ರಾಬಿನ್‌ವುಡ್ 1973ರಲ್ಲಿ ತೆರೆಕಂಡ ಅಮೇರಿಕನ್ ಆ್ಯನಿಮೇಟೆಡ್ ಮಕ್ಕಳ ಸಿನಿಮಾ. ಇದನ್ನು ವಾಲ್ಟ್ಡಿಸ್ನಿಯವರು ನಿರ್ಮಾಣ ಮಾಡಿದರು. ಆದರೆ ಈ ಸಿನಿಮಾದಲ್ಲಿ ಪಾತ್ರಧಾರಿಗಳಾಗಿ ಮನುಷ್ಯರ ಬದಲಿಗೆ ಪ್ರಾಣಿಗಳನ್ನು ಬಳಸಿಕೊಳ್ಳಲಾಗಿದೆ. ಶೆರ್‌ವುಡ್ ಕಾಡಿನಲ್ಲಿ ರಾಬಿನ್‌ಹುಡ್ ಎಂಬ ಕಳ್ಳ ಮತ್ತು ಲಿಟಲ್ ಜಾನ್ ದರೋಡೆ ಮಾಡಿ ಬಡ-ಬಗ್ಗರಿಗೆ ದಾನ ಮಾಡುತ್ತಿರುತ್ತಾರೆ. ನಾಟಿಂಗ್‌ಹ್ಯಾಮ್‌ನಲ್ಲಿ ವಾಸವಿದ್ದ ಶ್ರೀಮಂತ ಶರೀಫನಿಗೆ ಇವರಿಬ್ಬರೂ ದೊಡ್ಡ ತಲೆನೋವಾಗಿರುತ್ತಾರೆ. ಅವರಿಬ್ಬರನ್ನು ಹೇಗಾದರೂ ಮಾಡಿ ಹಿಡಿದು ಶಿಕ್ಷೆ ನೀಡಬೇಕೆಂದು ಯೋಚಿಸುತ್ತಿರುತ್ತಾನೆ. ಪ್ರತಿಬಾರಿ ಇವರಿಬ್ಬರನ್ನು ಹಿಡಿಯಲು ಯತ್ನಿಸಿದಾಗಲೂ ಹೇಗಾದರೂ ತಪ್ಪಿಸಿಕೊಳ್ಳುತ್ತಲೇ ಇರುತ್ತಾರೆ. ಒಂದು ದಿನ ನಾಟಿಂಗ್‌ಹ್ಯಾಮ್‌ನ ರಾಜಕುಮಾರ ಜಾನ್‌ಪ್ರಿನ್ಸ್ ಹೇಗಾದರೂ ಮಾಡಿ ಈ ದರೋಡೆಕೋರರನ್ನು ಹಿಡಿಯಲೇಬೇಕೆಂದು ತೀರ್ಮಾನಿಸಿ, ಬಿಲ್ಲುಗಾರಿಕೆಯ ಸ್ಫರ್ಧೆ ಏರ್ಪಡಿಸುತ್ತಾನೆ. ಆ ಸ್ಪರ್ಧೆಗೆ ರಾಬಿನ್‌ವುಡ್ ಮತ್ತು ಲಿಟಲ್‌ಜಾನ್ ಇಬ್ಬರೂ ಮಾರುವೇಷದಲ್ಲಿ ಅಲ್ಲಿಗೆ ಹೋಗುತ್ತಾರೆ. ಈ ವಿಷಯ ರಾಜಕುಮಾರ ಜಾನ್‌ಗೆ ಗೊತ್ತಿದ್ದರೂ ಸ್ಫರ್ಧೆ ಮುಗಿಯುವವರೆಗೂ ಸುಮ್ಮನಿರುತ್ತಾನೆ. ಸ್ಫರ್ಧೆಯಲ್ಲಿ ರಾಬಿನ್‌ವುಡ್ ಗೆಲ್ಲುತ್ತಾನೆ ರಾಜಕುಮಾರ ಅವನನ್ನು ಅಲ್ಲಿಯೇ ಬಂಧಿಸುತ್ತಾನೆ. ಹೀಗೆ ಅಲ್ಲೊಂದು ಹೋರಾಟವಾಗುತ್ತದೆ ರಾಬಿನ್ ಹುಡ್ ತಪ್ಪಿಸಿಕೊಳ್ಳುತ್ತಾನೆ. ಸಿನಿಮಾದ ಉದ್ದಕ್ಕೂ ಬರೇ ರಾಬಿನ್‌ವುಡ್‌ನನ್ನು ಹಿಡಿಯಲು ಪ್ರಯತ್ನಿಸುವುದು ಅವನು ತಪ್ಪಿಸಿಕೊಳ್ಳುವುದು ನಡೆದೇ ಇರುತ್ತದೆ. ರಾಬಿನ್‌ಹುಡ್ ಪಾತ್ರದಲ್ಲಿ ತೋಳದ ಅಭಿನಯ ಪುಟಾಣಿಗಳಿಗೆ ಒಳ್ಳೆಯ ಮನರಂಜನೆಯನ್ನು ನೀಡುತ್ತದೆ.