Tuesday, May 21, 2013
Last Updated: 3:36:01 PM IST
  • ನಾನೆಲ್ಲಿರುವೆ:
  • ಮುಖಪುಟ Supplements ಚಿನ್ನಾರಿ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಅದೆಂಗಾಯ್ತದೆ: ಜಡತ್ವ
    • ಬೇಕಾದ ವಸ್ತುಗಳು (1) ಲೋಟ, (2) ಡ್ರಾಯಿಂಗ್‌ ಹಾಳೆ, (3) ನಾಣ್ಯ.

      • Udayavani | Jan 25, 2013

        ಬೇಕಾದ ವಸ್ತುಗಳು
        (1) ಲೋಟ, (2) ಡ್ರಾಯಿಂಗ್‌ ಹಾಳೆ, (3) ನಾಣ್ಯ.
        ಮಾಡುವ ಕ್ರಮ
        1. ಒಂದು ಲೋಟದ ಬಾಯಿಗಿಂತ ಸ್ವಲ್ಪ ದೊಡ್ಡದಾದ ಡ್ರಾಯಿಂಗ್‌ ಹಾಳೆಯನ್ನು ಚೌಕಾಕಾರದಲ್ಲಿ ಕತ್ತರಿಸಿಕೊಂಡು ಲೋಟದ ಮೇಲಿಡಿ.
        2. ಡ್ರಾಯಿಂಗ್‌ ಹಾಳೆ ಮಧ್ಯದಲ್ಲಿ ಒಂದು ನಾಣ್ಯವನ್ನಿಡಿ. ಡ್ರಾಯಿಂಗ ಹಾಳೆಯನ್ನು ನಿದಾನವಾಗಿ ಎಳೆಯಿರಿ. ಡ್ರಾಯಿಂಗ್‌ ಹಾಳೆ ಜೊತೆ ನಾಣ್ಯವೂ ಬರುತ್ತದೆ.
        3. ಡ್ರಾಯಿಂಗ ಹಾಳೆಯನ್ನು ಸ್ಟ್ರೈಕರ್‌ ನಂತೆ ಜೋರಾಗಿ ತೋರು ಬೆರಳಿನಿಂದ ಹೊಡೆಯಿರಿ. ಈಗ ಗಮನಿಸಿರಿ, ಏನಾಶ್ಚರ್ಯ! ನಾಣ್ಯ ಅಲ್ಲೆ ಉಳಿದು ಲೋಟದೊಳಗೆ ಬೀಳಿತ್ತದೆ. ಡ್ರಾಯಿಂಗ್‌ ಹಾಳೆ ಮಾತ್ರ ದೂರ ಬೀಳುತ್ತದೆ.
        ವೈಜಾnನಿಕ ಕಾರಣ: ನಿದಾನವಾಗಿ ಎಳೆದಾಗ ಡ್ರಾಯಿಂಗ್‌ ಹಾಳೆ ಮತ್ತು ನಾಣ್ಯಗಳ ಮಧ್ಯೆ ಘರ್ಷಣೆ ಇರುವುದರಿಂದ ಡ್ರಾಯಿಂಗ್‌ ಹಾಳೆಗೆ ನಾಣ್ಯ ಅಂಟಿಕೊಂಡು ಡ್ರಾಯಿಂಗ್‌ ಹಾಳೆ ಜೊತೆ ನಾಣ್ಯವೂ ಬರುತ್ತದೆ. ಡ್ರಾಯಿಂಗ ಹಾಳೆಯನ್ನು ಸ್ಟ್ರೈಕರ್‌ ನಂತೆ ಜೋರಾಗಿ ತೋರು ಬೆರಳಿನಿಂದ ಹೊಡೆದಾಗ, ನಾಣ್ಯ ಅಲ್ಲೆ ಉಳಿದು ಲೋಟದೊಳಗೆ ಬೀಳಿತ್ತದೆ. ಡ್ರಾಯಿಂಗ್‌ ಹಾಳೆ ಮಾತ್ರ ದೂರ ಬೀಳುತ್ತದೆ. ಕಾರಣ ಜಡತ್ವವು ದ್ರವ್ಯಗಳ ಗುಣಲಕ್ಷಣ. ಸ್ಥಿರವಾದ ಅಥವಾ ಚಲಿಸುವ ದ್ರವ್ಯ ಬಾಹ್ಯ ಬಲವಿಲ್ಲದೆ ತನ್ನ ಸ್ಥಿತಿಯನ್ನು ಬದಲಿಸುವುದಿಲ್ಲ. ಡ್ರಾ$›ಯಿಗ್‌ ಹಾಳೆಯನ್ನು ಜೋರಾಗಿ ತಳ್ಳಿದಾಗ ಡ್ರಾ$›ಯಿಗ್‌ ಹಾಳೆಗೆ ಮಾತ್ರ ಬಲ ದೊರಕಿ ಅದು ದೂರ ಹೊಗುತ್ತದೆ. ಅದರ ಮೇಲಿದ್ದ ನಾಣ್ಯಕ್ಕೆ ಬಲ ಸಿಗದಿರುವುದರಿಂದ ಅದು ಲೋಟದಲ್ಲಿ ಬೀಳುತ್ತದೆ.
        ಬಸ್ಸಿನಲ್ಲಿ ಪ್ರಯಾಣಿಸುವಾಗ ಒಮ್ಮಿಂದೊಮ್ಮೆ ಬಸ್ಸು ನಿಂತರೆ,ಪ್ರಯಾಣಿಕರು ಮುಂದೆ ಬೀಳಲು ಇದೇ ಕಾರಣ

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picನಾವು ಇದುವರೆಗೂ ಕೇಳಿದ ಮತ್ತು ಓದಿದ ಕತೆಗಳಲ್ಲಿ ಬಲಹೀನ ಪ್ರಾಣಿಗಳ ಕತೆಗಳಿವೆ. ಅಂದರೆ ಬಲಹೀನ ಪ್ರಾಣಿ ಇದರ ಕೈಲಿ ಏನಾಗುತ್ತೆ ಅಂತ ಯೋಚನೆ ಮಾಡಿ ನಂತರ ಆ ಪ್ರಾಣಿ ಬುದ್ಧಿವಂತಿಕೆ ಮೆರೆದ ಕತೆ.
      • ಈ ವಿಭಾಗದಲ್ಲಿಯೂ ಇದೆ
      • picಭೀಮಸೇನ
        ಮಹಾಭಾರತದಲ್ಲಿ ಭೀಮನ ಹೆಸರು ಯಾರು ಕೇಳಿಲ್ಲ.? ಭೀಮನ ಪೂರ್ಣ ಹೆಸರು ಭೀಮಸೇನ. ಇವನು ಅತಿಯಾಗಿ ತಿನ್ನುವವನಾದ್ದರಿಂದ ವೃಕೋದರ ಎಂಬ ಅನ್ವರ್ಥನಾಮವೂ ಇದೆ. ವಾಯುದೇವರ ಅನುಗ್ರಹದಿಂದ ಪಾಂಡುರಾಜನ ಪತ್ನಿ ಕುಂತಿಯಲ್ಲಿ ಎರಡನೆ ಮಗನಾಗಿ ಜನಿಸಿದವನು.
      image
      • Copyright @ 2009 Udayavani.All rights reserved.
      • Designed & Hosted By 4cplus