Friday, May 24, 2013
Last Updated: 6:16:32 PM IST
  • ನಾನೆಲ್ಲಿರುವೆ:
  • ಮುಖಪುಟ Supplements ಬಹುಮುಖಿ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮ್ಯೂಸಿಯಂ: ಅಖಂಡೇಶ್ವರಸ್ವಾಮಿ ಕಲೆಕ್ಟೆಡ್‌ ಸ್ಟೋರೀಸ್‌
    • ಸಂಗೀತ ಕಲಿಯುವವರಿದ್ದಾರೆ. ಕಲಿತು ಹಣ ಮಾಡುವವರೂ ಇದ್ದಾರೆ. ಆದರೆ ಮನೆಯಲ್ಲೇ ಮ್ಯೂಸಿಯಂ ಮಾಡಿದ ''''ಮಹಾಪುರುಷರು'' ಇಲ್ಲ

      • Udayavani | Jan 23, 2013

        ಸಂಗೀತ ಕಲಿಯುವವರಿದ್ದಾರೆ. ಕಲಿತು ಹಣ ಮಾಡುವವರೂ ಇದ್ದಾರೆ. ಆದರೆ ಮನೆಯಲ್ಲೇ ಮ್ಯೂಸಿಯಂ ಮಾಡಿದ 'ಮಹಾಪುರುಷರು' ಇಲ್ಲಿದ್ದಾರೆ. - ಮಲ್ಲಿಕಾರ್ಜುನ ದರಗಾದ

        ಬಾಗಲಕೋಟೆಯ ವಿದ್ಯಾಗಿರಿಗೆ ಕಾಲಿಟ್ಟರೆ ಸಾಕು ಸಂಗೀತ ಅಲೆ, ಅಲೆಯಾಗಿ ಕಿವಿಗೆ ಬೀಳುತ್ತದೆ. ಅದನ್ನು ಹಿಂಬಾಲಿಸುತ್ತಾ ಹೋದರೆ ಆ ಹೊತ್ತಿಗೆ ನೀವು 7ನೇ ಕ್ರಾಸ್‌ನಲ್ಲಿರುವ ಮನೆಯ ಮುಂದೆ ಬಂದು ನಿಂತಿರುತ್ತೀರಿ.

        ಈ ಮನೆ ಹೊರಗಿನಿಂದ ನೋಡುವುದಕ್ಕೆ ಪುಟ್ಟದಾಗಿ ಕಾಣುತ್ತದೆ. ಆದರೆ, ಈ ಮನೆ ತನ್ನಲ್ಲಿ ಸಾûಾತ್‌ ಸಂಗೀತ ಶಾರದೆಯನ್ನು ವಿದ್ಯಾಸರಸ್ವತಿಯನ್ನ ಬಚ್ಚಿಟ್ಟುಕೊಂಡಿದೆ, ಈ ಮನೆಯ ಒಳಗೆ ಕಾಲಿಡುತ್ತಿದ್ದಂತೆಯೇ ನಮಗೆ ಮೊಟ್ಟಮೊದಲು ಸಾಹಿತ್ಯ ದಿಗ್ಗಜರು, ಜ್ಞಾನಪೀಠ ಪುರಸ್ಕೃತರು, ವಿಜ್ಞಾನಿಗಳು, ರಾಜಕಾರಣಿಗಳು, ವಿಶೇಷಸಾಧನೆಗೈದ ಅಪರೂಪದ ಸಾಧಕರ ದರ್ಶನವಾಗುತ್ತೆ. ಕುವೆಂಪು, ದರಾಬೇಂದ್ರೆ, ಶಿವರಾಮಕಾರಂತ, ತೀನಂಶ್ರೀ, ಗೋಪಾಲಕೃಷ್ಣ ಅಡಿಗ, ಪೂರ್ಣಚಂದ್ರತೇಜಸ್ವಿ ಹೀಗೆ ವಿವಿಧ ಸಾಹಿತಿಗಳ ಕವಿಗಳ ಭಾವಚಿತ್ರಗಳನ್ನ ನೋಡಬಹುದು. ಇನ್ನೊಂದೆಡೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಭಾರತೀಯ ವಿಜ್ಞಾನಿಗಳಾದ ಸಿ.ವಿ ರಾಮನ್‌, ಸುಬ್ರಮಣ್ಯಂ ಚಂದ್ರಶೇಖರ್‌, ವಿಕ್ರಮ್‌ ಸಾರಾಬಾಯಿ, ಶ್ರೀನಿವಾಸ ರಾಮಾನುಜಂ ಸೇರಿ ಇಂದಿನ ಅಬ್ದುಲ್‌ ಕಲಾಂ ವರೆಗಿನ ವಿವಿಧ ವಿಜ್ಞಾನಿಗಳನ್ನು ಕಾಣಬಹುದು. ಇನ್ನೊಂದೆಡೆ ಮಹಾಪುರುಷರಿಗೆ ಅವರ ಶಿಷ್ಯಂದಿರು ಉಡುಗೊರೆಯಾಗಿ ನೀಡಿದ, ದೇಶಿ ವಿದೇಶಿ ಕಲಾವಿದರು ತಯಾರಿಸಿದ ಅಪರೂಪದ ಪೆಂಟಿಂಗ್ಸ್‌ಗಳೂ ಮನೆಯನ್ನು ಸಿಂಗರಿಸಿವೆ.
        ಹೀಗೆ ಮನೆ ಒಳಗೆ ಕಾಲಿಟ್ಟರೆ ಸಿತಾರು, ತಬಲ, ಹಾರ್ಮೋನಿಯಂ. ಎಲ್ಲಿ ನೋಡಿದರೂ ಸಾಹಿತ್ಯದಿಗ್ಗಜರ ದರ್ಶನ ಮಾಡಿಸುವ ಭಾವಚಿತ್ರಗಳು ತುಂಬಿ ಹೋಗಿವೆ.

        ಬಾಗಲಕೋಟೆಯ ಜನಕ್ಕೆ ಅಖಂಡೇಶ್ವರಸ್ವಾಮಿ ಮ್ಯೂಸಿಯಂ ಚಿರಪರಿಚಿತ.
        ಖ್ಯಾತ ಸಿತಾರ ವಾದಕ ವಿ.ಜಿ. ಮಹಾಪುರುಷರ ಕನಸಿನ ಕೂಸು ಈ ಮ್ಯೂಸಿಯಂ. ಇವರು ತಮ್ಮ ಮನೆಯನ್ನೇ ಮ್ಯೂಸಿಯಂನ್ನಾಗಿಸಿ¨ªಾರೆ.

        ಇವರ ರೂಮಿಗೆ ಹೊಕ್ಕರ ಪುಸ್ತಕ ಸಂತೆ. ಬಗೆ ಬಗೆಯ ಪುಸ್ತಕಗಳು. ಕನ್ನಡ ಹಸ್ತಪ್ರತಿಗಳು, ಉಪನಿಷತ್‌ ಭಾವಧಾರೆ, ಪಂಪಭಾರತ, ಭಾವೈಕ್ಯತೆಯ ಸಂಕೇತವಾಗಿ ಭಗವದ್ಗೀತಾ, ಬೈಬಲ್‌, ಖುರಾನ್‌ ಕೂಡ ಇವೆ. ವಿವಿಧ ಲೇಖಕರು, ಕವಿಗಳು ಬರೆದ ಕವನಗಳು, ಕಥೆಗಳು, ಕಾದಂಬರಿಗಳು, ಆಡಿಯೋ ಸೀಡಿಗಳು ಇಲ್ಲಿ ನೋಡುವುದಕ್ಕೆ ಲಭ್ಯ. ಜೊತೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸ್ವಾತಂತ್ರ್ಯ ನಂತರದಿಂದ ಇಂದಿನವರೆಗಿನ ದೇಶಕ್ಕಾಗಿ ದುಡಿದ ನೂರಾರು ಮಹಾನ್‌ ನಾಯಕರ ಭಾವಚಿತ್ರಗಳನ್ನು ಇಲ್ಲಿ ಕಾಣಬಹುದು.

        ಇನ್ನು ಈ ಮ್ಯೂಸಿಯಂನಲ್ಲಿ ಎಲ್ಲಕ್ಕಿಂತಲೂ ಮುಖ್ಯವಾದದ್ದು ಪ್ರಾಚೀನಕಾಲದಿಂದಲೂ ಬಳಕೆಯಲ್ಲಿದ್ದ ಅಪರೂಪದ ವಾದ್ಯಗಳ ಜೊತೆಗೆ ಇಂದು ಬಳಕೆಯಲ್ಲಿರುವ ಸಂಗೀತ ವಾದ್ಯಗಳ ಸಂಗ್ರಹವನ್ನು ಕಾಣಬಹುದು. ಒಟ್ಟು ಮೂರು ದೊಡ್ಡ ಕಪಾಟಗಳಲ್ಲಿ ಇವುಗಳನ್ನು ಸಂಗ್ರಹಮಾಡಲಾಗಿದೆ. ಮೊದಲನೆಯ ಕಪಾಟಿನಲ್ಲಿ ಏಕದಾರಿ, ಚೌಡಕಿ, ಬಿಗಲ್‌, ದಪ್ಪಡಿ, ಗೆಜ್ಜೆ, ಡೊಳ್ಳು, ಜಲತರಂಗ, ಮƒದಂಗ, ಖಂಜರಿ, ಮೌತ್‌ ಆರ್ಗನ್‌, ಗಿಟಾರ್‌ ,ಬ್ಯಾಗ್‌ಪೈಪರ್‌ ಮೊದಲಾದ ಸಂಗೀತಕ್ಕೆ ಸಂಬಂಧಿಸಿದ ವಾದ್ಯಗಳನ್ನ ನೋಡಬಹುದು. ಇನ್ನೊಂದು ಕಪಾಟಿನಲ್ಲಿ ಸಂಗೀತದ ವಾದ್ಯಗಳ ಜೊತೆಗೆ ಸಂಗೀತ ಕಾರ್ಯಕ್ರಮಕ್ಕೆ ಬೇಕಾಗುವ ಕೆಲವು ಹಳೆಕಾಲದ ವಸ್ತುಗಳನ್ನು ನೋಡಬಹುದು. ತಂಬೂರಿ, ಶಹನಾಯಿ, ಸಿತಾರ್‌, ವಾಯಲಿನ್‌, ವೀಣೆ, ಸಾರಂಗಿ, ಬಾನ್‌ಸುರಿ, ಕ್ಯಾಸಿಯೋ, ಕೊಳಲು, ತಬಲಾ ಡಗ್ಗಿ, ಆಫ್ರೀಕನ್‌ ತಾಲ್‌, ಢಮರುಗ, ಗ್ರಾಮೋಫೋನ್‌, ಪಿಚ್‌ಪೈಪ್‌ ಹೀಗೆ ಸುಮಾರು ನೂರಕ್ಕೂ ಹೆಚ್ಚು ವಾದ್ಯಗಳಿವೆ. ಹಿಂದೆಂದೂ ಕಂಡರಿಯದ ಕೆಲವು ಅಪರೂಪದ ವಾದ್ಯಗಳನ್ನ ಕೂಡ ನಮಗಿಲ್ಲಿ ನೋಡಸಿಗುತ್ತವೆ.

        ಕೇವಲ ಸಂಗೀತ ಸಾಹಿತ್ಯಕ್ಕಷ್ಟೇ ಮಹತ್ವ ನೀಡದೇ ಗ್ರಾಮೀಣ ಭಾಗದಲ್ಲಿ ರೈತರುಬಳಕೆಯಲ್ಲಿಟ್ಟುಕೊಂಡು ಬಂದಿರುವ ರೆಂಟೆ, ಕುಂಟೆ, ನೇಗಿಲು ಕೃಷಿಗೆ ಸಂಬಂದಿಸಿದ ಪರಿಕರಗಳ ಜೊತೆಗೆ ಕಳೆದ 40 ವರ್ಷಗಳ ಸಂಗೀತಸೇವೆಯಲ್ಲಿ ಶಿಷ್ಯಂದಿರು ಉಡುಗೊರೆಯಾಗಿ ನೀಡಿದ ಪ್ರತಿಯೊಂದು ವಸ್ತುಗಳು ಇಲ್ಲಿವೆ. ಎಲ್ಲಲ್ಲೂ ಸಂಗೀತ ಸಾಹಿತ್ಯಕ್ಕೆ ಸಂಬಂಧಿಸಿದ ಅಪರೂಪದ ಸಾಮಗ್ರಿಗಳನ್ನು ನೋಡೋದಕ್ಕೆ ಎರಡು ಕಣ್ಣು ಸಾಲುವುದಿಲ್ಲ.

        ಸಂಗ್ರಹ ಅಭಿರುಚಿ ಹೇಗೆ ಬಂತು? ಇದಕ್ಕೆ ಮಹಾಪುರಷರ ಹಿನ್ನೆಲೆ ತಿಳಿಯಲೇ ಬೇಕು. ಇವರು ಸಿತಾರ್‌ ವಾದಕರು. ಮಳೆರಾಜೇಂದ್ರ ಮಠದ ಪರಂಪರೆಯಿಂದ ಬಂದವರು. ತಂದೆ ಗಂಗಾಧರ ಸ್ವಾಮಿಗಳು ಕೂಡ ಸಿತಾರವಾದಕರಾಗಿದ್ದವರು. ಅವರಂತೆಯೇ ಸಂಗೀತ ಸೇವೆ ಸಲ್ಲಿಸುವ ಉದ್ದೇಶದಿಂದ ಇವರು ಕೂಡ ಸಿತಾರವಾದಕರಾದರು. ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆದು, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಸಿತಾರ ಪ್ರಾಧ್ಯಾಪಕರಾಗಿದ್ದ ಎ. ಕರೀಮ್‌ಖಾನರಲ್ಲಿ ಸಿತಾರ್‌ ಕಲಿತರು. ನಂತರ ಹೆಸರಾಂತ ಸಿತಾರವಾದಕ ಉಸ್ತಾದ ಬಾಲೇಖಾನ ಅವರ ಶಿಷ್ಯತ್ವ ಪಡೆದು ಸಿತಾರ್‌ವಾದನದಲ್ಲಿ ಸಿದ್ದ ಹಸ್ತರಾದವರು.

        ವಿ.ಜಿ ಮಹಾಪರುಷರು ರಚಿಸಿರುವ ಸಿತಾರ್‌ ದರ್ಪಣ ಎಂಬ ಪುಸ್ತಕ ವಾದನದ ಅಧ್ಯಯನಕ್ಕಾಗಿ ಮೊಟ್ಟಮೊದಲ ಬಾರಿಗೆ ಕನ್ನಡದಲ್ಲಿ ಹೊರಬಂದ ಪುಸ್ತಕ ಎನ್ನುವ ಹೆಗ್ಗಳಿಕೆ ಗಳಿಸಿದೆ.

        ಹೀಗೆ ಸಂಗೀತ ಪರಂಪರೆಯಿಂದ ಬಂದ ಇವರ ಮನೆಯಲ್ಲಿ ಸಂಗೀತ ಸಮಾರಾಧನೆ ನಡೆಯುತ್ತದೆ. ನೂರಾರು ಶಿಷ್ಯಬಳಗ ಹೊಂದಿದ್ದಾರೆ. ಸಂಗೀತ ಸೇವೆಗೆ ತಮ್ಮ ಜೀವನವನ್ನೇ ಮುಡಿಪಿಟ್ಟು ಮುಂದಿನ ಪೀಳಿಗೆಗೂ ಇವುಗಳನ್ನು ಪರಿಚಯಿಸುವುದಕ್ಕೆ ಇವರು ಹುಟ್ಟುಹಾಕಿದ ಮ್ಯೂಸಿಯಂ ಈಗ ಎಲ್ಲರ ಆಕರ್ಷಣೆಯ ಕೇಂದ್ರಬಿಂದು.
        ಸಂಗೀತ ಕಲಿತು ಕಮರ್ಷಿಯಲ್ಲಾಗಿ ಬಳಸುವವರ ಮಧ್ಯೆ ಮಹಾಪುರುಷರ ವಿಭಿನ್ನ.
        ಅವರ ಮನೆಯನ್ನು ನೋಡಿದವರಿಗೆ ಹೀಗೆ ಅನಿಸುವುದು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಸಾಧನೆಗೆ ಪಣತೊಟ್ಟು ನಿರಂತರ ಕಠಿಣ ಶ್ರಮ ಹಾಕಿದಲ್ಲಿ ತಡವಾಗಿಯಾದರೂ ಯಶಸ್ಸು ಕಟ್ಟಿಟ್ಟಬುತ್ತಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅದಕ್ಕೆ ನಿದರ್ಶನವಾಗಿದ್ದು ಸತತ ಕಠಿಣ
      • ಈ ವಿಭಾಗದಲ್ಲಿಯೂ ಇದೆ
      • picಗೊತ್ತೇ ಇಲ್ಲದವರ ಭಾರೀ ಸಾಫ‌ಲ್ಯ
        ಆರನೇ ಆವತರಿಣಿಕೆಯ ಐಪಿಎಲ್‌ ಟೂರ್ನಿ ಇನ್ನೇನು ಅಂತಿಮ ಘಟ್ಟಕ್ಕೆ ಬಂದು ಮುಟ್ಟಿದೆ. ಲೀಗ್‌ ಹಂತ ಮುಗಿದು ಹಲವು ತಂಡಗಳು ಪ್ಲೇ ಆಫ್ನತ್ತ ಸಾಗಿವೆ. ಆದರೆ ಈ ಬಾರಿಯ ಐಪಿಎಲ್‌ ಅನುಭವಿ ಮತ್ತು ಅನನುಭವಿಗಳ ನಡುವೆ ನಡೆದ ಹೋರಾಟ ಹಾಗೂ ಹಳತು -ಹೊಸತು ಮೇಳೈಸಿ ಹೊಸತೊಂದು ರೂಪ ಪಡೆದುಕೊಂಡಂತಾಗಿರುವುದು ವಿಶೇಷ.
      • Copyright @ 2009 Udayavani.All rights reserved.
      • Designed & Hosted By 4cplus