Monday, May 20, 2013
Last Updated: 8:50:18 PM IST
  • ನಾನೆಲ್ಲಿರುವೆ:
  • ಮುಖಪುಟ Cinema ಸ್ಯಾಂಡಲ್‌ವುಡ್‌ ವಾರ್ತೆಗಳು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ದಿವಾನ್‌ಗಿರಿ ಮಾಡ್ತವ್ರೆ
    • ''''ಇಲ್ಲೆ ಇಲ್ಲೆ ಇಲ್ಲೇ ನನ್ನ ಮನಸು ಕಾಣೆಯಾಗಿದೆ...'' ಬಹುಶಃ ಈ ಹಾಡು ಕೇಳದವರಿಲ್ಲ. ಇಂಥಾ ಸೂಪರ್‌ ಮೆಲೋಡಿ ಸಾಂಗ್‌ ಕ

      • Udayavani | Jan 21, 2013

        'ಇಲ್ಲೆ ಇಲ್ಲೆ ಇಲ್ಲೇ ನನ್ನ ಮನಸು ಕಾಣೆಯಾಗಿದೆ...' ಬಹುಶಃ ಈ ಹಾಡು ಕೇಳದವರಿಲ್ಲ. ಇಂಥಾ ಸೂಪರ್‌ ಮೆಲೋಡಿ ಸಾಂಗ್‌ ಕೊಟ್ಟಿದ್ದು ಸಂಗೀತ ನಿರ್ದೇಶಕ ಗಿರಿಧರ್‌ ದಿವಾನ್‌. ಬಹಳ ದಿನಗಳ ಬಳಿಕ ಮತ್ತೆ ಗಿರಿಧರ್‌ ಸುದ್ದಿಯಾಗುತ್ತಿದ್ದಾರೆ. ಈ ಬಾರಿ ಅವರೊಂದು 'ಸಖತ್‌' ಆಗಿರೋ ಚಿತ್ರವೊಂದಕ್ಕೆ ಮತ್ತೂಮ್ಮೆ ಮಧುರ ಸಂಗೀತ ನೀಡಲು ಉತ್ಸುಕರಾಗಿದ್ದಾರೆ. ಅಷ್ಟೇ ಅಲ್ಲ, ಇದೇ ಮೊದಲ ಸಲ ಅವರು ಆ ಚಿತ್ರಕ್ಕೆ ಕ್ಯಾಮೆರಾಮೆನ್‌ ಆಗಿಯೂ ಕೆಲಸ ಮಾಡುತ್ತಿದ್ದಾರೆಂಬುದೇ ವಿಶೇಷ. ಅಂದಹಾಗೆ, ಆ ಚಿತ್ರಕ್ಕೆ 'ಸಖತ್ತಾಗವೆ°' ಎಂದು ನಾಮಕರಣ ಮಾಡಲಾಗಿದೆ. ಕಾರ್ತಿಕ್‌ ಚಿತ್ರದ ಹೀರೋ. ಯಾರೀ ಕಾರ್ತಿಕ್‌ ಅನ್ನೋ ಕನ್‌ಫ್ಯೂಷನ್‌ ಇದ್ದರೆ, ಹಾಗೊಮ್ಮೆ 'ಬಾಬಾ' ಚಿತ್ರ ನೆನಪು ಮಾಡಿಕೊಳ್ಳಿ. ಅದೇ ಹುಡುಗ ಈಗ ಸಖತ್ತಾಗಿ ಕ್ಯಾಮೆರಾ ಮುಂದೆ ನಿಲ್ಲಲು ಅಣಿಯಾಗಿದ್ದಾರೆ. ಇನ್ನು, ವಿಷ್ಣುದಾಸ್‌ ನಿರ್ದೇಶಕರು. ನಿರ್ಮಾಣದ ಜವಾಬ್ದಾರಿಯೂ ಅವರದೇ. ಸದ್ಯಕ್ಕೆ ಚಿತ್ರದ ನಾಯಕಿಯ ಹುಡುಕಾಟ ನಡೆಯುತ್ತಿದೆ.

        ಗಿರಿಧರ್‌ ದಿವಾನ್‌ ಮೊದಲ ಸಲ ಕ್ಯಾಮೆರಾ ಹಿಡಿಯುತ್ತಿದ್ದರೂ, ಆರಿಕ್ಯಾಮ್‌ ಲೈಟ್‌ ಬಳಸುತ್ತಿದ್ದಾರೆ. ಅದು ತುಂಬಾ ಕಾಸ್ಟಿ$Éà ಕ್ಯಾಮೆರಾ. ರೇಟ್‌ ಜಾಸ್ತಿಯಾದರೂ ನಿರ್ಮಾಪಕರು ಸಿನಿಮಾ ಚೆನ್ನಾಗಿ ಬರಬೇಕು ಎಂಬ ಉದ್ದೇಶದಿಂದ ಎಲ್ಲದಕ್ಕೂ ಪ್ರೋತ್ಸಾಹಿಸುತ್ತಿದ್ದಾರೆಂಬುದು ಗಿರಿಧರ್‌ ಹೇಳಿಕೆ.

        ಗಿರಿಧರ್‌ ಬೇಸಿಕಲಿ ಸ್ಟಿಲ್‌ಫೋಟೋಗ್ರಾಫ‌ರ್‌. ಅದಕ್ಕೂ ಹೆಚ್ಚಾಗಿ ಚಿಕ್ಕಂದಿನಿಂದಲೂ ಅವರಿಗೆ ಸಂಗೀತದ ಮೇಲೆ ಪ್ರೀತಿ. ಕರ್ನಾಟಕ ಕ್ಲಾಸಿಕಲ್‌ ಗೊತ್ತು. ಜತೆಗೆ ಒಳ್ಳೆಯ ತಬಲಿಸ್ಟ್‌ ಕೂಡ. ಅವರಿಗೆ ಬುದ್ಧಿಬಂದಾಗಿನಿಂದಲೂ ಸಂಗೀತದ ವ್ಯಾಮೋಹ ಬೆಳೆಸಿಕೊಂಡಿದ್ದಾರೆ. ಇಲ್ಲಿಯವರೆಗೆ ಸುಮಾರು 48 ಕ್ಕೂ ಹೆಚ್ಚು ಆಲ್ಬಂ ಮಾಡಿದ್ದಾರೆ. ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ 'ಪಲ್ಲವಿ ಅನುಪಲ್ಲವಿ','ಕುರಿಬಾಂಡ್‌' ಮತ್ತು 'ಚಿತ್ರಲೇಖ' ಧಾರಾವಾಹಿಗಳಿಗೆ ಇವರದೇ ಟೈಟಲ್‌ ಟ್ರಾಕ್‌. ಗಿರಿಧರ್‌ಗೆ ಇದು ಹದಿನಾಲ್ಕನೇ ಸಿನಿಮಾ. ಸದ್ಯಕ್ಕೆ ಇವರ ಸಂಗೀತ ನಿರ್ದೇಶನದ 'ಜಿದ್ದಿ','ನೀನೇನಾ ಭಗವಂತ',' ಆಂತರ್ಯ' ರಿಲೀಸ್‌ಗೆ ರೆಡಿಯಾಗಿವೆ. 'ಚಿರು' ಚಿತ್ರದ ಸಂಗೀತ ನಿರ್ದೇಶನಕ್ಕೆ ಎಫ್ನಿಂದ ಬೆಸ್ಟ್‌ ಮ್ಯೂಸಿಕ್‌ ಅವಾರ್ಡ್‌ ಕೂಡ ಲಭಿಸಿದೆ.

        ಅಂದಹಾಗೆ, 'ಸಖತ್ತಾಗವೆ°' ಇದೊಂದು ಫ್ಯಾಮಿಲಿ ಓರಿಯೆಂಟೆಡ್‌ ಚಿತ್ರ. ನಿರ್ದೇಶಕ ವಿಷ್ಣುದಾಸ್‌ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಗೌಸ್‌ಪೀರ್‌ ಸಂಭಾಷಣೆ ಬರೆಯುತ್ತಿದ್ದಾರೆ. ಜಯಂತ್‌ಕಾಯ್ಕಿಣಿ, ಕವಿರಾಜ್‌ ಅವರ ಸಾಹಿÂವಿದೆ. ಸುಮಾರು 50 ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಉಳಿದಂತೆ ಕೇರಳದಲ್ಲೂ ಶೂಟಿಂಗ್‌ ನಡೆಸುವ ಐಡಿಯಾ ನಿರ್ದೇಶಕರದ್ದು. ಜನವರಿ 28 ರಿಂದ ಶೂಟಿಂಗ್‌ ಶುರು.







      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      ಭಾನುವಾರ ನಡೆದ ''ರೋಜ್‌' ಚಿತ್ರದ ಮುಹೂರ್ತ ಒಂದಷ್ಟು ವಿಶೇಷಗಳಿಗೆ ಸಾಕ್ಷಿಯಾಯಿತು. ಮುಹೂರ್ತಕ್ಕೆ ಅತಿಥಿಗಳಾಗಿ ಆಗಮಿಸಿದ ಶಿವರಾಜ್‌ ಕುಮಾರ್‌ ದಂಪತಿಗೆ ಅಲ್ಲಿ ಅಚ್ಚರಿಯೊಂದು ಕಾದಿತ್ತು.
      • ಈ ವಿಭಾಗದಲ್ಲಿಯೂ ಇದೆ
      • picಟೀವಿಕ್ಲಬ್‌ ಗೃಹಪ್ರವೇಶ
        ಅಂತೂ ಟೆಲಿವಿಷನ್‌ ಕಲ್ಚರಲ್‌ ಮತ್ತು ನ್ಪೋರ್ಟ್ಸ್ ಕ್ಲಬ್‌ ಸದ್ದಿಲ್ಲದೆ ಸಾಧನೆ ಮಾಡಿದೆ. ಸ್ವಂತದ್ದೊಂದು ಕಟ್ಟಡ ನಿರ್ಮಾಣಕ್ಕೆ ಸಂಘ ಕೈ ಹಾಕಿ ಎರಡು ವರುಷ ಕಳೆದಿದೆ. ಅಷ್ಟರಲ್ಲೇ ಅದ್ಭುತವಾದ ಕ್ಲಬ್‌ ಕಟ್ಟಡ ನಿರ್ಮಾಣವಾಗಿದೆ.
      image
      • Copyright @ 2009 Udayavani.All rights reserved.
      • Designed & Hosted By 4cplus