ತೆಂಗಿನಕಾಯಿಯ ಸಿಪ್ಪೆ ಸುಲಿಯು ವಾಗ ಅದರ ಕಣ್ಣುಗಳಿರುವ ಜಾಗದಲ್ಲಿ ಜುಟ್ಟನ್ನು ಹಾಗೆಯೇ ಉಳಿಸಿಕೊಳ್ಳಬೇಕು. ಹಾಗಿದ್ದರೆ ಮಾತ್ರ ಒಡೆಯದ ತೆಂಗಿನಕಾಯಿ ದೀರ್ಘಕಾಲ ಹಾಳಾಗದೆ ಉಳಿಯುತ್ತದೆ. ದೇವರ ಪ್ರತಿಷ್ಠೆಯ ಕಲಶದಲ್ಲಿಯೂ ಜುಟ್ಟು ಇರುವ ತೆಂಗಿನಕಾಯಿಯನ್ನೇ ಇಡುವುದಲ್ಲವೆ? ತೆಂಗಿನಕಾಯಿ ಖರೀದಿಯ ಸಂದರ್ಭದಲ್ಲಿಯೂ ಆಯುವಾಗಲೂ ನೀರಾಡುವ ಕಾಯಿಯನ್ನು ಎತ್ತಿಕೊಳ್ಳಬೇಕು. ತೆಂಗಿನಕಾಯಿಯನ್ನು ಇಬ್ಭಾಗ ಮಾಡಿದ ಬಳಿಕ ಉಪ್ಪಿನ ಭರಣಿಯಲ್ಲಿಟ್ಟರೆ ಹಾಳಾಗದೆ ಉಳಿಯುತ್ತದೆ. ಬಕೆಟ್‌ನಲ್ಲಿ ಶುಭ್ರ ನೀರು ಹಾಕಿ ಅದರಲ್ಲಿ ಒಡೆದ ತೆಂಗಿನಕಾಯಿಯನ್ನಿಟ್ಟರೂ ಅದು ಬೇಗನೆ ಕೆಡುವುದಿಲ್ಲ. ಪ್ಲಾಸ್ಟಿಕ್ ಚೀಲ ವ್ಯರ್ಥವಾಗದಿರಲು...ಇತ್ತೀಚೆಗೆ ಪ್ಲಾಸ್ಟಿಕ್ ಚೀಲದ ಬಳಕೆ ವಿರಳವಾಗುತ್ತಿದೆ. ಅದಕ್ಕೆ ನಗರಸಭೆಗಳೂ ನಿಷೇಧ ಹೇರುತ್ತಿವೆ. ಇಂಥ ಸಂದರ್ಭದಲ್ಲಿ ಮನೆ ಯಲ್ಲಿ ಉಳಿದಿರುವ ಪ್ಲಾಸ್ಟಿಕ್ ಚೀಲಗಳನ್ನು ಸದುಪಯೋಗಪಡಿಸಿಕೊಳ್ಳುವ ದಾರಿಗಳಿವೆ. ಚಿಪ್ಸ್‌ನ್ನು ಸ್ಟೀಲ್ ಡಬ್ಬಿಯಲ್ಲಿ ಹಾಕಿಡುತ್ತೀರಲ್ಲವೆ? ಅದು ಬೇಗನೆ ಮೃದುವಾಗುತ್ತದೆ. ಆದರೆ, ಅದನ್ನು ಪ್ಲಾಸ್ಟಿಕ್‌ಚೀಲಗಳಲ್ಲಿ ಹಾಕಿಟ್ಟು ಡಬ್ಬಿಯೊಳ ಗಿಟ್ಟರೆ ದೀರ್ಘಕಾಲ ಹಾಗೆಯೇ ಉಳಿಯುತ್ತದೆ. ಸೊಪ್ಪು- ತರಕಾರಿಗಳನ್ನು ಪ್ಲಾಸ್ಟಿಕ್‌ಚೀಲದೊಳಗಿಟ್ಟು ಫ್ರಿಡ್ಜ್ನೊಳಗೆ ಇಟ್ಟರೆ ಅದು ಕೊಳೆಯುವುದನ್ನು ತಪ್ಪಿಸಬಹುದು.