Sunday, May 19, 2013
Last Updated: 1:09:48 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕೃಷಿ-ವಾಣಿಜ್ಯ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ದೇಸಿ ಮಸೂರಿ
    • ಸೋನಾ ಮಸೂರಿ ನೆಲದಲ್ಲಿ ದೇಸಿ ತಳಿ ಸಿದ್ಧಸಣ್ಣ ಭತ್ತ ಸಣ್ಣಗೆ ನಗು ಬೀರಿದೆ.

      • ಸುರೇಶ.ಎನ್‌.ಧಾರವಾಡಕರ | Jan 22, 2013

        ರಾಯಚೂರು ಜಿಲ್ಲೆ ಸೋನಾ ಮಸೂರಿ ರುಚಿಗೆ ಹೆಸರುವಾಸಿ. ರಾಜ್ಯದಲ್ಲಿ ಅಷ್ಟೇ ಅಲ್ಲ, ಹೊರ ರಾಜ್ಯದಲ್ಲೂ ತನ್ನ ಕಂಪನ್ನು ಪಸರಿಸಿದೆ. ಅಂಥ ಸೋನಾ ಮಸೂರಿ ನೆಲದಲ್ಲಿ ದೇಸಿ ತಳಿ ಸಿದ್ಧಸಣ್ಣ ಭತ್ತ ಸಣ್ಣಗೆ ನಗು ಬೀರಿದೆ.

        "ಎಲ್ಲಾ ಭತ್ತದ ತಳಿಗಳು ಮಾಗಲು ಮೂರು ತಿಂಗಳ ಸಮಯ ಬೇಕು. ಆ ನಂತರವಷ್ಟೇ ಊಟಕ್ಕೆ ಬಳಸಬಹುದು. ಆದರೆ, ಈ ತಳಿಯ ವಿಶೇಷ ಎಂದರೇ ಭತ್ತ ಕಟಾವ್‌ ಮಾಡಿದ ಮಾರನೇ ದಿನವೇ ಊಟಕ್ಕೆ ಬಳಸಬಹುದು. ಸೋನಾ ಮಸೂರಿಗಿಂತಲೂ ಗಾತ್ರದಲ್ಲಿ ಚಿಕ್ಕದು ಇದೆ. ಅತೀ ಕಡಿಮೆ ನೀರಿನಲ್ಲಿಯೂ ಬೆಳೆಯಬಹುದು' ಭತ್ತದ ದೇಸಿ ತಳಿಯಾದ ಸಿದ್ಧಸಣ್ಣ ಗುಣ ವಿಶೇಷತೆ ಕುರಿತು ಸಿಂಧನೂರು ತಾಲೂಕಿನ ಹೊಸಳ್ಳಿ ಕ್ಯಾಂಪನ ಯುವ ರೈತ ಶಿವರಾಜ ರಾಮರೆಡ್ಡಿ ಹೇಳುತ್ತಿದ್ದರು.

        ಹೌದು, ಇಂದು ಜಿÇÉೆಯಲ್ಲಿ ನೀರಿಲ್ಲದೇ ಭತ್ತ ಬೆಳೆಯುವುದಿಲ್ಲ ಎಂಬ ಪರಿಸ್ಥಿತಿ ಇದೆ. ಮೇಲಾºಗದ ಹಾಗೂ ಕೆಳಭಾಗದ ರೈತರು ತುಂಗೆಯ ಸಲುವಾಗಿ ಜಗಳ ಕಾಯುವುದು, ರಸ್ತೆ ತಡೆ ನಡೆಸುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಶಿವರಾಜ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಇರುವ ನೀರಿನಲ್ಲಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಬೇಕಾದ ವ್ಯವಸ್ಥೆ ಬಗ್ಗೆ ಗಮನಹರಿಸಿ¨ªಾರೆ. ಅದಕ್ಕೆ ಅವರು ಮೈಸೂರು ಜಿÇÉೆಯ ಟಿ.ನರಸಿಪುರದ ಸಾವಯವ ಕೃಷಿರಾದ ]ನಿವಾಸಮೂರ್ತಿ ಅವರಿಂದ ಕಡಿಮೆ ನೀರಿನಲ್ಲಿ ಅಧಿಕ ಬೆಳೆ ಬೆಳೆಯುವ ದೇಸಿ ತಳಿಯಾದ ಸಿದ್ಧಸಣ್ಣ ಬೀಜ ತಂದಿ¨ªಾರೆ. ಮೊದಲು ಮನೆ ಬಳಕೆಗೆ ಅಂತ ಒಂದು ಎಕರೆಯಲ್ಲಿ ಸಿದ್ಧಸಣ್ಣ ತಳಿ ನಾಟಿ ಮಾಡಿ¨ªಾರೆ.

        ಅವರ ಹೊಲದಲ್ಲಿ  ಹತ್ತಾರು ವರ್ಷಗಳಿಂದ ನೀರು ನಿಂತು ಜೌಗು ರೂಪ ಪಡೆದಿತ್ತು. ಅಲ್ಲಿಂದ ನೀರು ಹೊರಹೋಗಲು ಬಸಿಗಾಲುವೆ ಮಾಡಿದರು. ವಾರಕ್ಕೊಮ್ಮೆ ಬರುವ ಕಾಲುವೆ ನೀರನ್ನು ಹೊಲಕ್ಕೆ ಹಾಯಿಸುತ್ತಾರೆ.  ನೀರನ್ನು ಹೆಚ್ಚು ಹೊತ್ತು ಹೊಲದಲ್ಲಿ ನಿಲ್ಲಿಸುವುದಿಲ್ಲ. ಸೋನಾ ಮಸೂರಿ ಹಾಗೂ ಇತರೇ ಭತ್ತದ ತಳಿಗಳಂತೆ, ಸಿದ್ಧಸಣ್ಣ ದೇಸಿ ತಳಿಗೆ ಹೆಚ್ಚು ನೀರು ಬೇಕಿಲ್ಲ. ಅದಕ್ಕೆ ಈ ಬಸಿಗಾಲುವೆ ವ್ಯವಸ್ಥೆ.

        ಕೈ ಹಿಡಿದ ಅಕಾಲಿಕ ಮಳೆ

        ಇತ್ತೀಚೆಗೆ ಎರೆಡು ದಿನ ಬಂದ ಅಕಾಲಿಕ ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಇದೆ. ಅದಕ್ಕೆ ಕಾರಣ ತಿಪ್ಪೆಗೊಬ್ಬರ ಹಾಗೂ ಕುರಿಹಿಕ್ಕೆ. ತಿಪ್ಪೆಗೊಬ್ಬರ ಹಾಗೂ ಕುರಿಹಿಕ್ಕೆಗೆ ತೇವಾಂಶ ಹಿಡಿದಿಡುವ ಸಾಮರ್ಥ್ಯ ಇದೆ. ಅದಕ್ಕಾಗಿ ಮತ್ತೆ ಗೊಬ್ಬರ ಹಾಕಿಲ್ಲ. ಬದಲಾಗಿ ಹಸಿರೆಲೆಗೊಬ್ಬರಕ್ಕಾಗಿ ಡಾವಿಂಚಿ ಹಾಗೂ ಅಜೋಲಾ ಸಸ್ಯ ಬೆಳೆಸಿ¨ªಾರೆ. ಒಂದು ಸಲ ಗೊಮೂತ್ರ ಸಿಂಪರಣೆ ಮಾಡಿದ್ದು ಬಿಟ್ಟರೇ ಮಾತ್ಯಾವ ಔಷಧಿಯ ಸಿಂಪರಣೆಯಾಗಿಲ್ಲ.

        ಸಿದ್ಧಸಣ್ಣ ತಳಿಗೆ ಹೆಚ್ಚು ನೀರು ಬೇಕಿಲ್ಲ. ಮೈಸೂರು ಭಾಗದಲ್ಲಿ ತಂಪಾದ ವಾತಾವರಣ ಇರುತ್ತದೆ. ಅಲ್ಲಿನ ವಾತಾವರಣಕ್ಕೆ ಈ ಭತ್ತದ ಬೆಳೆ ತುಂಬಾ ಚೆನ್ನಾಗಿ ಬರುತ್ತದೆ. ರಾಯಚೂರು ಬಿಸಿಲಿಗೆ ಬೆಳೆಯುತ್ತದೆಯೋ ಇಲ್ಲವೋ ಎಂಬ ಅನುಮಾನ ಇತ್ತು. ಆದರೆ ಇತ್ತೀಚೆಗೆ ವಾತಾವರಣದಲ್ಲಿ ಆದ ಬದಲಾವಣೆಯಿಂದ ಚಳಿ ಇದೆ. ಈ ಚಳಿಯಿಂದ ಭತ್ತಕ್ಕೆ ತಂಪಾದ ವಾತಾವರಣ ಸಿಕ್ಕಿದೆ. ಹೀಗಾಗಿ ಬೆಳೆ ಚೆನ್ನಾಗಿ ಬಂದಿದೆ ಎನ್ನುವುದು ಶಿವರಾಜ ಹೇಳುವ ಉತ್ತರ.

        ಬೆಣ್ಣೆಜೇಕು ಕಳೆ

        ಈ ಸಿದ್ಧಸಣ್ಣ ಭತ್ತದ ಜೊತೆ ಬೆಣ್ಣೆಜೇಕು ಕಳೆ ಹೆಚ್ಚು ಬೆಳೆಯುತ್ತದೆ. ಕಳೆ ಕೀಳುವುದೇ ಒಂದು ಹೆಚ್ಚಿನ ಕೆಲಸ ಅಷ್ಟೇ. " ಬೆಣ್ಣೆಜೇಕು ಕಳೆ ತುಂಬಾ ಮೆತ್ತಗೆ ಇರುವುದರಿಂದ ಬೇರು ಸಮೇತ ಕಿತ್ತು ಬರುತ್ತದೆ. ಅದಕ್ಕಾಗಿ ನಾವೇನೂ ಔಷಧಿ ಅಥವಾ ಬೇರೆ ಯಾವುದೇ ಕೀಟನಾಶಕ ಸಿಂಪರಣೆ ಮಾಡಿಲ್ಲ' ಎನ್ನುತ್ತಾರೆ ಶಿವರಾಜ… ರಾಮರೆಡ್ಡಿ.
         
        ದೇಸಿತಳಿಗಳನ್ನು ನಿರ್ಲಕ್ಷಿಸುತ್ತಾ ಸಾಗಿರುವ ನಮ್ಮ ಕೃಷಿ ಅಭಿವೃದ್ಧಿ, ನಿಜವಾದ ರಾಷ್ಟ್ರೀಯ ಅಭಿವೃದ್ಧಿಗೆ ಪೂರಕವೋ ಮಾರಕವೋ ಎನ್ನುವುದನ್ನು ಅರಿಯದ ಸ್ಥಿತಿಗೆ ನಾವು ತಲುಪಿ¨ªೆವೆ.  ಇದೇ ಹೊತ್ತಲ್ಲಿ ಪೌಷ್ಟಿಕಾಂಶ ಹೊಂದಿದ ದೇಸಿ ತಳಿ ಸಿದ್ಧಸಣ್ಣ ಸಣ್ಣಗೆ ನಗೆ ಬೀರಿದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus