Friday, May 24, 2013
Last Updated: 8:05:31 PM IST
  • ನಾನೆಲ್ಲಿರುವೆ:
  • ಮುಖಪುಟ Supplements ಬಹುಮುಖಿ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಗುರಿ ಹಿಡಿದ ಆರ್ಚರಿ
    • ಗೊತ್ತು ಗುರಿಯಲ್ಲದ ಭಾರತೀಯ ಆರ್ಚರಿಗೆ ನಿಧಾನವಾಗಿ ನಿಖರ ಗುರಿ ಕಂಡುಕೊಳ್ಳುತ್ತಿದೆ. ಉತ್ತರ ಭಾರತದ ಮಣಿಪುರ, ಹರಿಯಾಣ,

      • Udayavani | Jan 23, 2013

        ಗೊತ್ತು ಗುರಿಯಲ್ಲದ ಭಾರತೀಯ ಆರ್ಚರಿಗೆ ನಿಧಾನವಾಗಿ ನಿಖರ ಗುರಿ ಕಂಡುಕೊಳ್ಳುತ್ತಿದೆ. ಉತ್ತರ ಭಾರತದ ಮಣಿಪುರ, ಹರಿಯಾಣ, ಅಸ್ಸಾಂ, ಒರಿಸ್ಸಾ ಜಾರ್ಖಂಡ್‌ ಮುಂತಾದ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಾಗಿದ್ದ ಆರ್ಚರಿ ಈಗ ದೇಶದ ನಾನಾ ಭಾಗಗಳಿಗೂ ಹರಡುತ್ತಿದೆ. ಇದಕ್ಕೆ ಲಂಡನ್‌ ಒಲಿಂಪಿಕ್ಸ್‌ ಪರೋಕ್ಷ ಕಾರಣ ಎಂಬುದು ವಿಶೇಷ. - ಎಸ್‌.ಆರ್‌.ಆರ್‌.

        ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕನಿಷ್ಠ ಮೂರು ಪದಕಗಳ ನಿರೀಕ್ಷೆಯೊಂದಿಗೆ ತೆರಳಿದ್ದ ಭಾರತ ತಂಡ ಬರಿಗೈಯಲ್ಲಿ ವಾಪಸ್ಸಾದರೂ ಭಾರತೀಯ ಆರ್ಚರಿಗೆ ಹೊಸ ದಿಶೆ ಲಭಿಸುವಂತೆ ಮಾಡಿತು. ಮಾಧ್ಯಮಗಳಲ್ಲಿ ದೊರೆತ ಪ್ರಚಾರದಿಂದ ಹಿಮ್ಮುಖವಾಗಬೇಕಿದ್ದ ಆರ್ಚರಿ ಕಳಪೆ ಸಾಧನೆಯ ನಂತರವೂ ಯುವ ಸ್ಪರ್ಧಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

        ಇಷ್ಟೆಲ್ಲಾ ಪೀಠಿಕೆ ಹಾಕಲು ಕಾರಣ ಬೆಂಗಳೂರಿನಲ್ಲಿ ನಡೆದ 33ನೇ ರಾಷ್ಟ್ರೀಯ ಸಬ್‌ ಜೂನಿಯರ್‌ ಆರ್ಚರಿಯ ಯಶಸ್ಸು. ಎರಡು ಸಂಸ್ಥೆಗಳು ಸೇರಿದಂತೆ 25 ರಾಜ್ಯದಿಂದ ಆಗಮಿಸಿದ 500ಕ್ಕೂ ಹೆಚ್ಚು ಸ್ಪರ್ಧಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದು ಮಾತ್ರವಲ್ಲ. ಕ್ರಿಕೆಟ್‌ ಪ್ರಿಯ ನಾಡಿನಲ್ಲಿ ಆರ್ಚರಿಗೂ ಭವಿಷ್ಯವಿದೆ ಎಂದು ತೋರಿಸಿಕೊಟ್ಟರು.

        ನಗರದಲ್ಲಿ ನಡೆದ ನಾಲ್ಕು ದಿನಗಳ ಟೂರ್ನಿಯಲ್ಲಿ ಕರ್ನಾಟಕವೂ ಗಮನ ಸೆಳೆಯುವ ಪ್ರದರ್ಶನ ನೀಡಿತು. ಟೂರ್ನಿಯ ಮೊದಲ ದಿನವೇ ಚಿಕ್ಕಮಗಳೂರಿನ ಬಾಲಕಿ ತನುಷಾ ಕಂಚಿನ ಪದಕ ಗೆದ್ದು ಕರ್ನಾಟಕದ ಪರ ಪದಕದ ಖಾತೆ ತೆರೆದರು.

        ಬೆಂಗಳೂರಿನ ಪಿಯುಸಿ ವಿದ್ಯಾರ್ಥಿನಿ ಮೋನಿಷಾ ವಿ. ಶಂಕರ್‌ ಎರಡು ಬೆಳ್ಳಿ ಪದಕ ಗೆದ್ದು ಗಮನ ಸೆಳೆದರು. ರಿರ್ಕ್ನೂ ವಿಭಾಗದ ಬಾಲಕಿಯರ ಸಿಂಗಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೋನಿಷಾ ನಂತರ ರಿರ್ಕ್ನೂ ವಿಭಾಗದ ಮಿಶ್ರ ಡಬಲ್ಸ್‌ನಲ್ಲಿ ಅಭಿರಾಮ್‌ ಜತೆ ಮತ್ತೂಂದು ಬೆಳ್ಳಿ ಪದಕ ಗೆದ್ದುಕೊಂಡರು. ಇದರೊಂದಿಗೆ ಕರ್ನಾಟಕ ತಂಡ 2 ಬೆಳ್ಳಿ ಮತ್ತು 1 ಕಂಚು ಸೇರಿದಂತೆ 3 ಪದಕಗಳೊಂದಿಗೆ 12ನೇ ಸ್ಥಾನಕ್ಕೆ ತೃಪ್ತಿ ಪಡೆಯಿತು.

        ಕರ್ನಾಟಕದಲ್ಲಿ ಆರ್ಚರಿಗಳಿಗೆ ತರಬೇತಿ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಇದನ್ನು ಮನಗಂಡ ಕರ್ನಾಟಕ ಅಮೆಚೂರ್‌ ಆರ್ಚರಿ ಸಂಸ್ಥೆ ನಗರದಲ್ಲಿ 50 ದಿನಗಳ ತರಬೇತಿ ಶಿಬಿರ ಹಮ್ಮಿಕೊಂಡಿತ್ತು. ಇದು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸ್ವಲ್ಪ ಮಟ್ಟಿಗೆ ಕಾರಣವಾಯಿತು. ತರಬೇತಿಗೆ ಬೇಕಾದ ಸೌಲಭ್ಯಗಳು ಬೆಂಗಳೂರಿನಲ್ಲಿ ಇರುವುದರಿಂದ ಇತರ ಗ್ರಾಮೀಣ ಪ್ರದೇಶದ ಸ್ಪರ್ಧಿಗಳಿಗೆ ಯಾವುದೇ ನೆರವು ದೊರೆಯುತ್ತಿಲ್ಲ. ಒಂದು ವೇಳೆ ಗ್ರಾಮೀಣ ಪ್ರದೇಶದಲ್ಲೂ ಸೂಕ್ತ ಸೌಲಭ್ಯಗಳು ದೊರೆಯುವಂತಾದರೆ ಇನ್ನಷ್ಟು ಉತ್ತಮ ಸಾಧನೆಯನ್ನು ನಿರೀಕ್ಷಿಸಬಹುದು.

        ಟೂರ್ನಿಯಲ್ಲಿ ಸಹಜವಾಗಿ ಉತ್ತರ ಭಾರತದ ರಾಜ್ಯಗಳು ಪ್ರಭುತ್ವ ಸಾಧಿಸಿದ್ದವು. ಅಸ್ಸಾಂ ತಂಡ 6 ಚಿನ್ನ, ತಲಾ 4 ಬೆಳ್ಳಿ ಮತ್ತು ಕಂಚು ಸೇರಿದಂತೆ 14 ಪದಕಗಳೊಂದಿಗೆ ಅಗ್ರಸ್ಥಾನ ಪಡೆಯಿತು. ಎಸ್‌ಪಿಎಸ್‌ಬಿ ತಂಡ 5 ಚಿನ್ನ, 2 ಕಂಚು ಸೇರಿದಂತೆ 6 ಪದಕಗಳೊಂದಿಗೆ ಎರಡನೇ ಸ್ಥಾನ ಗಳಿಸಿತು. ಜಾರ್ಖಂಡರ್‌ (3ಚಿನ್ನ, 8 ಬೆಳ್ಳಿ, 2 ಕಂಚು) ಮೂರನೇ ಸ್ಥಾನಕ್ಕೆ ಕುಸಿಯಿತು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಸಾಧನೆಗೆ ಪಣತೊಟ್ಟು ನಿರಂತರ ಕಠಿಣ ಶ್ರಮ ಹಾಕಿದಲ್ಲಿ ತಡವಾಗಿಯಾದರೂ ಯಶಸ್ಸು ಕಟ್ಟಿಟ್ಟಬುತ್ತಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅದಕ್ಕೆ ನಿದರ್ಶನವಾಗಿದ್ದು ಸತತ ಕಠಿಣ
      • ಈ ವಿಭಾಗದಲ್ಲಿಯೂ ಇದೆ
      • picಗೊತ್ತೇ ಇಲ್ಲದವರ ಭಾರೀ ಸಾಫ‌ಲ್ಯ
        ಆರನೇ ಆವತರಿಣಿಕೆಯ ಐಪಿಎಲ್‌ ಟೂರ್ನಿ ಇನ್ನೇನು ಅಂತಿಮ ಘಟ್ಟಕ್ಕೆ ಬಂದು ಮುಟ್ಟಿದೆ. ಲೀಗ್‌ ಹಂತ ಮುಗಿದು ಹಲವು ತಂಡಗಳು ಪ್ಲೇ ಆಫ್ನತ್ತ ಸಾಗಿವೆ. ಆದರೆ ಈ ಬಾರಿಯ ಐಪಿಎಲ್‌ ಅನುಭವಿ ಮತ್ತು ಅನನುಭವಿಗಳ ನಡುವೆ ನಡೆದ ಹೋರಾಟ ಹಾಗೂ ಹಳತು -ಹೊಸತು ಮೇಳೈಸಿ ಹೊಸತೊಂದು ರೂಪ ಪಡೆದುಕೊಂಡಂತಾಗಿರುವುದು ವಿಶೇಷ.
      • Copyright @ 2009 Udayavani.All rights reserved.
      • Designed & Hosted By 4cplus