ಕತ್ರಿನಾ ಕೈಫ್ ಹಾಗೂ ರಣಬೀರ್ ಕಪೂರ್ ನಡುವೆ ಏನೋ ನಡೆಯುತ್ತಿದೆ ಎಂಬ ಸುದ್ದಿ ಈಗ ಬಿಟೌನ್‌ನಿಂದ ಕೇಳಿಬರುತ್ತಿದೆ. ಆಗಾಗ ಇಬ್ಬರು ಜೊತೆಯಾಗಿ ಸುತ್ತಾಡುವುದನ್ನು ಕೂಡಾ ಅನೇಕರು ನೋಡಿದ್ದಾರಂತೆ. ಇದು ಬಾಲಿವುಡ್‌ನ ಒಬ್ಬ ವ್ಯಕ್ತಿಯ ಮೂಡ್ ಆಫ್ ಮಾಡಿದೆ. ಅದು ಎಷ್ಟರ ಮಟ್ಟಿಗೆಂದರೆ ಕತ್ರಿನಾ ಎದುರು ಸಿಕ್ಕರೂ ಮಾತನಾಡದಷ್ಟು ಎಂದರೆ ನೀವು ನಂಬಲೇಬೇಕು. ಆ ವ್ಯಕ್ತಿ ಬೇರಾರು ಅಲ್ಲ, ಒನ್ ಅಂಡ್ ಒನ್ಲಿ ಸಲ್ಮಾನ್ ಖಾನ್. ರಣಬೀರ್ ಜೊತೆ ತನ್ನ ಮಾಜಿ ಪ್ರೇಯಸಿ ಸುತ್ತುವ ಸುದ್ದಿ ಸಲ್ಲುಗೆ ತುಂಬಾ ಇರಿಟೇಟ್ ಆದಂತಿದೆ. ಜೊತೆಗೆ ಕತ್ರಿನಾ ಮೇಲೂ ಸಿಟ್ಟು ಬಂದಂತಿದೆ. ಅದು ಇತ್ತೀಚೆಗೆ ಪ್ರದರ್ಶನ ಕೂಡಾ ಆಯಿತು. ಅದಕ್ಕೆ ವೇದಿಕೆಯಾಗಿದ್ದು, ಸಿಸಿಎಲ್ ಕಾರ್ಯಕ್ರಮ. ಮೂರನೇ ವರ್ಷದ ಸೆಲೆಬ್ರೆಟಿ ಕ್ರಿಕೆಟ್ ಲೀಗ್‌ನ ಕಾರ್ಯಕ್ರಮವನ್ನು ಮುಂಬೈನಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಲ್ಲು, ಕತ್ರಿನಾ, ಸೇರಿದಂತೆ ಅನೇಕರು ಭಾಗವಹಿಸಿದ್ದರು ಮತ್ತು ಕಾರ್ಯಕ್ರಮ ಕೂಡಾ ನೀಡಿದರು. ಆದರೆ ಕತ್ರಿನಾ ಮತ್ತು ಸಲ್ಲು ಮಾತ್ರ ಆ ಕಾರ್ಯಕ್ರಮದಲ್ಲಿ ಎಲ್ಲೂ ಮುಖಾಮುಖೀಯಾಗಲಿಲ್ಲ. ಅದೆಷ್ಟೋ ಬಾರಿ ಕತ್ರಿನಾ ಎದುರು ಬಂದರೂ ಸಲ್ಲು ಮಾತ್ರ ಆಕೆಯ ಮುಖ ನೋಡದೇ ಹೋಗುತ್ತಿದ್ದ ಎಂಬುದು ಪ್ರತ್ಯಕ್ಷ ದರ್ಶಿಗಳ ಮಾಹಿತಿ. ಕಾರ್ಯಕ್ರಮದ ವೇಳೆಯೂ ಸಲ್ಲು ಹಾಗೂ ಕತ್ರಿನಾ ಜೊತೆಯಾಗಿ ಭಾಗವಹಿಸದೇ ತಮ್ಮ ಮುನಿಸು ತೋಡಿಕೊಂಡರಂತೆ. ಅದ್ಯಾಕೋ ಗೊತ್ತಿಲ್ಲ, ಸಲ್ಲುಗೆ ಆರಂಭದಿಂದಲೂ ಕತ್ರಿನಾ ವೇಳೆ ಸಿಕ್ಕಾಪಟ್ಟೆ ಲವ್. ಬ್ರೇಕಫ್ ಆದ ನಂತರವೂ ಇಬ್ಬರು ಫ್ರೆಂಡ್ಲಿಯಾಗಿದ್ದರು. ಈಗ ರಣಬೀರ್ ಹೆಸರು ಕೇಳುತ್ತಿದ್ದಂತೆ ಸಲ್ಲು ಪಿತ್ತ ನೆತ್ತಿಗೇರಿದೆ.