲಕೃಷ್ಣ



      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      • Copyright @ 2009 Udayavani.All rights reserved.
      • Designed & Hosted By 4cplus