Udayavani | Jan 21, 2013
ಸ್ಮಾರ್ಟ್‌ಫೋನ್, ಟ್ಯಾಬ್‌ಗಳ ಕಾಲ ಇದು. ಆ್ಯಂಡ್ರಾಯ್ಡ ಇರದ ಫೋನುಗಳಿಲ್ಲ. ಅಪ್ಲಿಕೇಷನ್‌ಗಳನ್ನು ಡೌನ್‌ಲೋಡ್ ಮಾಡದ ಕೈಗಳಿಲ್ಲ. ಇಂಥಾ ಸಂದರ್ಭದಲ್ಲಿ ಒಂದಷ್ಟು ಅಪ್ಲಿಕೇಷನ್‌ಗಳು ರಕ್ಷಣೆಗೆಂದೇ ಇವೆ. ಮೊಬೈಲ್ ಕೈಲಿದ್ದರೆ ಸಾಕು ನೀವು ಎಲ್ಲಿದ್ದೀರಿ ಅನ್ನೋದನ್ನು ಸೂಚಿಸುತ್ತದೆ. ಕಷ್ಟಕರ ಸಂದರ್ಭವಾಗಿದ್ದರೆ ಯಾರಾದರೂ ನೆರವಿಗೆ ಧಾವಿಸಬಹುದು. ಅಂಥಾ ಐದು ಅಪ್ಲಿಕೇಷನ್‌ಗಳ ಪುಟ್ಟ ಮಾಹಿತಿ ಇಲ್ಲಿದೆ.
ಚಿ sಚfಛಿ
ಈ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡರೆ ಒಂದಷ್ಟು ನಂಬರ್‌ಗಳನ್ನು ಸೇವ್ ಮಾಡಿಟ್ಟುಕೊಳ್ಳಬಹುದು. ಯಾರಾದರೂ ಕಷ್ಟಕರ ಸಂದರ್ಭಗಳಲ್ಲಿದ್ದರೆ ಆ ನಂಬರ್‌ಗಳಿಗೆ ಎಸ್‌ಓಎಸ್ ಸಂದೇಶಗಳನ್ನು ಕಳಿಸುತ್ತದೆ ಈ ಅಪ್ಲಿಕೇಷನ್. ಈ ಅಪ್ಲಿಕೇಷನ್ ಬಳಸುವವರು ಮಾಡಬೇಕಾದ್ದಿಷ್ಟೇ, ಅಪಾಯಕರ ಸಂದರ್ಭಗಳಲ್ಲಿ ಈ ಅಪ್ಲಿಕೇಷನ್‌ನಲ್ಲಿನ ಕೆಂಪು ಬಟನ್ ಅನ್ನು ಒತ್ತುವುದು. ಆಗ ಸಂದೇಶ ರವಾನೆಯಾಗುತ್ತದೆ.
ಎಲ್ಲಿ ಸಿಗುತ್ತದೆ- ಆ್ಯಂಡ್ರಾಯ್ಡನಲ್ಲಿ ಉಚಿತ, ಟ್ಯಾಬ್, ಬ್ಲ್ಯಾಕ್‌ಬೆರ್ರಿ
ಖOಖ ಗಜಜಿsಠಿlಛಿ
ಈ ಅಪ್ಲಿಕೇಷನ್ ಸಂದೇಶ ಕಳಿಸುವುದಿಲ್ಲ. ಅಲ್ಲೊಂದು ಬಟನ್ ಥರ ಇರುತ್ತದೆ. ಅದನ್ನು ಒತ್ತಿದರೆ ಸಾಕು ಜೋರಾಗಿ ಅಲಾರ್ಮ್ ಹೊಡೆದುಕೊಳ್ಳುತ್ತದೆ. ಸ್ಕ್ರೀನನ್ನು ಸ್ವಲ್ಪ ತಟ್ಟಿದರೂ ಸಾಕು ಜೋರಾಗಿ ಸದ್ದಾಗುತ್ತದೆ. ಮೊಬೈಲ್ ಸೈಲೆಂಟ್ ಮೋಡ್‌ನಲ್ಲಿದ್ದರೂ ಅಲಾರ್ಮ್ ಆಗುತ್ತದೆ, ಭಯ ಬೇಡ.
ಎಲ್ಲಿ ಸಿಗುತ್ತದೆ- ಎಲ್ಲದರಲ್ಲೂ ಉಚಿತ ಡೌನ್‌ಲೋಡ್ ಮಾಡಿಕೊಳ್ಳಬಹುದು
ಇಜಿrclಛಿ ಟf 6
ಈ ಅಪ್ಲಿಕೇಷನ್‌ನ ಹೆಸರೇ ಹೇಳುವಂತೆ ಅಪ್ಲಿಕೇಷನ್ ಬಳಸುವವರು ಆರು ನಂಬರ್‌ಗಳನ್ನು ಆಯ್ಕೆ ಮಾಡಬಹುದು. ಸಂಕಷ್ಟ ಅಥವಾ ಅಪಾಯಕಾರಿ ಸಂದರ್ಭಗಳಲ್ಲಿ ಮೊದಲೇ ಸಿದ್ಧಗೊಂಡ ಮೆಸೇಜ್‌ಗಳನ್ನು ಅಟೋಮ್ಯಾಟಿಕ್ಕಾಗಿ ಕಳಿಸುತ್ತದೆ. ಆರು ನಂಬರಿಗೂ ಈ ಸಂದೇಶ ತಲುಪುತ್ತದೆ.
ಎಲ್ಲಿ ಸಿಗುತ್ತದೆ- ಉಚಿತ ಅಪ್ಲಿಕೇಷನ್
ಊಜಿಜಜಠಿಚಿಚck
ಇದು ಇಂಡಿಯನ್ ಅಪ್ಲಿಕೇಷನ್. ಅಸಹಾಯಕ ಸಂದರ್ಭಗಳಲ್ಲಿ, ಕಷ್ಟಕರ ಸನ್ನಿವೇಶಗಳಲ್ಲಿ ಈ ಅಪ್ಲಿಕೇಷನ್‌ನಲ್ಲಿರುವ ಬಟನ್ ಒತ್ತಿದರೆ ಸಾಕು ಇಮೇಲ್ ಮತ್ತು ಫೇಸ್‌ಬುಕ್ ಅಲರ್ಟ್ ಬರುತ್ತದೆ. ಎಸ್‌ಓಎಸ್ ಮೆಸೇಜ್ ಕಳಿಸುತ್ತದೆ. ಆಪ್ತ ವಲಯಕ್ಕೆ ಸುದ್ದಿ ತಲುಪುತ್ತದೆ. ಎಲ್ಲಿದ್ದಾರೆ ಅನ್ನೋದು ಗೊತ್ತಾಗಿ ನೆರವಿಗೆ ಧಾವಿಸಬಹುದು.
ಎಲ್ಲಿ ಸಿಗುತ್ತದೆ- ಇದು ಉಚಿತ ಅಪ್ಲಿಕೇಷನ್ ಅಲ್ಲ. ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಬಹುದು
ಔಜಿfಛಿ 360 ಊಚಞಜಿly ಔಟcಚಠಿಟ್ಟ
ಈ ಅಪ್ಲಿಕೇಷನ್ ಸಂದೇಶಗಳನ್ನು ಕಳಿಸಿ ಎಚ್ಚರಿಸುವುದಷ್ಟೇ ಅಲ್ಲ. ನೀವು ಯಾವುದಾದರೂ ಸ್ಥಳಗಳನ್ನು ಸೇವ್ ಮಾಡಿದರೆ ಆ ಸ್ಥಳಕ್ಕೆ ನಿಮ್ಮ ಆಪ್ತರು ಯಾರಾದರೂ ಬರುತ್ತಾರೆ, ಅಲ್ಲಿಂದ ತೆರಳುತ್ತಾರೆ ಅಂತಾದರೆ ಅಲಾರ್ಮ್ ಮೂಲಕ ಎಚ್ಚರಿಸುತ್ತದೆ.
ಎಲ್ಲಿ ಸಿಗುತ್ತದೆ- ಆ್ಯಂಡ್ರಾಯ್ಡನಲ್ಲಿ ಉಚಿತ