Thursday, June 20, 2013
Last Updated: 4:57:05 AM IST
  • ನಾನೆಲ್ಲಿರುವೆ:
  • ಮುಖಪುಟ Supplements ಬಹುಮುಖಿ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಬುದ್ಧಿಗೆ ಹಿಡಿದ ಗ್ರಹಣಕ್ಕೆ ಗ್ರಹ ಕಾರಣವೇ?
    • ನಮ್ಮ ನಡುವೆ ನಾವು ಸ್ಪಷ್ಟವಾಗಿ ತಿಳಿಯುವ ಹಾಗೆ ಅನೇಕ ಹುಚ್ಚರುಗಳಿರುತ್ತಾರೆ. ಇನ್ನೂ ಅನೇಕರದು ನೇರವಾಗಿ ಹುಚ್ಚು ಎಂದು ಹ

      • Udayavani | Jan 23, 2013

        ನಮ್ಮ ನಡುವೆ ನಾವು ಸ್ಪಷ್ಟವಾಗಿ ತಿಳಿಯುವ ಹಾಗೆ ಅನೇಕ ಹುಚ್ಚರುಗಳಿರುತ್ತಾರೆ. ಇನ್ನೂ ಅನೇಕರದು ನೇರವಾಗಿ ಹುಚ್ಚು ಎಂದು ಹೇಳಲು ಸಾಧ್ಯವಾಗದಂಥ ರೀತಿಯಲ್ಲಿನ ವೈಪರಿತ್ಯಗಳು, ನಡವಳಿಕೆಗಳು. ಹಲವರದು ಭ್ರಮೆಯಲ್ಲಿನ ಪಡಿಪಾಟಲುಗಳು. ತಮ್ಮೊಳಗೇ ಮಾತು, ತಮ್ಮೊಳಗೇ ಚರ್ಚೆ, ತಮ್ಮೊಳಗೇ ಒಂದು ಪ್ರಪಂಚವನ್ನು ಸೃಷ್ಟಿಸಿಕೊಂಡು ಮಾತನಾಡುವುದು ಇತ್ಯಾದಿ ನಡೆಸಿರುತ್ತಾರೆ. ಇನ್ನೂ ಕೆಲವರದು ರಾತ್ರಿಯ ಸಮಯ ನಿದ್ದೆಯಲ್ಲೇ ಓಡಾಡುವುದು. ರಾತ್ರಿಯ ಸಮಯ ಇದ್ದಕ್ಕಿದ್ದಂತೆ ಅವ್ಯಕ್ತ ಭಯದಿಂದ ಚೀರುವುದು, ಕನವರಿಸುವುದು, ಅಸ್ಪಷ್ಟವಾಗಿ ತೊದಲುವುದು ನಡೆಸುತ್ತಿರುತ್ತಾರೆ. ಇನ್ನೂ ಕೆಲವರಿಗೆ ಸದಾ ಯಾರೋ ಕಾಣಿಸುತ್ತ ಇರುತ್ತಾರೆ. ಅವರು ತನ್ನ ಮೇಲೆ ಎರಗಿ, ಹಿಂಸಿಸಿ, ನಾಶ ಮಾಡಲೇ ಬಂದಿದ್ದಾರೆ ಎಂದು ತಿಳಿದು ಭಯ ಪಡುತ್ತಾರೆ. ವಾಸ್ತವದಲ್ಲಿ ಅವರಿಗೆ ಕಾಣಿಸುವ ಮಂದಿ ಬೇರೆಯವರಿಗೆ ಕಾಣಿಸುತ್ತಿರುವುದಿಲ್ಲ. ಅನ್ಯರು ಇಂಥವರ ಬಳಿ 'ಏ, ಸುಮ್ಮನಿರು, ಯಾರೂ ಇಲ್ಲ' ಎಂದು ಹೇಳಿದರೂ, ಹಾಗೇ ಹೇಳಿದವನೂ ತನ್ನ ವಿರುದ್ಧ ಆಕ್ರಮಣ ನಡೆಸುವವನ ಜೊತೆ ಕೈಗೂಡಿಸಿದ್ದಾನೆ ಎಂದೇ ನಂಬಿಕೊಳ್ಳುತ್ತಾರೆ. ಹಾಗೇ ಆಕ್ಷೇಪಿಸುತ್ತಾರೆ.
        ಮನೋಹರ ಚಂದ್ರನೇ ಖಳ ನಾಯಕನೇ?
        ಭೂಮಿಯ ಪರಿವೀಕ್ಷಿಸುವ ಮನೋಹರ ಚಂದ್ರ, ಭೂ ಗ್ರಹದ ಅದೆಷ್ಟೋ ದುರಂತಗಳಿಗೆ ಪ್ರಮುಖನಾದ ಖಳನಾಯಕನಾಗಿದ್ದಾನೆ. ವಿಜ್ಞಾನಿಗಳ ಪ್ರಕಾರ ಭೂ ಗ್ರಹದಲ್ಲೇ ಬಿರುಕೆದ್ದು ಭೂ ಗ್ರಹದ ಒಂದು ತುಂಡು ಸಿಡಿದು ಮೇಲೆದ್ದು ಚಂದ್ರ ಎಂಬ ಉಪಗ್ರಹ ಜನಿಸಿದ್ದು ಒಂದು ಕಡೆ. ಇನ್ನೊಂದೆಡೆ ನಮ್ಮ ಪುರಾಣದ ಪ್ರಕಾರ ಮಥನದ ಸಂದರ್ಭದಲ್ಲಿ ಚಂದ್ರನೂ ಹುಟ್ಟಿ ಬಂದ. ಅದನ್ನು ತ್ರಿಮೂರ್ತಿಗಳಲ್ಲಿ ಒಬ್ಬನಾದ ಪರಮೇಶ್ವರ ಶಿರದಲ್ಲಿ ಧರಿಸಿದ. ಸೂಕ್ಷ್ಮವಾಗಿ ಗಮನಿಸಿದರೆ ಲಯಕರ್ತನಾದ ಶಿವನೂ, ನಂಜನ್ನೂ ಕುಡಿದು ಕಂಠದಲ್ಲೇ ಹಿಡಿದಿಟ್ಟುಕೊಂಡ ವಿಷಕಂಠನು ನಮಗೆ ತೇಜೋಮಯನೆನಿಸುವ ಚಂದ್ರನನ್ನೂ ಧಾರಣ ಮಾಡಿಕೊಂಡಿದ್ದಾನೆ. ಶಿವನಲ್ಲಿನ ಪ್ರಳಯ ತತ್ವ ಚಂದ್ರನಿಗೂ ಸೇರಿ ಕೊಂಡಿದೆ. ಶಿವ ಶಾಂತನಾಗಿ ಸದಾಶಿವನೂ ಹೌದು. ತಾಂಡವ ಶಕ್ತಿಯಾಗಿ ರುದ್ರ ಭೀಕರನೂ ಹೌದು. ಚಂದ್ರನಿಗೂ ಇದೇ ಮಾತು, ಶಕ್ತಿ, ಸತ್ವ ಮೈಗೂಡಿಸಿಕೊಂಡಿದೆ.
        ಹಿಟ್ಲರನು ನಡೆಸಿದ ಯಹೂದಿಗಳ ಮಾರಣ ಹೋಮ, ಜಗತ್ತಿನ ಮೇಲೆ ಹೇರಿದ ಮಹಾಯುದ್ಧ, ವಿಷಪೂರ್ಣವಾದ ರಾಹುವಿನ ದಶಾಕಾಲದ ಚಂದ್ರ ಭುಕ್ತಿಯ ಸಂದರ್ಭದಲ್ಲಿ ಅಪಾರವಾದ ಧೈರ್ಯವನ್ನು ಚಂದ್ರನು ದುಷ್ಟ ಕಾರಣಕ್ಕಾಗಿ ರಾಹು (ಸರ್ಪ)ವಿನ ಮೂಲಕ ಹಿಟ್ಲರ್‌ನಲ್ಲಿ ತುಂಬಿ ಜಗತ್ತಿನ ದರುಂತವೊಂದನ್ನ ಬರೆಸುವಂತೆ ಮಾಡಿದ. ಇಲ್ಲೊಂದು ಇನ್ನಿಷ್ಟು ಸೋಜಿಗದ ಬೆಳವಣಿಗೆಯೂ ಒಗ್ಗೂಡಿತ್ತು. ಅದು ಹಿಟ್ಲರ್‌ನನ್ನು ಆ ಕಾಲದಲ್ಲೇ ಕಾಡುತ್ತಿದ್ದ ಅಷ್ಟಮ ಶನಿ ಕಾಟ. ಮಾರಕನಾಗಿದ್ದ ಚಂದ್ರ ಅಖೈರಾಗಿ ಹಿಟ್ಲರನ ಸೋಲಿಗೂ, ಆತ್ಮಹತ್ಯೆಗೂ ಶನೈಶ್ಚರಕಾಟದ ಮಾರಕ, ಮಾರಣಾಂತಿಕ ಸ್ಪಂದನಗಳ ಋಣಾತ್ಮಕ ಸಂವೇದನೆಗಳೊಂದಿಗೆ ಸಾಯಲ್ಪಟ್ಟ. ಸಾಯುವ ಮುನ್ನ ಕೈಗಂಟಿಸಿಕೊಂಡ ರಕ್ತದ ವಾಸನೆ, ರಕ್ತಸಿಕ್ತ ಅಧ್ಯಾಯಗಳು ಅಪಾರವಾದದ್ದು.
        ಹಿಟ್ಲರನ ಮನೋಭಾವವನ್ನೇ ಹೆಚ್ಚಾ ಕಡಿಮೆ ಹಿಂದಿನ ಯೂ ಎಸ್‌Õ ಎಸ್‌ (ರಷ್ಯ ಒಕ್ಕೂಟ) ಅನ್ನು ಆಳಿದ ಜೋಸೆಫ್ ಸ್ಟಾಲಿನ್‌ಗೆ ಚಂದ್ರ ಒದಗಿಸಿದ್ದ. ಸೋಜಿಗವೆಂದರೆ ಯೋಗಕಾರಕನಾದರೂ ಚಂದ್ರನ ಜೊತೆ ಸೇರಿದ್ದ ಶನೈಶ್ಚರ ವಿರೋಧಿಗಳನ್ನ ಮಾರಣ ಹೋಮ ನಡೆಸಿ, ಮಿಲಿಯನ್‌ಗಟ್ಟಲೆ ಜನರ ಸಾವಿಗೆ ಕಾರಣನಾದ.
        ಮೂರು ದಶಕಗಳಷ್ಟು ದೀರ್ಘ‌ಕಾಲ ಪ್ರಶ್ನಾತೀತ ನಾಯಕನಾಗಿ ರಷ್ಯಾ ಒಕ್ಕೂಟವನ್ನು ಆಳಿದ. ಅಖೈರಿನಲ್ಲಿ ಮರಣಕ್ಕೆ ಕಾರಣವಾಗುವ ಶಕ್ತಿಯನ್ನೂ ಸಂಪಾದಿಸಿಕೊಂಡ ಚಂದ್ರ ಹಾಗೂ ಶನೈಶ್ಚರರು, ಅಷ್ಟಮ ಶನಿಕಾಟ ಶುರುಗೊಂಡಾಗಲೇ, ಕುಜರಾಹು ಸಂಧಿಯಲ್ಲಿ ಯಾತನಾಮಯವಾದ ಸಾವನ್ನು ಸ್ಟಾಲಿನ್‌ಗೆ ಒದಗಿಸಿದರು. ಶನಿಕಾಟದ ವೇಳೆಯೇ ಇಲ್ಲಿ ಒಗ್ಗೂಡಿದ್ದು ಆಕಸ್ಮಿಕವಾಗೇನಲ್ಲ. ಚಂದ್ರ ಹಾಗೂ ಶನೈಶ್ಚರ ನಡುವಿನ ಋಣಾತ್ಮಕ ಕೊಂಡಿಯಿಂದಲೇ ಶನಿಕಾಟ ಸಂಭವಿಸುತ್ತದೆ.
        ಚಂದ್ರ ಗ್ರಹದ ಹಿಡಿತದಲ್ಲಿ ನರಳಿದ, ನರಳಿಸಿದ ಮಾಯಾಂಗನೆಯರು
        ಹಾಲಿವುಡ್ಡಿನ ಹಾಲಿ ಹಾಗೂ ಮಾಜಿ ನಾಯಕಿಯರಿಬ್ಬರು ಚಂದ್ರಗ್ರಹದ, ಶನಿಗ್ರಹದ ಹಲವಾರು ರೀತಿಯ ಭಾÅಮಕ ಭೂಮಿಕೆಯ ನಿರ್ಮಾಣದ ಪ್ರಭವಾದಲ್ಲಿ ತಾನೂ ನರಳಿದ್ದರು. ಅನೇಕ ಪುರುಷರನ್ನು ನರಳಿಸಿದರು. ಇವರು ಯಾರೆಂಬ ಹೆಸರಿನ ಉಲ್ಲೇಖ ಬೇಡ. ಮಾಜಿ ನಟಿ ಸಾಮಾನ್ಯಳಲ್ಲ. ಪ್ರಬಲ ರಾಷ್ಟ್ರದ ಅಧ್ಯಕ್ಷನನ್ನೇ ಪ್ರಭಾವಿಸಿದವಳು. ಇವಳ ಅಂಗ ಸುಖಕ್ಕೆ ಹಲವರು ಮುಂದಾದರು. ಅನೇಕ ಪುರುಷರು ಇವಳನ್ನೇ ಯಾಮಾರಿಸಿದರು. ನಂತರ ಈಕೆ ಆತ್ಮಹತ್ಯೆಯೋ, ಕೊಲೆಯೋ ಎಂದು ನಿರ್ಧರಿಸಲಾಗದ ನಿಗೂಢತೆಯ ಸಾವು ಕಂಡಳು. ಇವಳ ನಿಗೂಢ ಸಾವೂ ಕೂಡ ಚಂದ್ರ ಹಾಗೂ ಶನಿ ಗ್ರಹಗಳ ಕೊಕ್ಕೆಯ ರೂಪವಾದ ಸಾಡೇಸಾತಿಕಾಟದ ಸಂದರ್ಭದಲ್ಲಿ ಸಂಭವಿಸಿದ್ದೆಂಬದು ಉಲ್ಲೇಖಾರ್ಹ.
        ಮಗದೊಬ್ಬ ತಾರಾಮಣಿ, ರತಿ ರೂಪಿನ ನಾಯಕಿ ನಟಿ, ಉತ್ತಮ ಗಾಯಕಿ, ನರ್ತಕಿ, ಅಗಣಿತ ಸಂಪತ್ತಿನ ( ಸ್ವಯಂ ಗಳಿಕೆಯ ಫ‌ಲ ಈ ಸಂಪತ್ತು) ಒಡತಿ ಇವಳ ಕತೆ ಇನ್ನೊಂದೇ ಆಗಿದೆ. ಸೂಕ್ತವಾದ ಪ್ರಿಯಕರನಿಗಾಗಿನ ಇವಳ ಹಂಬಲ, ತಹತಹ ಅಸಾಮಾನ್ಯ. ಈಕೆ ಮಾದಕ ವಸ್ತುವಿನ ದಾಸಿಯಾದಳು. ಪ್ರೀತಿಗಾಗಿ ಪರಿತಪಿಸಿದಳು. ಮೋಹಗ ಮುದ್ದ ಮಕ್ಕಳ ಆರೈಕೆ ಇವಳಿಂದ ಸಾಧ್ಯವಿಲ್ಲೆಂದು ಕೋರ್ಟ್‌ ಮಕ್ಕಳನ್ನು ಬೇರೆಯವರ ಆರೈಕೆಗೆ ಒಪ್ಪಿಸಿತು. ರಿಹ್ಯಾಬಿಲೆಟೇಶನ್‌ ಕೇಂದ್ರದಲ್ಲಿ ಮನಸ್ವಾಸ್ಥ್ಯ ಕಳಕೊಂಡು ಅರೆ ನಗ್ನಾವಸ್ಥೆಯಲ್ಲಿ ತಿರುಗಾಡಿದಳು. ಉನ್ಮಾದ ಬೆಂಬತ್ತಿತ್ತು. ಮನದ ಭಾÅಮಕ ಜಗತ್ತು ಅಂಗ ಸುಖಕ್ಕಾಗಿ, ಸೂಕ್ತ ಸಂಗಾತಿಗಾಗಿ ಇವಳೊಳಗೆ ಹಾತೊರೆಯುತ್ತಿತ್ತು. ರತಿ ವರ್ಚಸ್ಸಿನ ಕೋಮಲೆಗೆ ಸರಿಯಾದ ಸಂಗಾತಿ ದೊರಕದೇ ಉಳಿದದ್ದು ಯಾವ ರೀತಿಯ ಕ್ರೌರ್ಯ? ಗ್ರಹಗಳ ಕಾಟದೆದುರು ಮನುಷ್ಯನ ಗತಿ ಎಂಥ, ಯಾವ ಕೋಷ್ಟಕದ ಭಿನ್ನ, ರುಗ್ಣ ಲೆಕ್ಕಾಚಾರ? ಎರಡು ಮದುವೆಗಳು ವಿಚ್ಛೇದನದಲ್ಲಿ ಅವಸಾನಗೊಂಡವು. ಅಷ್ಟಮ ಶನಿ ಕಾಟದ ಸಂದರ್ಭದಲ್ಲಿ ಈಗ ಆರು ವರ್ಷಗಳ ಹಿಂದೆ ಮಾನಸಿಕವಾಗಿ ಈಕೆ ನರಳಿದ್ದು ಸಾಮಾನ್ಯವಲ್ಲ. ಶನಿ ಹಾಗೂ ಚಂದ್ರರ ಕೊಕ್ಕೆ ಚೂಪಾಗಿಯೇ ಇತ್ತು.
        ಉನ್ಮಾದ, ಪಂಚಪಾತಕ, ಅತ್ಯಾಚಾರ, ಸೇಡು, ಸವಾಲು, ಪ್ರತೀಕಾರ, ಹುಚ್ಚು, ಅರೆ ಹುಚ್ಚು, ಅವಧೂತ ಶುಭ್ರತ್ವ, ಸಾತ್ವಿಕ ಸನ್ಯಾಸ, ಮನುಷ್ಯನೇ ಸಾûಾತ್‌ ದೇವರಾಗುವ ರೂಪಾಂತರ, ಇಂದ್ರಿಯಾತೀತ ಶಕ್ತಿ, ನಿಗೂಢ ಜಗತ್ತಿನ ಒಳ ಪದರುಗಳನ್ನು ತಿಳಿಯುವ ಅತೀಂದ್ರಿಯ ಜ್ಞಾನ ಕೋಶ, ಅತಿಯಾದ ವಿಷಯಾಸಕ್ತಿ, ಅಂಗ ಸುಖಕ್ಕಾಗಿನ ತೀವ್ರ ಹಂಬಲ, ಕಾಮೋದ್ರೇಕದ ಉತ್ತುಂಗ ವಿಕಾರ ಇತ್ಯಾದಿ, ಇತ್ಯಾದಿಗಳೆಲ್ಲ... ಆಶ್ಚರ್ಯ ಬೇಡ. ಚಂದ್ರನ ಪಾತ್ರ ಶತಃಸಿದ್ಧ ಇಲ್ಲಿ. ಚಂದ್ರನ ಕೈಯ ಆಯುಧವಾಗಿ ಶನಿ, ರಾಹು, ಕೇತು... ಇತ್ಯಾದಿ.
        ಈ ವಾರದ ಪ್ರಮುಖ ದಿನಗಳು...
        ಜನವರಿ 24, ಗುರುವಾರ- ಪ್ರದೋಷದ ದಿನವಾಗಿದ್ದು ಶಿವನ ಆರಾಧನಾ ಸಿದ್ಧಿಗೆ ಸೂಕ್ತ ದಿನ.
        ಜನವರಿ 25, ಶುಕ್ರವಾರ- ಮುಸ್ಲಿಂ ಬಾಂಧವರ ಸಂಭ್ರಮೋಲ್ಲಾಸಕ್ಕೆ ಕಾರಣವಾಗುವ ಈದ್‌ ಮಿಲಾದ್‌ ಹಬ್ಬದ ದಿನ ಇಂದು. ಭಾರತ ದೇಶ ಘೋಷಿಸಿದ ಪ್ರವಾಸೋದ್ಯಮ ದಿನವೂ ಹೌದು.
        ಜನವರಿ 26, ಶನಿವಾರ- ಸಾರ್ವಭೌಮತೆಯನ್ನು ಮೆರೆವ, ಗಣರಾಜ್ಯೋತ್ಸವ ಸಂಭ್ರಮ ದಿನ ಇದು ಭಾರತೀಯರ ಪಾಲಿಗೆ. ಅಂತಾರಾಷ್ಟ್ರೀಯ ಸುಂಕದ ದಿನ ವಾಗಿಯೂ ಪ್ರಸಿದ್ಧ.
        ಜನವರಿ 27, ಭಾನುವಾರ- ಪೌರ್ಣಿಮೆಯ ದಿನವಿದ್ದು ಬನದ ಹುಣ್ಣಿಮೆಯಾಗಿ ಪ್ರಸಿದ್ಧವಾಗಿದೆ ಈ ದಿನ. ಸವದತ್ತಿಯಲ್ಲಿ ಶ್ರೀದೇವಿ ಎಲ್ಲಮ್ಮ ಜಾತ್ರೆ. ಬನಶಂಕರಿ ತಾಯಿಗೆ ಪೂಜಾ ದಿನವೂ ಹೌದು. ವರಕವಿ, ಕನ್ನಡ ರತ್ನ, ಕಲಿಯುಗ ದ್ವಾಪರವಾಗಿಸಿದ ಕುಮಾರ ವ್ಯಾಸಜಯಂತಿ ಕೂಡ ಇಂದು.
        ಜನವರಿ 28, ಸೋಮವಾರ- ಕಾಂಗ್ರೆಸ್‌ ನಾಯಕ ತೀವ್ರವಾದಿ ಸ್ವತಂತ್ರ ಹೋರಾಟದಲ್ಲಿ ಹುತಾತ್ಮರಾದ ಲಾಲಾ ಲಜಪತರಾಯರ ಜನ್ಮ ದಿನ ಇಂದು.
        ಜನವರಿ 30, ಬುಧವಾರ- ಸಂಕಟಹರ ವಿಘ್ನೇಶ್ವರನ ಆರಾಧನಾ ದಿನವಾದ ಸಂಕಷ್ಟ ಚತುರ್ಥಿ. ಕುಷ್ಟ ರೋಗ ನಿರ್ಮೂಲನಾ ದಿನ. ಸರ್ವೋದಯ ದಿನವಾಗಿ ಪ್ರಸಿದ್ಧ.

        ಪ್ರಶ್ನೋತ್ತರ-
        ಸಿದ್ಧಣ್ಣ ಅಂಕಪ್ಪನವರ, ಬೀಳಗಿ-
        ಗುರೂಜಿ, ತುಂಬಾ ಕಷ್ಟದ ದಿನಗಳಲ್ಲಿದ್ದೇನೆ. ನನ್ನ ಕಿರಿಯ ಮಗ ಈಜಲು ಹೋದವನು ದುರ್ದೈವವಶಾತ್‌ ನೀರಲ್ಲಿ ಮುಳಗಿ ಈಗೊಂದು ವರ್ಷದ ಹಿಂದೆ ತೀರಿಕೊಂಡ. ಮರಣದ ದೋಶವಿದೆ ಎಂದು ಅನ್ನುತ್ತಿದ್ದಾರೆ. ಪರಿಸ್ಥಿತಿ ಹೇಗಿದೆ ಎಂದರೆ ಊಟಕ್ಕೂ ಪರದಾಟವಿದೆ. ಪರಿಹಾರವಿದೆಯೇ?
        ಸದ್ಗುರು ವಿಷ್ಣುವಿನ ಆಶೀರ್ವಾದ ಬಲ ನಿಮಗೆ ಇನ್ನೂ ಮೂರು ವರ್ಷಗಳಲ್ಲಿ ಸಿಗಲಿದೆ. ಅದು ಬುಧ ದಶಾದ ಉತ್ತಮ ಯೋಗ. ಧನ ಸಿದ್ಧಿ ಇದೆ. ಪುತ್ರಶೋಕ ಇದು ಈಗ ಅನಿವಾರ್ಯವಿತ್ತು. ವಿಧಿ ಲೀಲೆ. ತಲ್ಲಣಿಸಬೇಡಿ. ಮುಂದೆ ಧನ ಸಿದ್ಧಿ ಬಂದಾಗ ಪುತ್ರ ಕುರಿತಾದ ಅನಿವಾರ್ಯ ವಿಧಿಗಳನ್ನ ಯುಕ್ತವಾಗಿ ಪೂರೈಸಿ. ಈಗ ದೇವರನ್ನು ನಂಬಿ. ಶಿವ ಕೊಟ್ಟಾಗ ದ್ರವ್ಯ ಹಾಗೂ ಧನ ವಿನಿಯೋಗ ಮಾಡಬಹುದು. ಮುಂದಿನ ದಿನಗಳಿಗಾಗಿ ಕಾದಿರಿ.
        ಸರೋಜಿನಿ, ಭೈರವ ಹಟ್ಟಿ-
        ನನ್ನ ಪತಿರಾಯರು ಅನ್ಯ ಸ್ತ್ರೀ ಸಂಪರ್ಕದಲ್ಲಿದ್ದು ನನ್ನನ್ನು, ಮಕ್ಕಳಿಬ್ಬರನ್ನು ನಿರ್ಲಕ್ಷಿಸುತ್ತಿದ್ದಾರೆ. ಬದುಕು ಬವಣೆಯಾಗಿದೆ. ವಶೀಕರಣ ಯಂತ್ರ ನೀಡುತ್ತೇನೆ, ಪತಿ ಹಿಂದಿರುಗಿ ನಿನ್ನ ಕೈವಶವಾಗುತ್ತಾರೆ ಎಂದು ಒಬ್ಬರು ಹೇಳುತ್ತಿದ್ದಾರೆ. ಈ ಯಂತ್ರದಿಂದ ಉಪಯೋಗವಾದೀತೆ? ಸಮಸ್ಯೆ ನಿವಾರಣೆಗೆ ಹೇಗೆ ? ನೊಂದಿದ್ದೇನೆ.
        ವಶೀಕರಣ, ವಾಮಾಚಾರ, ಮಾಟ ಯಂತ್ರದ ವಿಚಾರ ಈಗ ಕೈಬಿಡಿ. ಶಕ್ತಳಾದ ತಾಯಿ ಲಲಿತಾಂಬಿಕೆಯ, ಮಾರುತಿ ಆರಾಧನೆಗಾಗಿ ಪ್ರತಿ ದಿನ ಶ್ರೀದೇವಿ ಲಲಿತಾ ಸಂಹಸ್ರನಾಮ, ಪಂಚಮುಖೀ ಹನುಮಂತ ಕವಚ ಮಂತ್ರ ಓದಿ. ಕುಜ ಸಿದ್ಧಿಗೆ ಸಾಧ್ಯತೆ ಒದಗಿ, ಪತಿ ಅನ್ಯ ವನಿತೆಯ ಹಿಡಿತದಿಂದ ಹೊರಬರುತ್ತಾರೆ. ಶಶಿ ಮಂಗಳ ಸಿದ್ಧಿಗೂ ಅವಕಾಶವಾಗಿ ಹಣಕಾಸಿನ ಸ್ಥಿತಿಯಲ್ಲಿ ಸಂವರ್ಧನೆ, ಸುಖ ಇತ್ಯಾದಿ ಒದಗಿಬರಲಿದೆ.
        ನೀಲಕಂಠಪ್ಪ, ರಾಯಚೂರು-
        ನನ್ನ ಮಗನು ಉತ್ತಮ ಕೆಲಸದಲ್ಲಿದ್ದಾನೆ. ಕಂಕಣಬಲ ಕೂಡಿ ಬರುತ್ತಿಲ್ಲ. ಹಲವು ಕನ್ಯಾನ್ವೇಷಣೆಯ ಪ್ರಯತ್ನಗಳು ವಿಫ‌ಲವಾದವು. ಪರಿಹಾರ ಉಂಟೆ?
        ಸೂರ್ಯನ ಚಲನೆ ಬರುವ ಏಪ್ರಿಲ್‌ ಮಧ್ಯಭಾಗದಿಂದ, ಮೇ ಮಧ್ಯಭಾಗದವರೆಗೆ ಮೇಷ ರಾಶಿಯಲ್ಲಿ ಉಚ್ಚಸ್ಥಿತಿ ಪಡೆದುಕೊಂಡಾಗ ಮಗನ ಮದುವೆ ನಡೆಯುತ್ತದೆ. ಕಳವಳ ಬೇಡ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಬ್ಯಾಡ್ಮಿಂಟನ್‌ ಜಗತ್ತಿಗೆ ಹೆಚ್ಚು ಚಿರಪರಿಚಿತವಲ್ಲದ ಭಾರತದ ಯುವ ಪ್ರತಿಭೆ ಯೊಂದು ಇತ್ತೀಚೆಗೆ ಅಂತ್ಯಗೊಂಡ ಥಾಯ್ಲೆಂಡ್‌ ಓಪನ್‌ ಕಿರೀಟವನ್ನು ಮುಡಿಗೇರಿಸಿ ಕೊಳ್ಳುವ ಮೂ
      • ಈ ವಿಭಾಗದಲ್ಲಿಯೂ ಇದೆ
      • picಪ್ರಕೃತಿಯ ಚಿತ್ರಗಳು
        ಬೆಂಗಳೂರಿನ ಪ್ರಕೃತಿ ಇಂಗ್ಲೆಂಡ್‌ನ‌ ರಾಯಲ್‌ ಫೋಟೋಗ್ರಫಿಯ ಮಾನ್ಯತೆ ಪಡೆದ ಅತಿ ಕಿರಿಯ ಸದಸ್ಯೆ. ಈಗ ಪಿಯುಸಿ ಓದುತ್ತಿರುವ ಪ್ರಕೃತಿ ಕೆಮೆರ ಹಿಡಿದ ವಿಸ್ಮಯಗಳನ್ನು ಬರೆದುಕೊಂಡಿದ್ದಾರೆ. ಅವರ ಫೋಟೋ ಜರ್ನಿಯ ಸಹ ಪ್ರಯಾಣಿಕರು ನೀವು ಆಗಿ.
      • Copyright @ 2009 Udayavani.All rights reserved.
      • Designed & Hosted By 4cplus