Tuesday, June 18, 2013
Last Updated: 11:45:50 AM IST
  • ನಾನೆಲ್ಲಿರುವೆ:
  • ಮುಖಪುಟ Supplements ಅವಳು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಶ್‌, ಯಾರಿಗೂ ಹೇಳ್ಬೇಡಿ...
    • ಭಾಗ್ಯಶ್ರೀ-ಅಪರಾಧ ಕಾರ್ಯಕ್ರಮ ನಿರೂಪಕಿ ''''ಅಪರಾಧ ಸುದ್ದಿ, ಫೋಟೋ ನೋಡಿದ್ರೆ ನಂಗೂ ಭಯ-ದುಃಖ ಆಗತ್ತೆ!''

      • Udayavani | Jan 22, 2013

        ಭಾಗ್ಯಶ್ರೀ-ಅಪರಾಧ ಕಾರ್ಯಕ್ರಮ ನಿರೂಪಕಿ
        'ಅಪರಾಧ ಸುದ್ದಿ, ಫೋಟೋ ನೋಡಿದ್ರೆ ನಂಗೂ ಭಯ-ದುಃಖ ಆಗತ್ತೆ!'
        ಗಡಸು ಧ್ವನಿ, ದಿಟ್ಟ ನಿಲುವು, ಮುಖದಲ್ಲಿ ಒಂದಿಷ್ಟು ಸಿಟ್ಟು ಸೆಡೆವು ತುಂಬಿಕೊಂಡು ಅಪರಾಧಿ ಜಗತ್ತಿನ ಸುದ್ದಿಗಳ ಹೊತ್ತು ತರುವ ಭಾಗ್ಯಶ್ರೀ ನಿಮಗೆ ಗೊತ್ತಿರಲೇಬೇಕು. ಅಪರಾಧ ಮಾಡಿದ ಪಾಪಿಗಳ ಬಗ್ಗೆ ಪಂಚಿಂಗ್‌ ಡೈಲಾಗ್‌ ಹೊಡೆಯುತ್ತ ಅಷ್ಟೇ ನಿಷ್ಠುರವಾಗಿ ಅವರ ಪಂಚಾಂಗ ಹೊರಹಾಕುವ ಭಾಗ್ಯಶ್ರೀ ತಮ್ಮ ಖಡಕ್‌ ನಿರೂಪಣೆಯಿಂದ ವೀಕ್ಷಕರನ್ನು ಹಿಡಿದಿಡುತ್ತಾರೆ. ಓದಿದ್ದು ಬೇರೆ, ವೃತ್ತಿಬೇರೆ. ಉದಯ ಟಿವಿಯಲ್ಲಿ ಮೊದಲ ವೃತ್ತಿ, ನಂತರ 'ಕುಂಕುಮಭಾಗ್ಯ' ಧಾರಾವಾಹಿಯಲ್ಲಿ ಅಭಿನಯ, ತದನಂತರ ಆಗ ತಾನೇ ಕರ್ನಾಟಕದಲ್ಲಿ ತಲೆಯೆತ್ತುತ್ತಿದ್ದ 'ಟೀವಿ 9'ಯಲ್ಲಿ ನಿರೂಪಕಿಯಾಗಿ ಕೆಲಸ. ಐದೂವರೆ ವರ್ಷಗಳ ಕಾಲ ಸೇವೆ. ಸಹೋದ್ಯೋಗಿ ಮಂಜುನಾಥ್‌ ಸಂಜೀವ್‌ ಜೊತೆ ಮದುವೆ, ಮಗು. ಕೊಂಚ ಬ್ರೇಕ್‌ ಪಡೆದು ಸದ್ಯ 'ಪಬ್ಲಿಕ್‌ ಟಿವಿ'ಯಲ್ಲಿ ಲಾಠಿಚಾರ್ಜ್‌ ಕಾರ್ಯಕ್ರಮದ ನಿರೂಪಕಿ. ಅವರ ಮಾತುಗಳು ನಿಮಗಾಗಿ..
        ಭಾಗ್ಯಶ್ರೀ-ಅಪರಾಧ ಕಾರ್ಯಕ್ರಮ ನಿರೂಪಕಿ


        1. ಅಪರಾಧಿ ಸುದ್ಧಿ ಆಧಾರಿತ ಕಾರ್ಯಕ್ರಮ ನಿರೂಪಕಿಯಾಗಿದ್ದರ ಹಿನ್ನೆಲೆ ಹೇಳಿ?
        ನನಗೆ ಜನರಲ್‌ ನ್ಯೂಸ್‌ ಓದಬೇಕು ಅಂತ ಆಸೆಯಿತ್ತು. ಆದರೆ ಟಿವಿ9ಗೆ ಹೋದಾಗ ಕ್ರೈಮ್‌ ಕಾರ್ಯಕ್ರಮ ಮಾಡುವಂತೆ ಹೇಳಿದರು. ಗೊತ್ತಿಲ್ಲದ್ದನ್ನು ಹೇಳಿಕೊಟ್ಟರು. 5 ವರ್ಷಗಳ ಕಾಲ 'ವಾರೆಂಟ್‌' ಮಾಡೆª. ಮಗುವಾದ ಕಾರಣ ಕೆಲಸ ಬಿಟ್ಟೆ. ಅನಂತರ ಹವ್ಯಾಸಿ ನಿರೂಪಕಿಯಾಗಿ ಕೆಲಸ ಮಾಡಲು ಪಬ್ಲಿಕ್‌ ಟಿವಿಯ ಎಚ್‌ಆರ್‌ ರಂಗನಾಥ್‌ ಅವರು ಅವಕಾಶ ಕೊಟ್ಟರು. ಇದೀಗ 'ಲಾಠಿಚಾರ್ಜ್‌' ಮಾಡುತ್ತಾ ಇದ್ದೀನಿ.
        ನಾನು ಅಪರಾಧಿ ಸುದ್ದಿ ಓದಿ¤àನಿ ಅಂತ ಎಲ್ಲ ನನ್ನ ನೋಡಿ ಹೆದರಿಕೊಳ್ತಾರೆ. ಇನ್ನು ವೈಯುಕ್ತಿಕವಾಗಿ ನನಗೆ ಇಂಥ ಕಾರ್ಯಕ್ರಮಗಳನ್ನು ನಡೆಸಿ ಮನೆಗೆ ಬಂದಮೇಲೆ ಊಟ ಸೇರಲ್ಲ, ನಿದ್ರೆ ಬರಲ್ಲ. ಏನೋ ಆತಂಕ, ಬೇಸರ. ಆಫೀಸ್‌ನಿಂದ ಬರುವಾಗ ಹೇಗೆØàಗೋ ಗಾಡಿ ಓಡಿಸ್ಕೊಂಡು ಬರ್ತೀನಿ. ಆಗೆಲ್ಲಾ ಯಜಮಾನರು ಬುದ್ಧಿ ಹೇಳಿದ್ದಿದೆ.
        ಹೆಣ್ಮಕ್ಕಳು ಅಂದ್ರೆ ಅಡುಗೆ ಕಾರ್ಯಕ್ರಮಕ್ಕೋ, ಆರೋಗ್ಯದ ಚರ್ಚೆಗೋ ಸೀಮಿತ ಅಂತಾರೆ.. ನೀವು ಕ್ರೈಮ್‌!
        ನನಗೂ ನ್ಯೂಸ್‌ ಓದಬೇಕು ಅಂತ ಆಸೆಯಿದೆ. ಆದರೆ ಸಿಗಲಿಲ್ಲ. ಈಗ ಮಗು ತುಂಬ ಚಿಕ್ಕದು, ಶಿಫ್ಟ್ ಕೆಲಸ ಮಾಡೋದಕ್ಕೆಲ್ಲಾ ಆಗಲ್ಲ.
        ಅಪರಾಧಿ ಸುದ್ದಿ ನಿರೂಪಕಿಗೆ ಇರುವ ಸವಾಲುಗಳೇನು?
        ತುಂಬಾ ಧೈರ್ಯ ಇರಬೇಕು, ಓಪನ್‌ನೆಸ್‌ ಇರಬೇಕು. ಅಯ್ಯೋ ಇಂಥ ಕಾರ್ಯಕ್ರಮ ಮಾಡ್ತಾ ಇದ್ದೀನಿ, ರೋಡಲ್ಲಿ ಹೋಗುವಾಗ ಜನ ಏನು ಅಂದೊRàತಾರೋ ಅಂತ ಯೋಚಿಸಬಾರದು. ನನಗೂ ಕೊಲೆ, ಅಪಘಾತ ಸುದ್ದಿ, ಫೋಟೋಗಳನ್ನು ನೋಡುವಾಗ ಭಯವಾಗುತ್ತೆ, ಸ್ಟುಡಿಯೋನಲ್ಲಿ ಅಳುನೂ ಬರುತ್ತೆ. ಸಣ್ಣ ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ಎಲ್ಲಾ ಮಾಡಿರ್ತಾರೆ. ಆದರೆ ಯಾವಾಗ ಸ್ಕ್ರಿಪ್ಟ್ ನನ್ನ ಕೈಗೆ ಬರುತ್ತೋ ಆವಾಗ ಮಾತ್ರ ನನಗೆ ಗೊತ್ತಿಲ್ಲದೇ ಗಡಸುತನ ಬರುತ್ತೆ, ಧ್ವನಿ ಗಟ್ಟಿಯಾಗುತ್ತೆ, ಆ ಮ್ಯಾನರಿಸಂ ಕೂಡ ಬಂದು ಬಿಡುತ್ತೆ. ದೃಢಮನಸ್ಸು, ವೃತ್ತಿಪರತೆ ಮುಖ್ಯ.
        ಅಷ್ಟೊಂದು ಖಡಕ್ಕಾಗಿ ಅಪರಾಧಿಗಳ ಬಗ್ಗೆ ಮಾತಾಡುವ ಭಾಗ್ಯಶ್ರೀ ರಿಯಲ್‌ಲೈಫ್ಲ್ಲಿ ಹೇಗಿರ್ತಾರೆ?
        ಖಡಕ್‌ ಭಾಷೆ ನನ್ನ ಅಪ್ಪನಿಂದ ಬಂದಿದ್ದು, ಗಂಡ ಕೂಡ ಸಾಕಷ್ಟು ತಿದ್ದಿದಾರೆ.
        ನಾನು ಮನೆಯಲ್ಲಿ ಸ್ವಲ್ಪ ಹಠಮಾರಿ ಇಂಥದ್ದು ಆಗಬೇಕು ಅಂದ್ರೆ ಆಗಲೇಬೇಕು. ನನಗೆ ಬೇರೆ ಹೆಣ್ಮಕ್ಕಳ ಹಾಗೇ ಬಳೆ, ಸೀರೆ ಆ ಥರ ಆಸೆಪಟ್ಟವಳಲ್ಲ. ನಮ್ಮ ಅಪ್ಪ ಪ್ರಾಥಮಿಕ ಶಾಲೆ ಟೀಚರ್‌ ಆಗಿದ್ರು. ಆವಾಗ ನಮ್ಮ ಮನೆ ಡಾಲರ್ಸ್‌ ಕಾಲೋನಿಯಲ್ಲೇ ಇದ್ದರೂ ತುಂಬಾ ಚಿಕ್ಕ ಮನೆಯಿತ್ತು. ಆಗಿಂದಾನೇ ದೊಡ್ಡ ಮನೆ ಕಟ್ಟಿಸಬೇಕು,ಅಮ್ಮ-ಅಪ್ಪನ್ನ ಕಾರಲ್ಲಿ ಸುತ್ತಿಸಬೇಕು ಅಂತೆಲ್ಲಾ ಆಸೆ, ಹಾಗೇ ಮನೇನೂ ಕಟ್ಟಿಸಿಕೊಂಡೆ. ಅಪ್ಪ-ಅಮ್ಮನಿಗೂ ಒಂದು ಮನೆ ಕಟ್ಟಿಸಿಕೊಟ್ವಿ. ತುಂಬಾ ರಿಸ್ಕಿ ಕೆಲಸ ಅಂದ್ರೆ ಇಷ್ಟ. ಪಿಯುಸಿಯಲ್ಲೇ ಫೋರ್‌ನಾಟ್‌ ಸೆವೆನ್‌ ಗಾಡಿ ತಗೊಂಡಿದ್ದೆ. ಅದನ್ನ ಅಪ್ಪ ಕೊಡಿಸಲಿಲ್ಲ ಅಂತ ಒಂದು ವಾರ ಊಟ ಬಿಟ್ಟಿದ್ದೆ.
        ಯಾವುದಾದರೂ ಕ್ರೈಮ್‌ ನಿಮ್ಮ ತಲೆ ಕೊರೆದಿದ್ದಿದ್ಯಾ?
        ತುಂಬಾ ಇದೆ.. ಅದರಲ್ಲೊಂದು ಇದು. ಒಬ್ಬ ಅಪ್ಪ, ಅವನಿಗೆ ಅವನ ಅತ್ತಿಗೆಯ ಜೊತೆ ಸಂಬಂಧ ಇತ್ತು. ಅವನ ಅತ್ತಿಗೆ ಮಕ್ಕಳಿಗೆ ಆಸ್ತಿ ಸಿಗಲಿ, ನನ್ನ ಮಗುವಿಗೆ ಬೇಡ ಎಂದು ತೀರ್ಮಾನಿಸಿ ಒಂದೂವರೆ ವರ್ಷದ ಹೆಣ್ಣು ಮಗುವಿಗೆ ಶಾಕ್‌ ಕೊಟ್ಟು ಸಾಯಿಸಿದ್ದ. ಅದಕ್ಕಾಗಿ ಆರು ತಿಂಗಳು ಡಿಪ್ರಸ್‌ ಆಗಿದ್ದೆ.
        ಬೆದರಿಕೆ ಕರೆಗಳು ಬಂದಿಲ್ವಾ?
        ಬರ್ತಾ ಇರುತ್ತೆ. ಫೋನ್‌ ರಿಸೀವ್‌ ಮಾಡಲ್ಲ. ಪರಿಚಯದವರ ಜೊತೆ ಮಾತ್ರ ಮಾತಾಡ್ತೀನಿ. ಒಂದು ಬಾರಿ ಮುತ್ತಪ್ಪ ರೈ ಬಗ್ಗೆ ಕಾರ್ಯಕ್ರಮ ಮಾಡಿದ್ವಿ. ಮುಗಿಸಿ ಮನೆಗೆ ಬಂದಿದ್ದೆ . ಒಂದು ಕಾಲ್‌ ಬಂತು, ರಿಸೀವ್‌ ಮಾಡೆª. ಆ ಕಡೆಯಿಂದ 'ನಾನು ಮುತ್ತಪ್ಪ ರೈ' ಅಂದರು! ನನ್ನ ಹೃದಯ ಬಾಯಿಗೆ ಬಂದ ಹಾಗಾಯಿತು. ಆಮೇಲೆ ಅವರೇ ತುಂಬಾ ಚೆನ್ನಾಗಿ ಇತ್ತಮ್ಮ ಖುಷಿಯಾಯ್ತು ಒಂದು ಬಾರಿ ನಿಮ್ಮ ತಂದೆ-ತಾಯಿ ಜೊತೆ ಊಟಕ್ಕೆ ಮನೆಗೆ ಬಾರಮ್ಮಾ ಅಂದರು. ನಿಮ್ಮನ್ನ ಒಂದು ಬಾರಿ ಎದುರಿನಿಂದ ನೋಡಬೇಕು ಅಂದರು. ಆದರೆ ಆ ದಿನ ತುಂಬಾ ಭಯವಾಗಿತ್ತು.
        ತನಿಖಾ ವರದಿ ಮಾಡಿ ಅಪರಾಧಿಗಳ ಬೆನ್ನೆತ್ತಿ ಹೋಗಿ ಸುದಿ ಮಾಡೋ ಆಸೆಯಿಲ್ವಾ?
        ಟೀವಿ9ನಲ್ಲಿ ಇದ್ದಾಗ ಮೊದಲೆಲ್ಲಾ ಬರೇ ಹಿಡನ್‌ ಕ್ಯಾಮರಾ ಇಟ್ಟುಕೊಂಡು ಸ್ಟಿಂಗ್‌ ಅಪರೇಷನ್‌ ಮಾಡ್ತಾ ಇದ್ದೆ. ಬಹಳ ರಿಸ್ಕಿ ಜಾಬ್‌, ಆದರೆ ತುಂಬಾನೇ ಇಷ್ಟ. ನಕಲಿ ಮಾರ್ಕ್ಸ್ ಕಾರ್ಡ್‌ ದಂಧೆಗೆ ಸ್ಟೂಡೆಂಟ್‌ ಥರ ಹೋಗ್ತಾ ಇದ್ದೆ. ನಾನಾ ವೇಷ ಹಾಕ್ತಿದ್ದೆ. ಆಮೇಲೆ ಜನರಿಗೆ ಮುಖ ಪರಿಚಯ ಆದ ಮೇಲೆ ಚಾನೆಲ್‌ನವರೇ 'ಜೀವಕ್ಕೆ ಅಪಾಯ, ಬೇಡ' ಅಂದರು.
        ನಿರೂಪಕಿಯಲ್ಲದ ಭಾಗ್ಯಶ್ರೀ ಹೇಗಿರ್ತಾರೆ?
        ಭೂತಬಂಗ್ಲೆ ಥರ ಮನೆ. ದಿನದಲ್ಲಿ ಎರಡರಿಂದ ಮೂರು ಗಂಟೆ ನಿರೂಪಕಿ ಕೆಲಸ. ನಮ್ಮ ಮನೆಯನ್ನ ಧಾರಾವಾಹಿ ಶೂಟಿಂಗ್‌ಗೆ ಬಾಡಿಗೆ ಕೊಟ್ಟಿದೀವಿ, ಅವರ ಜೊತೆ ಮಾತಾಡ್ತಾ ಸಮಯ ಕಳೀತೀನಿ. ಇದರ ಮಧ್ಯೆ ಪುಟ್ಟ ಮಗಳ ಜೊತೆ ಆಟ-ಊಟ ಅಂತ ದಿನ ಕಳೆಯುತ್ತೆ. ನನಗೆ ಮನೆ ಕಟ್ಟಿಸೋದರಲ್ಲಿ ತುಂಬಾ ಆಸಕ್ತಿ, ಹಾಗಾಗಿ ಆ ಬಗ್ಗೆನೂ ಪ್ಲಾನ್‌ ಮಾಡ್ತಿರ್ತೀನಿ.
        ರಾಷ್ಟ್ರೀಯ ವಾಹಿನಿಗಳ ನೋಡಿ ಅನುಕರಣೆ ಮಾಡೋದು ಇದ್ಯಾ?
        ತುಂಬಾ ನೋಡ್ತೀನಿ. ಅವರ ಮ್ಯಾನರಿಸಂ, ಡ್ರೆಸ್‌, ವಾಕಿಂಗ್‌ ಸ್ಟೈಲ್‌ ಎಲ್ಲಾ ಗಮನಿಸ್ತೀನಿ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus