ಕೊಳದಲ್ಲಿರುವ ಮೀನು ಮಾತನಾಡಿದರೆ ಚೆಂದ, ಹಾಡಿ ನರ್ತಿಸಿದರಂತೂ ಚಂದವೇ ಚಂದ. ಮೀನುಗಳಂತೇ ಇರುವ, ಗಾತ್ರದಲ್ಲಿ ದೊಡ್ಡದಾಗಿರುವ ಪೆಂಗ್ವಿನ್‌ಗಳು ವಯಸ್ಸಾದ ಅಜ್ಜ-ಅಜ್ಜಿಯರಂತೆ ಎಡವುತ್ತಾ, ಕುಂಟುತ್ತಾ ನಡೆಯುವುದು ನೋಡುವುದೇ ಒಂದು ಸೊಗಸು. ಏಲಿಯನ್‌ಗಳ ಕಣ್ತಪ್ಪಿಸಿ ಕೊರೆಯುವ ಮಂಜಿನ ಸಮುದ್ರದಲ್ಲಿ ಈಜಿ ಆಹಾರ ಹುಡುಕಿ ತರುವ ಪೆಂಗ್ವಿನ್ ಪ್ರಪಂಚ ಅದು. 'ಹ್ಯಾಪಿಫೀಟ್' ಎನ್ನುವ ಮಕ್ಕಳ ಸಿನಿಮಾದಲ್ಲಿ ಪೆಂಗ್ವಿನ್‌ಗಳ ಅದ್ಭುತಲೋಕವಿದೆ. ಆ ಸಿನಿಮಾದ ಕೆಲವು ಕಥೆಗಳು ನಿಮಗಾಗಿ. ಹ್ಯಾಪಿಫೀಟ್ ಎಂಬುದು ಆಸ್ಟ್ರೇಲಿಯನ್-ಅಮೇರಿಕನ್ ತ್ರೀಡಿ ಕಂಪ್ಯೂಟರ್ ಆ್ಯನಿಮೇಟೆಡ್ ಸಿನಿಮಾ. ಇದರ ನಿರ್ದೇಶಕ ಜಾರ್ಜ್‌ಮಿಲ್ಲರ್. ಪೆಂಗ್ವಿನ್‌ಗಳ ಜೀವನಚರಿತ್ರೆ ಆಧರಿಸಿದ ಮಕ್ಕಳ ಸಿನಿಮಾ. ಮಂಬಲ್ ಪೆಂಗ್ವಿನ್‌ನ ಹಾಡು ಹ್ಯಾಪಿ ಫೀಟ್ ಎನ್ನುವುದು ಮಂಬಲ್ ಎಂಬ ಹಾಡುವ ಚಿಕ್ಕ ಪೆಂಗ್ವಿನ್‌ನ ಕತೆ. ಈ ಮಂಬಲ್ ಪೆಂಗ್ವಿನ್‌ಗಳಲ್ಲೇ ಅತ್ಯಂತ ಪ್ರತಿಭಾಶಾಲಿ ಹಾಗೂ ಹಾಡುವಂಥದ್ದು.ಆದರೆ ಈ ಪೆಂಗ್ವಿನ್‌ಗೆ ತನ್ನ ಜೋಡಿಯ ಗಮನ ಸೆಳೆಯಲು ಹಾಡುವ ಹಾರ್ಟ್‌ಸಾಂಗ್ ಮಾತ್ರ ಗೊತ್ತಿರುವುದಿಲ್ಲ. ಇದರ ಮಧ್ಯೆ ಮಂಬಲ್ ಪೆಂಗ್ವಿನ್‌ಗೆ ಟ್ಯಾಪ್ ಡ್ಯಾನ್ಸಿಂಗ್ ಚೆನ್ನಾಗಿ ಗೊತ್ತಿದೆ ಎನ್ನುವ ವಿಚಾರ ಅದರ ತಂದೆ-ತಾಯಿಗೆ ತಿಳಿಯುತ್ತದೆ. ಹೇಗಾದರೂ ಮಾಡಿ ಮಂಬಲ್‌ಗೆ ಹಾರ್ಟ್‌ಸಾಂಗ್‌ಅನ್ನು ಕಲಿಸಲೇಬೇಕು. ಇಲ್ಲದಿದ್ದರೆ ಮಂಬಲ್‌ಗೆ ಜೀವನಪೂರ್ತಿ ಒಬ್ಬಳು ಒಳ್ಳೆಯ ಸಂಗಾತಿ ಸಿಗದೆ ಹೋಗಬಹುದು ಎಂಬ ಚಿಂತೆ ಅವರನ್ನು ಕಾಡುತ್ತಿರುತ್ತದೆ. ಮಂಬಲ್‌ನ ಹೊಸ ಗೆಳತಿ ಮಂಬಲ್‌ಗೆ ಗ್ಲೋರಿಯಾ ಎಂಬ ಹೊಸ ಗೆಳತಿಯೊಬ್ಬಳು ಸಿಗುತ್ತಾಳೆ. ಅವಳು ಮಂಬಲ್‌ನಂತೆ ಅದ್ಭುತ ಹಾಡುಗಾರ್ತಿಯಾಗಿರುತ್ತಾಳೆ, ಪರಿಚಯವಾದಾಗಿನಿಂದ ಎರಡು ಪೆಂಗ್ವಿನ್‌ಗಳು ಜೊತೆಯಾಗಿ ಎಲ್ಲಾಕಡೆ ಸುತ್ತಾಡುತ್ತಿರುತ್ತವೆ. ಅದರ ಅವಳಿಗೆ ಮಾತ್ರ ಮಂಬಲ್‌ಗೆ ಹಾರ್ಟ್‌ಸಾಂಗ್ ಬರದಿರುವುದರ ಬಗ್ಗೆ ಆಶ್ಚರ್ಯವಾಗುತ್ತಿರುತ್ತದೆ. ಇದೇ ಸಮಯದಲ್ಲಿ ಮಂಬಲ್ ಮನೆ ಬಿಟ್ಟು ಅಂಟಾರ್ಟಿಕಕ್ಕೆ ಹೋಗುವ ಸಂದರ್ಭವೊಂದು ಬರುತ್ತದೆ. ಅಂಟಾರ್ಟಿಕದಲ್ಲೊಂದು ದಿನ ಅಂಟಾರ್ಟಿಕದ ಮಂಜಿನ ಮೇಲೆ ಎಲ್ಲಾ ಪೆಂಗ್ವಿನ್‌ಗಳು ಸೇರಿ ಹಾರ್ಟ್‌ಸಾಂಗ್ ಹಾಡುತ್ತಿರುತ್ತವೆ. ಹಾಡಿನ ಮೂಲಕ ಪ್ರತಿಯೊಂದು ಪೆಂಗ್ವಿನ್ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುತ್ತವೆ. ಆದರೆ ಈ ಹಾಡು ಬಾರದ ಮಂಬಲ್ ಪೆಂಗ್ವಿನ್ ಮಾತ್ರ ಸಪ್ಪೆ ಮೊರೆ ಹಾಕಿಕೊಂಡು ಕೂತಿರುತ್ತದೆ. ಆದರೆ ಮಂಬಲ್‌ಗೆ ಗೊತ್ತಿದ್ದ ಟ್ಯಾಪ್‌ಡ್ಯಾನ್ಸ್ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡುತ್ತಾನೆ. ಆದರೆ ಹಿರಿಯ ಪೆಂಗ್ವಿನ್‌ಗಳಿಗೆ ಇದರಿಂದ ಅಂತಹ ಖುಷಿಯೇನೂ ಆಗುವುದಿಲ್ಲ. ಏಕೆಂದರೆ ಪೆಂಗ್ವಿನ್‌ಗಳು ಹಾಡು ಮತ್ತು ನೃತ್ಯ ಮಾಡುವುದಕ್ಕಿಂತ ಹೆಚ್ಚಾಗಿ ತಮ್ಮ ಆಹಾರಗಳಾದ ಮೀನುಗಳನ್ನು ಏಲೀಯನ್‌ಗಳು ಬಂದು ಕದ್ದೊಯ್ಯುತ್ತಿರುತ್ತಾರೆ. ಅವರಿಂದ ಪೆಂಗ್ವಿನ್‌ಗಳ ಆಹಾರವನ್ನು ರಕ್ಷಣೆ ಮಾಡುವ ಭೇಟೆ ವಿದ್ಯೆ ಕಲಿಯಬೇಕು ಎನ್ನುವುದು ಹಿರಿಯ ಪೆಂಗ್ವಿನ್‌ಗಳ ಆಸೆ. ಅಂಟಾರ್ಟಿಕದಿಂದ ಅಮೇರಿಕಾಕಕ್ಕೆ ಅಂಟಾರ್ಟಿಕಕ್ಕೆ ಹೋಗಿದ್ದ ಮಂಬಲ್ ಗ್ಲೋರಿಯಾ ಪೆಂಗ್ವಿನ್ ಜೊತೆ ಮದುವೆಯಾಗುತ್ತದೆ. ಅವರಿಗೆ ಎರಿಕ್ ಎಂಬ ಮಗನು ಹುಟ್ಟುತ್ತಾನೆ. ನಂತರ ಈ ಎರಡು ಪೆಂಗ್ವಿನ್‌ಗಳು ಅಂಟಾರ್ಟಿಕಾ ಬಿಟ್ಟು ಅಮೇರಿಕಾದಲ್ಲಿ ನೆಲಸುವ ಚಿಂತೆ ಮಾಡುತ್ತಾರೆ. ಅದರಂತೆ ಅಮೇರಿಕಾಕ್ಕೆ ಹೋಗುತ್ತಾರೆ. ಅಲ್ಲಿ ಆ ಎರಡು ಪೆಂಗ್ವಿನ್‌ಗಳಿಗೆ ಅವರ ಹಳೆಯ ಸ್ನೇಹಿತರಾದ ರೇಮನ್, ಲಾವೆÉàಸ್, ಸಿಗುತ್ತಾರೆ. ಆದರೆ ಅವರ ಮಗ ಎರಿಕ್ ಮಾತ್ರ ಇತರ ಪೆಂಗ್ವಿನ್‌ಗಳಂತೆ ಯಾವ ಗುಣವನ್ನು ಹೊಂದಿರುವುದಿಲ್ಲ. ಇದರಿಂದ ಮಂಬಲ್ ಮತ್ತು ಗ್ಲೋರಿಯಾ ಪೆಂಗ್ವಿನ್‌ಗಳಿಗೆ ಮುಂದೆ ಈ ಪೆಂಗ್ವಿನ್ ಸಾಮ್ರಾಜ್ಯದಲ್ಲಿ ತಮ್ಮ ಮಗ ಹೇಗೆ ಉಳಿದುಕೊಳ್ಳುತ್ತಾನೆ ಎಂಬ ಚಿಂತೆ ಕಾಡತೊಡಗುತ್ತದೆ. ಈ ನಡುವೆ ಪೆಂಗ್ವಿನ್ ಪ್ರಪಂಚದಲ್ಲಿ ಹೊಸದೊಂದು ಅಪಾಯ ಎದುರಾಗುತ್ತಲ್ಲಿದೆ ಎಲ್ಲಾ ಪೆಂಗ್ವಿನ್‌ಗಳು ಜೊತೆಯಾಗೇ ನರ್ತಿಸಬೇಕು, ಹಾಡಬೇಕು, ಜೊತೆಯಾಗಿ ಯುದ್ಧ ಮಾಡಬೇಕು ಎಂಬ ಸಂದೇಶ ಪೆಂಗ್ವಿನ್ ಸಾಮ್ರಾಜ್ಯದಿಂದ ಬರುತ್ತದೆ. ಇದಕ್ಕಾಗಿ ಎಲ್ಲಾ ಪೆಂಗ್ವಿನ್‌ಗಳು ಒಟ್ಟಾಗಿ ತಯಾರಿ ಮಾಡಿಕೊಳ್ಳುತ್ತವೆ.