Udayavani | Jan 21, 2013
ಯಾವಾಗ ಸ್ಯಾಲರಿ ಹೈಕ್ ಆಗತ್ತೆ? ಒಂದು ವರ್ಷ ಆಯ್ತು ತಾನೇ, ಏನಂತೆ ನಿಮ… ಬಾಸ್‌ದು? ಬೇರೆ ಕಡೆ ಕೆಲಸ ಹುಡುಕು, ಅದ್ಸರಿ ಏನ್ ಮಾಡ್ತಿ ಬಂದ ಸಂಬಳನೆಲ್ಲ? ನಿನ್ನ ಖರ್ಚಿಗಾದ್ರೂ ಸಾಕಾಗತ್ತೆ ತಾನೆ?
ಇಲ್ಲಿರೋದು ವ್ಯಂಗ್ಯಾನೋ ಸಹಾನುಭೂತಿಯೋ.. ಅದು ನೀವ್ ಅರ್ಥಮಾಡಿಕೊಂಡ ಹಾಗೆ!
ನಮಗೂ ಇದೇ ಯೋಚನೆಗಳು ಬಿಡಿ. ರೂಮ… ಬಾಡಿಗೆ 4000, ಬ್ಯಾಂಕ್‌ಲೋನ್ 3000 ಮನೆಗೊಂದೆರಡು ಸಾವಿರ. ತಿಂಗಳ ಮೊದಲಿಗೆ ಸಿಕ್ಕ ಎಂಟರಿಂದ ಹತ್ತು ಸಾವಿರ ಮೊದಲ ದಿನವೇ ಹಂಚಿಯಾಯಿತು. ಇನ್ನು ತಿಂಗಳ ಕೊನೆಯನ್ನು ಕಾಯುವುದೊಂದೇ ಕೆಲ್ಸ. ಮತ್ತೆ ರೂಮಿಗೋ, ಪಿಜಿಗೋ ಬರೊದು, ಪೆನ್ನು ಪಟ್ಟಿ ಹಿಡಿದುಕೊಂಡು ಈ ತಿಂಗಳ ಹತ್ತು ಸಾವಿರ ಹೇಗೆ ಖರ್ಚಾಯ್ತು?
ಲೆಕ್ಕಾಚಾರ ತಲೆಕೆಳಗಾಗಿ ನಿಂತ್ರು ಬ್ಯಾಲೆ®Õ… ಮಾತ್ರ ನಿಲ…. ಕೊನೆಗೆ ಬೆಂಗಳೂರಿಗೆ ಬೈದು ಬೈದು ಬಾಯಿ ಚಪಲ ತೀರಿಸಿಕೊಳ್ಳುತ್ತಾ ಕೊನೆಗೆ ಅಪ್ಪಮಾಡೋ ಶುಂಠಿ ಬೇಸಾ
ಯಕ್ಕಾದ್ರೂ ಕೈ ಜೋಡಿಸಿದ್ರೆ ಒಳ್ಳೆಯದೇನೋ ಅಂದುಕೊಳ್ಳುವಷ್ಟರಲ್ಲಿ ಮೊಬೈಲ… ರಿಂಗ್. ಏನಮ್ಮಾ ಸ್ಯಾಲರಿ ಸಿಕ್ತಾ...? ನಮ್ಮ ಜೀವನ ನಮಗೇ ಭಾರವಾಗಿ ಬಿಟ್ಟಿದೆ ಅಥವಾ ದುಬಾರಿಯಾಗಿಬಿಟ್ಟಿದೆ.
ಇನ್ನೊಂದು ಮುಖ್ಯ ವಿಷಯ ಅಂದ್ರೆ ಬೆಂಗಳೂರಲ್ಲಿ ಬದುಕೋದಕ್ಕೆ ಈ ಹಣ, ಮನೆ ಎಷ್ಟು ಮುಖ್ಯಾನೋ ಅಷ್ಟೇ ಬಾಯ…ಫ್ರೆಂಡ್, ಗರ್ಲ್ಫ್ರೆಂಡ್ ಇರೋದಂತೆ! ಈ
ಸೌಲಭ್ಯಗಳಿಂದ ವಂಚಿತರಾದವರು ಹೇಳ್ಳೋ ಮಾತಿದು. ಇದೆಷ್ಟು ಸತ್ಯಾನೋ ಏನೋ ಆದರೆ ಹೀಗೊಬ್ಬ ಜೊತೆಗಾರರಿಲ್ಲದ, ಸ್ನೇಹಿತರೂ ಇಲ್ಲದ ಮೊಬೈಲ… ಕೂಡಾ ಸೈಲೆಂಟ… ಆಗಿಬಿಡತ್ತೆ. ಯಾವುದೋ ಕೆಲಸ ಮಾಡುವುದಕ್ಕೆ ಯೋಗ್ಯ ಎಂದು ನಮಗೆ ನಾವೇ ಒಂದಿಷ್ಟು ತಿಂಗಳ ಸಂಬಳಕ್ಕೆ ಬೆಲೆಕಟ್ಟಿ ಆ ಹಣಕ್ಕಾಗಿ ಕಾಯುತ್ತಿ¨ªೆವÇÉಾ ಈ ಜೀವನವನ್ನು ಯಾರಲ್ಲಿ ಹೇಳಿಕೊಳ್ಳೋಣ?
- ಪೂರ್ಣಿಮಾ ಹಡಿನಬಾಳ