Wednesday, May 22, 2013
Last Updated: 4:39:39 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಮಹಿಳಾ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಚಿತ್ರಾನ್ನ ಚಿತ್ರಾನ್ನ ಚಿತ್ರಾನ್ನ
    • ಮೊಸರನ್ನ.

      • ಪೂರ್ಣಿಮಾ. ಮ. ಬಗಲಿ | Jan 25, 2013

        ಬೆಲ್ಲದ ತುಪ್ಪಾನ್ನ

        ಬೇಕಾಗುವ ಸಾಮಗ್ರಿ : ಅರ್ಧ ಕಿಲೋ ಅಕ್ಕಿ, 100 ಗ್ರಾಂ ಹೆಸರುಕಾಳು, ಕಾಲು ಅಚ್ಚು ಬೆಲ್ಲ, ಅರ್ಧ ಗಿಟಕ ಕೊಬ್ಬರಿ, 8-10 ಚಮಚ ತುಪ್ಪ , 50 ಗ್ರಾಂ ಗೋಡಂಬಿ, 2 ಬಾಳೆಹಣ್ಣು , ಅರ್ಧ ಚಮಚ ಏಲಕ್ಕಿ ಪುಡಿ.

        ತಯಾರಿಸುವ ವಿಧಾನ : ಹೆಸರುಕಾಳನ್ನು ಮೊದಲಿನ ರಾತ್ರಿ (ಹಿಂದಿನ ರಾತ್ರಿ) ನೀರಿನಲ್ಲಿ ನೆನೆ ಹಾಕಬೇಕು. ಮರುದಿನ ಅದನ್ನು ಬಸಿದುಕೊಂಡು ಪಾತ್ರೆಯೊಂದರಲ್ಲಿ  ತುಪ್ಪವನ್ನು  ಹಾಕಿ ಗೋಡಂಬಿ ಮತ್ತು ಹೆಸರುಕಾಳನ್ನು ಹಾಕಿ ಹುರಿದುಕೊಳ್ಳಬೇಕು. ಅದರಲ್ಲಿ ತಕ್ಕಷ್ಟು ನೀರನ್ನು ಹಾಕಿ ಕಾಲು ಗಂಟೆ ಸಮಯ ಬೇಯಿಸಿ. ಅನ್ನಕ್ಕೆ ಬೆಲ್ಲ , ಬಾಳೆಹಣ್ಣು , ಕೊಬ್ಬರಿ ತುರಿ ಮತ್ತು ಉಳಿದಿರುವ ತುಪ್ಪವನ್ನು ಹಾಕಿಕೊಂಡು ಸ್ವಲ್ಪ ಸಮಯ ಚಿಕ್ಕ ಉರಿಯಲ್ಲಿ ಬೇಯಿಸಿರಿ. ಅನ್ನವು ಬೆಂದಾಗ ಏಲಕ್ಕಿ ಪುಡಿಯನ್ನು ಹಾಕಿ ಸೌಟಿನಿಂದ ತಿರುವಬೇಕು. ಇದಾದ ಸ್ವಲ್ಪ ಸಮಯ ಬಿಟ್ಟು ಕೆಳಗಿಳಿಸಿ ಸಿದ್ಧವಾಗುತ್ತೆ ಬೆಲ್ಲದ ತುಪ್ಪಾನ್ನ.

        ಮೊಸರನ್ನ

        ಬೇಕಾಗುವ ಸಾಮಗ್ರಿ : ಅಕ್ಕಿ 2 ಕಪ್ಪು , 1 ಲೀಟರ್‌ ಹಾಲಿನ ಕೆನೆಮೊಸರು, 4 ಯಾಲಕ್ಕಿ , 1 ಕಪ್ಪು ಹಾಲು, ಮೆಣಸು, ಹಸಿಶುಂಠಿ, ಕೊತ್ತಂಬರಿ ಸೊಪ್ಪು , ಹಸಿಮೆಣಸಿನಕಾಯಿ, ಕರಿಬೇವು, ಇಂಗು, ಉಪ್ಪು .

        ತಯಾರಿಸುವ ವಿಧಾನ : ಅನ್ನವನ್ನು ಮಾಡಿ ಬಾಯಿ ತೆಗೆದು ತಣ್ಣಗಾಗಲು ಬಿಡಬೇಕು. ಏಲಕ್ಕಿಯನ್ನು ಕುಟ್ಟಿ ಪುಡಿಮಾಡಿ ಹಾಕಬೇಕು. ಹಸಿಶುಂಠಿ, ಕೊತ್ತಂಬರಿ ಸೊಪ್ಪು  ಹೆಚ್ಚಿ ಹಾಕಬೇಕು. ತುಪ್ಪ ಕಾಯಲು ಇಟ್ಟು ಅದರಲ್ಲಿ ಸಾಸಿವೆ, ಇಂಗು, ಕರಿಬೇವು ಹಾಕಿ ಅನ್ನದ ಮೇಲೆ ಹಾಕಬೇಕು. ಅನ್ನವು ತಣ್ಣಿಗೆ ಆದಾಗ ಅದರ ಮೇಲೆ ಕೆನೆಮೊಸರು ಮತ್ತು ಹಾಲನ್ನು ಹಾಕಿದಾಗ ಮೊಸರನ್ನ ಸಿದ್ಧವಾಗುತ್ತದೆ.

        ತುಪ್ಪಾನ್ನ

        ಬೇಕಾಗುವ ಸಾಮಗ್ರಿ :
        ಅರ್ಧ ಕಿಲೋ ಅಕ್ಕಿ, ಅರ್ಧ ತೆಂಗಿನಕಾಯಿ, ಉದ್ದಿನಬೇಳೆ 4 ಚಮಚ, ಕಡಲೆಬೇಳೆ 8-10 ಚಮಚದಷ್ಟು , ಇಂಗು, 2 ಟೀ ಚಮಚ ತುಪ್ಪ , 4ರಿಂದ 5 ಉದ್ದಿನ ಹಪ್ಪಳ, ಉಪ್ಪು .

        ತಯಾರಿಸುವ ವಿಧಾನ :  ಉದುರು ಉದುರಾಗಿರುವಂತೆ ಅನ್ನವನ್ನು ಮಾಡಿಕೊಂಡು ಒಂದು ಬೇಸನ್‌ನಲ್ಲಿ ಹಾಕಿ ಆರಿಸಿಕೊಳ್ಳಿರಿ. ಉದ್ದಿನಬೇಳೆಯನ್ನು ಕೆಂಪಾಗುವವರೆಗೆ ಹುರಿದುಕೊಂಡು ತರಿತರಿಯಾಗುವವರೆಗೆ ಕುಟ್ಟಿ ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಒಗ್ಗರಣೆ ಮಾಡಿಕೊಂಡು ಆರಿರುವ ಅನ್ನಕ್ಕೆ ಒಗ್ಗರಣೆಯನ್ನು ಹಾಕಿ ಉದ್ದಿನಪುಡಿ, ಅರಿಶಿನ, ಉಪ್ಪು , ಕಾಯಿತುರಿ ಹಾಕಿ ಕಲಸಿದರೆ ಸಿದ್ಧವಾಗುತ್ತದೆ ತುಪ್ಪಾನ್ನ. ಇದನ್ನು ಬಡಿಸುವಾಗ ಹಪ್ಪಳವನ್ನು ಕರಿದುಕೊಂಡು ಪುಡಿಮಾಡಿ ಅನ್ನಕ್ಕೆ ಬೆರೆಸಿದರೆ ತುಂಬಾ ಒಳ್ಳೆಯದು.

        ಎಳ್ಳುಪುಡಿ ಚಿತ್ರಾನ್ನ

        ಬೇಕಾಗುವ ಸಾಮಗ್ರಿ
        : ಅರ್ಧ ಕಿಲೋ ಅಕ್ಕಿ, ಒಂದು ಚಮಚ ಉದ್ದಿನಬೇಳೆ, ಅರ್ಧ ಬಟ್ಟಲು ಎಣ್ಣೆ , ಒಂದು ಚಮಚ ಕಡಲೆಬೇಳೆ, ಅರ್ಧ ಚಮಚ ಮೆಣಸಿನಪುಡಿ, 1 ಚಮಚ ಎಳ್ಳು , ಅರ್ಧ ಚಮಚ ಜೀರಿಗೆ ಪುಡಿ, ಅರ್ಧ ತೆಂಗಿನಕಾಯಿ, ಉಪ್ಪು.

        ತಯಾರಿಸುವ ವಿಧಾನ : ಉದುರು ಉದುರಾಗಿರುವಂತೆ ಅನ್ನವನ್ನು ಮಾಡಿ ಎಳ್ಳನ್ನು ಹುರಿದು ಪುಡಿಮಾಡಿ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿಕೊಂಡು ಒಗ್ಗರಣೆ ಮಾಡಿ, ಅನ್ನಕ್ಕೆ ಹಾಕಿಕೊಂಡು ಸ್ವಲ್ಪ ಹೊತ್ತು ಬಿಟ್ಟು ಜೀರಿಗೆಪುಡಿ, ಮೆಣಸಿನಪುಡಿ, ಕಾಯಿತುರಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಕುದಿಸಿ ತದನಂತರ ಎಳ್ಳಿನ ಪುಡಿಯನ್ನು ಹಾಕಿ ಕಲಸಿ ಕೆಳಗಿಳಿಸಿದರೆ ಸಿದ್ಧವಾಗುತ್ತೆ ಎಳ್ಳುಪುಡಿ ಚಿತ್ರಾನ್ನ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      pic"ಉದ್ಯೋಗ' ಎನ್ನುವುದು ಕೆಲವರಿಗೆ ತಮ್ಮ ಪ್ರತಿಭೆಯ ಅಭಿವ್ಯಕ್ತಿಗೆ, ಸ್ವಾತಂತ್ರ್ಯದ ಅಪೇಕ್ಷೆಗೆ ಪೂರಕವಾದರೆ ಇನ್ನು ಕೆಲವರಿಗೆ ತುತ್ತಿನ ಚೀಲ ತುಂಬಿಸಲು ಅನಿವಾರ್ಯ...
      • ಈ ವಿಭಾಗದಲ್ಲಿಯೂ ಇದೆ
      • ಏಕತಾರಿ ಮಿಡಿತ
        ಅವಳು ಒಂಟಿಯಾಗಿ ಕಾರ್ಯಕ್ರಮಕ್ಕೆ ಬಂದಳು, ಕಾರ್ಯಕ್ರಮ ಮುಗಿದ ನಂತರ ಒಂಟಿಯಾಗಿ ಬಸ್‌ನಲ್ಲಿ ಜೋತಾಡಿಕೊಂಡು ಹೋಗುತ್ತಿದ್ದಳು....
      image
      image
      • Copyright @ 2009 Udayavani.All rights reserved.
      • Designed & Hosted By 4cplus