Udayavani | Jan 22, 2013
ಒಂದು ಟೆಕ್ನಿಕ್. ಬಾಸ್, ಅಕೌಂಟೆಂಟ್, ಆಫೀಸರ್, ಕ್ಲರ್ಕ್, ಅವರಿವರೆನ್ನದೆ ಎಲ್ಲರ ಬಳಿ ಅವರ ಬಾಲ್ಯದ, ಸಣ್ಣಗಿರುವಾಗಿನ ಫೋಟೋ ಹುಡುಕಿಸಿ ತರಿಸಿ ದಿನಕ್ಕೊಬ್ಬರ ಫೋಟೋ ನೋಟೀಸ್ ಬೋರ್ಡಲ್ಲಿ ಹಾಕುವುದು. ಕೆಳಗೊಂದು ಪ್ರಶ್ನೆ. ಇವರು ಯಾರು ಬಲ್ಲಿರೇನು?
ಆಫೀಸಿಗೆ ರಜೆ ಹಾಕಿ ಮನೆಯಲ್ಲಿದ್ದವರಿಗೆ ನಟ್ಟನಡು ಮಧ್ಯಾಹ್ನ ಅಂಚೆಯಲ್ಲಿ ಪೋಸ್ಟ್‌ಕಾರ್ಡೊಂದು ಬರುತ್ತದೆ. ತುಂಬಾ ಕುತೂಹಲದಿಂದ ಹೋಗಿ ಪೋಸ್ಟ್ ಮ್ಯಾನ್ ಕೈಯಿಂದ ಆ ಪೋಸ್ಟ್‌ಕಾರ್ಡನ್ನು ತೆಗೆದುಕೊಂಡು ನೋಡಿದರೆ ಅದರಲ್ಲಿ ತಲೆಗೆ ಹ್ಯಾಟು ಹಾಕಿಕೊಂಡು ಸೈಕಲ್ ಓಡಿಸುತ್ತಿರುವ ಚಿಂಪಾಂಜಿ. ಅದರ ಕೆಳಗೊಂದು ಸಾಲು.
ಈ ಹೊತ್ತಿಗೆ ನೀವು ಇಲ್ಲಿರಬೇಕಿತ್ತು!
- ಇಂತಿ ನಿಮ್ಮ ಆಫೀಸು
ಅಷ್ಟು ಹೊತ್ತಿಗೆ ನಿಮ್ಮ ಮುಖದಲ್ಲಿ ಸಣ್ಣದಾಗಿಯೋ, ದೊಡ್ಡದಾಗಿಯೋ ನಗು ಮೂಡಿರುತ್ತದೆ. ಮನೆಯಲ್ಲಿ ಸಣ್ಣಗೆ ಜಗಳವಾಗಿದ್ದರೆ ಈ ಪೋಸ್ಟ್‌ಕಾರ್ಡ್ ನೋಡಿ ಮೂಡ್ ಸರಿಯಾಗಿರುತ್ತದೆ. ಇಷ್ಟು ಮಾತ್ರದ ಸೆನ್ಸ್ ಆಫ್ ಹ್ಯೂಮರ್ ಇದ್ದರೆ ಜಗತ್ತು ತುಂಬಾ ಚೆನ್ನಾಗಿರುತ್ತದೆ.
ಸೈಲೆಂಟ್ ಹ್ಯೂಮರ್. ಇಲ್ಲಿ ಮಾತಿಲ್ಲ. ಬೊಬ್ಬೆಯಿಲ್ಲ. ಜಗಳವಿಲ್ಲ. ಹೊಡೆತವಿಲ್ಲ. ಆದರೂ ನಗು ಇರುತ್ತದೆ. ನಗು ಸಂಬಂಧವನ್ನು ಚೆಂದಗಿರಿಸುತ್ತದೆ. ಆಫೀಸಿನಲ್ಲಿ ಒಬ್ಬರಿಗೊಬ್ಬರು ನಗುತ್ತಾ ಮಾತನಾಡಿಸುತ್ತಿದ್ದರೆ ವಾತಾವರಣ ಚೆನ್ನಾಗಿರುತ್ತದೆ. ಚೆನ್ನಾಗಿರುವ ವಾತಾವರಣದಲ್ಲಿ ಮಾಡಿದ ಕೆಲಸ ಅದ್ಭುತವಾಗಿರುತ್ತದೆ. ಇದಕ್ಕೆ ತುಂಬಾ ಖರ್ಚು ಮಾಡಬೇಕಿಲ್ಲ. ತುಂಬಾ ತಲೆಕೆಡಿಸಿಕೊಳ್ಳಬೇಕಿಲ್ಲ. ಅದ್ಭುತ ಸೆನ್ಸ್ ಆಫ್ ಹ್ಯೂಮರ್ ಕೂಡ ಬೇಕಾಗಿಲ್ಲ.
ನೋಟಿಸ್ ಬೋರ್ಡು
ಎಲ್ಲಾ ಆಫೀಸಿನ, ಎಲ್ಲಾ ಕಂಪನಿಯ ಕಾರಿಡಾರಿನ ತುದಿಯಲ್ಲೋ, ಪ್ರವೇಶ ಬಾಗಿಲಿನ ಬದಿಯಲ್ಲೋ, ಎಚ್‌ಆರ್ ಚೇಂಬರಿನ ಎದುರಲ್ಲೋ ಒಂದು ನೋಟಿಸು ಬೋರ್ಡು ಇರುತ್ತದೆ. ಅಲ್ಲಿ ಆ ಕಾಗದ, ಈ ನೋಟೀಸು, ರಜಾ ಲಿಸ್ಟು, ನ್ಯೂಸ್ ಲೆಟರು, ಮೂಲೆಮನೆ ರಂಗಪ್ಪಣ್ಣನ ಗೃಹಪ್ರವೇಶ ಆಮಂತ್ರಣ, ಆ ಮೈಸೂರು ಹುಡುಗಿಯ ಮದುವೆ ಇನ್ವಿಟೇಷನ್ನು ಏನೇನೋ ಅಂಟಿಕೊಂಡಿರುತ್ತದೆ. ಅಲ್ಲಿ ಸ್ವಲ್ಪ ಜಾಗವಿದ್ದರೂ ಸಾಕು ಒಂದು ಅದ್ಭುತ ತಮಾಷೆ ನಡೆದುಹೋಗುತ್ತದೆ.
- ಆಫೀಸಿನಲ್ಲಿ ಒಂದು ಕಾರ್ಯಕ್ರಮ ನಡೆಯುತ್ತದೆ. ಯಾರಾರೋ ಏನೇನೋ ಮಾಡುತ್ತಿರುತ್ತಾರೆ. ಅಲ್ಲೊಬ್ಬ ಫೋಟೋಗ್ರಾಫರ್ ಇರುತ್ತಾನೆ. ಆತ ಅವರು ಇವರಿಗೆ ಗೊತ್ತೇ ಆಗದಂತೆ ಫೋಟೋ ತೆಗೆಯುತ್ತಿರುತ್ತಾನೆ. ಯಾರಿಗೂ ಗೊತ್ತಾಗದಂತೆ ಎಲ್ಲವೂ ಸೆರೆಯಾಗುತ್ತದೆ. ಫೋಟೋಗ್ರಾಫರ್‌ಗೆ ಎಂತೆಂಥದೋ ಫೋಟೋಗಳು ಸಿಗುತ್ತವೆ. ಫನ್ನಿ ಫೋಟೋಸ್. ಯಾರೋ ಒಬ್ಬರು ಕಸದ ತೊಟ್ಟಿ ಮಂಗನ ಹೆಗಲಿಗೆ ಕೈ ಹಾಕಿರುತ್ತಾರೆ. ಇನ್ನೊಬ್ಬರು ಮತ್ತೂಬ್ಬನಿಗೆ ಒದಿಯೋ ಥರ ನಿಂತಿರುತ್ತಾರೆ. ಈ ಫೋಟೋಗೊಂದು ಫನ್ನಿ ಕ್ಯಾಪ್ಷನ್ ಕೊಟ್ಟು ನೋಟಿಸ್ ಬೋರ್ಡಿಗೆ ಬೀಳುವ ಹಾಗೆ ಮಾಡಿದರೆ ಸಾಕು. ಒಂದು ದಿನಪೂರ್ತಿ ಆಫೀಸಲ್ಲಿ ನಗುವೋ ನಗು.
- ಬಾಸ್, ಅಕೌಂಟೆಂಟ್, ಆಫೀಸರ್, ಕ್ಲರ್ಕ್, ಅವರು ಇವರು ಎಲ್ಲರ ಬಳಿ ಅವರ ಬಾಲ್ಯದ, ಸಣ್ಣಗಿರುವಾಗಿನ ಫೋಟೋ ಇದ್ದೇ ಇರುತ್ತದೆ. ಹುಡುಕುವುದು ಕಷ್ಟ ಆಗಬಹುದು. ಬೇಕೇಬೇಕೆಂದು ಆ ಫೋಟೋಗಳನ್ನು ಹುಡುಕಿಸಿ ತರಿಸಿ ಒಂದು ದಿನ ಒಬ್ಬರ ಫೋಟೋ ನೋಟೀಸ್ ಬೋರ್ಡಲ್ಲಿ ಹಾಕಿ ಆ ಫೋಟೋ ಕೆಳಗೊಂದು ಪ್ರಶ್ನೆ.
ಇವರು ಯಾರು ಬಲ್ಲಿರೇನು?
ತಮಾಷೆ ಶುರುವಾಗುವುದು ಆಗಲೇ. ಯಾರಿದು ಯಾರಿದು ಎಂದು ಗೆಸ್ ಮಾಡಲು ಶುರು ಮಾಡಿದಾಗ.
- ಪುಟ್ಟದಿರುವಾಗಿನ ಫೋಟೋ ಕಲೆಕ್ಟ್ ಮಾಡಿದ ನಂತರ ಹರೆಯದ ಫೋಟೋಗಳು. ಎಂತೆಂಥದೋ ಫ್ಯಾಷನ್ ಡ್ರೆಸ್ಸಲ್ಲಿ ಕಾಣಿಸಿಕೊಂಡ ಜಗದೇಕವೀರರ ಪೋಸುಗಳು, ಸುರಸುಂದರಾಂಗಿಯರ ಕ್ಯಾಟ್‌ವಾಕ್ ಫೋಟೋಗಳನ್ನು ಹೇಗೆØàಗೋ ಕಲೆಕ್ಟ್ ಮಾಡಿ ನೋಟೀಸ್ ಬೋರ್ಡಲ್ಲಿ ಹಾಕಿದರೆ ಅದಕ್ಕಿಂತ ದೊಡ್ಡ ತಮಾಷೆ ಇದೆಯಾ? ದಪ್ಪಗಿರುವವರು ತೆಳ್ಳಗಿರುತ್ತಾರೆ. ಚಿತ್ರವಿಚಿತ್ರ ಎಕ್ಸ್‌ಪ್ರೆಷನ್ ಕೊಟ್ಟಿರುತ್ತಾರೆ. ಗೊತ್ತಿಲ್ಲದೆ ಕಲೆಕ್ಟ್ ಮಾಡಿ ಹಾಕಿದರೆ ಅಚ್ಚರಿ. ಜೊತೆಗೆ ಶಾಕ್. ಉಳಿದವರಿಗೆಲ್ಲಾ ಮಸ್ತ್ ಮಜಾ.
ಲೆಟರ್ಸು, ಮೆಮೋಸು
ಆಗೀಗೊಂದು ಮೆಮೋ, ವಾರಕ್ಕೊಂದು ಲೆಟರು ಇದೆಲ್ಲಾ ಅತಿ ಸಾಮಾನ್ಯ. ಕೆಲವೊಂದು ಸಲ ಬೋರಾಗುವಷ್ಟು ಕಾಡಿರುತ್ತದೆ. ಮೆಮೋ ನೋಡಿ ನೋಡಿ ಬೇಜಾರು ಬಂದಿರಲೂಬಹುದು. ಲೆಟರು ಓದಿ ಓದಿ ಕಂಗಾಲಾಗಿರಲೂಬಹುದು. ಸ್ವಲ್ಪ ಹಾಸ್ಯಪ್ರಜ್ಞೆ ಇದ್ದರೂ ಅಲ್ಲೂ ಆಸಕ್ತಿಕರ ಬದಲಾವಣೆ ತರಬಹುದು. ವಾಣಿಜ್ಯ, ಕಾನೂನು ಸಂಬಂದಿಸಿದಂತೆ ಇರಬಹುದಾದ ಈ ಮೆಮೋ, ಲೆಟರುಗಳಲ್ಲಿ ಪದಗಳನ್ನು ಸ್ವಲ್ಪ ಆಚೀಚೆ ಮಾಡಿದರೂ ಕಾಮಿಡಿಯಾಗುತ್ತದೆ. ಹಾಗೆ ಮಾಡಲು ನಿಮಗೆ ಅದ್ಭುತ ಸೆನ್ಸ್ ಆಫ್ ಹ್ಯೂಮರ್ ಇರಬೇಕೆಂದೇನಿಲ್ಲ. ತುಂಬಾ ಚೆನ್ನಾಗಿ ಬರೆಯಬೇಕು ಅಂತಲೂ ಇಲ್ಲ. ಒಂದೆರಡು ಹೆಚ್ಚುವರಿ ಪದ ಬಳಸಿದರೆ ಅಷ್ಟೇ ಸಾಕು. ಆ ಪದಗಳು ಬೇರೆ ಅರ್ಥಗಳನ್ನು ಹೊಳೆಯಿಸುವಂತಿದ್ದರೆ ಸಾರ್ಥಕ ಮೆಮೋ.
ಒಂದು ಪ್ರಸಿದ್ಧ ಕಂಪನಿ. ಆ ಕಂಪನಿ ಬಾಸ್ ಕೆಲವೊಂದು ರಬ್ಬರ್ ಸ್ಟಾಂಪ್‌ಗ್ಳನ್ನು ರೆಡಿ ಮಾಡಿ ಇಟ್ಟುಕೊಂಡಿದ್ದರು. ಅವರು ಏನಾದರೂ ಹೇಳಬೇಕೆಂದಿದ್ದರೆ, ಲೆಟರ್ ಕೊಡಬೇಕೆಂದಿದ್ದರೆ ಹಾಳೆಯ ಮೇಲೆ ರಬ್ಬರ್ ಸ್ಟಾಂಪ್ ಹೊಡೆಯುತ್ತಿದ್ದರು. ಅದರಲ್ಲಿ ಹೋಗ್ಲಿ ಬಿಡಿ, ಆಲ್ ದಿ ಬೆಸ್ಟ್, ಮುಂದುವರಿಸಿ ಈ ಥರ ಎಲ್ಲಾ ಬರೆದಿರುತ್ತಿತ್ತು. ಅವರು ಮಾತಾಡುತ್ತಿರಲಿಲ್ಲ. ರಬ್ಬರ್ ಸ್ಟಾಂಪ್ ಮಾತಾಡುತ್ತಿತ್ತು. ಒಂಥರಾ ಫನ್ನಿ ಅನ್ನಿಸುತ್ತಿತ್ತು. ಇದೇ ಥರ ಅಂತಲ್ಲ. ಸ್ವಲ್ಪ ಬಿನ್ನ ನಡವಳಿಕೆಯೇ ನಗು ತರಿಸುತ್ತದೆ.
ನ್ಯೂಸ್‌ಲೆಟರ್ಸು
ಬಹಳ ಕಂಪನಿಗಳಲ್ಲಿ ನ್ಯೂಸ್‌ಲೆಟರ್ ಇರುತ್ತದೆ. ಕೆಲಸಗಾರರಿಗೆ ಮಾಹಿತಿ ಕೊಡಲು, ಗ್ರಾಹಕರಿಗೆ ಸುದ್ದಿ ನೀಡಲು ಈ ಥರದ ನ್ಯೂಸ್ ಲೆಟರ್ ಬಳಕೆಯಾಗುತ್ತದೆ. ಅದರಲ್ಲಿ ತುಂಬಾ ಸಲ ಒಣ ಮಾಹಿತಿ ತುಂಬಿರುತ್ತದೆ. ಅಲ್ಲಲ್ಲಿ ಕಾಟೂìನುಗಳಿರುತ್ತವೆಯಾದರೂ ಓದಿಸುವಷ್ಟು ಶಕ್ತಿ ಅದಕ್ಕಿರುವುದಿಲ್ಲ. ನಗಿಸದಿದ್ದರೆ ನ್ಯೂಸ್ ಲೆಟ್ರಾ ಅನ್ಯಾಯವಾಗಿ ಮೂಲೆ ಸೇರುತ್ತದೆ. ಆಗೆಲ್ಲಾ ಯಾವುದಾದರೂ ತಮಾಷೆ ನುಡಿಮುತ್ತುಗಳನ್ನು ಹಾಕಿ ನ್ಯೂಸ್‌ಲೆಟರ್ಸನ್ನು ಇಂಟರೆಸ್ಟಿಂಗಾಗಿ ರೂಪಿಸಬಹುದು.
ಆರೋಗ್ಯ ಸಂಬಂಧಿ ಪುಸ್ತಕಗಳನ್ನು ಓದುವಾಗ ಎಚ್ಚರವಾಗಿರಿ. ಒಂದೇ ಒಂದು ಮುದ್ರಣ ದೋಷ ನಿಮ್ಮನ್ನು ಸಾವಿನೆಡೆಗೆ ಕೊಂಡೊಯ್ಯಬಹುದು.
- ಮಾರ್ಕ್ ಟೆ„ನ್
ಇದೊಂದು ಒಂಥರಾ ಫನ್ನಿ ಕೊÌàಟ್. ನಿಜ ಅನ್ನಿಸುತ್ತದೆ. ಜೊತೆಗೆ ನಗು ಬರಿಸುತ್ತದೆ. ಇಂಥಾ ಇಂಟರೆಸ್ಟಿಂಗ್ ನುಡಿಮುತ್ತುಗಳು ಸಾಕಷ್ಟಿರುತ್ತವೆ. ಅವುಗಳನ್ನು ಬಳಸಿ ನ್ಯೂಸ್‌ಲೆಟರ್‌ಗಳಲ್ಲಿ ಜೀವ ತರಬಹುದು. ಇನ್ನೊಂದು ನುಡಿಮುತ್ತು ಹೀಗಿದೆ ನೋಡಿ-
ನಾನೊಬ್ಬ ಒಳ್ಳೆ ಮನೆ ಕೆಲಸಗಾರ. ಪ್ರತಿಸಲ ನಾನು ಮನೆಯನ್ನು ಕ್ಲೀನ್ ಮಾಡಿದಾಗಲೂ ನನ್ನ ಹೆಂಡತಿ ಡೈವೋರ್ಸು ಕೊಡುತ್ತೇನೆ ಅನ್ನುತ್ತಾಳೆ.
- ಝಾ ಝಾ ಗೇಬರ್