ಇದೊಂದು ಅಮೇರಿಕನ್ ಫಾಸ್ಟ್‌ಫುಡ್. ಅಮೇರಿಕನ್ನರ ಪ್ರಸಿದ್ಧ ಸಂಜೆಯ ತಿಂಡಿ. ಬೇಕಾಗುವ ಸಾಮಾಗ್ರಿಗಳು ಎರಡು ಟೀಸ್ಪೂನ್ ಅಡುಗೆ ಎಣ್ಣೆ ಅರ್ಧ ಕೇ.ಜಿ ಚಿಕನ್ ಎರಡು ಶುಂಠಿಯ ತುಂಡುಗಳು ಮೂರರಿಂದ ನಾಲ್ಕು ಬೆಳ್ಳುಳ್ಳಿ ಎಸಳುಗಳು ಎರಡು ಟೇಬಲ್‌ಸ್ಪೂನ್ ಸೋಯಾಸಾಸ್ ಒಂದು ಟೀಸ್ಪೂನ್ ರೆಡ್‌ಪೆಪ್ಪರ್ ಪೌಡರ್ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಳುಮೆಣಸು ಪುಡಿ ಮಾಡುವ ವಿಧಾನ ಲಿಟ್ಯೂಸ್ ಎಲೆಗಳನ್ನು ತೆಗೆದುಕೊಂಡು ಸ್ವತ್ಛವಾಗಿ ತೊಳೆದು ಒಣಗಿಸಿ ಮಂದ ಉರಿಯಲ್ಲಿ ಬಾಡಿಸಿಕೊಳ್ಳಿ. ಅಡುಗೆ ಎಣ್ಣೆಯನ್ನು ಬಾಣಲೆಗೆ ಹಾಕಿ ಅದಕ್ಕೆ ಚಿಕನ್ ಹಾಕಿ ಎಣ್ಣೆಯಲ್ಲಿ ಕಂದುಬಣ್ಣ ಬರುವವರೆಗೆ ಕರಿಯುತ್ತಾ ಇರಿ. ಈಗ ಅದಕ್ಕೆ ಬೆಳ್ಳುಳ್ಳಿ, ಸೋಯಾಸಾಸ್, ಶುಂಠಿಪೇಸ್ಟ್, ಕಾಳುಮೆಣಸು ಪುಡಿ, ಉಪ್ಪು ಹಾಕಿ ಒಂದು ನಿಮಿಷ ಫ್ರೈ ಮಾಡಿ. ಸ್ಟೌವ್‌ನಿಂದ ಕೆಳಗಿಳಿಸಿ ಮತ್ತೆ ರೆಡ್‌ಪೆಪ್ಪರ್ ಪುಡಿ ಉದುರಿಸಿ ಲಿಟ್ಯೂಸ್ ಎಲೆಯಲ್ಲಿ ಸುತ್ತಿ ಸವಿಯಿರಿ. -ಸಾನ್ನಿಧ್ಯ