Monday, May 20, 2013
Last Updated: 1:45:18 AM IST
  • ನಾನೆಲ್ಲಿರುವೆ:
  • ಮುಖಪುಟ Supplements ಅವಳು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಜಲಜಾಕ್ಷಿ, ಇರಲಿ ನಿನ್ನ ಮೈಲಿ ಜಲ ಜಾಸ್ತಿ
    • ನೀರು ನಮ್ಮ ಜೀವನದ ಬಹುಮುಖ್ಯ ಪೋಷಕಾಂಶ. ವೈಜ್ಞಾನಿಕವಾಗಿ ಇದು ಸಾಬೀತಾಗಿದೆ ಕೂಡ. ಮನುಷ್ಯ ಆಹಾರವಿಲ್ಲದೆ 2 ತಿಂಗಳು ಬದುಕ

      • Udayavani | Jan 22, 2013

        ನೀರು ನಮ್ಮ ಜೀವನದ ಬಹುಮುಖ್ಯ ಪೋಷಕಾಂಶ. ವೈಜ್ಞಾನಿಕವಾಗಿ ಇದು ಸಾಬೀತಾಗಿದೆ ಕೂಡ. ಮನುಷ್ಯ ಆಹಾರವಿಲ್ಲದೆ 2 ತಿಂಗಳು ಬದುಕಬಲ್ಲ. ಆದರೆ ನೀರಿಲ್ಲದೆ ಕೆಲವೇ ದಿನಗಳಷ್ಟೇ ಬದುಕಲು ಸಾಧ್ಯ. ಸಾಮಾನ್ಯವಾಗಿ ಮನುಷ್ಯನ ದೇಹದಲ್ಲಿ ಶೇ 60-65ರಷ್ಟು ನೀರು ಇರಲೇಬೇಕು.

        ನೀರು ಕುಡಿಯುವುದರಿಂದ ಏನಾಗುತ್ತದೆ?
        (ಬುಲೆಟ್ಸ್‌ ಹಾಕಿ)
        ನೀರು ದೇಹದ ಕೋಶಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ರವಾನಿಸುತ್ತದೆ.
        ದೇಹದ ಮಾಂಸಖಂಡಗಳಿಗೆ ಕುಷನ್‌ ರೀತಿಯಲ್ಲಿ ಆಧಾರವಾಗಿರುತ್ತದೆ.
        ಸ್ನಾಯುಗಳ ಜೊತೆಯಲ್ಲಿ ಲ್ಯುಬ್ರಿಕೇಟ್‌ ರೀತಿ ವರ್ತಿಸುತ್ತದೆ.
        ದೇಹದ ಉಷ್ಣಾಂಶ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
        ಆಹಾರದ ಚಯಾಪಚಯ ಕ್ರೀಯೆ ನಡೆಯುವಾಗ ರಾಸಾಯನಿಕ ಬದಲಾವಣೆ ಸಹಾಯ ಮಾಡುತ್ತದೆ.
        ದೇಹದ ತ್ಯಾಜ್ಯ ಮೂತ್ರ ರೂಪದಲ್ಲಿ ಹೊರಹೋಗಲು ಸಹಾಯ ಮಾಡುತ್ತದೆ.

        ನೀರು ಕುಡಿಯದೇ ಇದ್ದರೆ ಏನಾಗುತ್ತದೆ?
        (ಬುಲೆಟ್ಸ್‌ ಹಾಕಿ)
        ಜೀರ್ಣಕ್ರೀಯೆಯಲ್ಲಿ ಸಮಸ್ಯೆ.
        ಸ್ನಾಯು ಸೆಳೆತ.
        ಒಣ ತ್ವಚೆ.
        ಜೀವಕೋಶಗಳ ಶಕ್ತಿ ಕುಂಠಿತ.
        ಸ್ನಾಯು ಊತ.
        ದೇಹದಲ್ಲಿ ಆಮ್ಲಿàಯ ಪ್ರಮಾಣ ಹೆಚ್ಚಳ.
        ದೇಹದ ಕೊಬ್ಬಿನ ಪ್ರಮಾಣ ಹೆಚ್ಚಳ.
        ನಿರ್ಜಲೀಕರಣ.
        ಮೈಗ್ರೇನ್‌.
        ಬಾಯಿಯ ದುರ್ವಾಸನೆ.

        ನಮ್ಮ ಮೆದುಳು ಹಸಿವು ಮತ್ತು ಬಾಯಾರಿಕೆಯನ್ನು ಪ್ರತ್ಯೇಕವಾಗಿ ಪರಿಗಣಿಸುವುದಿಲ್ಲ. ನಿಮಗೆ ಹಸಿವಾಗುತ್ತಿದೆ ಎಂದ ಕೂಡಲೇ ಉಣ್ಣುವ ಬದಲು ನೀರು ಕುಡಿದು ಆನಂತರ ಏನಾದರೂ ತಿನ್ನಿ. ನೀವು ತಿನ್ನುವ ಆಹಾರದಲ್ಲೂ ಹಾಗೇ, ದ್ರವದ ಪ್ರಮಾಣ ಹೆಚ್ಚು ಇರುವಂತೆ ನೋಡಿಕೊಳ್ಳಬೇಕು. ನೀರಿನ ಪ್ರಮಾಣ ದೇಹಕ್ಕೆ ಬೇಕು ಅಂದ ಮಾತ್ರಕ್ಕೆ ನೀರಿನಿಂದಲೇ ಹೊಟ್ಟೆ ತುಂಬಿಸಿಕೊಳ್ಳುವ ಪ್ರವೃತ್ತಿಯೂ ಸರಿಯಲ್ಲ.
        ದಿನಕ್ಕೆ ಏಳರಿಂದ ಎಂಟು ಗ್ಲಾಸುಗಳಷ್ಟು ನೀರು ದೇಹಕ್ಕೆ ಬೇಕು. ಅದು ಜ್ಯೂಸಿನ ರೂಪದಲ್ಲಿರಬಹುದು, ಹಾಲು, ಹೆಚ್ಚು ನೀರಿನಂಶವಿರುವ ಆಹಾರ, ತರಕಾರಿಗಳ ರೂಪದಲ್ಲಿರಬಹುದು. ಏರ್‌ಕಂಡೀಷನ್‌ನಲ್ಲಿ ಕೆಲಸ ಮಾಡುವವರು ಹೆಚ್ಚು ನೀರನ್ನು ಕುಡಿಯಬೇಕು. ನೀವು ಒಂದೊಮ್ಮೆ ಪ್ರೋಟಿನ್‌ ಡಯಟ್‌ ಮಾಡುತ್ತಿದ್ದರೆ (ಪ್ರೋಟೀನ್‌ ಇರುವ ಅಂಶದ ಆಹಾರವನ್ನೇ ಸೇವಿಸುತ್ತಿರುವುದು) ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಲೇಬೇಕು, ಏಕೆಂದರೆ ಪ್ರೋಟೀನ್‌ಯುಕ್ತ ಆಹಾರ ಸರಿಯಾಗಿ ಜೀರ್ಣವಾಗಬೇಕು ತಾನೇ? ನಿಮ್ಮ ತೂಕವನ್ನು ಕಡಿಮೆ ಮಾಡಕೊಳ್ಳಬೇಕು ಎಂದು ಯೋಚಿಸುತ್ತಿದ್ದರೆ ಒಂಟೆ ತನ್ನ ಡುಬ್ಬದಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳುವ ಹಾಗೆ ನೀರು ನಿಮ್ಮ ದೇಹದಲ್ಲಿ ಸಾಕಷ್ಟು ಶೇಖರಣೆಯಾಗುವಂತೆ ನೋಡಿಕೊಳ್ಳುತ್ತಿರಿ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಕಿರುತೆರೆ ಮತ್ತು ಸಿನಿಮಾದಲ್ಲಿ ಬಾಲನಟಿಯಾಗಿ ಮಿಂಚಿದವರು ಸುಶ್ಮಿತಾ. ''ಕವಲುದಾರಿ' ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಕಿರುತರೆಗೂ, ''ಎಕ್ಸ್‌ಕ್ಯೂಸ್‌ ಮಿ' ಮೂಲಕ ಹಿರಿತ
      • ಈ ವಿಭಾಗದಲ್ಲಿಯೂ ಇದೆ
      • picವಸಂತ ಬರೆದನು ಒಲವಿನ ಓಲೆ...
        ಹೇಳಿ ಕೇಳಿ ಇದು ಮೇ ತಿಂಗಳು. ಇಂಗ್ಲೆಂಡ್‌ನ‌ಂಥ ದೇಶಕ್ಕೆ ಲವಲವಿಕೆಯ ಕಾಲವಿದು. ಅಂತೂ ಎಲ್ಲರೂ ಕಾಯುತ್ತಿರುವ ಸ್ಪ್ರಿಂಗ್‌ ಕಾಲ ಬಂದುಬಿಟ್ಟಿತು ಎಂಬುದು ಸಂತಸದ ವಿಷಯ.
      image
      • Copyright @ 2009 Udayavani.All rights reserved.
      • Designed & Hosted By 4cplus